Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಜ್ಜಾಗಿವೆ ಪೊಕೊದ ಈ ಎರಡು ಹೊಸ ಫೋನ್‌ಗಳು!

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ಪೊಕೊ (POCO) ಸಂಸ್ಥೆಯು ಭಾರತೀಯ ಮಾರುಕಟ್ಟೆಗೆಯಲ್ಲಿ ಈಗಾಗಲೇ ಹಲವು ಫೋನ್‌ ಮಾಡೆಲ್‌ಗಳ ಮೂಲಕ ಗುರುತಿಸಿಕೊಂಡಿದೆ. ಇದೀಗ ಪೊಕೊ ಸಂಸ್ಥೆಯು ನೂತನವಾಗಿ ಪೊಕೊ X6 ನಿಯೋ (POCO X6 Neo) ಮತ್ತು ಪೊಕೊ F6 (POCO F6) ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗುತ್ತಿದೆ.

ಹೌದು, ಪೊಕೊ ಸಂಸ್ಥೆಯಿಂದ ಬರಲಿರುವ ಹೊಸ ಪೊಕೊ X6 ನಿಯೋ ಮತ್ತು ಪೊಕೊ F6 ಫೋನ್‌ಗಳ ಲಾಂಚ್‌ ಬಗ್ಗೆ ಸಂಸ್ಥೆಯು ಅಧಿಕೃತವಾಗಿ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲವಾದರೂ, ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಪ್ರಕಾರ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಭಾರತ ಬಿಡುಗಡೆಯ ಟೈಮ್‌ಲೈನ್ ಅನ್ನು ಬಹಿರಂಗಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಜ್ಜಾಗಿವೆ ಪೊಕೊದ ಈ ಎರಡು ಹೊಸ ಫೋನ್‌ಗಳು!

ಪೊಕೊ X6 ನಿಯೋ ಲಾಂಚ್ ಮಾಹಿತಿ

ಪೊಕೊ X6 ನಿಯೋ ಇದೇ ಮಾರ್ಚ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಈ ಫೋನ್‌ ರೆಡ್ಮಿ ನೋಟ್‌ 13R ಪ್ರೊ ಫೋನಿನ ರೀಬ್ರ್ಯಾಂಡ್‌ ಆಗಿ ಲಗ್ಗೆ ಇಡಲಿದೆ ಎನ್ನಲಾಗಿದೆ. ಅಲ್ಲದೇ ಪೊಕೊ X6 ನಿಯೋ 2024 ರ ಮೊದಲಾರ್ಧದ ಕೊನೆಯ X-ಸರಣಿ ಉತ್ಪನ್ನವಾಗಿದೆ ಎಂದು ಹೇಳಲಾಗಿದೆ. ಇನ್ನು ಪೊಕೊ F6 ಜುಲೈನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಜ್ಜಾಗಿವೆ ಪೊಕೊದ ಈ ಎರಡು ಹೊಸ ಫೋನ್‌ಗಳು!

ಪೊಕೊ X6 ನಿಯೋ ನಿರೀಕ್ಷಿತ ಫೀಚರ್ಸ್‌ ಮಾಹಿತಿ

ಪೊಕೊ X6 ನಿಯೋ ಫೋನ್‌ 6.78 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದಿದ್ದು, ಪೂರ್ಣ HD+ ಮಾದರಿಯ ಜೊತೆಗೆ 1080 x 2400 ಪಿಕ್ಸಲ್‌ ರೆಸಲ್ಯೂಶನ್ ಪಡೆದಿರಲಿದೆ. ಅಲ್ಲದೇ ಈ ಫೋನ್‌ 120Hz ರಿಫ್ರೆಶ್ ರೇಟ್‌ ಜೊತೆಗೆ 395 PPI ಪಿಕ್ಸೆಲ್ ಸಾಂದ್ರತೆ ಪಡೆದಿರಲಿದೆ. ಹಾಗೆಯೇ 1,000 nits ಗರಿಷ್ಠ ಬ್ರೈಟ್ನೆಸ್‌ ಸೌಲಭ್ಯ ಹೊಂದಿರಲಿದೆ ಎಂದು ಹೇಳಲಾಗಿದೆ.

ಇನ್ನು ಪೊಕೊ X6 ನಿಯೋ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ಸೌಲಭ್ಯ ಪಡೆದಿರಲಿದ್ದು, ಇದರ ಜೊತೆಗೆ Adreno Mali-G57 MC2 GPU ಸಪೋರ್ಟ್‌ ಕೂಡಾ ಪಡೆದಿರಲಿದೆ. ಹಾಗೆಯೇ ಪೊಕೊ X6 ನಿಯೋ 12GB RAM + 256GB UFS 2.2 ಆಂತರಿಕ ಸಂಗ್ರಹಣೆ ಆಯ್ಕೆ ಪಡೆದಿರಲಿದೆ. ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 13 ಜೊತೆಗೆ MIUI 14 ಇರಲಿದೆ.

ಅದೇ ರೀತಿ ಈ ಫೋನ್‌ ಹಿಂಬದಿಯ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಆಗಿರಲಿದೆ ಎಂದು ಹೇಳಲಾಗಿದೆ. ಹಾಗೆಯೇ ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಡೆಪ್ತ್ ಸೆನ್ಸಾರ್ ಸೌಲಭ್ಯ ಪಡೆದಿರಲಿದೆ ಎನ್ನಲಾಗಿದೆ. ಇದರೊಂದಿಗೆ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇರಲಿದೆ ಎಂದು ಹೇಳಲಾಗಿದೆ.

ಪೊಕೊ X6 ನಿಯೋ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್ ಪಡೆದಿರಲಿದ್ದು, ಇದಕ್ಕೆ ಅನುಗುಣವಾಗಿ ಇದು 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಸಹ ಪಡೆದಿರಲಿದೆ. ಇದರೊಂದಿಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಗಳು ಇರಲಿವೆ ಎಂದು ವರದಿಯಿಂದ ತಿಳಿದುಬಂದಿದೆ.

ಇನ್ನು ಪೊಕೊ X6 ನಿಯೋ ಸ್ಮಾರ್ಟ್‌ಫೋನ್‌ ಕಪ್ಪು, ನೀಲಿ, ಗೋಲ್ಡ್‌ ಕಲರ್‌ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಪಡೆಯಲಿದೆ ಎನ್ನಲಾಗಿದೆ. ಹಾಗೆಯೇ ಈ ಫೋನ್‌ 161.1 x 75 x 7.7 mm ಸುತ್ತಳತೆ ಪಡೆದಿರಲಿದ್ದು, 175 ಗ್ರಾಂ ತೂಕ ಹೊಂದಿರಲಿದೆ ಎಂದು ವರದಿಯಿಂದ ತಿಳಿದು ಬಂದಿದೆ.

Best Mobiles in India

English summary
POCO X6 Neo Tipped to Launch in India in March and POCO F6 Launch Timeline Also Revealed. other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+