ಮಗು ಮಾರಾಟ ಮಾಡುವ ತಾಣವಾಯ್ತು ಫೇಸ್‌ಬುಕ್‌

Posted By:

ಫೇಸ್‌ಬುಕ್‌ ಈಗ ಮಕ್ಕಳನ್ನು ಮಾರಾಟ ಮಾಡುವ ತಾಣವಾಗಿ ಬದಲಾಗಿದೆ. ಆಗಷ್ಟೇ ಹುಟ್ಟಿದ ಮಗುವನ್ನು ಆಸ್ಪತ್ರೆಯ ಸಿಬ್ಬಂದಿಗಳೇ ಫೇಸ್‌ಬುಕ್‌ ನಲ್ಲಿ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದಾರೆ.

ಪಂಜಾಬ್‌ನ ಲೂಧಿಯಾನ ಆಸ್ಪತ್ರೆಯಲ್ಲಿ ಎಪ್ರಿಲ್‌ 3ರಂದು ತಾನು ಜನ್ಮ ನೀಡಿದ ಮಗು, ಆಸ್ಪತ್ರೆಯಿಂದಲೇ ಕಾಣೆಯಾಗಿದೆ ಎಂದು ಈ ಮಗುವಿನ ತಾಯಿ ನೂರೀ ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದಳು.

ಮಗು ಮಾರಾಟ ಮಾಡುವ ತಾಣವಾಯ್ತು ಫೇಸ್‌ಬುಕ್‌

ಈ ಮಗುವನ್ನು ನೂರಿಯ ತಂದೆ (ಮಗುವಿನ ತಾತ) ಫಿರೋಜ್ ಖಾನ್ ಏಪ್ರಿಲ್ 10ರಂದು ಅಪಹರಿಸಿ ಅದೇ ಆಸ್ಪತ್ರೆಯ ನರ್ಸ್ ಸುನೀತಾ ಹಾಗೂ ಮತ್ತೊಬ್ಬ ಉದ್ಯೋಗಿ ಗುರುಪ್ರೀತ್ ಸಿಂಗ್ ಎಂಬವರ ಸಹಾಯದಿಂದ ಮಾರಾಟ ಮಾಡಿದ್ದ .ಗುರುಪ್ರೀತ್ ಸಿಂಗ್ ಈ ಮಗುವಿನ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಿ ದಿಲ್ಲಿ ಉದ್ಯಮಿಯೊಬ್ಬನ ಜತೆ 8 ಲಕ್ಷ ರೂ.ಗೆ ವ್ಯವಹಾರ ಕುದುರಿಸಿದ್ದ.

ಲಿಂಕ್‌ : ಬೆಂಗಳೂರು ಪೋಲಿಗಳು ಫೇಸ್‌ಬುಕ್‌ನಲ್ಲಿ ಸೆರೆ

ನೂರಿ ಗಂಡನಿಂದ ಪರಿತ್ಯಕ್ತಳಾಗಿದ್ದು, ಆಕೆಯ ತಂದೆ ಫಿರೋಜ್ ಖಾನ್, ಅವಳಿಗೆ ಎರಡನೇ ಮದುವೆ ಮಾಡಲು ಪ್ರಯತ್ನಿಸುತ್ತಿದ್ದನಂತೆ. ಹೀಗಾಗಿ, ಮೊದಲ ಗಂಡನಿಂದ ಜನಿಸಿದ ಈ ಮಗುವನ್ನು ಮಾರಾಟ ಮಾಡುವ ಮೂಲಕ, ಆಕೆಯ ಎರಡನೇ ಮದುವೆಯ ಹಾದಿ ಸುಗಮವಾಗಲೆಂದು ನೂರಿ ತಂದೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಿಂಕ್‌ : ಫೇಸ್‌ಬುಕ್‌ನಿಂದ ಕಳ್ಳನ ಸೆರೆ

ಮಗುವಿನ ತಾತ ಫಿರೋಜ್ ಖಾನ್, ಆತನ ಸಹಾಯಕ ಇರ್ಫಾನ್, ನರ್ಸ್ ಸುನೀತಾ ಮತ್ತು ಗುರುಪ್ರೀತ್ ಸಿಂಗ್‌ನನ್ನು ಬಂಧಿಸಲಾಗಿದೆ. ಅಲ್ಲದೆ, ಮಗುವನ್ನು ಖರೀದಿಸಿದ ದಿಲ್ಲಿ ಉದ್ಯಮಿ ಅಮಿತ್ ಕುಮಾರ್ ವಿರುದ್ಧ ಕೇಸು ದಾಖಲಿಸಲಾಗಿದ್ದು, ಆತನ ದಿಲ್ಲಿ ನಿವಾಸಕ್ಕೆ ದಾಳಿ ನಡೆಸಿ ಮಗುವನ್ನು ವಶಪಡಿಸಿಕೊಂಡು ತಾಯಿಗೆ ಒಪ್ಪಿಸಲಾಗಿದೆ.

ಲಿಂಕ್‌: ಫೇಸ್‌ಬುಕ್‌ ಚಟ ಬಿಡಲು ಮಗಳಿಗೆ ಅಪ್ಪನಿಂದ ಹಣ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot