Subscribe to Gizbot

ಭಾರತದಲ್ಲಿ ಪವರ್ ಬ್ಯಾಂಕ್ ನಿರ್ಮಿಸಿದ ಫ್ಲಿಪ್‌ಕಾರ್ಟ್: ಇಷ್ಟು ಕಡಿಮೆ ಬೆಲೆಗೆ ಬೇರೆ ಯಾವುದು ಇಲ್ಲ..!

Written By:

ಭಾರತೀಯ ಆನ್‌ಲೈನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಫ್ಲಿಪ್‌ಕಾರ್ಟ್‌, ಇತ್ತೀಚೇಗೆ ಸ್ಥಾಪಿತವಾದ ದೇಶಿಯ ಸ್ಟಾರ್ಟ್ ಆಪ್‌ಗಳ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಫ್ಲಿಪ್‌ಕಾರ್ಟ್ ಸದ್ಯ ತನ್ನದೇ ಬಿಲಿಯನ್ ಬ್ರಾಂಡ್ ಮೂಲಕ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ. ಅಲ್ಲದೇ ತನ್ನ ತಾಣದಲ್ಲಿ ಅತೀ ಕಡಿಮೆಗೆ ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಪವರ್ ಬ್ಯಾಂಕ್ ನಿರ್ಮಿಸಿದ ಫ್ಲಿಪ್‌ಕಾರ್ಟ್

ಮೊನ್ನೇ ತಾನೇ ಬಿಲಿಯನ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಮಾದರಿಯಲ್ಲಿ ಮೇಡ್ ಇನ್ ಇಂಡಿಯಾ ಯೋಜನೆಯಡಿ ಬಿಲಿಯನ್ ಬ್ರಾಂಡಿನ ಅಡಿಯಲ್ಲಿ ಅತೀ ಕಡಿಮೆ ಬೆಲೆಗೆ ಎರಡು ಪವರ್ ಬ್ಯಾಂಕ್ ಗಳನ್ನು ಪರಿಚಯ ಮಾಡಿದೆ. ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಸಾಲುತ್ತಿಲ್ಲ ಎನ್ನುವವರು ಈ ಪವರ್ ಬ್ಯಾಂಕ್ ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಅಲ್ಲದೇ ಮಾರುಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆ ಇದಾಗಿದೆ.

ಓದಿರಿ: ಐಪೋನ್ ಬುಕ್ ಮಾಡಿದವರಿಗೆ ಶಾಕ್: ಫ್ಲಿಪ್‌ಕಾರ್ಟ್ ಕೊಟ್ಟಿದ್ದೇನು..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Here's how the Face ID of the newly launched Oppo A83 works (KANNADA)
ಬಿಲಿಯನ್ 10,000mAh ಪವರ್ ಬ್ಯಾಂಕ್:

ಬಿಲಿಯನ್ 10,000mAh ಪವರ್ ಬ್ಯಾಂಕ್:

ಲಿಥಿಯಮ್ ಐಯಾನ್ ಬ್ಯಾಟರಿಯಿಂದ ನಿರ್ಮಿತವಾಗಿರುವ ಬಿಲಿಯನ್ 10,000mAh ಪವರ್ ಬ್ಯಾಂಕ್ ಮೂರು 5V/2.1A USB ಔಟ್ ಪುಟ್ ಪೋರ್ಟ್ ಗಳನ್ನು ಹೊಂದಿದೆ. ಸುಮಾರು 500 ಚಾರ್ಜ್ ಮತ್ತು ಡಿಸ್ಚಾರ್ಜ್ ಮಾಡುವ ಕೆಪಾಸಿಟಿಯನ್ನು ಹೊಂದಿದ್ದು, ರೂ. 799ಕ್ಕೆ ಮಾರಾಟವಾಗುತ್ತಿದೆ. 260 ಗ್ರಾಂ ತೂಕವನ್ನು ಹೊಂದಿದೆ.

ಬಿಲಿಯನ್ 15,000mAh ಪವರ್ ಬ್ಯಾಂಕ್:

ಬಿಲಿಯನ್ 15,000mAh ಪವರ್ ಬ್ಯಾಂಕ್:

ಲಿಥಿಯಮ್ ಐಯಾನ್ ಬ್ಯಾಟರಿಯಿಂದ ನಿರ್ಮಿತವಾಗಿರುವ ಬಿಲಿಯನ್ 15,000mAh ಪವರ್ ಬ್ಯಾಂಕ್‌ನಲ್ಲಿ ಒಟ್ಟು ಎರಡು 5V/2.1A USB ಔಟ್ ಪುಟ್ ಪೋರ್ಟ್ ಗಳನ್ನು ಕಾಣಬಹುದಾಗಿದ್ದು, ಸುಮಾರು 500 ಬಾರಿ ಚಾರ್ಜ್ ಮತ್ತು ಡಿಸ್ಚಾರ್ಜ್ ಮಾಡುವ ಕೆಪಾಸಿಟಿಯನ್ನು ಹೊಂದಿದ್ದು, ರೂ. 999ಕ್ಕೆ ಮಾರಾಟವಾಗುತ್ತಿದೆ. 320 ಗ್ರಾಂ ತೂಕದ ಈ ಪವರ್ ಬ್ಯಾಂಕಿನಲ್ಲಿ 4000mAh ಸ್ಮಾರ್ಟ್‌ಫೋನ್ ಅನ್ನು 2.5 ಬಾರಿ ಚಾರ್ಜ್ ಮಾಡಬಹುದಾಗಿದೆ.

ವಿಶೇಷತೆಗಳು:

ವಿಶೇಷತೆಗಳು:

ಬ್ಯಾಟರಿಯ ಸಾಮರ್ಥ್ಯವನ್ನು ಬಿಟ್ಟರೆ ಬೇರೆ ಎಲ್ಲಾ ವಿಷಯಗಳಲ್ಲಿಯೂ ಈ ಎರಡು ಪವರ್ ಬ್ಯಾಂಕ್‌ಗಳು ಒಂದೇ ಮಾದರಿಯಲ್ಲಿದೆ. ಎರಡರಲ್ಲೂ ಟಾರ್ಚ್ ಲೈಟ್ ಕಾಣಬಹುದಾಗಿದ್ದು, ಅಲ್ಲದೇ ಬ್ಯಾಟರಿ ಲೆವಲ್ ತೋರಿಸಲು LED ಇಂಡಿಕೇಟರ್ ಹೊಂದಿದೆ. ಅಲ್ಲದೇ ಒಮ್ಮೆಗೆ ಒಂದಕ್ಕಿಂತ ಹೆಚ್ಚಿನ ಡಿವೈಸ್‌ಗಳನ್ನು ಚಾರ್ಜ್ ಮಾಡುವ ಕೆಪಾಸಿಟಿಯನ್ನು ಹೊಂದಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Flipkart Billion 10000mAh and 15000mAh ‘Made in India’ power banks. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot