Home
ಸುದ್ದಿಜಾಲ

41,999ರೂ.ಗಳ ಬೆಲೆಯ ಹೊಸ ಇಯರ್‌ಬಡ್ಸ್‌ ಲಾಂಚ್‌ ಮಾಡಿದ ಹೆಚ್‌ಪಿ: ವಿಶೇಷ ಫೀಚರ್ಸ್‌ ಏನು?

ಈವರೆಗೂ ಇಯರ್‌ಬಡ್ಸ್‌ಗಳಲ್ಲಿ ವಿವಿಧ ರೀತಿಯ ಆಕರ್ಷಕ ಫೀಚರ್ಸ್‌ ಇರುವ ಬಡ್ಸ್‌ಗಳನ್ನು ನೋಡಿದ್ದೇವೆ, ಬಳಕೆ ಸಹ ಮಾಡಿದ್ದೇವೆ. ಆದರೆ, ಹೆಚ್‌(HP) ನೀವು ಈವರೆಗೂ ಊಹೆ ಮಾಡಿರದ ಹಾಗೂ ನಿರೀಕ್ಷೆ ಮಾಡಿರದ ಹೊಸ ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಅನಾವರಣ ಮಾಡಿದೆ. ಇದರ ಬೆಲೆ ಬರೋಬ್ಬರಿ 41,999ರೂ.ಗಳು.

ಹೌದು, ಹೆಚ್‌ಪಿ ಇಂಡಿಯಾ ಇದೀಗ ಟಚ್‌ಸ್ಕ್ರೀನ್ ಕೇಸ್‌ನೊಂದಿಗೆ ಪಾಲಿ ವಾಯೇಜರ್ ಫ್ರೀ 60 UC ಇಯರ್‌ಬಡ್ಸ್‌ (Poly Voyager Free 60 UC earbuds) ಅನ್ನು ಲಾಂಚ್‌ ಮಾಡಿದೆ. ಇದು ಚಾರ್ಜಿಂಗ್ ಕೇಸ್‌ನಲ್ಲಿ OLED ಡಿಸ್‌ಪ್ಲೇ ಹೊಂದಿದ್ದು, ಭಾರೀ ವಿಶೇಷ ಎನಿಸಿದೆ. ಹಾಗಿದ್ರೆ, ಇದರ ಫೀಚರ್ಸ್‌ ಏನು?, ಇಷ್ಟು ಬೆಲೆ ಕೊಟ್ಟು ಖರೀದಿ ಮಾಡಬೇಕಾದ ಸೌಲಭ್ಯಗಳು ಇದರಲ್ಲಿ ಏನಿವೆ? ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

41,999ರೂ.ಗಳ ಬೆಲೆಯ ಹೊಸ ಇಯರ್‌ಬಡ್ಸ್‌ ಲಾಂಚ್‌ ಮಾಡಿದ ಹೆಚ್‌ಪಿ...

ಪಾಲಿ ವಾಯೇಜರ್ ಫ್ರೀ 60 UC ಇಯರ್‌ಬಡ್ಸ್‌ ಶೈಲಿ: ಇದು ಸಾಮಾನ್ಯ ಇಯರ್‌ಬಡ್ಸ್‌ಗಳ ಶೈಲಿಯಲ್ಲೇ ಕಾಣಿಸಿಕೊಂಡಿದೆಯಾದರೂ ಬಹಳ ವಿಶೇಷವಾಗಿ OLED ಡಿಸ್‌ಪ್ಲೇ ಯನ್ನು ಹೊಂದಿದೆ. ಫೋನ್ ಅನ್ನು ಬಳಕೆ ಮಾಡದೆಯೇ ಇದರಲ್ಲಿಯೇ ಟ್ರ್ಯಾಕ್‌ಗಳನ್ನು ಬದಲಾಯಿಸಲು ಅಥವಾ ಕರೆ ಕಂಟ್ರೋಲ್ ಮಾಡಲು ಈ ಡಿಸ್‌ಪ್ಲೇ ಸಹಾಯ ಮಾಡಲಿದೆ. ಇನ್ನು ಫ್ಲಾಟ್ ಟಾಪ್‌ ಮೂಲಕ ಅಂಡಾಕಾರದ ವಿನ್ಯಾಸದೊಂದಿಗೆ ಪ್ರೀಮಿಯಂ ನೋಟ ಹೊಂದಿದೆ.

ಪಾಲಿ ವಾಯೇಜರ್ ಫ್ರೀ 60 UC ಇಯರ್‌ಬಡ್ಸ್‌ ಫೀಚರ್ಸ್‌: ಇದರಲ್ಲಿನ ಪ್ರತಿ ಇಯರ್‌ಬಡ್ ಮೂರು ಮೈಕ್ ಗಳನ್ನು ಹೊಂದಿದ್ದು, ಹಿತಕರವಾದ ಫಿಟ್‌ಗಾಗಿ ಇಯರ್ ಟಿಪ್ಸ್ ಅನ್ನು ಬದಲಾವಣೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಇದಕ್ಕಾಗಿ ಮೂರು ವಿಭಿನ್ನ ಗಾತ್ರದ ಟಿಪ್ಸ್ ಆಯ್ಕೆ ನೀಡಲಾಗಿದೆ. ಜೊತೆಗೆ ಐಫೋನ್‌, ಆಂಡ್ರಾಯ್ಡ್‌ ಫೋನ್‌ಗಳು ಹಾಗೂ ಪಿಸಿಯೊಂದಿಗೆ ಸುಲಭವಾಗಿ ಸಂಪರ್ಕಿಸಿಕೊಳ್ಳಬಹುದು.

41,999ರೂ.ಗಳ ಬೆಲೆಯ ಹೊಸ ಇಯರ್‌ಬಡ್ಸ್‌ ಲಾಂಚ್‌ ಮಾಡಿದ ಹೆಚ್‌ಪಿ...

ಇನ್ನು ಈ ಡಿವೈಸ್‌ BT700​ ಬ್ಲೂಟೂತ್ ಅಡಾಪ್ಟರ್ ಅನ್ನು ಹೊಂದಿದ್ದು, ಬ್ಲೂಟೂತ್ ಅಲ್ಲದ ಡಿವೈಸ್‌ಗಳೊಂದಿಗೆ ಇಯರ್‌ಬಡ್‌ಗಳನ್ನು ಸಂಪರ್ಕಿಸಲು ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ. ಇಷ್ಟು ಮಾತ್ರವಲ್ಲದೆ ಪಾಲಿ ಲೆನ್ಸ್ ಮೊಬೈಲ್ ಆಪ್‌ ಮೂಲ ಈ ಇಯರ್‌ಬಡ್‌ಗಳನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಹಾಗೂ ಆಟೋಮ್ಯಾಟಿಕ್‌ ಆಗಿ ಕರೆಗಳಿಗೆ ಉತ್ತರಿಸಲು ಅಥವಾ ಸಂಗೀತವನ್ನು ಕಂಟ್ರೋಲ್ ಮಾಡಲು ಸ್ಮಾರ್ಟ್ ಸೆನ್ಸರ್‌ಗಳನ್ನು ಆಯ್ಕೆ ನೀಡಲಾಗಿದೆ.

ಇದರೊಂದಿಗೆ ಹೆಚ್ಚಿನ ಗಾಳಿ ಶಬ್ಧದ ತೊಂದರೆಯಿಂದ ಪಾರಾಗಲು ವಿಂಡ್‌ಸ್ಮಾರ್ಟ್ ತಂತ್ರಜ್ಞಾನದ ಆಯ್ಕೆ ಕೂಡ ಇದೆ. ಜೊತೆಗೆ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲಿಂಗ್‌ ಸೌಲಭ್ಯ ಇದ್ದು, ನೀವು ಕರೆಯಲ್ಲಿದ್ದಾಗ ಅಥವಾ ಮೀಟಿಂಗ್‌ ನಲ್ಲಿರುವಾಗ ಇತರೆ ಯಾವುದೇ ಶಬ್ಧಗಳ ಸಮಸ್ಯೆ ಕಂಡುಬರುವುದಿಲ್ಲ. ಇನ್ನುಳಿದಂತೆ ಈ ಇಯರ್‌ಬಡ್‌ಗಳನ್ನು ಏಕಕಾಲದಲ್ಲಿ ಎರಡು ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಬಹುದು. ಜೊತೆಗೆ ಇದು ಎಂಟು ಡಿವೈಸ್‌ಗಳನ್ನು ನೆನಪಿಟ್ಟುಕೊಳ್ಳುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ.

41,999ರೂ.ಗಳ ಬೆಲೆಯ ಹೊಸ ಇಯರ್‌ಬಡ್ಸ್‌ ಲಾಂಚ್‌ ಮಾಡಿದ ಹೆಚ್‌ಪಿ...

ಇಷ್ಟು ಮಾತ್ರವಲ್ಲದೆ ಹೆಚ್‌ಪಿ ಮಾಲೀಕತ್ವದ ಪಾಲಿಯ ಪಾಲಿ ವಾಯೇಜರ್ ಫ್ರೀ 60 ಇಯರ್‌ಬಡ್ಸ್‌ ಅನ್ನು ಮನಬಂದಂತೆ ಬಳಕೆದಾರರು ಡಿವೈಸ್‌ಗಳ ನಡುವೆ ಬದಲಾಯಿಸಬಹುದು ಮತ್ತು ಕರೆ ಮಾಹಿತಿಯನ್ನು ವೀಕ್ಷಣೆ ಮಾಡಬಹುದಾಗಿದೆ. ಇದರೊಂದಿಗೆ 24 ಗಂಟೆಗಳ ಪ್ಲೇ ಟೈಮ್‌ ಹೊಂದಿದ್ದು, 16.5 ಗಂಟೆಗಳ ಟಾಕ್ ಟೈಮ್ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಈ ಎಲ್ಲಾ ಕಾಣಕ್ಕಾಗಿಯೇ ಇದು ಸಾಮಾನ್ಯ ಇಯರ್‌ಬಡ್ಸ್‌ಗಳಿಗಿಂತ ವಿಶೇಷ ಎನಿಸಿದೆ.

ಪಾಲಿ ವಾಯೇಜರ್ ಫ್ರೀ 60 UC ಇಯರ್‌ಬಡ್ಸ್‌ ನ ಈ ವಿಶೇಷತೆಗಳನ್ನು ಗಮನಿಸಿದರೆ ಇದನ್ನು ಸಂಗೀತ ಹಾಗೂ ಕರೆ ಉದ್ದೇಶಕ್ಕಾಗಿ ಮಾತ್ರವಲ್ಲದೆ ಮೀಟಿಂಗ್‌ ಉದ್ದೇಶಕ್ಕೆ ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ. ಅದಾಗ್ಯೂ ಇದರ ಬೆಲೆ 41,999ರೂ. ಗಳಾಗಿರುವುದರಿಂದ ಸಾಮಾನ್ಯ ಜನರಿಗೆ ಇದು ಲಭ್ಯವಾಗುವುದು ಅಸಾಧ್ಯ ಎಂಬಂತೆ ಆಗಿದೆ.

ಇನ್ನು ಈ ಇಯರ್‌ಬಡ್ಸ್‌ ಮಾತ್ರವಲ್ಲದೆ ಹೆಚ್‌ಪಿ 925 ವರ್ಟಿಕಲ್‌ ಮೌಸ್, ಹೆಚ್‌ಪಿ ಥಂಡರ್ಬೋಲ್ಟ್ G4 ಡಾಕ್, ಹೆಚ್‌ಪಿ 960 4K ಸ್ಟ್ರೀಮಿಂಗ್ ವೆಬ್‌ಕ್ಯಾಮ್ ಮತ್ತು ಹೆಚ್‌ಪಿ E45c 45-ಇಂಚಿನ ಕರ್ವ್ಡ ಮಾನಿಟರ್ ಅನ್ನೂ ಸಹ ಲಾಂಚ್‌ ಮಾಡಲಾಗಿದೆ. ಇವು ಸಹ ದುಬಾರಿ ಬೆಲೆ ಹೊಂದಿರುವುದರ ಜೊತೆಗೆ ಇದರಲ್ಲಿನ ಫೀಚರ್ಸ್‌ಗಳು ಆ ಬೆಲೆಯನ್ನು ನಗಣ್ಯ ಮಾಡಲಿವೆ. ಅಷ್ಟರ ಮಟ್ಟಿಗೆ ಇವು ಹೊಸ ಫೀಚರ್ಸ್‌ನಿಂದ ಪ್ಯಾಕ್‌ ಆಗಿವೆ.

Best Mobiles in India

English summary
HP India has just launched the Poly Voyager Free 60 UC earbuds with a touchscreen case. It has an OLED display on the charging case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+