ಭಾರತೀಯ ಮೊಬೈಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯೂ ವಿಚಿತ್ರ ರೀತಿಯಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ ಎನ್ನುವುದಕ್ಕೆ ಈ ವರದಿ ಸಾಕ್ಷಿಯಾಗಿದೆ. ಕಡಿಮೆ ಬೆಲೆಯ ಬಜೆಟ್ ಫೋನ್‌ಗಳು ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ ಎನ್ನುವುದು ಎಲ್ಲಿರಿಗೂ ತಿಳಿದಿದರೆ, ಆದರೆ ಇದು ಮೆಲ್ನೋಟಕ್ಕೆ ಮಾತ್ರವೇ ಕಾಣಿಸುತ್ತಿರುವುದು. ವರದಿಯೊಂದರ ಪ್ರಕಾರ 2017lರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಫೋನ್‌ಗಳ ಭರಟೆಯೂ ಜೋರಾಗಿಯೇ ನಡೆದಿದೆ ಎನ್ನಲಾಗಿದೆ.

ಬಜೆಟ್ ಬೆಲೆಯಲ್ಲಿ ಶಿಯೋಮಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ಪ್ರೀಮಿಯಮ್ ಫೋನ್‌ಗಳಲ್ಲಿ ಒನ್‌ಪ್ಲಸ್, ಸ್ಯಾಮ್ ಸಂಗ್ ಮತ್ತು ಆಪಲ್ ಫೋನ್‌ಗಳು ಮಾರಾಟದಲ್ಲಿ ಏರಿಕೆಯನ್ನು ಕಂಡಿದೆ ಎನ್ನಲಾಗಿದೆ. ದಿನದಿಂದ ದಿನಕ್ಕೆ ಬಜೆಟ್ ಫೋನ್ ಹಾಗೂ ಟಾಪ್ ಎಂಡ್ ಫೋನ್‌ಗಳು ಎರಡು ಸಹ ಏರಿಕೆಯಾಗುತ್ತಿದೆ ಎನ್ನುವ ಮಾಹಿತಿಯೂ ಆಚ್ಚರಿ ಮೂಡಿಸುತ್ತಿದೆ.
ಓದಿರಿ: ಭಾರತದಲ್ಲಿ ಪವರ್ ಬ್ಯಾಂಕ್ ನಿರ್ಮಿಸಿದ ಫ್ಲಿಪ್‌ಕಾರ್ಟ್: ಇಷ್ಟು ಕಡಿಮೆ ಬೆಲೆಗೆ ಬೇರೆ ಯಾವುದು ಇಲ್ಲ..!
ಶೇ.20% ಏರಿಕೆ :
ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳ ಮಾರಾಟವು ಕಳೆದ ವರ್ಷದಲ್ಲಿ ಶೇ.20ರಷ್ಟು ಎರಿಕೆಯಾಗಿದೆ ಎನ್ನಲಾಗಿದೆ. ಭಾರತೀಯ ಬಳಕೆದಾರರು ಪ್ರೀಮಿಯಮ್ ಫೋನ್‌ಗಳ ಕಡೆಗೆ ಮುಖ ಮಾಡಿದ್ದು, ಮೊದಲ ಸ್ಮಾರ್ಟ್‌ಫೋನ್ ಕೊಳ್ಳುವವರು ಬಜೆಟ್ ಸ್ಮಾರ್ಟ್‌ಪೋನ್ ಕೊಂಡರೆ, ಎರಡನೇ ಸ್ಮಾರ್ಟ್‌ಫೋನ್ ಕೊಳ್ಳುವವರು ಪ್ರೀಮಿಯಮ್ ಫೋನ್ ಗಳ ಕಡೆಗೆ ಮುಖ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಈ ವರದಿ ಹೊರ ಹಾಕಿದೆ.
ಒನ್ ಪ್ಲಸ್ ಭಾರಿ ಏರಿಕೆ:
ಮಾರುಕಟ್ಟೆಯಲ್ಲಿ ಈ ಬಾರಿ ಒನ್‌ಪ್ಲಸ್ 5T ಮತ್ತು ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ ಒನ್ ಪ್ಲಸ್ ಕಂಪನಿಯೂ ಶೇ. 343% ರಷ್ಟು ಮಾರುಕಟ್ಟೆಯಲ್ಲಿ ಏರಿಕೆಯನ್ನು ಕಂಡಿದೆ ಎನ್ನಲಾಗಿದೆ. ಇದಲ್ಲದೇ ಸ್ಯಾಮ್ ಸಂಗ್ ಮತ್ತು ಐಫೋನ್ ಮಾರಾಟದಲ್ಲಿಯೂ ಏರಿಕೆಯಾಗಿದೆ.
ಟಾಪ್ ಕಂಪನಿಗಳು:
ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದಲ್ಲಿ LG, ಗೂಗಲ್, ಶಿಯೋಮಿ, ಹುವಾವೆ ಮತ್ತು ನೋಕಿಯಾ ಫೋನ್‌ಗಳು ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿವೆ. ಈ ಕಂಪನಿಗಳು ಎಲ್ಲಾ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದೆ ಇದಕ್ಕೆ ಪ್ರಮುಖ ಕಾರಣ. ಟಾಪ್ ಎಂಡ್ ಫೋನ್‌ಗಳು ಮತ್ತು ಬಜೆಟ್ ಫೋನ್ ಎರಡು ಸಹ ಗ್ರಾಹಕರಿಗೆ ಹತ್ತಿರವಾಗಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.