ದಕ್ಷಿಣ ಕನ್ನಡದಲ್ಲಿ ಈ ಭಾರಿ 'ಸ್ಮಾರ್ಟ್‌' ಚುನಾವಣೆ.!

Posted By:

ಸ್ಮಾರ್ಟ್‌ಫೋನ್‌ ಟೆಕ್ನಾಲಜಿ ಕರ್ನಾಟಕ ಚುನಾವಣೆಗೆ ಬಂದಿದೆ. ಸ್ಮಾರ್ಟ್‌ಫೋನ್‌ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಚುನಾವಣೆ ಮತ್ತಷ್ಟು ಸ್ಮಾರ್ಟಾಗಿ ರೂಪಿಸಿಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಜ್ಜಾಗಿದೆ. ಈ ಮೂಲಕ ಚುನಾವಣಾ ವರದಿಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ದಕ್ಷಿಣ ಕನ್ನಡ ಜಿಲ್ಲೆಪಾತ್ರವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಮೊಬೈಲ್ಸ್ ಇನ್ ಎಲೆಕ್ಷನ್ ಮ್ಯಾನೇಜ್ ಮೆಂಟ್ ಎನ್ನುವ ಅಪ್ಲಿಕೇಶನ್ ಪ್ರಾರಂಭಿಸಿ ಪ್ರತಿ ತಾಲೂಕಿನ ಚುನಾವಣಾ ಅಧಿಕಾರಿಗಳಿಗೆ ಸ್ಮಾರ್ಟ್ ಫೋನ್ ವಿತರಿಸಿದ್ದು, ತಾಲೂಕಿನ ಪ್ರತಿ ಚುನಾವಣಾ ವರದಿಗಳನ್ನು ಅಧಿಕಾರಿಗಳು ಈ ಫೋನ್ ಮೂಲಕ ತ್ವರಿತವಾಗಿ ರವಾನಿಸಬಹುದಾಗಿದೆ. ತಾಲೂಕು ವ್ಯಾಪ್ತಿಯ ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಇಂತಹ ಅಪ್ಲಿಕೇಶನ್ ಹೊಂದಿರುವ 24 ಸೆಲ್ ಪೋನ್ ಗಳನ್ನು ವಿತರಣೆ ಮಾಡಲಾಗಿದೆ

ದಕ್ಷಿಣ ಕನ್ನಡದಲ್ಲಿ ಈ ಭಾರಿ 'ಸ್ಮಾರ್ಟ್‌' ಚುನಾವಣೆ.!
.

ವಿವಿಧ ಕಂಪೆನಿಗಳ ಮೊಬೈಲ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ಅಪ್ಲಿಕೇಶ್ ಹೊಂದಿರುವ ಚುನಾವಣಾ ಅಧಿಕಾರಿಗಳು ತಮ್ಮ ವ್ಯಾಪ್ತಿಯ ದಿನದ ವರದಿ, ನೀತಿ ಸಂಹಿತಿ ಉಲ್ಲಂಘನೆ ಪ್ರಕರಣಗಳು ಮುಂತಾದ ಚುನಾವಣಾ ವಿವರಗಳನ್ನು ಅಪ್‌ಲೋಡ್‌ ಮಾಡಲಿದ್ದಾರೆ. ಚುನಾವಣಾ ಸಮಯದಲ್ಲಿ ತಾಲೂಕಿನ ಮಾಹಿತಿಗಳನ್ನು ತ್ವರಿತವಾಗಿ ಪಡೆದುಕೊಳ್ಳುವುದು ಈ ಹಿಂದೆ ಕಷ್ಟವಾಗುತ್ತಿತ್ತು. ಹೀಗಾಗಿ ತ್ವರಿತವಾದ ಮಾಹಿತಿ ವಿನಿಮಯಕ್ಕಾಗಿ ಇಂತಹ ನೂತನ ಪ್ರಯತ್ನ ಮಾಡಲಾಗಿದ್ದು ಜಿಪಿಎಸ್ ತಂತ್ರಜ್ಞಾನದಿಂದ ಯಾವ ಅಧಿಕಾರಿಗಳು, ಯಾವ ಸ್ಥಳದಿಂದ ವರದಿ ಮಾಡುತ್ತಾರೆಂಬುದು ಈ ಸ್ಮಾರ್ಟ್‌ಫೋನ್‌ ಮೂಲಕ ತಿಳಿಯಲಿದೆ.

ಈಗಾಗಲೇ ಜಿಲ್ಲಾಡಳಿತ 160 ಫೋನ್ ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಚುನಾವಣೆಯ ನಂತರ ಈ ಸೇವೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೀಡಿ ಆಡಳಿತವನ್ನು ಪಾರದರ್ಶಕವಾಗಿ ರೂಪಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಇದನ್ನೂ ಓದಿ : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot