Home
ಸುದ್ದಿಜಾಲ

Portronics: ಪೋರ್ಟ್ರೋನಿಕ್ಸ್ ಪಿಕೊ 12 ಸ್ಮಾರ್ಟ್ ಪೋರ್ಟಬಲ್ LED ಪ್ರೊಜೆಕ್ಟರ್ ಲಾಂಚ್‌! 4K ಬೆಂಬಲ, ಬೆಲೆ ಎಷ್ಟು?

ಪೋರ್ಟ್ರೋನಿಕ್ಸ್‌ (Portronics) ಈಗಾಗಲೇ ಸುಧಾರಿತ ಫೀಚರ್ಸ್‌ ಆಯ್ಕೆಯೊಂದಿಗೆ ಸ್ಪೀಕರ್‌ಗಳು, ಹೆಡ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಯುಎಸ್‌ಬಿ ಹಬ್‌ಗಳು, ಚಾರ್ಜರ್‌ಗಳು ಮತ್ತು ಇತರ ಪೋರ್ಟಬಲ್ ಸ್ಮಾರ್ಟ್ ಗ್ಯಾಜೆಟ್‌ಗಳನ್ನು ಲಾಂಚ್ ಮಾಡಿ ಭಾರತದಲ್ಲಿ ಖ್ಯಾತಿ ಗಳಿಸಿದೆ. ಈ ನಡುವೆ ಹೊಸ ಡಿವೈಸ್‌ ಅನ್ನು ಅನಾವರಣ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.

ಹೌದು, ಪೋರ್ಟ್ರೋನಿಕ್ಸ್ ಪಿಕೊ 12 (Portronics Pico 12) ಅನ್ನು ಅನಾವರಣ ಮಾಡಲಾಗಿದ್ದು, ಇದು 4K ಪ್ರೊಜೆಕ್ಷನ್ ವರೆಗೆ ಸಾಮರ್ಥ್ಯ ಇರುವ ಕಾಂಪ್ಯಾಕ್ಟ್ ಪೋರ್ಟಬಲ್ ಪ್ರೊಜೆಕ್ಟರ್ ಆಗಿದೆ. ಅಷ್ಟೇ ಅಲ್ಲದೆ ಸೋಡಾ ಕ್ಯಾನ್‌ನ ಗಾತ್ರದ ಈ ಚಿಕ್ಕದಾದ ಡಿವೈಸ್‌ ನಿಮ್ಮನ್ನು ಸಿನಿಮಾ ಹಾಲ್‌ನಲ್ಲಿ ಇರುವಂತೆ ಮಾಡುತ್ತದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಏನು?, ಭಾರತದಲ್ಲಿ ಇದರ ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಪೋರ್ಟ್ರೋನಿಕ್ಸ್ ಪಿಕೊ 12 ಸ್ಮಾರ್ಟ್ ಪೋರ್ಟಬಲ್ LED ಪ್ರೊಜೆಕ್ಟರ್ ಲಾಂಚ್‌!

ಪೋರ್ಟ್ರೋನಿಕ್ಸ್ ಪಿಕೊ 12 : ಪಿಕೊ 12 ಯಾವುದೇ ಸ್ಥಳವನ್ನು ತ್ವರಿತ ಚಲನಚಿತ್ರ ಥಿಯೇಟರ್ ಆಗಿ ಪರಿವರ್ತಿಸುವ ಸಾಮರ್ಥ್ಯ ಪಡೆದಿದೆ. ಇದು 120 ಇಂಚಿನ ಡಿಸ್‌ಪ್ಲೇ ಅನುಭವವನ್ನು ನೀಡಲಿದ್ದು, ಅದರಲ್ಲೂ 4K ಸ್ಟ್ರೀಮಿಂಗ್ ಅನುಭವ ಮಾತ್ರ ನಿಮ್ಮನ್ನು ಬೇರಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಇದರೊಂದಿಗೆ DLP LED ತಂತ್ರಜ್ಞಾನದಲ್ಲಿ ಈ ಡಿವೈಸ್ ಕೆಲಸ ಮಾಡಲಿದ್ದು, ಈ ಮೂಲಕ ಬಳಕೆದಾರರು ಬೇರೆಯದೇ ಅನುಭವ ಪಡೆಯಬಹುದು.

ಈ ಡಿವೈಸ್‌ ನಿಮ್ಮ ಕೈಯಲ್ಲಿ ಹೊಂದಿಕೊಳ್ಳುವಷ್ಟು ಚಿಕ್ಕ ಡಿವೈಸ್‌ ಆಗಿದೆ. ಈ ಮೂಲಕ ನೀವು ಪ್ರಯಾಣದಲ್ಲಿರುವಾಗ ಮನರಂಜನೆಗಾಗಿ ಪೋರ್ಟಬಲ್ ಡಿವೈಸ್‌ ಅನ್ನು ಬಳಕೆ ಮಾಡಬಹುದಾಗಿದೆ. ಸಾಂಪ್ರದಾಯಿಕ ಟಿವಿಗಳಿಗಿಂತ ದೊಡ್ಡ ಡಿಸ್‌ಪ್ಲೇಯನ್ನು ಒದಗಿಸುವ ಇದು ಎಲ್ಲಾ ರೀತಿಯ ಕಂಟ್ರೋಲ್‌ಗಾಗಿ ಸರಳವಾದ ಬಟನ್‌ ಆಯ್ಕೆಯನ್ನು ಪಡೆದುಕೊಂಡಿದೆ. ಈ ಮೂಲಕ ಚಲನಚಿತ್ರಗಳನ್ನು ವೀಕ್ಷಣೆ ಮಾಡಬಹುದಾಗಿದೆ.

ಪೋರ್ಟ್ರೋನಿಕ್ಸ್ ಪಿಕೊ 12 ಸ್ಮಾರ್ಟ್ ಪೋರ್ಟಬಲ್ LED ಪ್ರೊಜೆಕ್ಟರ್ ಲಾಂಚ್‌!

ಈ ಪ್ರೊಜೆಕ್ಟರ್ ಆಂಡ್ರಾಯ್ಡ್‌ 11 ಆಧಾರಿತ ಆಪ್ಟಾಯ್ಡ್ (Aptoide) ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಇನ್ನೂ ಹೆಚ್ಚಿನ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಬೆಂಬಲ ನೀಡುತ್ತದೆ. ಅದರಲ್ಲೂ 4K ರೆಡಿ ಆಪ್‌ಗಳೊಂದಿಗೆ ಇದನ್ನು ಲೋಡ್ ಮಾಡಲಾಗಿದೆ. ಅದಾಗ್ಯೂ ನಿಮ್ಮ ಡಿವೈಸ್‌ಗಳಿಂದ ಚಲನಚಿತ್ರಗಳನ್ನು ಪ್ಲೇ ಮಾಡಲು ಅಥವಾ ಇತರೆ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಲು ಯುಎಸ್‌ಬಿ ಪೋರ್ಟ್ ಬಳಕೆ ಮಾಡಬಹುದಾಗಿದೆ.

ಉಳಿದಂತೆ ಈ ಡಿವೈಸ್ 5W ಸ್ಪೀಕರ್‌ಗಳೊಂದಿಗೆ ಕಾಣಿಸಿಕೊಂಡಿದ್ದು, ದೊಡ್ಡ ಪರದೆಯ ಅಗತ್ಯವಿರುವಲ್ಲೆಲ್ಲಾ ತ್ವರಿತ ಮನರಂಜನೆಯನ್ನು ನೀಡುತ್ತದೆ. ಆಕ್ಸ್‌ ಪೋರ್ಟ್ ಅಥವಾ ಬ್ಲೂಟೂತ್ ಮೂಲಕ ಬಾಹ್ಯ ಆಡಿಯೋಗೂ ಇದನ್ನು ಕನೆಕ್ಟ್‌ ಮಾಡಿಕೊಳ್ಳಬಹುದು. ತೀಕ್ಷ್ಣವಾದ ಮತ್ತು ಸ್ಪಷ್ಟವಾದ ಚಿತ್ರಕ್ಕಾಗಿ ಫೋಕಸ್ ವೀಲ್‌ ಸರಿಹೊಂದಿಸುವ ಆಯ್ಕೆ ನೀಡಲಾಗಿದ್ದು, ಇದರಲ್ಲಿನ 3200 ಲ್ಯುಮೆನ್ಸ್ ಎಲ್ಇಡಿ ಲೈಟ್‌ ಸಿನಿಮಾ ಥಿಯೇಟರ್‌ ಅನ್ನೇ ಮನೆಗೆ ತಂದ ಅನುಭವ ನೀಡಲಿದೆ.

ಇಷ್ಟೇ ಅಲ್ಲದೆ ಈ ಪ್ರೊಜೆಕ್ಟರ್ 30,000 ಗಂಟೆಗಳವರೆಗೆ ಜೀವಿತಾವಧಿಯೊಂದಿಗೆ ದೀರ್ಘಾವಧಿಯ ಕಾರ್ಯಕ್ಷಮತೆಯನ್ನು ಖಾತ್ರಿಗೊಳಿಸುತ್ತದೆ. ಇದರೊಂದಿಗೆ ಇನ್‌ಬಿಲ್ಟ್ ರೀಚಾರ್ಜ್‌ ಮಾಡಬಹುದಾದ ಬ್ಯಾಟರಿ ಆಯ್ಕೆಯನ್ನು ನೀಡಲಾಗಿದೆ. ಪರಿಣಾಮ ಇದನ್ನು ಒಳಾಂಗಣ ಅಥವಾ ಹೊರಾಂಗಣ ಬಳಕೆಗಾಗಿ ಸುಲಭವಾಗಿ ಬಳಕೆ ಮಾಡಬಹುದಾಗಿದೆ ಮತ್ತು ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್ ಪ್ರೊಜೆಕ್ಷನ್, ವೈ-ಫೈ, ಹೆಚ್‌ಡಿಎಮ್‌ಐ, ಯುಎಸ್‌ಬಿ ಸೇರಿದಂತೆ ಇತರೆ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ. ಇದರ ಒಟ್ಟಾರೆ ತೂಕ ಕೇವಲ 715 ಗ್ರಾಂ ಆಗಿದೆ.

ಪೋರ್ಟ್ರೋನಿಕ್ಸ್ ಪಿಕೊ 12 ಸ್ಮಾರ್ಟ್ ಪೋರ್ಟಬಲ್ LED ಪ್ರೊಜೆಕ್ಟರ್ ಲಾಂಚ್‌!

ಪೋರ್ಟ್ರೋನಿಕ್ಸ್ ಪಿಕೊ 12 ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್ ಪ್ರೊಜೆಕ್ಟರ್‌ನ ಪರಿಚಯಾತ್ಮಕ ಬೆಲೆ 29,999ರೂ.ಗಳಾಗಿದ್ದು, ಅಮೆಜಾನ್‌ ಮೂಲಕ ಆಫರ್ ಬೆಲೆ 27,999ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಪೋರ್ಟ್ರೋನಿಕ್ಸ್, ಫ್ಲಿಪ್‌ಕಾರ್ಟ್‌ ಮತ್ತು ಇತರ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದಲೂ ಈ ಡಿವೈಸ್‌ ಅನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
Portronics has unveiled the Portronics Pico 12 Smart Portable LED Projector, a compact portable projector capable of up to 4K projection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+