Subscribe to Gizbot

'ಪೋಕ್ಮನ್‌ ಗೋ' ಗೇಮ್‌ ಆಟದಿಂದ ತಿಂಗಳಿಗೆ 25,000 ರೂ ಗಳಿಸಬಹುದು

Written By:

ಪೋಕ್ಮನ್ ಹುಡುಕುವ ಮತ್ತು ಹಿಡಿಯುವ ಬಗ್ಗೆ ತುಂಬಾ ನೀಟ್ ಆಗಿ ಹೇಳಿಕೊಡುವ ತರಬೇತುದಾರರು ಬೇಕಾಗಿದ್ದಾರೆ. ಅಂದಹಾಗೆ ಪೋಕ್ಮನ್‌ ತರಬೇತುದಾರರು ಬೇಕಾಗಿದ್ದಾರೆ ಎಂಬ ಮಾಹಿತಿ ಗಮನಕ್ಕೆ ಬಂದಿರುವುದು ಬಾಬಜಾಬ್.ಕಾಂ ನಲ್ಲಿ.

ಇನ್ನುಮುಂದೆ "ಪೋಕ್ಮನ್ ಗೋ' ಗೇಮ್‌ ಆಟವಾಡುವುದರಿಂದ ತಿಂಗಳಿಗೆ 25,000 ಹಣ ಸಂಪಾದನೆ ಮಾಡಬಹುದು. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

'ಪೋಕ್ಮನ್‌ ಗೋ' ಗೇಮ್‌ ಆಡೋದು ಆರೋಗ್ಯಕ್ಕೆ ಒಳ್ಳೇದಂತೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಾಬಾಜಾಬ್‌.ಕಾಂ

ಬಾಬಾಜಾಬ್‌.ಕಾಂ

ಬೆಂಗಳೂರು ಮೂಲದ ಜಾಬ್‌ ಪೋರ್ಟಲ್‌ ವಿಶೇಷವಾಗಿ "ಪೋಕ್ಮನ್‌ ಗೊ ಕ್ಯಾಚರ್" ಎಂಬ ವರ್ಗವನ್ನು ಕ್ರಿಯೇಟ್‌ ಮಾಡಿದ್ದು, ಉದ್ಯೋಗಿಗಳು ಇತರರನ್ನು "ಪೋಕ್ಮನ್‌ ಗೋ" ಪ್ರಖ್ಯಾತ ರಿಯಾಲಿಟಿ ಆಧಾರದ ಗೇಮ್‌ ಆಟವಾಡಲು ನೇಮಕ ಮಾಡಲು ಅವಕಾಶ ನೀಡುತ್ತದೆ.

ಶೀಘ್ರದಲ್ಲಿ ಟ್ರೆಂಡ್‌

ಶೀಘ್ರದಲ್ಲಿ ಟ್ರೆಂಡ್‌

ಕಂಪನಿಯು 'ಪೋಕ್ಮನ್ ಗೋ' ಗೇಮ್‌ ಶೀಘ್ರವಾಗಿ ಟ್ರೆಂಡ್ ಆಗುವ ನಿರೀಕ್ಷೆ ಹೊಂದಿದೆ. ಆದ್ದರಿಂದ ಪೋಕ್ಮನ್ ಗೋ' ತರಬೇತುದಾರ ಜಾಬ್‌ ಅನ್ನು 'ಆಶ್‌ ಕೆಚಮ್' ಅವರು ಪೋಸ್ಟ್‌ ಮಾಡಿದ್ದಾರೆ.

ಪೋಕ್ಮನ್‌ ಗೋ ಅಭಿಮಾನಿಗಳು

ಪೋಕ್ಮನ್‌ ಗೋ ಅಭಿಮಾನಿಗಳು

ಅಂದಹಾಗೆ 'ಪೋಕ್ಮನ್‌ ಗೋ' ಗೇಮ್‌ನಲ್ಲಿ ಆಶ್‌ ಕೆಚಮ್‌ ಎಂಬುದು ಪ್ರಧಾನ ಪಾತ್ರವಾಗಿದ್ದು, ಒರಿಜಿನಲ್‌ ಅನಿಮೆ ಸರಣಿಯಲ್ಲಿ ಈ ಪಾತ್ರವನ್ನು ಅಭಿಮಾನಿಗಳು ತಿಳಿಯಲಿದ್ದಾರೆ.

ಪೋಕ್ಮನ್‌ ಗೋ ಗೇಮ್‌ನಲ್ಲಿ ಜಾಬ್‌

ಪೋಕ್ಮನ್‌ ಗೋ ಗೇಮ್‌ನಲ್ಲಿ ಜಾಬ್‌

ಬಾಬಾಜಾಬ್.ಕಾಂ ಪ್ರಕಾರ ಕಂಪನಿಯ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ 'ವೀರ ಕಶ್ಯಪ್' ರವರು ಉದ್ಯೋಗಿಯನ್ನು ನೇಮಕ ಮಾಡಲು ಹೊರಟಿದ್ದು, ಉದ್ಯೋಗಿ ಗೇಮ್‌ನ ಪ್ರಧಾನ ಪಾತ್ರ ಆಶ್ ಕೆಚಮ್‌ ಆಗಿ ಆಟ ಆಡಬೇಕಿದೆ.

ಇಮೇಲ್ ಸಂವಹನ

ಇಮೇಲ್ ಸಂವಹನ

ಇಮೇಲ್‌ ಸಂವಹನದಲ್ಲಿ ಕಶ್ಯಪ್‌ ಮತ್ತು ಸಿಇಓ ಸೋನ್ ಬ್ಲಾಗ್ಸ್ವೆದ್ ಒಂದು ಸ್ನೇಹಿ ಸ್ಪರ್ಧೆಯನ್ನು ಪ್ರಾರಂಭಿಸಿ ಗೇಮ್ ಆಡುವಾಗ ಕಶ್ಯಪ್‌ ಗಾಯಗೊಂಡಿದ್ದಾರೆ. ಆದ್ದರಿಂದ ಇವರು ಗೇಮ್‌ ಆಡಲು ಸಾಧ್ಯವಾಗುತ್ತಿಲ್ಲ. ಅವರ ಸ್ಥಾನದಲ್ಲಿ ಆಟವಾಡಲು ಇತರರನ್ನು ನೇಮಕ ಮಾಡಲು ನಿರ್ಧರಿಸಿದ್ದು, ನೇಮಕಗೊಂಡ ವ್ಯಕ್ತಿ ಗೇಮ್ ಆಡುವಲ್ಲಿ ನಿರ್ಧಿಷ್ಟ ಮಟ್ಟ ತಲುಪಿದಂತೆಲ್ಲಾ ಆತನಿಗೆ ರೂ 1,999 ನೀಡಲಾಗುತ್ತದೆಯಂತೆ.

ತಿಂಗಳಿಗೆ 25,000 ರೂ ವೇತನ

ತಿಂಗಳಿಗೆ 25,000 ರೂ ವೇತನ

ಪೋಸ್ಟ್‌ ಮಾಡಲಾಗಿರುವ ಜಾಬ್ ಮಾಹಿತಿ ಪ್ರಕಾರ ತಿಂಗಳಿಗೆ ಸಂಭಾವನೆ (ವೇತನ) 25,000 ದೊರೆಯಲಿದೆ. ಈ ಸಂಭಾವನೆ ಒಬ್ಬ ವ್ಯಕ್ತಿ ಇತರೆ ಯಾವುದೇ ಕ್ಷೇತ್ರದಲ್ಲಿ ಮೊಟ್ಟ ಮೊದಲು ಉದ್ಯೋಗಕ್ಕೆ ಸೇರಿದರೆ ಸಿಗುವ ವೇತನ ಇದಾಗಿದೆ.

 ಸೂಚನೆಗಳು

ಸೂಚನೆಗಳು

"ಉದ್ಯೋಗ ಸೇರಲು ಬಯಸುವ ಪೋಕ್ಮನ್‌ ಕ್ಯಾಚರ್‌ ಎಚ್ಚರವಾಗಿರಬೇಕು ಮತ್ತು ಚುರುಕಾಗಿರಬೇಕು. ಅಲ್ಲದೇ ಪೋಕ್ಮನ್ ಗೇಮ್‌ ಕ್ಷೇತ್ರದ ಅಪಾರ ಮಾಹಿತಿಯನ್ನು ಹೊಂದಿದ್ದು ಯಶಸ್ವಿ ಪೋಕ್ಮನ್‌ ಕ್ಯಾಚರ್‌ ಆಗಬೇಕು" ಎಂದು ಕಶ್ಯಪ್‌ ಉದ್ಯೋಗದ ಮಾಹಿತಿ ಬಗ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗ ಅವಕಾಶ

ಬೆಂಗಳೂರಿನಲ್ಲಿ ಉದ್ಯೋಗ ಅವಕಾಶ

ಪ್ರಸ್ತುತದಲ್ಲಿ ಉದ್ಯೋಗ ಅವಕಾಶ ಬೆಂಗಳೂರಿನಲ್ಲಿ ಇದೆ. ಆದರೆ ಕಂಪನಿ ದೇಶದಾದ್ಯಂತದಿಂದ ಹೆಚ್ಚು ಅಪ್ಲಿಕೇಶನ್‌ಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಒಂದು ಅಪ್ಲಿಕೇಶನ್‌ ಆಯ್ಕೆ ಪ್ರಸ್ತುತದಲ್ಲಿ ನಡೆಯುತ್ತಿದೆ.

 'ಫೋಕ್ಮನ್‌ ಗೋ' ಉದ್ಯೋಗಾವಕಾಶ

'ಫೋಕ್ಮನ್‌ ಗೋ' ಉದ್ಯೋಗಾವಕಾಶ

'ಪೋಕ್ಮನ್‌ ಗೋ' ಎಂಬ ರಿಯಾಲಿಟಿ ಗೇಮ್‌ ಸಹ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುತ್ತಿದೆ. ಆದರೆ ಅಧಿಕೃತವಾಗಿ ಭಾರತದಲ್ಲಿ 'ಪೋಕ್ಮನ್‌ ಗೋ' ಗೇಮ್‌ ಲಭ್ಯವಿಲ್ಲ. ಭಾರತ ದೇಶದಲ್ಲಿ ನಿಯಾನ್‌ಟಿಕ್‌ ಸರ್ವರ್‌ನಲ್ಲಿ ಹೆಚ್ಚು ಟ್ರಾಫಿಕ್‌ ಲೋಡ್‌ ಸಮಸ್ಯೆ ಎದುರಿಸುತ್ತಿದೆ.

 ಅರ್ಜಿದಾರರು

ಅರ್ಜಿದಾರರು

ಈಗಾಗಲೇ 5 ಅರ್ಜಿದಾರರು ಉದ್ಯೋಗಕ್ಕಾಗಿ ಅರ್ಜಿಸಲ್ಲಿಸಿದ್ದು, ಬಾಬಜಾಬ್‌ ಅರ್ಜಿಗಳನ್ನು ಪರಿಶೀಲಿಸಿ ಕಶ್ಯಪ್‌ಗಾಗಿ ಪೋಕ್ಮನ್‌ ಕ್ಯಾಚರ್‌ ಅನ್ನು ನೇಮಕ ಮಾಡಲು ಸಿದ್ಧತೆ ನಡೆಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Playing Pokemon Go can earn you up to Rs. 25,000 per month now. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot