Home
ಸುದ್ದಿಜಾಲ

ಮೋಟೋ ಜಿ ಸಮಸ್ಯೆಗಳು ಮತ್ತು ಪರಿಹಾರಗಳು

By Shwetha

ಮೋಟೋ ಜಿಯನ್ನು ಹೆಚ್ಚು ಮಾರಾಟವಾಗಿರುವ ಹಾಟೆಸ್ಟ್ ಸ್ಮಾರ್ಟ್‌ಫೋನ್ ಆಗಿ ಪರಿಗಣಿಸಲಾಗಿದೆ. ಹೆಚ್ಚು ಮಾರಾಟವಾಗುತ್ತಿರುವ ಮೋಟೋ ಜಿ ಕೂಡ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಬಳಕೆದಾರರೂ ಕೆಲವೊಂದು ಸಮಸ್ಯೆಗಳಿಂದ ಬೇಸತ್ತಿದ್ದಾರೆ.

ಇದನ್ನೂ ಓದಿ: ನಿಮ್ಮ ಜೀವನವನ್ನೇ ಬದಲಾಯಿಸುವ ಅತ್ಯುತ್ತಮ ಟೆಕ್ ಸಲಹೆಗಳು

ಇಂದಿನ ಲೇಖನದಲ್ಲಿ ಮೋಟೋ ಜಿ ಫೋನ್ ಸಾಮಾನ್ಯವಾಗಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ. ಈ ಸಮಸ್ಯೆಗಳು ಹೆಚ್ಚು ಸಾಮಾನ್ಯವಾಗಿದೆ ಮತ್ತು ಅದಕ್ಕಿರುವ ಪರಿಹಾರ ಕೂಡ ಅತಿ ಸುಲಭವಾಗಿದೆ. ಹಾಗಿದ್ದರೆ ನಿಮ್ಮ ಮೋಟೋ ಜಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ನೋಡೋಣ ಮತ್ತು ಅದಕ್ಕಿರುವ ಪರಿಹಾರವನ್ನು ಕುರಿತು ತಿಳಿದುಕೊಳ್ಳೋಣ.

#1

#1

ನಿಮ್ಮ ಮೋಟೋ ಜಿ ಫೋನ್‌ನಲ್ಲಿ ಬ್ಯಾಟರಿ ಹಠಾತ್ತಾಗಿ ಮುಗಿಯುತ್ತಿದೆಯೇ? ಸೊನ್ನೆಯವರೆಗೆ ಬ್ಯಾಟರಿ ಖಾಲಿಯಾಗಲು ಬಿಡಿ ಮತ್ತು ಅದನ್ನು 100 ಶೇಕಡಾ ಚಾರ್ಜ್ ಮಾಡಿ. ಹೀಗೆ ಆಗಾಗ್ಗೆ ಮಾಡುತ್ತಿರಿ. ಕೆಲವೇ ಸಮಯಗಳಲ್ಲಿ ನಿಮ್ಮ ಬ್ಯಾಟರಿ ಸಮಸ್ಯೆ ದೂರವಾಗುತ್ತದೆ.

#2

#2

ಕಿಟ್‌ಕ್ಯಾಟ್ ಅಪ್‌ಡೇಟ್ ನಂತರ ಮೋಟೋ ಜಿ ಸಿಮ್ ಕಾರ್ಡ್ ಡಿಟೆಕ್ಟ್ ಮಾಡುತ್ತಿಲ್ಲವೇ? ನಿಮ್ಮ ಸಿಮ್ ಕಾರ್ಡ್‌ನಲ್ಲಿ ಏನಾದರೂ ದೋಷವಿದೆಯೇ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಿ. ನೀವು ಮೈಕ್ರೋ ಸಿಮ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಅಡಾಪ್ಟರ್ ಬಳಸಿ ಅದನ್ನು ನ್ಯಾನೋ ಸಿಮ್‌ನ್ನಾಗಿ ಮಾಡಿ. ನಂತರ ಪರಿಶೀಲಿಸಿ.

#3

#3

ನಿಮ್ಮ ಮೋಟೋ ಜಿನಲ್ಲಿ ಕ್ಯಾಮೆರಾ ಸರಿಯಾಗಿ ಪ್ರಾರಂಭಗೊಳ್ಳುತ್ತಿಲ್ಲ ಎಂದಾದಲ್ಲಿ ಸೆಟ್ಟಿಂಗ್ಸ್ ಹೋಗಿ ನಂತರ ಅಪ್ಲಿಕೇಶನ್ ಕ್ಯಾಮೆರಾ ಇಲ್ಲಿ ಫೋರ್ಸ್ ಸ್ಟಾಪ್ ಅನ್ನು ಒತ್ತಿ ಕ್ಯಾಶ್ ಹಾಗೂ ಡೇಟಾವನ್ನು ಕ್ಲಿಯರ್ ಮಾಡಿ.

#4

#4

ನಿಮ್ಮ ಮೋಟೋ ಜಿ ಈ ಸಮಸ್ಯೆಯಿಂದ ಬಳಲುತ್ತಿದೆ ಎಂದಾದಲ್ಲಿ ಸೆಟ್ಟಿಂಗ್ಸ್ > ಬ್ಯಾಕಪ್ ಮತ್ತು ರೀಸೆಟ್ ಮಾಡಿ
ಫ್ಯಾಕ್ಟ್ರಿ ರೀಸೆಟ್ ಆಯ್ಕೆಯನ್ನು ಒತ್ತಿರಿ, ಆದರೆ ಅತಿ ಮುಖ್ಯವಾದ ಮಾಹಿತಿಗಳನ್ನು ಬ್ಯಾಕಪ್ ಮಾಡಿ ಇರಿಸಿಕೊಳ್ಳಿ.

#5

#5

ಎಲ್‌ಇಡಿ ಅಧಿಸೂಚನೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆಲವು ಬಳಕೆದಾರರು ದೂರನ್ನಿತ್ತಿದ್ದಾರೆ. ಮೋಟೋರೋಲಾದ ನೋಟಿಫಿಕೇಶನ್ ಲೈಟ್ ವಿಜೆಟ್ ಅನ್ನು ಇನ್‌ಸ್ಟಾಲ್ ಮಾಡುವ ಮೂಲಕ ಈ ಸಮಸ್ಯೆಯನ್ನು ನಿಮಗೆ ನಿವಾರಿಸಿಕೊಳ್ಳಬಹುದು.

#6

#6

ನಿಮ್ಮ ಮೋಟೋ ಜಿ ಬ್ಯಾಟರಿ ಚಾರ್ಜ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದಾದಲ್ಲಿ ನಿಮ್ಮ ಯುಎಸ್‌ಬಿ ಕೇಬಲ್ ಅನ್ನು ಸ್ಥಾನಾಂತರಿಸಿ ಮತ್ತು ಔಟ್‌ಪುಟ್ ರೇಟಿಂಗ್ 500mA ಮತ್ತು 1.5A ಇರುವ ಹೊಸ ಕೇಬಲ್ ಅನ್ನು ಪ್ರಯತ್ನಿಸಿ.

#7

#7

ಸೆಟ್ಟಿಂಗ್ಸ್ > ಸೆಕ್ಯುರಿಟಿ > ಅಜ್ಞಾತ ಮೂಲಗಳಿಂದ ಅಪ್ಲಿಕೇಶನ್‌ಗಳನ್ನು ಅನುಮತಿಸುತ್ತಿರುವ ಅಪ್ಲಿಕೇಶನ್ ಬಾಕ್ಸ್‌ಗೆ ಟಿಕ್ ಮಾಡಿ.

#8

#8

ಕಿಟ್‌ಕ್ಯಾಟ್ ನವೀಕರಣವನ್ನು ಮೋಟೋ ಜಿಯಲ್ಲಿ ಅಳವಡಿಸಿದ ನಂತರ ವೈಫೈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇದನ್ನು ಸರಿಪಡಿಸಲು ಹೀಗೆ ಮಾಡಿ.
ಸೆಟ್ಟಿಂಗ್ಸ್ > ಅಬೌಟ್ ಫೋನ್ > ಸಿಸ್ಟಮ್ ಅಪ್‌ಡೇಟ್

#9

#9

ಫೋನ್ ಹಿಂಭಾಗದಲ್ಲಿ ಸ್ಪೀಕರ್‌ಗಳು ಇರುವುದರಿಂದ, ಧ್ವನಿ ಸ್ಪಷ್ಟವಾಗಿರುವುದಿಲ್ಲ. ಉತ್ತಮ ಸ್ಟಿರಿಯೊ ಹೆಡ್‌ಸೆಟ್‌ನೊಂದಿಗೆ ಆಡಿಯೊ ಗುಣಮಟ್ಟವನ್ನು ಉತ್ತಮಪಡಿಸಿ.

#10

#10

ಮೋಟೋ ಜಿ ಕೆಲವೊಮ್ಮೆ ಕೆಟ್ಟ ಧ್ವನಿಯನ್ನು ಮಾಡುತ್ತದೆ ವಿಶೇಷವಾಗಿ ಇದು ವೈಬ್ರೇಟ್ ಆಗುತ್ತಿರುವಾಗ ಫೋನ್ ಕೆಟ್ಟದಾಗಿ ಕಿರುಚಿಕೊಳ್ಳುತ್ತದೆ. ಈ ಸ್ವರವನ್ನು ಹೋಗಲಾಡಿಸಲು
ಸೆಟ್ಟಿಂಗ್ಸ್ > ಸೌಂಡ್
'ವೈಬ್ರೇಟ್ ಆನ್ ಟಚ್' ಆಫ್ ಮಾಡಿ ಹಾಗೂ 'ವೈಬ್ರೇಟ್ ವೆನ್ ರಿಂಗಿಂಗ್' ಇದನ್ನು ಒತ್ತಿ.

Best Mobiles in India

English summary
This article tells about Moto G is the one of the hotest selling smartphone around and since it is selling in huge numbers, several bugs and problems have been identified which are plaguing Moto G users worldwide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+