ಇನ್ಮುಂದೆ ಪೋಲಿಸರು ನಡುರಸ್ತೆಯಲ್ಲಿ ವಾಹನ ತಡೆದು ದಂಡವಿಧಿಸುವಂತಿಲ್ಲ!

|

ಸಂಚಾರ ನಿಯಮ ಉಲ್ಲಂಘನೆ ಮಾಡುವವರನ್ನ ರಸ್ತೆಯಲ್ಲಿ ತಡೆದು ದಂಡ ವಿಧಸುವ ಕ್ರಮಕ್ಕೆ ಬೆಂಗಳೂರು ಪೋಲಿಸ್‌ ಇಲಾಖೆ ತಿಲಾಂಜಲಿ ಆಡಿದೆ. ಈ ಕ್ರಮದಿಂದಾಗಿ ನಡು ರಸ್ತೆಯಲ್ಲಿ ಬೈಕ್‌ ಸವಾರರಿಗೆ ಆಗುತ್ತಿದ್ದ ದೊಡ್ಡ ಕಿರಿಕಿರಿ ತಪ್ಪಿದೆ. ಹಾಗಂತ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಏಕೆಂದರೆ ನಿಮ್ಮ ಡಿಜಿಟಲ್‌ ಕೇಸ್‌ ದಾಖಲಾಗುತ್ತದೆ. ಈ ಮೂಲಕ ನೀವು ಸಂಚಾರಿ ನಿಯಮ ಉಲ್ಲಂಘಿಸಿದರೆ ನಿಮ್ಮ ವಿಳಸಾಕ್ಕೆ ನೋಟಿಸ್‌ ಬರಲಿದೆ. ಇದಕ್ಕೆ ನೀವು ದಂಡ ಪಾವತಿಸಬೇಕಾಗುತ್ತದೆ.

ಬೆಂಗಳೂರ

ಹೌದು, ಇಂದಿನಿಂದ ಬೆಂಗಳೂರಿನ ರಸ್ತೆಗಳಲ್ಲಿ ನಿಮ್ಮ ವಾಹನ ತಡೆದು ವಿಚಾರಣೆ ನಡೆಸುವುದಿಲ್ಲ. ಬದಲಿಗೆ ಡಿಜಿಟಲ್‌ ಕೇಸ್‌ ದಾಖಲು ಮಾಡುವುದಕ್ಕೆ ಪೋಲಿಸ್‌ ಇಲಾಖೆ ಸೂಚನೆ ನೀಡಿದೆ. ರಸ್ತೆಯ ತಿರುವಗಳಲ್ಲಿ, ಮರದ ಮರೆಯಲ್ಲಿ ನಿಂತು ಸಮಾಚಾರ ನಿಯಮ ಉಲ್ಲಂಘನೆ ಮಾಡುವವರನ್ನು ತಡೆದು ದಂಡ ವಿಧಿಸಲಾಗುತ್ತಿತ್ತು. ಆದರೆ ಕೆಲವೊಂದು ಕಡೆ ಇದನ್ನೇ ನೆಪ ಮಾಡಿಕೊಂಡು ನಿಯಮ ಉಲ್ಲಂಘನೆ ಮಾಡದೇ ಹೋದರು ದಂಡ ವಿಧಿಸುವ ಪ್ರವೃತ್ತಿ ಕೂಡ ಇತ್ತು. ಇದರ ಬಗ್ಗೆ ಎಷ್ಟೋ ಮಂದಿ ಸೊಶೀಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ಆಗಿತ್ತು. ಇದರ ಪರಿಣಾಮವಾಗಿ ಪೋಲಿಸ್‌ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಹಾಗಾದ್ರೆ ಡಿಜಿಟಲ್‌ ಕೇಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್ನು ನೀವು ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ರಸ್ತೆಯಲ್ಲಿ ರಸ್ತೆಯಲ್ಲಿ ನಿಮ್ಮ ವಾಹನ ತಡೆದು ದಂಡ ವಿಧಿಸುವುದಿಲ್ಲ. ಬದಲಿಗೆ ಡಿಜಿಟಲ್‌ ಕೇಸ್‌ ದಾಖಲಾಗಲಿದೆ. ಅಲ್ಲದೆ ನಿಯಮ ಉಲ್ಲಂಘನೆ ಮಾಡುವ ವಾಹನಗಳನ್ನ ಯಾವುದೇ ಕಾನ್‌ಸ್ಟೇಬಲ್‌ ಅಡ್ಡಗಟ್ಟಿ ನಿಲ್ಲಿಸಬಾರದು. ಬದಲಿಗೆ ಮೊಬೈಲ್‌ ಕ್ಯಾಮೆರಾದಲ್ಲಿ ಚಿತ್ರಿಕರಿಸಿಕೊಳ್ಳಬೇಕು. ಬೈಕ್‌ ನಂಬರ್‌ ಅನ್ನು ಎಂಟ್ರಿ ಮಾಡಿಕೊಳ್ಳುವ ಮೂಲಕ ಕೇಸ್‌ ದಾಖಲಿಸಬೇಕು ಎಂದು ಹೇಳಲಾಗಿದೆ. ಆದರೆ ದಿನಕ್ಕೆ ಕನಿಷ್ಟ 25 ಡಿಜಿಟಲ್‌ ಕೇಸ್‌ ದಾಖಲಿಸಬೇಕೆಂಬ ಆಜ್ಞೆಯನ್ನು ಹೊರಡಿಸಿದ್ದಾರೆ.

ದಂಡ

ರಸ್ತೆಯಲ್ಲಿ ದಂಡ ವಿಧಿಸುವ ಬದಲು ಆರ್‌ಟಿಒ ಹಾಗೂ ವಾಯು ಮಾಲಿನ್ಯ ಪ್ರಮಾನ ತಪಾಸಣೆಗೆ ಬರುವ ವಾಹನಗಳಿಗೆ ಹಳೇ ಕೇಸ್‌ ಇದ್ದರೆ ದಂಡ ವಿದಿಸಲಾಗುತ್ತೆ ಎನ್ನಲಾಗಿದೆ. ಇನ್ನು ಡಿಜಿಟಲ್‌ ಪದ್ದತಿಯನ್ನು ಜಾರಿ ಮಾಡಿದರೆ ಬಿಲ್‌ ಕೊಡದೆ ಹಣ ಪಡೆಯುವ ಕ್ರಮ ಕೂಡ ತಪ್ಪಲಿದೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ತಪ್ಪಿದಂತಾಗಿದೆ. ಅಲ್ಲದೆ ರಾಜದಾನಿಯ ರಸ್ತೆಗಳಲ್ಲಿ ಆಗಾಗ ರಸ್ತೆ ಬದಿಯಲ್ಲಿ ವಾಹನ ತಡೆಯುತ್ತಿದ್ದ ಪೋಲಿಸರ ಭಯ ಇನ್ಮುಂದೆ ತಪ್ಪಲಿದೆ. ಸದ್ಯ ಈ ಕ್ರಮದಿಂದಾಗಿ ರಾಜದಾನಿಯ ವಾಹನ ಸವಾರರು ಪೋಲಿಸ್‌ರಿಗೆ ದಂಡ ಕಟ್ಟುವ ಭಯದಿಂದ ನಿಟ್ಟುಸಿರು ಬಿಟ್ಟಿದ್ದಾರೆ.

Best Mobiles in India

Read more about:
English summary
banglore police has ordered a stop to the practice of stopping the vehicles in the middle of the city roads.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X