ವಿಪಿಎನ್ ಬಳಸಿ ಭಾರತದಲ್ಲಿ 'ಪೋಕ್ಮನ್ ಗೋ' ಆಡಿದ ಫ್ಯಾನ್‌ಗಳು

By Suneel
|

'ಪೋಕ್ಮನ್‌ ಗೋ' ದಿನೇ ದಿನೇ ಸಾವಿರಾರು ಜನರನ್ನು ದೈನಂದಿನ ಹವ್ಯಾಸಿಗಳನ್ನಾಗಿ ಮಾಡಿಕೊಳ್ಳುತ್ತಿರುವ ರಿಯಾಲಿಟಿ ಆನ್‌ಲೈನ್ ಗೇಮ್‌. ಭಾರತಕ್ಕೆ ಕಾಲಿರಿಸಿರುವ ಪೋಕ್ಮನ್‌ ಗೋ ಗೇಮ್‌'ನಲ್ಲಿನ 'ಮಾನಿಯಾ' ಪಾತ್ರದಿಂದ ಇಂದು ಸಾವಿರಾರು ಜನರು ಪೋಕ್ಮನ್‌ ಗೋ ಕ್ಯಾರೆಕ್ಟರ್‌ ಅನ್ನು ಸರ್ಚ್ ಮಾಡುತ್ತಿದ್ದಾರೆ.

ಭಾರತೀಯ ಪೋಕ್ಮನ್ ಪ್ರಿಯರು ನೆನಪಿಟ್ಟು ಕೊಳ್ಳಬೇಕಾದ ವಿಷಯ ಅಂದ್ರೆ ಭಾರತದಲ್ಲಿ 'ಪೋಕ್ಮನ್‌ ಗೋ' ಗೇಮ್‌ ಅಧಿಕೃತವಾಗಿ ಬಿಡುಗಡೆಗೊಂಡಿಲ್ಲ. ಆದರೂ ಭಾರತದಲ್ಲಿ ಆನ್‌ಲೈನ್‌ ಗೇಮ್‌ ಪ್ರಿಯರು ಪೋಕ್ಮನ್‌ ಗೋ ಗೇಮ್‌ ಆಟವಾಡುತ್ತಿದ್ದಾರೆ. ಅದು ಹೇಗೆ ಎಂದು ತಿಳಿಯಲು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

'ಪೋಕ್ಮನ್‌ ಗೋ' ಗೇಮ್‌ ಆಟದಿಂದ ತಿಂಗಳಿಗೆ 25,000 ರೂ ಗಳಿಸಬಹುದು

 ಪೋಕ್ಮನ್‌ ಗೋ

ಪೋಕ್ಮನ್‌ ಗೋ

'ಪೋಕ್ಮನ್‌ ಗೋ' ಆನ್‌ಲೈನ್‌ ರಿಯಾಲಿಟಿ ಗೇಮ್‌ ಅಧಿಕೃತವಾಗಿ ಭಾರತದಲ್ಲಿ ಲಾಂಚ್‌ ಆಗಿಲ್ಲ. ಆದರೆ ಪೋಕ್ಮನ್ ಗೋ ಫ್ಯಾನ್‌ಗಳು 'ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್‌(ವಿಪಿಎನ್‌) ಮೂಲಕ ಪಡೆದಿದ್ದಾರೆ.

 ಭಾರತದಲ್ಲಿ ಪೋಕ್ಮನ್‌ ಗೋ

ಭಾರತದಲ್ಲಿ ಪೋಕ್ಮನ್‌ ಗೋ

ಅಂದಹಾಗೆ ಪೋಕ್ಮನ್ ಗೋ ಪ್ರಿಯರು ಸ್ಥಳದ ಬದಲಾವಣೆಗಾಗಿ ವಿಪಿಎನ್‌ ಬಳಸಿಕೊಂಡು ಭಾರತದ ತಮ್ಮ ಮನೆಗಳಲ್ಲೇ ಕುಳಿತು ಪೋಕ್ಮನ್‌ ಅನ್ನು ನ್ಯೂಯಾರ್ಕ್‌ ಮತ್ತು ಲಂಡನ್‌ನಲ್ಲಿ ಕ್ಯಾಚ್‌ ಮಾಡುತ್ತಿದ್ದಾರೆ.

 ಸಿಟಿಗಳಲ್ಲಿ ಸಾಮಾನ್ಯವಾದ ಪೋಕ್ಮನ್ ಕ್ಯಾಚಿಂಗ್

ಸಿಟಿಗಳಲ್ಲಿ ಸಾಮಾನ್ಯವಾದ ಪೋಕ್ಮನ್ ಕ್ಯಾಚಿಂಗ್

ಸಂಯೋಜಿತ 'ಪೋಕ್‌ವಾಕ್‌' ಮುಂಬೈ ಮತ್ತು ದೆಹಲಿಯಂತ ಸಿಟಿಗಳಲ್ಲಿ ಸಾಮಾನ್ಯವಾಗಿದ್ದು, ನೂರಕ್ಕು ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಪೋಕ್ಮನ್‌ ಅನ್ನು ಕ್ಯಾಚ್‌ ಮಾಡಲಾಗುತ್ತಿದೆ.

ಹುಲ್ಲಿನ ಮೇಲೆ ನೆಡೆದಾಟ

ಹುಲ್ಲಿನ ಮೇಲೆ ನೆಡೆದಾಟ

ಮುಂಬೈನ 14 ವರ್ಷದ ನಿಖಿಲ್‌ ಕಪಿಲ್‌ ಎಂಬಾತ 'ಪೋಕ್ಮನ್ ಗೋ' ಆನ್‌ಲೈನ್‌ ರಿಯಾಲಿಟಿ ಗೇಮ್‌ ಫ್ಯಾನ್‌ ಆಗಿದ್ದು, ಪೋಕ್ಮನ್‌ ಗೋ ಗೇಮ್‌ ಆಡುವಾಗ ವಾಸ್ತವವಾಗಿ ಹುಲ್ಲಿನ ಮೇಲೆ ನಡೆದಾಡುತ್ತ ನೆಚ್ಚಿನ ಪೋಕ್ಮನ್‌ಗಳನ್ನು ಹಿಡಿಯುವ ಅನುಭವ ಖಂಡಿತ ಆಗುತ್ತದೆ ಎಂದಿದ್ದಾರೆ.

ಪ್ರಖ್ಯಾತ ಗೇಮ್‌ ಅಪ್ಲಿಕೇಶನ್‌

ಪ್ರಖ್ಯಾತ ಗೇಮ್‌ ಅಪ್ಲಿಕೇಶನ್‌

ಉತ್ತರ ಅಮೆರಿಕ ಮತ್ತು ಯೂರೋಪ್‌ನಂತಹ ದೇಶಗಳಲ್ಲಿ ಪೋಕ್ಮನ್‌ ಗೇಮ್‌ ಆಪ್‌ ಲಾಂಚ್‌ ಮಾಡಿದ ನಂತರ ಜಾಗತಿಕ ವಿದ್ಯಾಮಾನದಲ್ಲಿ ಹೆಚ್ಚು ಜನಪ್ರಿಯ ಆನ್‌ಲೈನ್‌ ಗೇಮ್‌ ಅಪ್ಲಿಕೇಶನ್‌ ಆಗಿದೆ. ಇತ್ತೀಚೆಗೆ ಜಪಾನ್‌ ಮತ್ತು ಹಾಂಗ್ ಕಾಂಗ್‌ನಲ್ಲಿ ಆಪ್‌ ಅನ್ನು ಲಾಂಚ್‌ ಮಾಡಲಾಗಿದೆ. ಆದರೆ ಇನ್ನು ಕೇವಲ 2 ಏಷಿಯಾ ದೇಶಗಳಲ್ಲಿ ಆಪ್‌ ಅನ್ನು ಅಧಿಕೃತವಾಗಿ ಲಾಂಚ್‌ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ.

 ಆಪ್‌ ಹ್ಯಾಕ್‌

ಆಪ್‌ ಹ್ಯಾಕ್‌

ಭಾರತದ ಪೋಕ್ಮನ್‌ ಗೇಮ್‌ ಆಟಗಾರರು ಹ್ಯಾಕ್ ಮಾಡುವ ಮುಖಾಂತರ ಅಥವಾ ಅಮೆರಿಕ ಮತ್ತು ಬ್ರಿಟನ್‌ ಮೂಲದ ಆಪ್‌ ಸ್ಟೋರ್‌ನಿಂದ ಆಪ್ ಅನ್ನು ಡೌನ್‌ಲೋಡ್ ಮಾಡುತ್ತಿದ್ದಾರೆ. ಭಾರತದಲ್ಲಿ ಲಾಂಚ್‌ ಯಾವಾಗ ಎಂಬ ದಿನಾಂಕ ಇನ್ನೂ ಖಚಿತವಾಗಿಲ್ಲ.

 ಸಿದ್ಧಾಂಟ್‌ ತ್ಯಾಗಿ

ಸಿದ್ಧಾಂಟ್‌ ತ್ಯಾಗಿ

21 ವರ್ಷದ ಸಿದ್ಧಾಂಟ್ ತ್ಯಾಗಿ ಎಂಬ ಡಿಸೈನ್‌ ವಿದ್ಯಾರ್ಥಿಯು ಈಗಾಗಲೇ 4 ಸ್ಟಾಟರ್‌ ಪೋಕ್ಮನ್‌ಗಳಾದ 'ಬುಲ್ಬಸೌರ್‌, ಸ್ಕ್ವಿಟ್‌ಟಲ್‌, ಚಾರ್ಮಂಡರ್‌ ಮತ್ತು ಪಿಕಛು'ಗಳನ್ನು ಕ್ಯಾಚ್‌ ಮಾಡಿದ್ದು, ತ್ಯಾಗಿ ಮತ್ತು ಆತನ ಸ್ನೇಹಿತರು ದಿನದಲ್ಲಿ 4 ಗಂಟೆಗಳ ಕಾಲ 'ಪೋಕ್ಮನ್‌ ಗೋ' ಆಟವಾಡುತ್ತಿದ್ದಾರಂತೆ. ಸಿಟಿಯ ಪಾರ್ಕ್‌ಗಳು ಮತ್ತು ಪೋಕ್‌ಸ್ಟಾಪ್‌ಗಳನ್ನು ಬಳಸಿಕೊಳ್ಳುತ್ತಿದ್ದಾರಂತೆ.

ವಿಪಿಎನ್‌  ಬಳಕೆ

ವಿಪಿಎನ್‌ ಬಳಕೆ

ತ್ಯಾಗಿಯು ಪೋಕ್ಮನ್‌ ಅನ್ನು ಪ್ರಪಂಚದಾದ್ಯಂತ ಕ್ಯಾಚ್‌ ಮಾಡಲು ವಿಪಿಎನ್ ಬಳಸಿ ದೆಹಲಿಯ ಮನೆಯಲ್ಲೇ ಕುಳಿತು ಆಟವಾಡುತ್ತಿದ್ದಾನಂತೆ. ನ್ಯೂಯಾರ್ಕ್‌ ಜನತೆ ರೀತಿಯಲ್ಲಿ ಪಾರ್ಕ್‌ಗೆ ಹೋಗುವುದಿಲ್ಲವಂತೆ ಮನೆಯಲ್ಲೇ ಕುಳಿತು ಪೋಕ್ಮನ್‌ ಗೋ ಗೇಮ್‌ ಆಡುತ್ತಾನಂತೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಪೋಕ್ಮನ್‌ ಗೋ' ಗೇಮ್‌ ಆಟದಿಂದ ತಿಂಗಳಿಗೆ 25,000 ರೂ ಗಳಿಸಬಹುದುಪೋಕ್ಮನ್‌ ಗೋ' ಗೇಮ್‌ ಆಟದಿಂದ ತಿಂಗಳಿಗೆ 25,000 ರೂ ಗಳಿಸಬಹುದು

ಪ್ರಖ್ಯಾತ 'ಪ್ರಿಸ್ಮ' ಆಪ್‌ ಡೌನ್‌ಲೋಡ್‌ ಆಂಡ್ರಾಯ್ಡ್‌ಗಳಿಗೂ ಲಭ್ಯಪ್ರಖ್ಯಾತ 'ಪ್ರಿಸ್ಮ' ಆಪ್‌ ಡೌನ್‌ಲೋಡ್‌ ಆಂಡ್ರಾಯ್ಡ್‌ಗಳಿಗೂ ಲಭ್ಯ

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
'Pokemon Go' fans use VPNs to play game in India. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X