Home
ಸುದ್ದಿಜಾಲ

BSNL, ಜಿಯೋ, ಏರ್‌ಟೆಲ್‌, ವಿ ಟೆಲಿಕಾಂಗಳ 800ರೂ.ಒಳಗಿನ ಪ್ಲ್ಯಾನ್‌ನಲ್ಲಿ ಬೆಸ್ಟ್‌ ಯಾವುದು?

ದೇಶದಲ್ಲಿ ಜಿಯೋ, ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಅವುಗಳಲ್ಲಿ ಪ್ರೀಪೇಯ್ಡ್‌ ಯೋಜನೆಗಳು ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳು ಸೇರಿವೆ. ಆದರೆ ಗ್ರಾಹಕ ಸ್ನೇಹಿ ಬೆಲೆಯಲ್ಲಿ ಕೆಲವು ಪೋಸ್ಟ್‌ಪೇಯ್ಡ್ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಗಮನ ಸೆಳೆದಿವೆ. ಆ ಪೈಕಿ ಬಹುತೇಕ ಬಳಕೆದಾರರು 800ರೂ. ಬೆಲೆಯ ಒಳಗಿನ ಪ್ಲ್ಯಾನ್‌ ರೀಚಾರ್ಜ್‌ಗೆ ಮುಂದಾಗುತ್ತಾರೆ.

ಟೆಲಿಕಾಂ

ಹೌದು, ಜಿಯೋ, ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಸಂಸ್ಥೆಗಳು 800ರೂ. ಬೆಲೆಯ ಒಳಗಿನ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಆಯ್ಕೆ ಹೊಂದಿವೆ. ಈ ಮೂರು ಟೆಲಿಕಾಂಗಳ ಈ ಮೊತ್ತದ ರೀಚಾರ್ಜ್‌ ಪ್ಲ್ಯಾನಿನಲ್ಲಿ ಅಧಿಕ ಡೈಲಿ ಡೇಟಾ, ಬಿಗ್ ವ್ಯಾಲಿಡಿಟಿ, ಅನಿಯಮಿತ ಉಚಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಸೇರಿವೆ. ಹಾಗೆಯೇ ಹೆಚ್ಚುವರಿಯಾಗಿ ಓಟಿಟಿ ಸೌಲಭ್ಯಗಳು ಸಿಗಲಿವೆ. ಆದರೂ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೇ ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್ 800ರೂ. ಒಳಗಿನ ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಯಾವುದು ಯೋಗ್ಯ? ಒಟ್ಟಾರೇ ಪ್ರಯೋಜನಗಳೆನು ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್ 798ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

ಬಿಎಸ್‌ಎನ್‌ಎಲ್ 798ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

ಈ ಪೋಸ್ಟ್‌ಪೇಯ್ಡ್ ಯೋಜನೆಯು 50GB ಹೈಸ್ಪೀಡ್ ಡೇಟಾವನ್ನು ಡಾಟಾ ರೋಲ್‌ಓವರ್‌ನೊಂದಿಗೆ 150GB ವರೆಗೆ ಅನುಮತಿಸುತ್ತದೆ. ಡೇಟಾ ಮಿತಿಯನ್ನು ತಲುಪಿದ ನಂತರ, ಬಳಕೆದಾರರಿಗೆ ಪ್ರತಿ GBಗೆ 10.24 ರೂ.ಶುಲ್ಕ ವಿಧಿಸುತ್ತದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯು ಎಂಟಿಎನ್‌ಎಲ್ ನೆಟ್‌ವರ್ಕ್‌ನಲ್ಲಿ ಮುಂಬೈ ಮತ್ತು ದೆಹಲಿ ಸೇರಿದಂತೆ ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ.

ಏರ್‌ಟೆಲ್ 749ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್

ಏರ್‌ಟೆಲ್ 749ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್

ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 749 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 125GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಜೀ ಶೋಸ್ ಅಂಡ್ ಮೂವಿಸ್ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಚಂದಾದಾರಿಕೆಯನ್ನು ಏರ್‌ಟೆಲ್ ನೀಡುತ್ತಿದೆ.

ವಿ ಟೆಲಿಕಾಂನ 749ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ವಿ ಟೆಲಿಕಾಂನ 749ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ವಿ ಟೆಲಿಕಾಂನ 749ರೂ. ಯೋಜನೆಯ ದರದಲ್ಲಿಯೂ ಸಹ 50ರೂ. ಏರಿಕೆ ಆಗಿದ್ದು, ಈಗ 799ರೂ. ಗಳಿಗೆ ಲಭ್ಯ. ಈ ಯೋಜನೆಯಲ್ಲಿ ಒಂದು ತಿಂಗಳ ಅವಧಿಯವರೆಗೂ ಅನಿಯಮಿತ ಲೋಕಲ್‌ ಮತ್ತು ನ್ಯಾಷನಲ್ ಉಚಿತ ಕರೆಗಳ ಪ್ರಯೋಜನ ದೊರೆಯಲಿದ್ದು, ಉಚಿತ ರೋಮಿಂಗ್ ಸೌಲಭ್ಯವು ಇರಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಒಟ್ಟು 90GB ಡೇಟಾ ಸಿಗಲಿದ್ದು, ಪ್ರಾಥಮಿಕ ಸದಸ್ಯನಿಗೆ 60GB ಮತ್ತು ಸೆಕೆಂಡರಿ ಸದಸ್ಯರಿಬ್ಬರಿಗೂ ತಲಾ 30GB ಉಚಿತ ಡೇಟಾ ಲಭ್ಯವಾಗಲಿದೆ.

ಜಿಯೋ 799ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ಜಿಯೋ 799ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ಜಿಯೋ 799ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 150 GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವು ದೊರೆಯಲಿದೆ. ಎಂಟರ್ಟೈನ್ಮೆಂಟ್ ಪ್ಲಸ್ ಆಯ್ಕೆಯೊಂದಿಗೆ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಇದಲ್ಲದೇ ಹೆಚ್ಚುವರಿಯಾಗಿ ಎರಡು ಹೆಚ್ಚುವರಿ ಸಿಮ್ಕಾರ್ಡ್ ಫ್ಯಾಮಿಲಿ ಪ್ಲಾನ್ನೊಂದಿಗೆ ಲಭ್ಯವಾಗಲಿದೆ.

Best Mobiles in India

English summary
Postpaid Plans From Jio Airtel And Vi Under Rs 800 Compared Which One Best To Recharge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+