ಮೊಬೈಲ್‌ನಲ್ಲಿ ಹೆಚ್ಚಾಗಿ ಓಟಿಟಿ ವಿಡಿಯೋ ನೋಡ್ತಿರಾ?..ಹಾಗಿದ್ರೆ, ಇಲ್ಲಿ ಗಮನಿಸಿ!
ಪ್ರಸ್ತುತ ಓಟಿಟಿ (OTT) ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ. ಅದರಲ್ಲಿಯೂ ಮುಖ್ಯವಾಗಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್‌ನಂತಹ ಕೆಲವು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಹೆಚ್ಚು ಚಂದಾದಾರರನ್ನು ಆಕರ್ಷಿಸಿವೆ. ಅದಾಗ್ಯೂ, ಬಹುತೇಕ ಓಟಿಟಿ ಪ್ಲಾಟ್‌ಫಾರ್ಮ್ ಗಳು ಬಳಕೆದಾರರನ್ನು ಸೆಳೆಯಲು ಆಕರ್ಷಕ ಚಂದಾದಾರಿಕೆ ನೀಡುತ್ತಿವೆ.
ಹೌದು, ಸದ್ಯ ಓಟಿಟಿಗಳ ಅಬ್ಬರ ಹೆಚ್ಚಾಗಿಯೇ ಇದೆ ಎಂದರೆ ತಪ್ಪಾಗಲಾರದು. ಓಟಿಟಿ ಅಪ್ಲಿಕೇಶನ್‌ಗಳು ಸಹ ಅಧಿಕ ಚಂದಾದಾರರನ್ನು ಪಡೆಯಲು ಹೆಚ್ಚು ಸ್ಪರ್ಧಾತ್ಮಕ ಬೆಲೆಯ ಶುಲ್ಕ ನಿಗದಿ ಮಾಡುತ್ತಾ ಮುನ್ನಡೆದಿವೆ. ಅಲ್ಲದೇ ಮೊಬೈಲ್‌ನಲ್ಲಿ ಮಾತ್ರ ಬಳಸಬಹುದಾದ/ವೀಕ್ಷಿಸಬಹುದಾದ ಯೋಜನೆಗಳನ್ನು ಕೈಗೆಟುಕುವ ದರದ ಪ್ರೈಸ್ ಟ್ಯಾಗ್‌ನಲ್ಲಿ ಪರಿಚಯಿಸಿವೆ.

ನೆಟ್‌ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ ( Amazon Prime Video), ಜಿಯೋ ಸಿನಿಮಾ, ಡಿಸ್ನಿ+ ಹಾಟ್‌ಸ್ಟಾರ್ (Disney+Hotstar) ಸೇರಿದಂತೆ ಇತರೆ ಕೆಲವು ಜನಪ್ರಿಯ OTT ಪ್ಲಾಟ್‌ಫಾರ್ಮ್‌ನ ಮೊಬೈಲ್ ಯೋಜನೆಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ನೆಟ್‌ಫ್ಲಿಕ್ಸ್ ಓಟಿಟಿ (149ರೂ. ತಿಂಗಳಿಗೆ)
ಜನಪ್ರಿಯ ನೆಟ್‌ಫ್ಲಿಕ್ಸ್ ಓಟಿಟಿ ತಾಣವು ಭಾರತದಲ್ಲಿ ಭಿನ್ನ ಚಂದಾದಾರಿಕೆ ಆಯ್ಕೆಗಳನ್ನು ನೀಡಿದೆ. ಮೊಬೈಲ್ ಮಾತ್ರ ಆವೃತ್ತಿಯ ತಿಂಗಳ ಶುಲ್ಕ 149ರೂ. ಆಗಿದೆ. ಈ ಯೋಜನೆಯು ಚಂದಾದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೆಟ್‌ಫ್ಲಿಕ್ಸ್ ಅನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. ಫೋನ್ ಮೂಲಕ ಸ್ಟ್ರೀಮ್ ಮಾಡ ಬಯಸುವ ಬಳಕೆದಾರರಿಗೆ ಇದು ಸೂಕ್ತ ಯೋಜನೆ ಆಗಿದೆ.
ಇದರಲ್ಲಿ 480p ರೆಸಲ್ಯೂಶನ್‌ನ ಎಸ್‌ಡಿ ಗುಣಮಟ್ಟದಲ್ಲಿ ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನ ಎಲ್ಲಾ ಕಂಟೆಂಟ್‌ಗಳಿಗೆ ಆಕ್ಸಸ್ ಲಭ್ಯ ಇರುತ್ತದೆ. ಅಲ್ಲದೇ ಚಂದಾದಾರರು ಆಂಡ್ರಾಯ್ಡ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಐಫೋನ್‌ಗಳು ಮತ್ತು ಐಪ್ಯಾಡ್ ಗಳಲ್ಲಿ ಸಹ ಪ್ರವೇಶಿಸಬಹುದು.

ಅಮೆಜಾನ್ ಪ್ರೈಮ್ ವಿಡಿಯೋ ಓಟಿಟಿ (599ರೂ. ವಾರ್ಷಿಕ)
ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ವಾರ್ಷಿಕ ಚಂದಾದಾರಿಕೆಯ ಶುಲ್ಕ 599ರೂ. ಆಗಿದೆ. ಇದು ಮೊಬೈಲ್ ಮಾತ್ರ ಆವೃತ್ತಿಯ ಚಂದಾದಾರಿಕೆ ಶುಲ್ಕ ಆಗಿದ್ದು, ಬಳಕೆದಾರರು ಅಮೆಜಾನ್ ಪ್ರೈಮ್ ವಿಡಿಯೋದ ಸ್ಪೆಷಲ್ ಕಂಟೆಂಟ್ ಲೈಬ್ರರಿ ಪಡೆಯಬಹುದು. ಈ ವಾರ್ಷಿಕ ವೀಡಿಯೊ ಯೋಜನೆ ಮೂಲಕ ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಉತ್ತಮ ಗುಣಮಟ್ಟದ ಮನರಂಜನೆಗೆ ಆಕ್ಸಸ್ ಪಡೆಯಬಹುದು.
ಇದ್ರಲ್ಲಿ ಬಳಕೆದಾರರಿಗೆ ಅಮೆಜಾನ್ ಓರಿಜಿನಲ್ಸ್, ಲೈವ್ ಕ್ರಿಕೆಟ್ ಮತ್ತು ಅಂತರರಾಷ್ಟ್ರೀಯ ಸಿನಿಮಾಗಳಿಗೆ ಆಕ್ಸಸ್ ಲಭ್ಯ ಇರುತ್ತದೆ. ಅಲ್ಲದೇ ಇದು 480p ನ ಸ್ಟ್ರೀಮಿಂಗ್ ಗುಣಮಟ್ಟ ಮತ್ತು ಸಿಂಗಲ್ ಸ್ಮಾರ್ಟ್‌ಫೋನ್ ಸ್ಕ್ರೀನ್ ಸಪೋರ್ಟ್ ಪಡೆದಿದ್ದು, ಆಫ್‌ಲೈನ್ ವೀಕ್ಷಣೆಯನ್ನು ಸಹ ನೀಡುತ್ತದೆ.
ಡಿಸ್ನಿ + ಹಾಟ್‌ಸ್ಟಾರ್ ಓಟಿಟಿ (149ರೂ. ಮೂರು ತಿಂಗಳಿಗೆ)
ಡಿಸ್ನಿ + ಹಾಟ್‌ಸ್ಟಾರ್ ಸಹ ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಡಿಸ್ನಿ + ಹಾಟ್‌ಸ್ಟಾರ್ ಓಟಿಟಿ ಮೊಬೈಲ್ ಡಿವೈಸ್ ಆವೃತ್ತಿಗಾಗಿ, ಮಾಸಿಕ ಮತ್ತು ವಾರ್ಷಿಕ ಆಯ್ಕೆಯ ಎರಡೂ ಚಂದಾದಾರಿಕೆಯ ಯೋಜನೆ ಅನ್ನು ಒಳಗೊಂಡಿದೆ. ಮೂರು ತಿಂಗಳ ಚಂದಾದಾರಿಕೆ ಶುಲ್ಕ 149 ರೂ. ಆಗಿದ್ದು, ಹಾಗೆಯೇ 12 ತಿಂಗಳ ಚಂದಾದಾರಿಕೆ ಶುಲ್ಕ 499 ರೂ. ಆಗಿದೆ.
ಡಿಸ್ನಿ + ಹಾಟ್‌ಸ್ಟಾರ್ ಓಟಿಟಿಯ ಈ ಚಂದಾದಾರಿಕೆಯು ಮೊಬೈಲ್‌ಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುವ ಯೋಜನೆ ಆಗಿದೆ. ಇದು 7 ಮಲ್ಟಿಪ್ಲೆಕ್ಸ್ ಬ್ಲಾಕ್‌ಬಸ್ಟರ್‌ಗಳು, ಡಿಸ್ನಿ+ ಓರಿಜಿನಲ್ಸ್, ಲೈವ್ ಸ್ಪೋರ್ಟ್ಸ್ ಮತ್ತು ಹೆಚ್‌ಡಿ ಕ್ವಾಲಿಟಿಯ ಹಾಟ್‌ಸ್ಟಾರ್ ವಿಶೇಷತೆಗಳನ್ನು ಒಳಗೊಂಡಂತೆ ಕಂಟೆಂಟ್ ಅನ್ನು ನೀಡುತ್ತದೆ.


Click it and Unblock the Notifications








