Home
ಸುದ್ದಿಜಾಲ

ಪೋರ್ಟ್ರೋನಿಕ್ಸ್‌ನಿಂದ ವಿಶೇಷ ಪೋರ್ಟಬಲ್ ಸ್ಪೀಕರ್‌ ಲಾಂಚ್; ಫೀಚರ್ಸ್‌, ಬೆಲೆ ಬಗ್ಗೆ ತಿಳಿಯಿರಿ!

ಸ್ಮಾರ್ಟ್‌ಸ್ಪೀಕರ್‌ಗಳ ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳಿದ್ದು, ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಖರೀದಿ ಮಾಡುತ್ತಾರೆ. ಈ ನಡುವೆ ಸುಧಾರಿತ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಡಿವೈಸ್‌ಗಳು ಅನಾವರಣ ಆಗುತ್ತಿದ್ದು, ಈಗ ಪೋರ್ಟ್ರೋನಿಕ್ಸ್‌ನಿಂದ (Portronics) ವಿಶೇಷ ಪೋರ್ಟಬಲ್ ಸ್ಪೀಕರ್‌ ಅನ್ನು ಲಾಂಚ್‌ ಮಾಡಲಾಗಿದೆ.

ಹೌದು, ಇದೀಗ ಹೊಸ ಪೋರ್ಟ್ರೋನಿಕ್ಸ್ ರೀಸೌಂಡ್‌ 2 ವೈರ್‌ಲೆಸ್ ಸ್ಪೀಕರ್ (Portronics Resound 2 portable speakers) ಅನ್ನು ಲಾಂಚ್‌ ಮಾಡುವ ಮೂಲಕ ಪೋರ್ಟ್ರೋನಿಕ್ಸ್ ತನ್ನ ಉತ್ಪನ್ನಗಳ ಪೋರ್ಟ್‌ ಫೋಲಿಯೊವನ್ನು ವಿಸ್ತರಣೆ ಮಾಡಿಕೊಂಡಿದೆ. ಈ ಡಿವೈಸ್‌ಗಳು IPX5 ರೇಟಿಂಗ್‌ ಹೊಂದಿದ್ದು, ಸ್ಪ್ಲಾಶ್ ಪ್ರತಿರೋಧವಾಗಿದೆ, ಜೊತೆಗೆ ಹ್ಯಾಂಡ್ಸ್-ಫ್ರೀ ಕರೆ ಸೌಲಭ್ಯ, ಆರ್‌ಜಿಬಿ ಲೈಟ್‌ನೊಂದಿಗೆ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿವೆ. ಹಾಗಿದ್ರೆ, ಈ ಡಿವೈಸ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರಗಳನ್ನು ನೋಡೋಣ ಬನ್ನಿ.

ಪೋರ್ಟ್ರೋನಿಕ್ಸ್‌ನಿಂದ ವಿಶೇಷ ಪೋರ್ಟಬಲ್ ಸ್ಪೀಕರ್‌ ಲಾಂಚ್....

ಪೋರ್ಟ್ರೋನಿಕ್ಸ್‌ ರೀಸೌಂಡ್‌ ಫೀಚರ್ಸ್‌: ಈ ಡಿವೈಸ್‌ ಆರ್‌ಜಿಬಿ ಲೈಟ್‌ ಆಯ್ಕೆಯೊಂದಿಗೆ 15W ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಆಯ್ಕೆ ಪಡೆದುಕೊಂಡಿದ್ದು, ವೈರ್‌ಲೆಸ್ ಸ್ಪೀಕರ್ ಆಂಪ್ಲಿಫೈಯರ್ ಮತ್ತು ಹೆಚ್‌ಡಿ ಡ್ರೈವರ್‌ ಪಡೆದಿದೆ. ಸಿಂಕ್ರೊನೈಸ್‌ನಿಂದ ಮಾಡಿದ ಲೈಟ್‌ ಆಯ್ಕೆಯೊಂದಿಗೆ ಬಳಕೆದಾರರು ಸಂದರ್ಭಕ್ಕೆ ತಕ್ಕಂತೆ ಒಳಾಂಗಣದಲ್ಲಿ ಅಥವಾ ಹೊರಾಂಗಣದಲ್ಲಿ ಬಳಕೆ ಮಾಡಲು ಸಹಾಯಕ.

ಅದರಲ್ಲೂ ಈ ಬಿಲ್ಟ್ಇನ್ ಆರ್‌ಜಿಬಿ ಲೈಟ್‌ಗಳು ಸ್ಪೀಕರ್‌ನಲ್ಲಿ ಪ್ಲೇ ಆಗುವ ಬೀಟ್‌ಗಳೊಂದಿಗೆ ಸಿಂಕ್ರೊನೈಸ್ ಆಗುತ್ತವೆ. ಜೊತೆಗೆ ಅದನ್ನು ತ್ವರಿತ ಡ್ಯಾನ್ಸ್ ಫ್ಲೋರ್ ಆಗಿ ಪರಿವರ್ತಿಸಲು ಸಹ ಅನುಕೂಲ ಪಡೆದಿಕೊಂಡಿದೆ. ಇದರೊಂದಿಗೆ ಈ ಸ್ಪೀಕರ್ ಫ್ಯಾಬ್ರಿಕ್-ಕವರ್ಡ್ ವಿನ್ಯಾಸ ಹೊಂದಿದ್ದು, ಗೀರುಗಳು ಮತ್ತು ಇತರ ಹಾನಿಗಳನ್ನು ತಡೆಯಲು ಸಹಾಯ ಮಾಡುವ ಗಟ್ಟಿಮುಟ್ಟಾದ ನೋಟವನ್ನು ಹೊಂದಿವೆ.

ಈ ಡಿವೈಸ್‌ಗಳನ್ನು ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಇತರ ಡಿವೈಸ್‌ಗಳಿಗೆ ಆಕ್ಸ್‌ ಪೋರ್ಟ್ ಮೂಲಕ ಕನೆಕ್ಟ್‌ ಮಾಡಿಕೊಳ್ಳಬಹುದು ಅಥವಾ ಅವರ ಸ್ಮಾರ್ಟ್‌ಫೋನ್‌ಗಳಿಂದ ವೈರ್‌ಲೆಸ್ ಆಗಿ ಆಡಿಯೊವನ್ನು ಪ್ಲೇ ಮಾಡಲು ಸಹ ಅನುಕೂಲ ಇದೆ. ಉಳಿದಂತೆ ಈ ಸ್ಪೀಕರ್ ಇನ್‌ಬಿಲ್ಟ್‌ 2,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಐದು ಗಂಟೆಗಳ ಕಾಲ ಬಳಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್‌ ಆಯ್ಕೆ ನೀಡಲಾಗಿದೆ.

ಇದರ ಮತ್ತೊಂದು ವಿಶೇಷ ಏನೆಂದರೆ TWS ಮೋಡ್ ಆಯ್ಕೆ ಪಡೆದಿದ್ದು, ಇದು ಬಳಕೆದಾರರಿಗೆ ಮತ್ತೊಂದು ರೀಸೌಂಡ್‌ 2 ಅನ್ನು ಜೋಡಿಸಲು ಅನುಮತಿಸುತ್ತದೆ. ಇದರಿಂದಾಗಿ ಬಳಕೆದಾರರು 30 ವ್ಯಾಟ್‌ಗಳ ಆಡಿಯೋದೊಂದಿಗೆ ದೊಡ್ಡ ಸೌಂಡ್‌ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸ್ಪೀಕರ್‌ಗಳ ಮೂಲಕ ಮ್ಯೂಸಿಕ್ ಪ್ಲೇ ಮಾಡುವುದರ ಜೊತೆಗೆ, ಇನ್‌ಬಿಲ್ಟ್‌‌ ಮೈಕ್ರೊಫೋನ್ ಅನ್ನು ಬಳಕೆ ಮಾಡಿಕೊಂಡು ವಾಯ್ಸ್‌ ಕರೆಗಳಿಗೆ ಉತ್ತರಿಸಬಹುದಾಗಿದೆ.

ಪೋರ್ಟ್ರೋನಿಕ್ಸ್ ರೀಸೌಂಡ್‌ 2 ಪೋರ್ಟಬಲ್ TWS ಸ್ಪೀಕರ್ ಬೆಲೆ: ಈ ಡಿವೈಸ್‌ ಇದೀಗ 2,149 ರೂ.ಗಳ ಬೆಲೆಗೆ ಲಭ್ಯ ಇದೆ. ಇದನ್ನು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಇತರೆ ಆಫ್‌ಲೈನ್‌ ಸ್ಟೋರ್‌ಗಳ ಮೂಲಕವೂ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ಗಳು ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದ್ದು, 12 ತಿಂಗಳ ವಾರಂಟಿಯನ್ನು ನೀಡುತ್ತದೆ.

ಪೋರ್ಟ್ರೋನಿಕ್ಸ್‌ನಿಂದ ವಿಶೇಷ ಪೋರ್ಟಬಲ್ ಸ್ಪೀಕರ್‌ ಲಾಂಚ್....

ಈ ನಡುವೆ ಕೆಲವು ದಿನಗಳ ಹಿಂದೆ ಪೋರ್ಟ್ರೋನಿಕ್ಸ್‌ ತನ್ನ ಹೊಸ ಆಂಡ್ರಾಯ್ಡ್‌ ಪ್ರೊಜೆಕ್ಟರ್ ಬೀಮ್ 410 ಅನ್ನು ಸಹ ಲಾಂಚ್‌ ಮಾಡಿದೆ. ಈ ಪ್ರೊಜೆಕ್ಟರ್ ಆಂಡ್ರಾಯ್ಡ್‌ OS 9.0 ನೊಂದಿಗೆ ಬಂದಿದ್ದು, ಇದರ ಬೆಲೆ 16,999ರೂ.ಗಳಾಗಿದೆ. ಜೊತೆಗೆ 12 ತಿಂಗಳ ವಾರಂಟಿ ಸಹ ನೀಡಲಾಗುತ್ತದೆ ಇದನ್ನೂ ಸಹ ನೀವು ಆಫ್‌ಲೈನ್ ಸ್ಟೋರ್‌, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನ ಅಧಿಕೃತ ವೆಬ್‌ಸೈಟ್‌ಗಳಿಂದ ಖರೀದಿ ಮಾಡಬಹುದು.

Best Mobiles in India

English summary
Portronics has now expanded its product portfolio by launching the Resound 2 wireless speaker. These devices have an IPX5 rating.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+