Subscribe to Gizbot

ಭಾರತದ ಕಿರಿಯ ವ್ಯಕ್ತಿಗಳ ಹಿರಿಯ ಸಾಧನೆ

Posted By:

ವ್ಯಕ್ತಿ ಕಷ್ಟಪಟ್ಟು ದುಡಿದರೇ, ಮಾಡಬೇಕಾದ ಕಾರ್ಯವನ್ನು ಎಲ್ಲರಿಗಿಂತ ಭಿನ್ನವಾಗಿ ಮಾಡಿ ಮುಗಿಸಿದರೆ, ಆ ವ್ಯಕ್ತಿಗಳು ಖಂಡಿತವಾಗಿಯೂ ಯಶಸ್ವಿ ವ್ಯಕ್ತಿಗಳಾಗುತ್ತಾರೆ. ಹಾಗಾಗಿ ಗಿಜ್ಬಾಟ್‌ ಭಾರತದಲ್ಲಿ ಡಿಜಿಟಲ್‌ ಕ್ಷೇತ್ರದಲ್ಲಿ ಉದ್ಯಮ ಸ್ಥಾಪಿಸಿ ಯಶಸ್ವಿಯಾದ ಟಾಪ್‌ 10 ಕಿರಿಯ ಸಾಧಕರ ಪಟ್ಟಿಯನ್ನು ತಂದಿದೆ. ಈ ವ್ಯಕ್ತಿಗಳ ಸಾಧನೆ ಪ್ರತಿಯೊಬ್ಬರಿಗೂ ಸ್ಪೂರ್ತಿನೀಡುವಂತದ್ದು. ಇವರೆಲ್ಲ ಕಿರಿಯ ವ್ಯಕ್ತಿಗಳಾದ್ರೂ ಇವರ ಸಾಧನೆ ಮಾತ್ರ ದೊಡ್ಡದು. ಆ ವ್ಯಕ್ತಿಗಳ ಕಿರುಪರಿಚಯ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ಇವರ ಈ ಸಾಧನೆ ನಿಮ್ಮ ಸಾಧನೆಗೂ ಸ್ಪೂರ್ತಿಯಾಗಲಿ.

ಇದನ್ನೂ ಓದಿ : ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಲೋಕ್‌ ಮಿತ್ತಲ್‌

ಭಾರತದ ಕಿರಿಯ ವ್ಯಕ್ತಿಗಳ ಹಿರಿಯ ಸಾಧನೆ

ದೆಹಲಿ ಐಐಟಿಯ ಪದವಿಧರ, ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಬರ್ಕಲಿ ವಿಶ್ವವಿದ್ಯಾಲಯದಿಂದ ಎಂಸ್‌ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಉನ್ನತ ಶಿಕ್ಷಣ ಪಡೆದು ಸದ್ಯ ಕ್ಯಾನನ್‌ ಪಾರ್ಟ್ನರ್ಸ್‌ನಲ್ಲಿ ಆಡಳಿತ ನಿರ್ದೇಶಕರಾಗಿ ಆಯ್ಕೆ. ಇದಕ್ಕೂ ಮೊದಲು ಆನ್‌ಲೈನ್‌ ಕೆಲಸ ಹುಡುಕುವ ಜಾಬ್ಸ್‌.ಕಾಂ ಸಹ ಸಂಸ್ಥಾಪಕನಾಗಿ ಕೆಲಸ.ಸದ್ಯ ಟೆಕ್‌ ಮತ್ತು ಉದ್ಯಮದ ಎರಡು ವಿಷಯದಲ್ಲಿ ಪರಿಣಿತಿ ಪಡೆದಿರುವ ಕೆಲವೇ ಕೆಲ ವ್ಯಕ್ತಿಗಳಲ್ಲಿ ಇವರು ಒಬ್ಬರು.

ಡೀಪ್‌ ಕರ್ಲಾ

ಭಾರತದ ಕಿರಿಯ ವ್ಯಕ್ತಿಗಳ ಹಿರಿಯ ಸಾಧನೆ

ಆನ್‌ಲೈನ್‌ನಲ್ಲಿ ಪ್ರವಾಸಕ್ಕೆ ಸಂಬಂಧಿಸಿದ ವೆಬ್‌ಸೈಟ್‌ನ್ನು ಆರಂಭಿಸಿದ ಮೊದಲಿಗ ಡೀಪ್‌ ಕಾರ್ಲರಿಗೆ ಸಲ್ಲುತ್ತದೆ. ವಿಶ್ವದಾದ್ಯಂತ ಭಾರತದ ಪ್ರವಾಸಿ ತಾಣಗಳ ಸಮಗ್ರ ಮಾಹಿತಿಗಾಗಿ ಮೇಕ್‌ಮೈ ಟ್ರಿಪ್‌ ಪ್ರವಾಸಿ ಆನ್‌ಲೈನ್‌ ತಾಣ ಆರಂಭ.ನಾಸ್ಕಂ ನಿರ್ವಾಹಕ ಮಂಡಳಿಯ ಸದಸ್ಯ.
ಶಿಕ್ಷಣ : ದೆಹಲಿಯ ಸ್ಟೀಫನ್ಸ್‌ನ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿ.ಎ ಡಿಗ್ರಿ .ಅಹಮದಬಾದ್‌ ಐಐಎಂನಲ್ಲಿ ಎಂಬಿಎ ಪದವಿ

ಧ್ರುವ್‌ ಶ್ರಿಂಗಿ

ಭಾರತದ ಕಿರಿಯ ವ್ಯಕ್ತಿಗಳ ಹಿರಿಯ ಸಾಧನೆ

ಲಂಡನ್‌ನಲ್ಲಿ ಕೈತುಂಬಾ ಸಂಬಳವಿದ್ದರೂ ಅದನ್ನು ಬಿಟ್ಟು ಭಾರತದಲ್ಲಿ ಉದ್ಯಮ ಸ್ಥಾಪಿಸಬೇಕೆಂಬ ಛಲದಿಂದ ಉದ್ಯಮ ಸ್ಥಾಪಿಸಿದ ಸಾಹಸಿ. ಪ್ರವಾಸಿ ಜಾಲ ತಾಣ ಯಾತ್ರ.ಕಾಂ ಸಂಸ್ಥಾಪಕ ಧ್ರುವ್‌ ಶ್ರಿಂಗಿ. ಆರಂಭದಲ್ಲಿ60 ಕೋಟಿ ಬಂಡವಾಳ ಹಾಕಿ ಸ್ಥಾಪಿಸಿದ ಉದ್ಯಮ ಮೂರೇ ವರ್ಷದಲ್ಲಿ ಕಂಪೆನಿಯನ್ನು ಯಶಸ್ವಿ ಕಂಪೆನಿಯನ್ನಾಗಿ ಮಾಡಿದ ಮಹಾನ್‌ ಸಾಹಸಿ.

ಹರೀಶ್‌ ಬಾಲ್‌

ಭಾರತದ ಕಿರಿಯ ವ್ಯಕ್ತಿಗಳ ಹಿರಿಯ ಸಾಧನೆ

ಭಾರತದ ಡಿಜಿಲಟ್‌ ಕ್ಷೇತ್ರದಲ್ಲಿ ಹೆಸರುವಾಸಿಯಾದ ಸ್ಮೈಲ್‌ ಗ್ರೂಪಿನ ಸಂಸ್ಥಾಪಕ. ಆರೋಗ್ಯ, ಇ ಕಾಮರ್ಸ್,ಡಿಜಿಟಲ್‌ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸ್ಮೈಲ್‌ ಗ್ರೂಪ್‌ ಯಶಸ್ವಿಯಾಗಲು ಹರೀಶ್‌ ಬಾಲ್‌ ಸಾಹಸವೇ ಮುಖ್ಯ ಕಾರಣ.ಇವರ ಕಾರ್ಯದಕ್ಷತೆ ನೋಡಿ 2009ರಲ್ಲಿ ಉದ್ಯೋಗ ರತ್ನ ಪ್ರಶಸ್ತಿ ಲಭಿಸಿದೆ.

ಕೆ. ಗಣೇಶ್‌

ಭಾರತದ ಕಿರಿಯ ವ್ಯಕ್ತಿಗಳ ಹಿರಿಯ ಸಾಧನೆ

ನಿಮಗೆ ವಿಜ್ಞಾನ ಮತ್ತು ಇಗ್ಲಿಷ್‌ನಲ್ಲಿ ಅನ್‌ಲೈನ್‌ನಲ್ಲಿ ಶಿಕ್ಷಣ ಬೇಕೆ ? ನಿಮಗೆ ಅಂತರಾಷ್ಟ್ರೀಯ ಮಟ್ಟದ ಟೀಚರ್‌ಗಳಿಂದ ಶಿಕ್ಷಣ ಬೇಕು ಎಂದು ಯೋಚಿಸುತ್ತಿದ್ದೀರಾ ? ಹಾಗಾದ್ರೆ ನಿಮ್ಮ ಕನಸುಗಳನ್ನು ನನಸು ಮಾಡಲು ಟ್ಯುಟರ್‌ ವಿಸ್ತಾ ವೆಬ್‌ಸೈಟ್‌ ಇದೆ. ಶಿಕ್ಷಣ ತಜ್ಞ ಕೆ. ಗಣೇಶ್‌ ಅವರ ಪರಿಕಲ್ಪನೆಯಲ್ಲಿ ಆರಳಿದ ವೆಬ್‌ಸೈಟ್‌ ಇಂದು ವಿಶ್ವದ ಅನೇಕ ವಿದ್ಯಾರ್ಥಿಗಳಿಗೆ ಅನ್‌ಲೈನ್‌ನಲ್ಲಿ ಶಿಕ್ಷಣ ನೀಡುತ್ತಿದೆ.ಸದ್ಯ ವಿಶ್ವದ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪಿಯಾರ್‌ಸನ್‌ ಗ್ರೂಪ್‌ನ ಒಂದು ಭಾಗವಾಗಿ ಟ್ಯುಟರ್‌ವಿಸ್ತಾ ಕೆಲಸ ಮಾಡುತ್ತಿದೆ.

ಕುನಾಲ್ ಬಹು

ಭಾರತದ ಕಿರಿಯ ವ್ಯಕ್ತಿಗಳ ಹಿರಿಯ ಸಾಧನೆ

ಭಾರತದ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ ಸ್ನಾಪ್‌ಡೀಲ್‌ ಸ್ಥಾಪಿಸಿದ ಕೀರ್ತಿ ಕುನಲ್‌ ಬಹ್ಲುಗೆ ಸಲ್ಲುತ್ತದೆ. ದೆಹಲಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಸ್ನಾಪ್‌ ಡೀಲ್‌ ಸದ್ಯ ಭಾರತದ 50 ಮಹಾನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೊಬೈಲ್‌,ಎಲೆಕ್ಟ್ರಾನಿಕ್ಸ್,ಫ್ಯಾಶನ್‌,ಮಕ್ಕಳ ಆಟಿಕೆ, ಆಡುಗೆ ಸಾಮಾಗ್ರಿ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಸ್ನಾಪ್‌ಡೀಲ್‌ನಲ್ಲಿ ಸಿಗುತ್ತಿದೆ.ಸದ್ಯ ಬಹಳ ವೇಗವಾಗಿ ಬೆಳೆಯುತ್ತಿರುವ ಮತ್ತು ಅತಿ ಹೆಚ್ಚು ಲಾಭ ತರುತ್ತಿರುವ ವೆಬ್‌ಸೈಟ್‌ ಎಂಬ ಹಿರಿಮೆ ಸ್ನಾಪ್‌ಡೀಲ್‌ಗಿದೆ.

ಲೀ ಫಿಕ್ಸೆಲ್

ಭಾರತದ ಕಿರಿಯ ವ್ಯಕ್ತಿಗಳ ಹಿರಿಯ ಸಾಧನೆ

ಡಿಜಿಟಲ್‌ ಕ್ಷೇತ್ರದಲ್ಲಿ ಅತೀ ಹೆಚ್ಚು ಕಂಪೆನಿಗಳಿಗೆ ಆರಂಭಿಕ ಬಂಡವಾಳ ಹೂಡಿರುವ ವ್ಯಕ್ತಿ ಲೀ ಫಿಕ್ಸೆಲ್‌. ಫ್ಲಿಪ್‌ ಕಾರ್ಟ್,ಮೇಕ್‌ಮೈ ಟ್ರಿಪ್‌,ಜಸ್ಟ್‌ ಡಯಾಲ್‌, ಲೆಟ್ಸ್‌ಬೈ,ಬೇಬಿಓಇ.ಕಾಂ, ಸೇರಿದಂತೆ 18 ಕಂಪೆನಿಗಳಿಗೆ ಲೀ ಫಿಕ್ಸೆಲ್‌ ಬಂಡವಾಳ ಹಾಕಿದ್ದಾರೆ.ಸದ್ಯ ಟೈಗರ್‌ ಗ್ಲೋಬಲ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಮಹೇಶ್‌ ಮೂರ್ತಿ

ಭಾರತದ ಕಿರಿಯ ವ್ಯಕ್ತಿಗಳ ಹಿರಿಯ ಸಾಧನೆ

ಕಾಲೇಜ್‌ ಶಿಕ್ಷಣಕ್ಕೆ ಅರ್ಧದಲ್ಲೇ ಗುಡ್‌ಬೈ ಹೇಳಿ ಉದ್ಯೋಗ ಮಾಡಿ ಇಂದು ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುತ್ತಿರುವ ವ್ಯಕ್ತಿ ಮಹೇಶ್‌ ಮೂರ್ತಿ.ಪ್ರಾರಂಭದಲ್ಲಿ ಮನೆ ಮನೆಗೆ ವಾಕ್ಯೂಮ್‌ ಕ್ಲೀನರ್‌ ಮಾರಾಟದ ವೃತ್ತಿ, ನಂತರ ಜಾಹೀರಾತಿನ ನಿರ್ದೇಶಕನಾಗಿ ಕೆಲಸ, ಸದ್ಯ ಆನ್‌ಲೈನ್‌ ಜಾಹೀರಾತು ಸಂಸ್ಥೆ ಪಿನ್ಸ್ಟ್ರೋಮ್‌ ಕಂಪೆನಿಯ ಸಂಸ್ಥಾಪಕ. ಲಿಕ್ಡಿನ್‌ನಲ್ಲಿ ಅತೀ ಹೆಚ್ಚು ಪ್ರೊಫೈಲ್‌ ವೀಕ್ಷಣೆಗೆ ಒಳಪಟ್ಟ ವ್ಯಕ್ತಿ ಎಂಬ ಪ್ರಖ್ಯಾತಿ ಮಹೇಶ್‌ ಮೂರ್ತಿಗೆ ಇದೆ.

ಮಾನಿಕ್ ಆರೋರ

ಭಾರತದ ಕಿರಿಯ ವ್ಯಕ್ತಿಗಳ ಹಿರಿಯ ಸಾಧನೆ

ಐಡಿಜಿ ವೆಂಚರ್ಸ್‌ ಇಂಡಿಯಾ ಕಂಪೆನಿ ಸಂಸ್ಥಾಪಕ. ಇಂಟರ್‌ನೆಟ್‌, ಸಾಫ್ಟ್‌ವೇರ್‌ ಮತ್ತು ವೈರ್‌ಲೆಸ್‌ ಕ್ಷೇತ್ರದಲ್ಲಿಬಂಡವಾಳ ಹೂಡಿ ಯಶಸ್ವಿಯಾದ ಸಂಸ್ಥೆ ಎಂಬ ಪ್ರಖ್ಯಾತಿ ಐಡಿಜಿ ವೆಂಚರ್ಸ್‌ಗ ಕಂಪೆನಿಗೆ ಇದೆ.

ಮುರುಗವೇಲ್‌ ಜಾನಕಿರಾಮನ್‌

ಭಾರತದ ಕಿರಿಯ ವ್ಯಕ್ತಿಗಳ ಹಿರಿಯ ಸಾಧನೆ

ದೇಶದ ಬಹಳಷ್ಟು ನವ ಯುವಕ/ಯುವತಿಯರ ಮದುವೆಗೆ ಸೇತುವೆಯಂತೆ ಸಂಬಂಧ ಕಲ್ಪಿಸಿದ ವ್ಯಕ್ತಿ. ಭಾರತದ ದೊಡ್ಡ ಮದುವೆ ಜಾಲತಾಣ ಭಾರತ್‌ಮ್ಯಾಟ್ರಿಮನಿಯನ್ನು ಆರಂಭಿಸಿ ಯಶಸ್ವಿಯಾದ ಉದ್ಯಮಿ ಮುರುಗವೇಲ್‌ ಜಾನಕಿರಾಮನ್‌. ಸದ್ಯದಲ್ಲೇ ಡೇಟಿಂಗ್ ಸೈಟ್‌ನ್ನು ಆರಂಭಿಸಲಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot