Subscribe to Gizbot

ಫೇಸ್ ಬುಕ್ ಮೂಲಕ ಇನ್ನು ಹತ್ತಿರವಾದ ಪ್ರಣಬ್

Posted By: Varun
ಫೇಸ್ ಬುಕ್ ಮೂಲಕ ಇನ್ನು ಹತ್ತಿರವಾದ ಪ್ರಣಬ್

ಭಾರತದ ಮೊದಲನೆ ಪ್ರಜೆ, ಸಂವಿಧಾನದ ರಕ್ಷಕರಾಗಿ 13 ನೆ ರಾಷ್ಟ್ರಪತಿಯಾಗಿ ಆಯ್ಕೆಯಾದ ಪ್ರಣಬ್ ಮುಖರ್ಜಿ, ಅಫ್ಜಲ್ ಗುರು ನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುತ್ತರೋ ಇಲ್ಲವೋ ಗೊತ್ತಿಲ್ಲ, ಆದರೆ ರಾಷ್ಟ್ರಪತಿಗಳ ವೆಬ್ಸೈಟ್ ಗೆ ಮೇಜರ್ ಸರ್ಜರಿ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

ಹಿಂದೆ ರಾಷ್ಟ್ರಪತಿಗಳಾಗಿದ್ದ ಕಾಲದಲ್ಲಿ ಅಬ್ದುಲ್ ಕಲಾಂ ತಮ್ಮ ಒಡನಾಟದಿಂದ ಮಕ್ಕಳ ಹಾಗು ಸಾಮಾನ್ಯ ಜನರ ಜೊತೆ ನಿಕಟ ಸಂಬಂಧ ಹೊಂದಿದ್ದರು ಹಾಗು ತಮ್ಮ ವೆಬ್ಸೈಟ್ ಮೂಲಕ ಜನರಿಗೆ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಿದ್ದರು.

ಇದನ್ನು ಅರಿತಿರುವ ಚಾಣಾಕ್ಷ ಪ್ರಣಬ್ ಮುಖರ್ಜಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ತಮ್ಮ ವೆಬ್ಸೈಟ್ ಗೆ ಮಾರ್ಪಾಡು ಮಾಡಲು ಸೂಚಿಸಿದ್ದಾರೆ. ವಿಶೇಷವಾಗಿ ಈಗಿನ ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ಹಾಗು ವಿಸ್ತಾರವನ್ನು ಗಮನದಲ್ಲಿ ಇಟ್ಟುಕೊಂಡು ಫೇಸ್ ಬುಕ್ ಹಾಗು ಯೂಟ್ಯೂಬ್ ಸಂಪರ್ಕ ಕಲ್ಪಿಸಲಾಗಿದೆ.

ವೀಡಿಯೋ ಗ್ಯಾಲರಿ ನೋಡುವುದಷ್ಟೇ ಅಲ್ಲದೆ ಸಾರ್ವಜನಿಕರು ಪ್ರಣಬ್ ದಾ ಜೊತೆ 'write to president' ಬಟನ್ ಅನ್ನು ವೆಬ್ಸೈಟ್ ನಲ್ಲಿ ಕ್ಲಿಕ್ ಮಾಡಿ ನೇರವಾಗಿ ಇ-ಮೇಲ್ ಕಳುಹಿಸಬಹುದಾಗಿದೆ.

ನವೀಕರಿಸಲಾದ ರಾಷ್ಟ್ರಪತಿಗಳ ವೆಬ್ಸೈಟ್ ಅನ್ನು ಇಂದು ಪ್ರಣಬ್ ರವರ ಕಾರ್ಯದರ್ಶಿ ಬಿಡುಗಡೆ ಮಾಡಿದ್ದು, ಅದು ಹೇಗಿದೆ ಎಂದು ನೋಡಲು ಇಲ್ಲಿ ಕ್ಲಿಕ್ ಮಾಡಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot