Home
ಸುದ್ದಿಜಾಲ

ಯುವತಿ ಜೊತೆ ಬೈಕ್‌ ಸ್ಟಂಟ್ ಮಾಡಿದ ಯುವಕ!..ಟಿಕ್‌ಟಾಕ್‌ನಲ್ಲಿ ವಿಡಿಯೊ ವೈರಲ್‌!

ಯುವಕರಿಗೆ ವಾಹನಗಳ ಮೇಲೆ ಪ್ರೀತಿ, ಒಲವು ಇದ್ದೇ ಇರುತ್ತದೆ. ಅದರಲ್ಲೂ ಬೈಕ್‌ ಅಂದರೇ ಪಂಚ್‌ಪ್ರಾಣ. ಬೈಕ್‌ಅನ್ನು ವೇಗವಾಗಿ ಓಡಿಸುವುದು, ಬೈಕ್‌ನಲ್ಲಿ ಸ್ಟಂಟ್ ಮಾಡುವುದು, ಬೈಕ್‌ ವೀಲಿಂಗ್ ಮಾಡುವುದು, ಇವೆಲ್ಲಾ ಯುವಕರ ಹಾಟ್ ಫೇವರೇಟ್. ಹೀಗೆ ಇಲ್ಲೊಬ್ಬ ಯುವಕ ಹೆದ್ದಾರಿಯಲ್ಲಿ ಬೈಕ್‌ ವೀಲಿಂಗ್ ಮಾಡಿದ್ದು, ಆ ವೀಲಿಂಗ್ ವಿಡಿಯೊ ಸಾಮಾಜಿಕ ಜಾಲತಾಣಗಳಾದ ಟಿಕ್‌ಟಾಕ್‌ ಮತ್ತು ಹೆಲೊ ಆಪ್‌ಗಳಲ್ಲಿ ವೈರಲ್‌ ಆಗಿದೆ. ಸದ್ಯ ಆ ಯುವಕ ಈಗ ಪೋಲಿಸ್‌ರ ಅತಿಥಿಯಾಗಿದ್ದಾನೆ.

ಯುವತಿ ಜೊತೆ ಬೈಕ್‌ ಸ್ಟಂಟ್ ಮಾಡಿದ ಯುವಕ!..ಟಿಕ್‌ಟಾಕ್‌ನಲ್ಲಿ ವಿಡಿಯೊ ವೈರಲ್‌!

ಹೌದು, ಸ್ಟಂಟ್‌ ಮಾಡಿದ ಯುವಕ ಬೆಂಗಳೂರಿನ ಯಲಹಂಕ ನಿವಾಸಿ ನೂರ್‌ ಮಹಮ್ಮದ್ ಎಂದು ಗುರುತಿಸಲಾಗಿದ್ದು, 21 ವರ್ಷದ ನೂರ್‌ ಯಲಹಂಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಈತ ಇತ್ತೀಚಿಗೆ ದೇವನಹಳ್ಳಿ-ನಂದಿಹಿಲ್‌ ಮುಖ್ಯರಸ್ತೆಯಲ್ಲಿ ಹೊಂಡಾ ಡಿಯೊ ಬೈಕ್‌ ಮೇಲೆ ಯುವತಿ ಜತೆ ಭಯಾನಕ ಸ್ಟಂಟ್‌ ಮಾಡುತ್ತ ವೇಗವಾಗಿ ಬೈಕ್‌ ಓಡಿಸಿದ್ದಾನೆ.

ಯುವತಿ ಜೊತೆ ಬೈಕ್‌ ಸ್ಟಂಟ್ ಮಾಡಿದ ಯುವಕ!..ಟಿಕ್‌ಟಾಕ್‌ನಲ್ಲಿ ವಿಡಿಯೊ ವೈರಲ್‌!

ನೂರ್ ಯುವತಿಯೊಂದಿಗೆ ಬೈಕ್‌ ಸ್ಟಂಟ್‌ ಮಾಡುವುದನ್ನು ಆತನ ಸ್ನೇಹಿತರು ವಿಡಿಯೊ ಮಾಡಿದ್ದು, ನಂತರ ಅದನ್ನು ಬೈಟ್‌ ಡ್ಯಾನ್ಸ್‌ ಸಂಸ್ಥೆಯ ಜನಪ್ರಿಯ ವಿಡಿಯೊ ಆಪ್‌ 'ಟಿಕ್‌ಟಾಕ್' ಮತ್ತು 'ಹೆಲ್ಲೊ' ಆಪ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೊದಲ್ಲಿ ಬೈಕ್‌ ನಂಬರ್‌ ಟ್ರೆಸ್‌ ಮಾಡಿದ ಪೋಲಿಸರು ಯುವಕನನ್ನು ಬಂದಿಸಿದ್ದಾರೆ. ಹಾಗಾದರೇ ಹೇಗಿತ್ತು ಆ ಭಯಾನಕ ಸ್ಟಂಟ್ ದೃಶ್ಯ ಎಂಬುದನ್ನು ಮುಂದೆ ನೋಡಿರಿ.

ವೈರಲ್‌ ಆದ ಸ್ಟಂಟ್ ದೃಶ್ಯ

ವೈರಲ್‌ ಆದ ಸ್ಟಂಟ್ ದೃಶ್ಯ

ನೂರ್‌ ಮಹಮ್ಮದ್ ಎಂಬ ಯುವಕ ದೇವನಹಳ್ಳಿ-ನಂದಿಹಿಲ್‌ ಮುಖ್ಯರಸ್ತೆಯಲ್ಲಿ ಹೊಂಡಾ ಡಿಯೊ ಬೈಕ್ ಮೇಲೆ ಭಯಾನಕ ಸ್ಟಂಟ್‌ ಮಾಡಿದ್ದು, ಅದನ್ನು ಅವನ ಗೆಳೆಯರೇ ವಿಡಿಯೊ ಮಾಡಿಕೊಂಡಿದ್ದಾರೆ. ಬಳಿಕ ಜನಪ್ರಿಯ ವಿಡಿಯೊ ಆಪ್‌ ಟಿಕ್‌ಟಾಕ್‌ ಮತ್ತು ಹೆಲ್ಲೊ ಆಪ್‌ಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಈಗ ಆ ವಿಡಿಯೊ ವೈರಲ್ ಆಗಿ ಸುದ್ದಿಯಾಗಿದೆ.

ಟಿಕ್‌ಟಾಕ್‌ ಮತ್ತು ಹೆಲ್ಲೊ

ಟಿಕ್‌ಟಾಕ್‌ ಮತ್ತು ಹೆಲ್ಲೊ

ಬೈಕ್‌ ಸ್ಟಂಟ್‌ ದೃಶ್ಯ ಟಿಕ್‌ಟಾಕ್‌ನಲ್ಲಿ ವೈರಲ್‌ ಆಗಿದೆ ಎಂದು ಕೆಲವು ವಾಹಿನಿಗಳು ಹೇಳಿವೆ ಮತ್ತು ಇನ್ನು ಕೆಲವು ಪತ್ರಿಕೆಗಳು ಸಾಮಾಜಿಕ ತಾಣ ಹೆಲ್ಲೊ ಆಪ್‌ನಲ್ಲಿ ಸ್ಟಂಟ್ ವಿಡಿಯೊ ವೈರಲ್‌ ಆಗಿದೆ ಎಂದು ಹೇಳಿವೆ. ಆದರೆ ಟಿಕ್‌ಟಾಕ್‌ ಮತ್ತು ಹೆಲ್ಲೊ ಆಪ್‌ ಎರಡು ಚೀನಾ ಮೂಲಕದ ಬೈಟ್‌ಡ್ಯಾನ್ಸ್‌ ಸಂಸ್ಥೆಯ ಆಪ್‌ಗಳಾಗಿವೆ. ಸದ್ಯ ಭಾರಿ ಜನಪ್ರಿಯತೆ ಪಡೆದಿವೆ.

ಗೆಳೆಯರ ಬೈಕ್‌

ಗೆಳೆಯರ ಬೈಕ್‌

ನೂರ್‌ ಮಹಮ್ಮದ್ ತಂದೆ ಆಟೋ ಡ್ರೈವರ್‌ ಆಗಿದ್ದು, ಅವನ ಹತ್ತಿರ ಬೈಕ್‌ ಇರಲಿಲ್ಲ. ಗೆಳೆಯರ ಬೈಕ್‌ನಲ್ಲಿ ಸ್ಟಂಟ್ ಮಾಡುವುದನ್ನು ಪ್ರಾಕ್ಟಿಸ್‌ ಮಾಡಿದ್ದ ಎನ್ನಲಾಗಿದೆ. ಹಾಗೆಯೇ ವಿಡಿಯೊದಲ್ಲಿ ಸ್ಟಂಟ್‌ ಮಾಡಿರುವ ಹೊಂಡಾ ಡಿಯೊ ಬೈಕ್‌ ಸಹ ಅವನ ಸ್ನೇಹಿತನದು ಎಂದು ತಿಳಿದು ಬಂದಿದೆ.

ವೈರಲ್‌ ಮೂಲ ಸಾಮಾಜಿಕ ತಾಣಗಳು

ವೈರಲ್‌ ಮೂಲ ಸಾಮಾಜಿಕ ತಾಣಗಳು

ಸದ್ಯ ಟಿಕ್‌ಟಾಕ್‌, ಹೆಲ್ಲೊ ಸಾಮಾಜಿಕ ಜಾಲತಾಣಗಳು ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದು, ಜನಪ್ರಿಯವಾಗಿವೆ. ಈ ತಾಣಗಳಲ್ಲಿ ಫೋಸ್ಟ್‌ ಮಾಡುವ ದೃಶ್ಯಗಳು ಬಹುಬೇಗನೆ ವೈರಲ್‌ ಆಗುತ್ತವೆ. ಎಷ್ಟೋ ಪ್ರಕರಣಗಳನ್ನು ಬೇಧಿಸುವಲ್ಲಿ ಸಾಮಾಜಿಕ ಜಾಲತಾಣಗಳಲ್ಲಿನ ದೃಶ್ಯಗಳು ಪೋಲಿಸರ್‌ ನೆರವಿಗೆ ಬಂದಿವೆ.

ರಸ್ತೆಯಲ್ಲಿ ಬೈಕ್‌ ಸ್ಟಂಟ್‌ ಅಪರಾಧ

ರಸ್ತೆಯಲ್ಲಿ ಬೈಕ್‌ ಸ್ಟಂಟ್‌ ಅಪರಾಧ

ಸಾರ್ವಜನಿಕ ಪ್ರದೇಶ, ಟ್ರಾಫಿಕ್‌ ಏರಿಯಾ ಮತ್ತು ಹೆದ್ದಾರಿಗಳಲ್ಲಿ ಬೈಕ್‌ ಸ್ಟಂಟ್‌ ಮಾಡುವುದು ಅಪರಾಧವಾಗಿದೆ. ಆದರೆ ಸಾರ್ವಜನಿಕರಿಲ್ಲದ ಸುರಕ್ಷಿತ ಸ್ಥಳದಲ್ಲಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪ್ರಾಕ್ಟಿಸ್‌ ಮಾಡಬಹುದು. ಆದರೆ ಕಡ್ಡಾಯವಾಗಿ ಹೆಲ್ಮೆಟ್‌, ಪ್ಯಾಡ್‌, ಹ್ಯಾಂಡ್‌ ಗ್ಲೌಸ್‌, ಜಾಕೆಟ್‌ಗಳನ್ನು ಧರಿಸಲೇಬೇಕು.

Best Mobiles in India

English summary
The stunt video which became viral on the social media showed him performing a dangerous wheelie on public roads at high speed while riding a Honda Dio scooter. to know more vist to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+