Home
ಸುದ್ದಿಜಾಲ

ಹೊಸ Realme GT 7 Pro ಮೊಬೈಲ್‌ಗೆ ಟಕ್ಕರ್ ಕೊಡುವ ಫೋನ್‌ಗಳು ಇವೇ ನೋಡಿ!

ಲೀಡಿಂಗ್‌ ಮೊಬೈಲ್‌ ಸಂಸ್ಥೆಗಳಲ್ಲಿ ಒಂದಾಗಿರುವ ರಿಯಲ್‌ಮಿ (Realme) ಭಾರತೀಯ ಮಾರುಕಟ್ಟೆಯಲ್ಲಿ ನೂತನವಾಗಿ ರಿಯಲ್‌ಮಿ GT 7 ಪ್ರೊ (Realme GT 7 Pro) ಫೋನ್‌ ಅನ್ನು ಬಿಡುಗಡೆ ಮಾಡಿದ್ದು, ಇದು ಮಾರುಕಟ್ಟೆಯಲ್ಲಿ ಆಕರ್ಷಕ ಎನಿಸಿದೆ. ಕಂಪನಿಯ ಹೊಸ ರಿಯಲ್‌ಮಿ GT 7 ಪ್ರೊ ಫ್ಲ್ಯಾಗ್‌ಶಿಪ್‌ ವಿಭಾಗದಲ್ಲಿ ಕಾಣಿಸಿಕೊಂಡಿದ್ದು, ಕೆಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಮೊಬೈಲ್‌ ಪ್ರಿಯರನ್ನು ಸೆಳೆದಿದೆ. ಅದಾಗ್ಯೂ, ನಿಮಗೆ ರಿಯಲ್‌ಮಿ GT 7 ಪ್ರೊ ಫೋನಿಗೆ ಸಮಾನವಾದ ಪರ್ಯಾಯ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಹೌದು, ಮೊಬೈಲ್‌ ಮಾರುಕಟ್ಟೆಯಲ್ಲಿ ಫ್ಲ್ಯಾಗ್‌ಶಿಪ್‌ ಮಾದರಿಯ ಫೋನ್‌ಗಳಿಗೂ ಸಹ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಕಂಪನಿಗಳು ಸಹ ಈ ವಿಭಾಗದಲ್ಲಿ ಅತ್ಯುತ್ತಮ ಫೋನ್‌ಗಳನ್ನು ಪರಿಚಯಿಸುತ್ತ ಮುನ್ನಡೆದಿವೆ. ಈ ಸಾಲಿಗೆ ರಿಯಲ್‌ಮಿಯ ನೂತನ ರಿಯಲ್‌ಮಿ GT 7 ಪ್ರೊ (Realme GT 7 Pro) ಕೂಡಾ ಸೇರ್ಪಡೆ ಆಗಿದೆ. ಆದರೆ ಮಾರುಕಟ್ಟೆಯಲ್ಲಿ ಇದಕ್ಕೆ ಟಕ್ಕರ್ ನೀಡುವ ಇತರೆ ಪರ್ಯಾಯ ಫೋನ್‌ಗಳು ಆಯ್ಕೆ ಸಹ ಗ್ರಾಹಕರಿಗೆ ಲಭ್ಯ ಇವೆ. ಹಾಗಾದರೇ ರಿಯಲ್‌ಮಿ GT 7 ಪ್ರೊ ಫೋನ್ ಪರ್ಯಾಯ ಮೊಬೈಲ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹೊಸ Realme GT 7 Pro ಮೊಬೈಲ್‌ಗೆ ಟಕ್ಕರ್ ಕೊಡುವ ಫೋನ್‌ಗಳು ಇವೇ ನೋಡಿ!

ಐಕ್ಯೂ 13 ಮೊಬೈಲ್‌

ಐಕ್ಯೂ 13 (iQOO 13) ಮೊಬೈಲ್ 6.82 ಇಂಚಿನ ಡಿಸ್‌ಪ್ಲೇ ಒಳಗೊಂಡಿದ್ದು, ಡಿಸ್‌ಪ್ಲೇಯು 1,440 x 3,168 ಪಿಕ್ಸೆಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಹಾಗೆಯೇ ಇದು ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್‌ ಸಾಮರ್ಥ್ಯದ ಪವರ್‌ ಪಡೆದಿದ್ದು, ಜೊತೆಗೆ 12GB + 256GB, 12GB + 512GB ಹಾಗೂ 16GB RAM + 256GB/ 512GB / 1TB ಆಯ್ಕೆಯಲ್ಲಿ ಲಭ್ಯ.

ಈ ಫೋನ್‌ ಟ್ರಿಪಲ್‌ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಒಳಗೊಂಡಿದೆ.ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್‌ 6,150mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದಕ್ಕೆ ಅನುಗುಣವಾಗಿ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ.

ಒನ್‌ಪ್ಲಸ್‌ 13 ಮೊಬೈಲ್‌

ಒನ್‌ಪ್ಲಸ್‌ 13 (OnePlus 13) ಮೊಬೈಲ್‌ 6.82 ಇಂಚಿನ 2K ರೆಸಲ್ಯೂಶನ್‌ LTPO AMOLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 3168×1440 ಪಿಕ್ಸಲ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಅಲ್ಲದೇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ (Snapdragon 8 Elite) ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಪೂರಕವಾಗಿ ಆಂಡ್ರಾಯ್ಡ್‌ 15 ಓಎಸ್‌ ಸಪೋರ್ಟ್ ಇದೆ. ಇದರೊಂದಿಗೆ 12GB/256GB, 12GB/512GB, 16GB/512GB ಹಾಗೂ 24GB/1TB ವೇರಿಯೆಂಟ್‌ ಆಯ್ಕೆಗಳು ಇವೆ.

ಈ ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸಲ್‌ ಸೆನ್ಸಾರ್‌ ಆಗಿದ್ದು, ಉಳಿದ ಎರಡು ಕ್ಯಾಮೆರಾಗಳು ಸಹ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿದೆ. ಹಾಗೆಯೇ ಈ ಫೋನ್‌ 6000 mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದ್ದು, 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.

ರಿಯಲ್‌ಮಿ GT 7 ಪ್ರೊ ಬೆಲೆ ಹಾಗೂ ಸೇಲ್‌

ರಿಯಲ್‌ಮಿ GT 7 ಪ್ರೊ ಮೊಬೈಲ್‌ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಪ್ರೊಸೆಸರ್‌ ಪಡೆದಿರುವುದು ಹೈಲೈಟ್‌ ಎನಿಸಿದೆ. ಇನ್ನು ಇದರ 12GB RAM ವೇರಿಯಂಟ್‌ ಬೆಲೆಯು 59,999ರೂ. ಗಳು ಆಗಿದೆ. ಇದೇ ನವೆಂಬರ್ 29 ರಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಪ್ರಾರಂಭ ಮಾಡಲಿದೆ.

Best Mobiles in India

English summary
Powerful Alternatives to the new Realme GT 7 Pro Mobile. check Alternative mobiles list and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+