ಭಾರತದಲ್ಲಿ ಪೊಕೊ X6 ಮತ್ತು ಪೊಕೊ X6 ಪ್ರೊ ಲಾಂಚ್!..ಫೀಚರ್ಸ್‌ಗೆ ಗ್ರಾಹಕರು ಫಿದಾ!
ಪೊಕೊ ಮೊಬೈಲ್ ಕಂಪೆನಿಯ ಬಹುನಿರೀಕ್ಷಿತ ಪೊಕೊ X6 ಸರಣಿಯು ಇಂದು ಅಧಿಕೃತವಾಗಿ ಬಿಡುಗಡೆ ಆಗಿದೆ. ಈ ನೂತನ ಫೋನ್ ಸರಣಿಯು ಪೊಕೊ X6 ಹಾಗೂ ಪೊಕೊ X6 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದ್ದು, ಈ ಎರಡು ಫೋನ್‌ಗಳು 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹಾಗೂ 64 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ರಚನೆ ಅನ್ನು ಪಡೆದಿದೆ.
ಹೌದು, ಪೊಕೊ X6 ಸರಣಿಯು ಇಂದು ಮಾರುಕಟ್ಟೆಗೆ ಎಂಟ್ರಿ ಪಡೆದಿವೆ. ಈ ಸರಣಿಯಲ್ಲಿ ಪೊಕೊ X6 ಪ್ರೊ ಮೀಡ್‌ರೇಂಜ್‌ನಲ್ಲಿ ಕಾಣಿಸಿಕೊಂಡರೆ, ಪೊಕೊ X6 ಫೋನ್ ಬಜೆಟ್ ದರದಲ್ಲಿ ಕಾಣಿಸಿಕೊಂಡಿದೆ. ಪೊಕೊ X6 ಪ್ರೊ ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ ಪ್ರೊಸೆಸರ್ ಪಡೆದಿದ್ದು, ಪೊಕೊ X6 ಸ್ನ್ಯಾಪ್‌ಡ್ರ್ಯಾಗನ್ 7 ಜೆನ್ 2 ಪ್ರೊಸೆಸರ್ ಸಪೋರ್ಟ್ ಪಡೆದಿದೆ.

ಇನ್ನು ಈ ಎರಡು ಫೋನ್‌ಗಳು 12 GB RAM + 256 GB ಸ್ಟೋರೇಜ್‌ನ ಹೈ ಎಂಡ್ ವೇರಿಯಂಟ್ ಆಯ್ಕೆ ಒಳಗೊಂಡಿವೆ. ಇನ್ನು ಪೊಕೊ X6 ಪ್ರೊ ಫೋನ್ IP54 ಸೌಲಭ್ಯ ಪಡೆದುಕೊಂಡಿದೆ. ಹಾಗಾದರೇ ಪೊಕೊ X6 ಹಾಗೂ ಪೊಕೊ X6 ಪ್ರೊ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಪೊಕೊ X6 ಪ್ರೊ - ಫೀಚರ್ಸ್
ಪೊಕೊ X6 ಪ್ರೊ ಮೊಬೈಲ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇ 1220 x 2712 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರ ಸ್ಕ್ರಿನ್ ಟು ಬಾಡಿ ಅನುಪಾತ 90.1% ಇದ್ದು, 20:9 ರಚನೆಯ ಅನುಪಾತ ಪಡೆದಿದೆ. ಇದರ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಆಗಿದ್ದು, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಒದಗಿಸಲಿದೆ. ಅಲ್ಲದೇ ಈ ಫೋನ್ ಡಿಸ್‌ಪ್ಲೇಯ ಪಿಕ್ಸೆಲ್ ಸಾಂದ್ರತೆ 446 ppi ಆಗಿದೆ.

ಇನ್ನು ಪೊಕೊ X6 ಪ್ರೊ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ ಪ್ರೊಸೆಸರ್ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು, ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 14 HyperOS ಸಪೋರ್ಟ್ ಕೂಡಾ ಪಡೆದಿದೆ. ಹಾಗೆಯೇ 8GB RAM ಮತ್ತು 256GB, 12GB RAM 256GB ಹಾಗೂ 12GB RAM ಮತ್ತು 512GB ಆಂತರೀಕ ಸ್ಟೋರೇಜ್ ಆಯ್ಕೆ ಕಾಣಬಹುದಾಗಿದೆ..
ಹಾಗೆಯೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಆಗಿದೆ. ಅಲ್ಲದೇ ದ್ವಿತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಪಡೆದಿದ್ದು ಹಾಗೂ ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಪಡೆದಿದೆ. ಇನ್ನು ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.
ಪೊಕೊ X6 ಪ್ರೊ ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, ಇದಕ್ಕೆ ಪೂರಕವಾಗಿ 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಲಭ್ಯ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್ 5.4, USB ಟೈಪ್-C, OTG ಅನ್ನು ಬೆಂಬಲಿಸಲಿದೆ. ಇದಲ್ಲದೆ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್ ಹಾಗೂ ಗೈರೊ ಸೆನ್ಸಾರ್ ಮತ್ತು ಕಂಪಾಸ್ ಅನ್ನು ಒಳಗೊಂಡಿಲಿದೆ.
ಪೊಕೊ X6 - ಫೀಚರ್ಸ್
ಪೊಕೊ X6 ಫೋನ್ 6.67 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅಮೋಲೆಡ್ ಮಾದರಿಯ ಸ್ಕ್ರೀನ್ ಪಡೆದಿದೆ. ಈ ಫೋನಿನ ಸ್ಕ್ರೀನ್ 120Hz ರಿಫ್ರೆಸ್ ರೇಟ್ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಇದು ಸ್ನ್ಯಾಪ್‌ಡ್ರ್ಯಾಗನ್ 7 ಜೆನ್ 2 ಪ್ರೊಸೆಸರ್ ಪವರ್ ಪಡೆದಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಹೊಂದಿದೆ.
ಅಲ್ಲದೇ ಇದು 8 GB RAM + 256 GB, 12 GB RAM + 256 GB ಹಾಗೂ 12 GB RAM + 512 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಕೂಡಾ ಪಡೆದಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸಲ್ ಆಗಿದ್ದು, ಮುಂಭಾದಲ್ಲಿ 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಕೂಡಾ ಇದೆ. ಇದರ ಜೊತೆಗೆ 5,100mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದೆ.
ಬೆಲೆ ಮತ್ತು ಲಭ್ಯತೆ
ಪೊಕೊ X6 ಬೆಲೆ ಹೀಗಿವೆ
8 GB RAM + 256 GB ವೇರಿಯಂಟ್ ಬೆಲೆ 19,999ರೂ. ಆಗಿದೆ
12 GB RAM + 256 GB ವೇರಿಯಂಟ್ ಬೆಲೆ 21,999ರೂ. ಆಗಿದೆ
12 GB RAM + 512 GB ವೇರಿಯಂಟ್ ಬೆಲೆ 22,999ರೂ. ಆಗಿದೆ
ಪೊಕೊ X6 ಪ್ರೊ ಬೆಲೆ ವಿವರ
8 GB RAM + 256 TB ವೇರಿಯಂಟ್ ಬೆಲೆ 24,999ರೂ. ಆಗಿದೆ
12 GB RAM + 512 GB ವೇರಿಯಂಟ್ ಬೆಲೆ 26,999ರೂ. ಆಗಿದೆ


Click it and Unblock the Notifications








