TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಸೆಲ್ಯುಲರ್ ಇಂಟರ್ನೆಟ್ ಸಂಪರ್ಕಕ್ಕಿಂತಲೂ ವೈಫೈ ಇಂದಿನ ದಿನಗಳಲ್ಲಿ ಕಮಾಲನ್ನೇ ಉಂಟು ಮಾಡುತ್ತಿದೆ. ನೀವು ಎಲ್ಲಿಗೆ ಹೋದರೂ ವೈಫೈ ಸೌಲಭ್ಯಗಳು ಇಂದು ಲಭ್ಯವಿದೆ. ವೈಫೈ ಎಂಬುದು ಸ್ಥಳೀಯ ಪ್ರದೇಶದ ವೈರ್‌ಲೆಸ್ ಕಂಪ್ಯೂಟರ್ ನೆಟ್‌ವರ್ಕಿಂಗ್ ತಂತ್ರಜ್ಞಾನ ಎಂದೆನಿಸಿದ್ದು ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ನೆಟ್‌ವರ್ಕ್‌ಗೆ ಸಂಪರ್ಕಪಡಿಸಲು ಸಹಾಯ ಮಾಡುತ್ತದೆ. ಆದರೆ ವೈಫೈಯನ್ನು ಮೀರಿಸುವ ತಂತ್ರಜ್ಞಾನದ ಆವಿಷ್ಕಾರ ಇಂದಿನ ದಿನಗಳಲ್ಲಿ ನಡೆಯುತ್ತಿದೆ.
ಓದಿರಿ: ವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳು
ಪವರ್ ಓವರ್ ವೈಫೈ
ಪವರ್ ಓವರ್ ವೈಫೈ ಎಂಬ ಹೊಸ ವ್ಯವಸ್ಥೆಯನ್ನು ವಾಶಿಂಗ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ವೈರ್‌ಲೆಸ್ ನೆಟ್‌ವರ್ಕ್‌ನೊಂದಿಗೆಯೇ ವೈಫೈ ಸಿಗ್ನಲ್‌ಗಳನ್ನು ಬಳಸಿಕೊಳ್ಳುವುದಕ್ಕೆ ಡಿವೈಸ್‌ಗಳನ್ನು ಇದು ಅನುಮತಿಸುತ್ತದೆ.
ಕ್ಯಾಮೆರಾಗಳು ಮತ್ತು ಇತರ ಡಿವೈಸ್‌ಗಳಲ್ಲಿ ಸೆನ್ಸಾರ್
ಈ ಅಧ್ಯಯನದ ಪ್ರಮುಖ ಸದಸ್ಯರು ಎಂದೆನಿಸಿರುವ ವಂಸ್ಮಿ ತಲ್ಲಾ ಹೇಳುವಂತೆ, ಕ್ಯಾಮೆರಾಗಳು ಮತ್ತು ಇತರ ಡಿವೈಸ್‌ಗಳಲ್ಲಿ ಸೆನ್ಸಾರ್‌ಗಳನ್ನು ಜಾಗೃತಗೊಳಿಸಲು ನೀವು ವೈಫೈ ಡಿವೈಸ್‌ಗಳನ್ನು ಬಳಸಿಕೊಳ್ಳಬಹುದು ಎಂಬುದನ್ನು ಇದು ತೋರಿಸಿದೆ.
ವೈಫೈ ರೂಟರ್ ಮತ್ತು ಪವರ್ ಸೋರ್ಸ್
ವೈಫೈ ರೂಟರ್ ಮತ್ತು ಪವರ್ ಸೋರ್ಸ್ ಅನ್ನು ಜೊತೆಯಾಗಿ ಬೆಂಬಲಿಸುವ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ವೈಫೈ ಸಿಗ್ನಲ್‌ಗಳ ಗುಣಮಟ್ಟವನ್ನು ಇವುಗಳು ಕೆಳಮುಖಗೊಳಿಸುವುದಿಲ್ಲ ಏಕೆಂದರೆ ಇದು ಪವರಿಂಗ್ ಡಿವೈಸ್‌ಗಳಾಗಿವೆ.
ಇಲೆಕ್ಟ್ರಾನಿಕ್ ಗ್ಯಾಜೆಟ್
ಹಿಂದೆ ಇದೇ ಅಧ್ಯಯನವನ್ನು ಸಂಶೋಧಕರುಗಳು ಪ್ರಥಮ ಬಾರಿಗೆ ಅನ್ವೇಷಿಸಿದ್ದರು. ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಇಷ್ಟಪಡುವವರು ಮತ್ತು ವೈಫೈ ಬಳಕೆಯನ್ನು ಮಾಡುವ ಡಿವೈಸ್‌ಗಳಿಗಾಗಿ ಕೊನೆಯ ಮಂಡನೆಯನ್ನು ಮುಂದಿನ ತಿಂಗಳು ಮಾಡಲಿದೆ.
ಕಡಿಮೆ ಪವರ್ ಸೆನ್ಸಾರ್
ಕಡಿಮೆ ಪವರ್ ಸೆನ್ಸಾರ್ ಡಿವೈಸ್‌ಗಳಾದ ಫಿಟ್‌ನೆಸ್ ಟ್ರ್ಯಾಕರ್‌ಗಳು ಮತ್ತು ಕ್ಯಾಮೆರಾಗಳು ಕೂಡ ಪೊವೈಫೈಗೆ ಬೆಂಬಲಕಾರಿಯಾಗಿವೆ.
ಕಡಿಮೆ ಪವರ್ ಉಳ್ಳ ಗ್ಯಾಜೆಟ್
ಕಡಿಮೆ ಪವರ್ ಉಳ್ಳ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಲು ನಿಯಮಿತ ವೈಫೈ ಸಿಗ್ನಲ್‌ಗಳು ಸಾಕಾಗಿವೆ. ಆದರೆ ವೈಫೈಗಳಲ್ಲಿ ಅನಿಯಮಿತ ವಿರಾಮಗಳ ನಡುವೆ ಸಿಗ್ನಲ್‌ಗಳು ಸರಿಯಾಗಿ ತಲುಪದಿರುವ ಸಾಧ್ಯತೆ ಇರುತ್ತದೆ.