Home
ಸುದ್ದಿಜಾಲ

power banks: ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ಸರಣಿ ಪವರ್ ಬ್ಯಾಂಕ್‌ಗಳು ಲಾಂಚ್‌: ವಿಶೇಷ ವಿನ್ಯಾಸ, ಭರ್ಜರಿ ಫೀಚರ್ಸ್‌!

ಪೋರ್ಟ್ರೋನಿಕ್ಸ್ (Portronics) ಈಗಾಗಲೇ ವಿಶೇಷವಾದ ಸ್ಪೀಕರ್‌ಗಳು, ಹೆಡ್‌ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು, ಯುಎಸ್‌ಬಿ ಹಬ್‌ಗಳು, ಚಾರ್ಜರ್ ಸೇರಿದಂತೆ ವಿವಿಧ ರೀತಿಯ ಡಿವೈಸ್‌ಗಳನ್ನು ಅನಾವರಣ ಮಾಡುವ ಮೂಲಕ ಸ್ಮಾರ್ಟ್‌ ಗ್ಯಾಜೆಟ್‌ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದೆ. ಈ ನಡುವೆ ಪೋರ್ಟ್ರೋನಿಕ್ಸ್ ವಿಶೇಷ ಶೈಲಿಯ ಪವರ್‌ ಬ್ಯಾಂಕ್‌ಗಳನ್ನು (power banks) ಅನ್ನು ಅನಾವರಣ ಮಾಡಿದೆ.

ಹೌದು, ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ಸರಣಿಯ ಪವರ್ ಬ್ಯಾಂಕ್‌ಗಳನ್ನು (Portronics Luxcell Series power banks ) ಅನಾವರಣ ಮಾಡಿದ್ದು, ಇವು ವೇಗದ ಚಾರ್ಜಿಂಗ್ ಫೀಚರ್ಸ್‌ ಅನ್ನು ಹೊಂದಿವೆ. ಈ ಸರಣಿಯಲ್ಲಿ ಐದು ಪವರ್‌ಬ್ಯಾಂಕ್‌ಗಳಿದ್ದು, ಪ್ರತಿಯೊಂದು ಸಹ ಭಿನ್ನ ಸಾಮರ್ಥ್ಯ ಪಡೆದುಕೊಂಡಿವೆ. ಹಾಗಿದ್ರೆ, ಈ ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ಸರಣಿ ಪವರ್ ಬ್ಯಾಂಕ್‌ಗಳ ಫೀಚರ್ಸ್ ಹಾಗೂ ಇವುಗಳ ಬೆಲೆ ಎಷ್ಟೆಂದು ತಿಳಿಯೋಣ ಬನ್ನಿ.

ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ಸರಣಿ ಪವರ್ ಬ್ಯಾಂಕ್‌ಗಳು ಲಾಂಚ್‌:ವಿಶೇಷ ವಿನ್ಯಾಸ...

ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ಸರಣಿ ಪವರ್ ಬ್ಯಾಂಕ್‌: ಪ್ರಮುಖ ಬಿಡಿಭಾಗಗಳ ತಯಾರಿಕಾ ಬ್ರ್ಯಾಂಡ್ ಆಗಿರುವ ಪೋರ್ಟ್ರೋನಿಕ್ಸ್ ಹೊಸ ಶ್ರೇಣಿಯ ಲಕ್ಸ್ಸೆಲ್ ಸರಣಿಯ ಪವರ್ ಬ್ಯಾಂಕ್‌ಗಳನ್ನು ಲಾಂಚ್‌ ಮಾಡಿದ್ದು, ಇವು 10000 ದಿಂದ 20000mAh ಸಾಮರ್ಥ್ಯದವರೆಗೆ ಇವೆ. ಇವುಗಳು ಅಲ್ಟ್ರಾ ಕಾಂಪ್ಯಾಕ್ಟ್ ದೇಹ, ಅರೆ ಟ್ರಾನ್ಸ್ಫರೆಂಟ್ ವಿನ್ಯಾಸ, ಬಿಐಎಸ್‌ ಪ್ರಮಾಣೀಕರಣ ಮತ್ತು ವೇಗದ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿವೆ.

ಈ ವಿಭಾಗದಲ್ಲಿ ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ವೈರ್‌ಲೆಸ್‌ 10K, ಲಕ್ಸ್ಸೆಲ್ ಬೈಂಡ್‌ 10K, ಲಕ್ಸ್ಸೆಲ್ ಮಿನಿ 20K, ಲಕ್ಸ್ಸೆಲ್ ಮಿನಿ 10K, ಮತ್ತು ಲಕ್ಸ್ಸೆಲ್ 10K ಪವರ್‌ ಬ್ಯಾಂಕ್‌ಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ಮಿನಿ 10K ಮತ್ತು ಲಕ್ಸ್ಸೆಲ್ ಮಿನಿ 20K ಪವರ್‌ಬ್ಯಾಂಕ್‌ಗಳು (Portronics Luxcell Mini 10K, Luxcell Mini 20K Power Bank) ವಿಶೇಷ ಫೀಚರ್ಸ್‌ ಪಡೆದಿವೆ. ಅಂದರೆ ಇವು ಪ್ರೀಮಿಯಂ ಬಾಡಿ ಮತ್ತು ಕೆಲವು ಕಡೆ ಟ್ರಾನ್ಸ್ಫರೆಂಟ್ ವಿನ್ಯಾಸವನ್ನು ಹೊಂದಿವೆ.

ಈ ಕಾಂಪ್ಯಾಕ್ಟ್ ಪವರ್ ಬ್ಯಾಂಕ್‌ಗಳು ಕ್ರಮವಾಗಿ 175g ಮತ್ತು 312g ತೂಕ ಹೊಂದಿದ್ದು, ಈ ಡಿವೈಸ್‌ಗಳು ಏಕಕಾಲದಲ್ಲಿ ಚಾರ್ಜ್ ಮಾಡಲು ಮ್ಯಾಕ್ ಯುಎಸ್‌ಬಿ ಟೈಪ್-ಎ (22.5W) ಮತ್ತು ಟೈಪ್-ಸಿ PD 3.0 (20W) ಪೋರ್ಟ್‌ ಆಯ್ಕೆ ಪಡೆದುಕೊಂಡಿವೆ. ಇದರಲ್ಲಿ ಕ್ಲಾಸಿ ಟ್ರಾನ್ಸ್ಫರೆಂಟ್ ಚಾಸಿಸ್ ಮೂಲಕ ವೀಕ್ಷಣೆ ಮಾಡಬಹುದಾದ ಎಲ್ಇಡಿ ಬ್ಯಾಟರಿ ಇಂಡಿಕೇಟರ್ ಇದೆ.

ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ಸರಣಿ ಪವರ್ ಬ್ಯಾಂಕ್‌ಗಳು ಲಾಂಚ್‌:ವಿಶೇಷ ವಿನ್ಯಾಸ...

ಪೋರ್ಟ್ರೋನಿಕ್ಸ್ ಲಕ್ಸೆಲ್ ವೈರ್‌ಲೆಸ್ 10K ಪವರ್‌ಬ್ಯಾಂಕ್ (Portronics Luxcell Wireless 10K Power Bank) ವಿಚಾರಕ್ಕೆ ಬಂದರೆ ಇದು ಬಿಐಎಸ್‌ ಪ್ರಮಾಣೀಕೃತ ವೈರ್‌ಲೆಸ್ ಚಾರ್ಜಿಂಗ್ ಪವರ್ ಬ್ಯಾಂಡ್ ಆಗಿದ್ದು, ಕ್ಯೂಐ ಸಕ್ರಿಯಗೊಳಿಸಿದ ಡಿವೈಸ್‌ಗಳಿಗೆ 15W ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ ಐಫೋನ್‌ 12 ಮತ್ತು ನಂತರದ ಡಿವೈಸ್‌ಗಳನ್ನು ಚಾರ್ಜ್‌ ಮಾಡಬಹುದು ಹಾಗೆಯೇ ಸ್ಯಾಮ್‌ಸಂಗ್‌ S ಸರಣಿ ಮತ್ತು ಗೂಗಲ್‌ ಪಿಕ್ಸೆಲ್‌ ಸರಣಿಗಳು ಸಹ ಸೇರಿವೆ.

ಇದು ಎರಡು ಪೋರ್ಟ್‌ ಆಯ್ಕೆ ಪಡೆದಿದ್ದು, ಮ್ಯಾಕ್ ಯುಎಸ್‌ಬಿ ಮತ್ತು ಟೈಪ್-ಸಿ ಪೋರ್ಟ್ ಮೂಲಕ ವಿವಿಧ ಡಿವೈಸ್‌ಗಳಿಗೆ ಶಕ್ತಿ ತುಂಬಬಹುದಾಗಿದೆ. ಅಂದರೆ ಗರಿಷ್ಠ 22.5W ಔಟ್‌ಪುಟ್‌ನೊಂದಿಗೆ ಏಕಕಾಲದಲ್ಲಿ ಮೂರು ಡಿವೈಸ್‌ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಈ ಡಿವೈಸ್‌ಗೆ ನೀಡಲಾಗಿದೆ. ಹಾಗೆಯೇ ಈ ಡಿವೈಸ್‌ನೊಂದಿಗೆಯೇ ಟೈಪ್-ಸಿ ಕೇಬಲ್‌ ಅನ್ನು ನೀಡಲಾಗುತ್ತದೆ.

ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ಸರಣಿ ಪವರ್ ಬ್ಯಾಂಕ್‌ಗಳು ಲಾಂಚ್‌:ವಿಶೇಷ ವಿನ್ಯಾಸ...

ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ಬೈಂಡ್ 10 K ಮತ್ತು ಲಕ್ಸ್ಸೆಲ್ 10 K ಪವರ್‌ ಬ್ಯಾಂಕ್‌ (Portronics Luxcell Bind 10K, Luxcell 10K Power Bank) ಫೀಚರ್ಸ್‌ ಕಡೆ ಕಣ್ಣಾಯಿಸುವುದಾದರೆ ಇವು ಎರಡೂ ಸಹ ಒಂದೇ ರೀತಿಯ ವಿನ್ಯಾಸವನ್ನು ಹೊಂದಿದೆ ಜೊತೆಗೆ 22.5W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದ್ದು, ಐಫೋನ್‌ಗಳು, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಸ್ಪೀಕರ್‌ಗಳು ಇತ್ಯಾದಿಗಳನ್ನು ಚಾರ್ಜಿಂಗ್‌ ಮಾಡಬಹುದಾಗಿದೆ.

ಲಕ್ಸ್ಸೆಲ್ ಬೈಂಡ್ 10K ಇನ್‌ಬಿಲ್ಟ್‌ ಟೈಪ್ ಸಿ ಮತ್ತು 8-ಪಿನ್ ಕೇಬಲ್ ಆಯ್ಕೆ ಪಡೆದಿದೆ. ಇದರೊಂದಿಗೆ ಮ್ಯಾಕ್ ಯುಎಸ್‌ಬಿ ಟೈಪ್-ಎ ಕನೆಕ್ಟರ್ ಅನ್ನು ಸಹ ಹೊಂದಿದ್ದು, ಇದು ಬಳಕೆದಾರರಿಗೆ ಏಕಕಾಲದಲ್ಲಿ ಮೂರು ಡಿವೈಸ್‌ಗಳನ್ನು ಚಾರ್ಜ್ ಮಾಡಲು ಅನುಮತಿಸುತ್ತದೆ. ಲಕ್ಸ್ಸೆಲ 10K ಮ್ಯಾಕ್‌ ಯುಎಸ್‌ಬಿ ಟೈಪ್‌-ಎ ಮತ್ತು ಟೈಪ್‌-ಸಿ ಪಿಡಿ ಪೋರ್ಟ್‌ ಆಯ್ಕೆ ಪಡೆದಿದೆ. ಇದರಲ್ಲಿ ಬಳಕೆದಾರರು ಎರಡು ಡಿವೈಸ್‌ಗಳನ್ನು ಚಾರ್ಜ್ ಮಾಡಬಹುದಾಗಿದೆ. ಶಾರ್ಟ್ ಸರ್ಕ್ಯೂಟ್‌ಗಳು, ಕರೆಂಟ್ ಸರ್ಜ್‌ಗಳು ಮತ್ತು ವೋಲ್ಟೇಜ್ ಸರ್ಜ್‌ಗಳ ವಿರುದ್ಧದ ರಕ್ಷಣೆಗಾಗಿ ಇವುಗಳಿಗೆ ಬಿಐಎಸ್‌ ಪ್ರಮಾಣೀಕರಣ ನೀಡಲಾಗಿದೆ.

ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ಸರಣಿ ಪವರ್ ಬ್ಯಾಂಕ್‌ಗಳು ಲಾಂಚ್‌:ವಿಶೇಷ ವಿನ್ಯಾಸ...

ಪೋರ್ಟ್ರೋನಿಕ್ಸ್ ಲಕ್ಸ್ಸೆಲ್ ಪವರ್‌ ಬ್ಯಾಂಕ್‌ ಬೆಲೆ ಮತ್ತು ಲಭ್ಯತೆ : ಲಕ್ಸೆಲ್ ವೈರ್‌ಲೆಸ್ 10K ಗೆ 1399 ರೂ.ಗಳಿದ್ದು, ಲಕ್ಸ್ಸೆಲ್ ಬೈಂಡ್‌ 10K ಗೆ 1249 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಲಕ್ಸ್ಸೆಲ್ ಮಿನಿ 20K ಗೆ 1799 ರೂ.ಗಳನ್ನು ನಿಗದಿ ಮಾಡಲಾಗಿದ್ದು, ಲಕ್ಸ್ಸೆಲ್ ಮಿನಿ 10K 1149 ರೂ.ಗಳ ಬೆಲೆ ಪಡೆದರೆ ಲಕ್ಸ್ಸೆಲ್ 10K ಗೆ 1099 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇವು ಹಳದಿ, ಬಿಳಿ, ಗಾಢ ಬೂದು ಮತ್ತು ನೀಲಿ ಬಣ್ಣಗಳಲ್ಲಿ ಕಾಣಿಸಿಕೊಂಡಿವೆ. ಇವುಗಳನ್ನು ನೀವು ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ (Amazon, Flipkart) ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Portronics has unveiled the Portronics Luxcell Series power banks with fast charging features. There are five powerbank in this series, each with a different capacity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+