Subscribe to Gizbot

ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

Posted By:

ಈಗಂತೂ ಟಚ್‌ಸ್ಕ್ರೀನ್‌ ಮೊಬೈಲ್‌ಗೆ ಡಿಮ್ಯಾಂಡ್‌. ಮಕ್ಕಳಿಂದ ಹಿಡಿದು ದೊಡ್ಡವರು ಸಹ ಈ ಟಚ್‌ಸ್ಕ್ರೀನ್‌ ಮೊಬೈಲ್‌ಗೆ ಆಕರ್ಷಣೆ ಗೊಂಡಿದ್ದಾರೆ.ಆದರೆ ಇಂದು ಮಾರುಕಟ್ಟೆಯಲ್ಲಿ ಭಾರೀ ಫೇಮಸ್ಸಾಗುತ್ತಿರುವ ಈ ಟಚ್‌ಸ್ಕ್ರೀನ್‌ ಮೊಬೈಲ್‌ಗಳು ಮುಂದೊಂದಿನ ಮೂಲೆಗುಂಪಾದರೂ ಅಶ್ಚರ್ಯವೆನಿಲ್ಲ. ಯಾಕೆ ಗೊತ್ತೆ ಟಚ್‌ಸ್ಕ್ರೀನ್‌ ತಂತ್ರಜ್ಞಾನಕ್ಕೆ ವಿರುದ್ಧವಾದ ಟಚ್‌ಫ್ರೀ ತಂತ್ರಜ್ಞಾನ ಆವಿಷ್ಕಾರ ಗೊಂಡಿದೆ. ಸಂತಸದ ವಿಷಯವೆನೆಂದರೆ ಈ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದು ಭಾರತೀಯ ವಿದ್ಯಾರ್ಥಿನಿ.

ಭಾರತೀಯ ವಿದ್ಯಾರ್ಥಿನಿಯ ನೂತನ ಸಂಶೋಧನೆ ಈಗ ಟೆಕ್‌ ಪಂಡಿತರ ಶ್ಲಾಘನೆಗೆ ಒಳಗಾಗಿದೆ. ಹೀಗಾಗಿ ಇಲ್ಲಿ ಈ ಪ್ರತಿಭಾವಂತ ವಿದ್ಯಾರ್ಥಿನಿಯ ಸಾಧನೆ ಮತ್ತು ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಕೆಲ ಮಾಹಿತಿಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ಟಾಪ್‌ ಐಟಿ ಕಂಪೆನಿಗಳ ಹಿಂದಿರುವ ಭಾರತೀಯರು

ಇದನ್ನೂ ಓದಿ : ಭವಿಷ್ಯದ ಮೊಬೈಲ್‌ಗಳು ಇಲ್ಲಿವೆ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಗೋವಾದ ಪ್ರತಿಭಾವಂತ ಯುವತಿ ಆ್ಯಂಡ್ರಿಯಾ ಕೊಲಾಕೋ ಈ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾಳೆ. ಕೇವಲ ಕಣ್ಣೋಟದಿಂದ ಕಾರ್ಯವೆಸಗುವ ಮೊಬೈಲ್‌ ತಂತ್ರಜ್ಞಾನದಲ್ಲಿ, ಬಳಸುವ ವ್ಯಕ್ತಿ ಮತ್ತು ಮೊಬೈಲ್‌ ನಡುವೆ ಕೇವಲ ಗಾಳಿ ಮಾತ್ರ ಇರುತ್ತದೆ.

 ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಸಂಕೇತ ಸಂಸ್ಕರಣಾ ವಿಧಾನ ಅಂದರೆ ಈ ಮೊಬೈಲ್‌ 3 ಡಿ ಸೆನ್ಸಿಂಗ್‌ ಮೂಲಕ ಕಣ್ಣಿನ ಆದೇಶಗಳನ್ನು ಪಡೆದುಕೊಳ್ಳವ ಮೂಲಕ ಈ ತಂತ್ರಜ್ಞಾನ ಕೆಲಸ ಮಾಡುತ್ತದೆ.

 ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಅಹ್ಮದ್‌ ಕಿರ್ಮಾನಿ ಮತ್ತು ವೈ ಗಾಂಗ್ ಎನ್ನುವವರ ಜತೆ ಸೇರಿ ಆ್ಯಂಡ್ರಿಯಾ ಈ ವಿನೂತನ ತಂತ್ರಜ್ಞಾನ ಆವಿಷ್ಕರಿಸಿದ್ದಾರೆ.

 ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಆ್ಯಂಡ್ರಿಯಾ ಕೊಲಾಕೋ ಅಮೆರಿಕದ ಪ್ರತಿಷ್ಠಿತ ಮಾಸಾಚುಸೆಟ್ಸ್‌ ಇನ್ಸ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಾಜಿಯಲ್ಲಿ (ಎಂಐಟಿ) ಡಾಕ್ಟರೇಟ್‌ ಮಾಡುತ್ತಿದ್ದಾರೆ.

 ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಆ್ಯಂಡ್ರಿಯಾ ತಂಡ 3ಡಿ ಕಣ್ಣೋಟದ ಆದೇಶದಂತೆ ಕಾರ್ಯವೆಸಗುವ ಮೊಬೈಲ್‌ ತಂತ್ರಜ್ಞಾನವನ್ನು ಕಂಡುಹಿಡಿದು ಎಂಐಟಿಯಲ್ಲಿ ಜರುಗಿದ ಸ್ಫರ್ಧೆಯಲ್ಲಿ 55 ಲಕ್ಷ (ಸಾವಿರ ಡಾಲರ್‌) ಬಹುಮಾನ ಗಳಿಸಿಕೊಂಡಿದ್ದಾರೆ.

 ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಭವಿಷ್ಯದ ಮೊಬೈಲ್‌ ತಂತ್ರಜ್ಞಾನ ಎಂದು ಕರೆಸಿಕೊಂಡಿರುವ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಎಲ್ಲಾ ಮೊಬೈಲ್‌ ಕಂಪೆನಿಗಳು ಮುಗಿಬಿದ್ದಿವೆ.

 ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಬಾಲ್ಯದಿಂದಲೇ ಪ್ರತಿಭಾವಂತೆಯಾಗಿದ್ದ ಆ್ಯಂಡ್ರಿಯಾ ಮಾರ್ಗೋವಾದ ಫಾತಿಮ ಕಾನ್ವೆಂಟ್‌ ಹೈಸ್ಕೂಲ್‌ನ ವಿದ್ಯಾರ್ಥಿನಿಯಾಗಿದ್ದ ವೇಳೆ 10ನೇ ತರಗತಿಯಲ್ಲಿ ಶೇ.96.17 ಅಂಕದೊಂದಿಗೆ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ಶೇ. 100 ಅಂಕಗಳನ್ನು ಗಳಿಸಿ ನೂತನ ದಾಖಲೆಯನ್ನು ನಿರ್ಮಿಸಿದ್ದರು. ಈ ದಾಖಲೆಯನ್ನು ಮುರಿಯಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ.

 ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಸಂಪರ್ಕಕ್ಕಾಗಿ ಈ ತಾಣಕ್ಕೆ ಭೇಟಿ ನೀಡಿ :3dimtech.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot