ಫೇಸ್‌ಬುಕ್‌ನಲ್ಲಿ ಮಹಿಳೆಯರು ಫೋಟೋ ಪ್ರಕಟಿಸುವುದು ಇಸ್ಲಾಂ ವಿರೋಧಿ!

By Ashwath
|

ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿ ಯುವಜನತೆ ಅದರಲ್ಲೂ ವಿಶೇಷವಾಗಿ ಯುವತಿಯರು ತಮ್ಮ ಫೋಟೋವನ್ನು ಆಪ್‌ಲೋಡ್‌ ಮಾಡುವುದು ಮುಸ್ಲಿಂ ವಿರೋಧಿ ಕೆಲಸ ಎಂದು ಲಕ್ನೋದ ಶಿಯಾ ಮತ್ತು ಸುನ್ನಿ ಮೌಲ್ವಿಗಳು ಹೇಳಿದ್ದಾರೆ.

ಇಸ್ಲಾಮಿಕ್‌ ಸಹಾಯವಾಣಿಗೆ ಸೋಶಿಯಲ್‌ ನೆಟ್‌ವರ್ಕ್‌ಗಳಲ್ಲಿ ಫೋಟೋಗಳನ್ನು ಪ್ರಕಟಿಸಬಹುದಾ ಎನ್ನುವ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಮೌಲ್ವಿ, ಜ್ಞಾನದ ಸಂಪಾದನೆಗಾಗಿ ಅಕೌಂಟ್‌ ಕ್ರಿಯೆಟ್‌‌‌‌ ಮಾಡಬಹುದು.ಆದರೆ ಈ ಅಕೌಂಟ್‌‌ ತೆರೆದು ಮಹಿಳೆಯರು ಪೋಟೋಗಳನ್ನು ಪ್ರಕಟಿಸುವುದು ಇಸ್ಲಾಂ ಧರ್ಮದ ವಿರೋಧಿ ಎಂದು ಲಕ್ನೋದ ಸುನ್ನಿ ಮೌಲ್ವಿ ಅಬ್ದುಲ್‌ ಇರ್ಫಾನ್‌ ನೈಮುಲ್‌ ಹಲೀಮ್‌ ಫಿರಂಗಿ ಮಹಲಿ(Abul Irfan Naimul Halim Firagni Mahli ) ಹೇಳಿದ್ದಾರೆ.

 ಫೇಸ್‌ಬುಕ್‌ನಲ್ಲಿ ಮಹಿಳೆಯರು ಫೋಟೋ ಪ್ರಕಟಿಸುವುದು ಇಸ್ಲಾಂ ವಿರೋಧಿ!

ಮುಸ್ಲಿ ಧರ್ಮ ಪರ್ದಾ ಪದ್ದತಿಯನ್ನು ಅನುಸರಿಸಿಕೊಂಡು ಬಂದಿದೆ.ಫೇಸ್‌ಬುಕ್‌ನಲ್ಲಿ ಯುವತಿಯರು ಪೋಟೋ ಪ್ರಕಟಿಸಿದ್ದಲ್ಲಿ ಪೋಷಕರು ಯುವತಿಗೆ ಬುದ್ದಿ ಹೇಳಬೇಕು ಎಂದು ಶಿಯಾ ಮೌಲ್ವಿ ಖಲ್ಬೇ ಜವದ್‌(Kalbe Jawad ) ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಮೂರು ವರ್ಷ‌ಗಳ ಹಿಂದೆ ಆರ್ಕುಟ್, ಫೇಸ್‌ಬುಕ್ ವೆಬ್‌ಸೈಟ್ ತಾಣಗಳನ್ನು ಬಳಸುವುದು ಇಸ್ಲಾಂ ಧರ್ಮಕ್ಕೆ ವಿರೋಧವಾದದ್ದು ಎಂದು ಈಜಿಪ್ಟ್‌ನ ಮೌಲ್ವಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸೋಶಿಯಲ್‌ ಮೀಡಿಯಾಗಳನ್ನು ಬಳಸುತ್ತಿದ್ದವರ ವಿರುದ್ಧ ಫತ್ವಾ ಹೊರಡಿಸಿ, ಈ ತಾಣಗಳನ್ನು ಬಳಸುವ ಮುಸ್ಲಿಮರನ್ನು ಪಾಪಿಗಳು ಎಂದು ಈಜಿಪ್ಟ್‌ನ ಮೌಲ್ವಿ ಅಬ್ದೆಲ್ ಹಮೀದ್ ಅಲ್ ಅತ್ರಾಸ್ ಅರ್ಥೈಸಿದ್ದರು.

ಇದನ್ನೂ ಓದಿ: ಮಗು ಮಾರಾಟ ಮಾಡುವ ತಾಣವಾಯ್ತು ಫೇಸ್‌ಬುಕ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X