ಜಿಯೋ-ಪೋಕ್ಮನ್ ಆಟ..ಭಾರತಕ್ಕೆ ಬಂತು ಪೋಕ್ಮನ್ ಗೋ ಗೇಮ್!!

Written By:

ಜಿಯೋ ಟೆಲಿಕಾಂ ಮಾರುಕಟ್ಟೆಗೆ ಬಂದ ನಂತರ ಭಾರತೀಯ ಟೆಲಿಕಾಂ ಪ್ರಪಂಚದಲ್ಲಿ ಆಗುತ್ತಿರುವ ಬದಲಾವಣೆಗಳು ಅಷ್ಟಿಷ್ಟಲ್ಲ! ಹೌದು, ಪ್ರಪಂಚದಾದ್ಯಂತ ಜನರ ನಿದ್ದೆಗೆಡಿಸಿ ಭಾರತದ ಯುವಕ ಯುವತಿಯರು ಕಾತುರದಿಂದ ಕಾಯುತ್ತಿದ್ದ ಪೋಕ್ಮನ್ ಗೋ ಗೇಮ್ ಇದೀಗ ಜಿಯೋ ಜೊತೆಗೂಡಿ ಇಂಡಿಯಾಗೆ ಕಾಲಿಡುತ್ತಿದೆ!!.

ಹೌದು, ಸರಿಸುಮಾರು ಐದು ತಿಂಗಳ ಹಿಂದೆ ಪ್ರಪಂಚದ ಎಲ್ಲಡೆ ಬಿಡುಗಡೆಯಾಗಿದ್ದ ಪೋಕ್ಮನ್ ಗೋ ಗೇಮ್ ಇತರೆ ವಿಡಿಯೋ ಗೇಮ್‌ಗಳಿಗಿಂತ ಭಿನ್ನವಾಗಿ, ವಾಸ್ತವ ಪ್ರಪಂಚದ ವಿಡಿಯೋ ಗೇಮ್ ಆಗಿ ರೂಪುಗೊಂಡಿತ್ತು. ಇದು ವಿಶ್ವದೆಲ್ಲೆಡೆ ಯುವಕ ಯುವತಿಯರ ಮನಗೆದಿದ್ದಿತ್ತು.

ಜಿಯೋ-ಪೋಕ್ಮನ್ ಆಟ..ಭಾರತಕ್ಕೆ ಬಂತು ಪೋಕ್ಮನ್ ಗೋ ಗೇಮ್!!

'ಪೋಕ್ಮನ್‌ ಗೋ' ಗೇಮ್‌ ಆಟದಿಂದ ತಿಂಗಳಿಗೆ 25,000 ರೂ ಗಳಿಸಬಹುದು

ಇಷ್ಟು ಹೆಸರಾದರೂ ಪೋಕ್ಮನ್ ಗೋ ಗೇಮ್ ಭಾರತಕ್ಕೆ ಮಾತ್ರ ಕಾಲಿಟ್ಟಿರಲಿಲ್ಲ.! ಇಂಟರ್‌ನೆಟ್‌ ಇದ್ದರೆ ಮಾತ್ರ ಆಡಲು ಸಾಧ್ಯವಾಗುವಂತಹ ಪೋಕ್ಮನ್ ಗೋ ಗೇಮ್ ಭಾರತದಲ್ಲಿ ಲಾಂಚ್‌ ಆಗದಿರಲು ಇಲ್ಲಿ ಇದ್ದ ದುಬಾರಿ ಇಂಟರ್‌ನೆಟ್ ವೆಚ್ಚವೇ ಕಾರಣವಾಗಿತ್ತು ಎನ್ನಲಾಗಿದೆ!!

ಜಿಯೋ-ಪೋಕ್ಮನ್ ಆಟ..ಭಾರತಕ್ಕೆ ಬಂತು ಪೋಕ್ಮನ್ ಗೋ ಗೇಮ್!!

ಆದರೆ, ಇದೀಗ ಜಿಯೋ ಫ್ರೀ ನೆಟ್ ಆಫರ್‌ ನೀಡಿದ್ದು, ಇದರಿಂದಾಗಿ ಪೋಕ್ಮನ್ ಗೋ ಗೇಮ್ ಭಾರತದ ಮಾರುಕಟ್ಟೆಗೆ ಕಾಲಿಡುತ್ತಿದೆ!. ಈ ಬಗ್ಗೆ ಪೋಕ್ಮನ್ ಗೋ ಗೇಮ್ ತಯಾರಕ ಸಂಸ್ಥೆ ನಿಯಾನ್‌ಟಿಕ್ ಸಂಸ್ಥೆಯ ಚೀಫ್ ಎಕ್ಸಿಕ್ಯೂಟಿವ್ ಜಾನ್ ಹಾನ್ಕಿ ಮಾತನಾಡಿ, ಡಿಜಿಟೈಸ್ ಆಗುತ್ತಿರುವ ಜಿಯೋ ಜೊತೆಗೂಡಿ ಭಾರತದಲ್ಲಿ ಪೋಕ್ಮನ್ ಗೋ ಗೇಮ್ ಹೊರತಂದಿರುವುದಾಗಿ ತಿಳಿಸಿದರು.

ಜಿಯೋ-ಪೋಕ್ಮನ್ ಆಟ..ಭಾರತಕ್ಕೆ ಬಂತು ಪೋಕ್ಮನ್ ಗೋ ಗೇಮ್!!

ಪೋಕ್ಮನ್ ಗೋ ಗೋ ಆಪ್‌ ಅನ್ನು ಇದೀಗ ಪ್ರಪಂಚದಾದ್ಯಂತ 500 ಮಿಲಿಯನ್ ಜನರು ಡೌನ್‌ಲೋಡ್ ಮಾಡಿಕೊಂಡಿದ್ದು, ಭಾರತದಲ್ಲಿ ಇಂದಿನಿಂದ ಪೋಕ್ಮನ್ ಗೋ ಗೇಮ್ ಆಡುವ ಸೌಲಭ್ಯವಿದೆ. ಜಿಯೋ ಗ್ರಾಹಕರು ಉಚಿತವಾಗಿ ಪೋಕ್‌ಮ್ಯಾನ್‌ ಗೇಮ್‌ ಡೌನ್‌ಲೋಡ್ ಮಾಡಿ ಎಂಜಾಯ್ ಮಾಡಬಹುದು!.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
pokemon Game has been downloaded over 500 million times since launch To Know More Visit To Kannada.Gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot