ಜಿಯೋ, ವಿ, ಏರ್‌ಟೆಲ್‌ನ ಈ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳು ಓಟಿಟಿ ಸೌಲಭ್ಯ ಪಡೆದಿವೆ!

|

ದೇಶದ ಟೆಲಿಕಾಂ ವಲಯದಲ್ಲಿ ಟೆಲಿಕಾಂ ಕಂಪನಿಗಳು ಇತ್ತೀಚಿಗಿನ ದಿನಗಳಲ್ಲಿ ಅಧಿಕ ಡೇಟಾ, ಹೆಚ್ಚಿನ ವ್ಯಾಲಿಡಿಟಿ ಸೌಲಭ್ಯ ನೀಡಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದರೊಂದಿಗೆ ಕೆಲವು ಆಯ್ದ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿಯಾಗಿ OTT ಸೇವಗಳ ಪ್ರಯೋಜನ ನೀಡುತ್ತಿವೆ. ಈ ಪೈಕಿ ಏರ್‌ಟೆಲ್‌, ಜಿಯೋ ಹಾಗೂ ವಿ ಟೆಲಿಕಾಂಗಳು ತಮ್ಮ ಕೆಲವು ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿಯಾಗಿ ಓಟಿಟಿ ಚಂದಾದಾರಿಕೆ ಪಡೆದಿವೆ.

ಜಿಯೋ

ಹೌದು, ಏರ್‌ಟೆಲ್‌, ಜಿಯೋ ಹಾಗೂ ವಿ ಟೆಲಿಕಾಂಗಳು ಕೆಲವು ಜನಪ್ರಿಯ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಟ್ರೆಂಡಿಂಗ್‌ನಲ್ಲಿರುವ ಓಟಿಟಿ ತಾಣಗಳ ಚಂದಾದಾರಿಕೆ ನೀಡುತ್ತಿವೆ. ಅವುಗಳಲ್ಲಿ ಮುಖ್ಯವಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP, ZEE5, ಅಮೆಜಾನ್ ಪ್ರೈಮ್ ವಿಡಿಯೊ, ನೆಟ್‌ಫ್ಲಿಕ್ಸ್‌ ಆಪ್‌ಗಳ ಸೌಲಭ್ಯ ಸೇರಿವೆ. ಹಾಗಾದರೇ ಜಸ್ಟ್ 750ರೂ. ಒಳಗೆ ಲಭ್ಯವಿರುವ ಏರ್‌ಟೆಲ್‌, ಜಿಯೋ ಹಾಗೂ ವಿ ಟೆಲಿಕಾಂಗಳ ಓಟಿಟಿ ಸೌಲಭ್ಯದ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್ ಓಟಿಟಿ ಸೌಲಭ್ಯದ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳು

ಏರ್‌ಟೆಲ್ ಓಟಿಟಿ ಸೌಲಭ್ಯದ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳು

ಏರ್‌ಟೆಲ್ ಟೆಲಿಕಾಂ ಆಕರ್ಷಕ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆ ಹೊಂದಿದ್ದು, ಅವುಗಳಲ್ಲಿ ಕೆಲವು ಓಟಿಟಿ ಸೇವೆ ಪಡೆದಿವೆ. ಆರಂಭಿಕ 399 ರೂ ಯೋಜನೆಯಲ್ಲಿ ಬಳಕೆದಾರರು 4G/3G ಬೆಂಬಲಿತ 40GB ಡೇಟಾವನ್ನು ಪಡೆಯುತ್ತಾರೆ. ಒಂದು ವರ್ಷದವರೆಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಇದೆ. ಹಾಗೆಯೇ ಏರ್‌ಟೆಲ್‌ 499ರೂ. ಯೋಜನೆಯಲ್ಲಿ ಡಿಸ್ನಿ ಹಾಟ್‌ ಸ್ಟಾರ್ ವಿಐಪಿ ಚಂದಾದಾರಿಕೆ ಲಭ್ಯ ಹಾಗೂ ಅಮೆಜಾನ್ ಪ್ರೈಮ್ ಸೇವೆ ಸಹ ಲಭ್ಯ. ಆ ನಂತರದಲ್ಲಿ ಏರ್‌ಟೆಲ್‌ 750ರೂ. ಯೋಜನೆಯಲ್ಲಿಯೂ ಅಮೆಜಾನ್ ಪ್ರೈಮ್ ಹಾಗೂ ಡಿಸ್ನಿ ಹಾಟ್‌ ಸ್ಟಾರ್ ವಿಐಪಿ ಸೇವೆ ಲಭ್ಯ.

ಜಿಯೋ ಓಟಿಟಿ ಸೌಲಭ್ಯದ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳು

ಜಿಯೋ ಓಟಿಟಿ ಸೌಲಭ್ಯದ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳು

ಜಿಯೋ ಸಹ ಕೆಲವು ಅತ್ಯುತ್ತಮ ಪೋಸ್ಟ್‌ಪೇಯ್ಡ್ ಆಯ್ಕೆ ಹೊಂದಿದ್ದು, ಅವುಗಳು ಹೆಚ್ಚುವರಿ ಸೌಲಭ್ಯ ಪಡೆದಿವೆ. ಆರಂಭಿಕ 399ರೂ. ಪ್ಲ್ಯಾನಿನಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಿಗಲಿದೆ. ನಂತರದ ಜಿಯೋ 599ರೂ. ಯೋಜನೆಯಲ್ಲಿಯೂ ಸಹ ಜನಪ್ರಿಯ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್‌ಸ್ಟಾರ್ ಓಟಿಟಿಗಳ ಸಬ್‌ಸ್ಕ್ರಿಪ್ಶನ್ ಲಭ್ಯ. ಆನಂತರದ ಜಿಯೋ 799ರೂ. ಯೋಜನೆ ಸಹ ಅತ್ಯುತ್ತಮ ಓಟಿಟಿ ಸೌಲಭ್ಯ ಪಡೆದಿದೆ.

ವಿ ಟೆಲಿಕಾಂನ ಓಟಿಟಿ ಸೌಲಭ್ಯದ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳು

ವಿ ಟೆಲಿಕಾಂನ ಓಟಿಟಿ ಸೌಲಭ್ಯದ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳು

ವಿ ಟೆಲಿಕಾಂ ಸಹ ಆಕರ್ಷಕ ಪೋಸ್ಟ್‌ಪೇಯ್ಡ್ ಯೋಜನೆ ಹೊಂದಿದ್ದು, ಇದರ ಆರಂಭಿಕ ಯೋಜನೆ 399ರೂ. ಆಗಿದೆ. ಈ ಯೋಜನೆಯೊಂದಿಗೆ ಆಕರ್ಷಕ ಸೌಲಭ್ಯಗಳನ್ನು ಪಡೆದಿದೆ. ನಂತರದ ವಿ 499ರೂ. ಯೋಜನೆಯು ಜಿ5 ಮತ್ತು ಅಮೆಜಾನ್ ಪ್ರೈಮ್‌ ಓಟಿಟಿಗಳ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ನಂತರದ ವಿ 699ರೂ. ಪ್ಲ್ಯಾನ್ ಸಹ ಜಿ5 ಮತ್ತು ಅಮೆಜಾನ್ ಪ್ರೈಮ್‌ ಓಟಿಟಿಗಳ ಸೇವೆ ಪಡೆದಿದೆ.

Most Read Articles
Best Mobiles in India

English summary
Postpaid Plans from Jio, Airtel and Vodafone Idea Under Rs 750 With OTT Subscriptions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X