ಈ ಜನಪ್ರಿಯ ನೋಕಿಯಾ ಫೋನಿಗೆ ಭಾರೀ ಡಿಸ್ಕೌಂಟ್!..ಸ್ಟೈಲಿಶ್ ಡಿಸೈನ್!
ಜನಪ್ರಿಯ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ನೋಕಿಯಾ ಸಂಸ್ಥೆಯು ಹಲವು ಆಂಡ್ರಾಯ್ಡ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆ ಪೈಕಿ ಎಂಟ್ರಿ ಪ್ರೈಸ್ ಟ್ಯಾಗ್ ವಿಭಾಗದಲ್ಲಿ ಕಾಣಿಸಿಕೊಂಡಿರುವ ನೋಕಿಯಾ C12 ಸ್ಮಾರ್ಟ್‌ಫೋನ್ ಗ್ರಾಹಕರ ಗಮನ ಸೆಳೆದಿದೆ. ಈ ಮೊಬೈಲ್ ಇದೀಗ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಭರ್ಜರಿ ಡಿಸ್ಕೌಂಟ್ ಪಡೆದಿದ್ದು, ಮತ್ತಷ್ಟು ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ.
ಹೌದು, ಇ ಕಾಮರ್ಸ್ ದೈತ್ಯ ಅಮೆಜಾನ್ ತಾಣದಲ್ಲಿ ನೋಕಿಯಾ C12 ಫೋನ್ 16% ರಷ್ಟು ಡಿಸ್ಕೌಂಟ್ ಪಡೆದಿದೆ. ಈ ಫೋನ್ ಬೆಲೆ 7,499ರೂ. ಆಗಿದ್ದು, ಗ್ರಾಹಕರು 6,299ರೂ. ಗಳ ದರದಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ನೋ ಕಾಸ್ಟ್ ಇಎಮ್‌ಐ ಕೊಡುಗೆಯ ಆಯ್ಕೆಗಳು, ಅಲ್ಲದೇ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಸೌಲಭ್ಯ ಸಹ ಲಭ್ಯ.

ಇನ್ನು ನೋಕಿಯಾ C12 ಫೋನ್ ಸಿಂಗಲ್ ಕ್ಯಾಮೆರಾ ರಚನೆ ಪಡೆದಿದ್ದು, ಆಕ್ಟಾ ಕೋರ್ UniSoC SC9863A ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ ಈ ಫೋನ್ 2GB + 64GB ಆಂತರೀಕ ಸ್ಟೋರೇಜ್ ಸೌಲಭ್ಯ ಪಡೆದಿದೆ. ಇನ್ನುಳಿದಂತೆ ನೋಕಿಯಾ C12 ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ನೋಕಿಯಾ C12 ಡಿಸ್‌ಪ್ಲೇ ಮತ್ತು ಪ್ರೊಸೆಸರ್ ಮಾಹಿತಿ ಇಲ್ಲಿದೆ : ನೋಕಿಯಾ C12 ಮೊಬೈಲ್ ಫೋನ್ 6.3 ಇಂಚಿನ HD+ ಡಿಸ್‌ಪ್ಲೇ ಅನ್ನು ಪಡೆದಿದ್ದು, 20:9 ರ ಆಕಾರ ಅನುಪಾತವನ್ನು ಇದು ಒಳಗೊಂಡಿದೆ. ಹಾಗೆಯೇ ಈ ಮೊಬೈಲ್ 720 × 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, ಜೊತೆಗೆ ಈ ಡಿಸ್‌ಪ್ಲೇಯು 20:9 ಅನುಪಾತವನ್ನು ಹೊಂದಿದೆ. ಈ ಮೊಬೈಲ್ ಆಕ್ಟಾ ಕೋರ್ ಆಕ್ಟಾ ಕೋರ್ UniSoC SC9863A ಪ್ರೊಸೆಸರ್ ನಲ್ಲಿ ಕೆಲಸ ಮಾಡುತ್ತದೆ.
ನೋಕಿಯಾ C12 ಮೆಮೊರಿ ಮತ್ತು ಓಎಸ್ ಮಾಹಿತಿ : ನೋಕಿಯಾ C12 ಮೊಬೈಲ್ ಸಿಂಗಲ್ ವೇರಿಯಂಟ್ ಆಯ್ಕೆ ಪಡೆದಿದ್ದು, ಅದು 2GB + 64GB ಸ್ಟೋರೇಜ್ ಸಾಮರ್ಥ್ಯದಲ್ಲಿದೆ. ಇನ್ನು ಬಳಕೆದಾರರು ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 256 GB ವರೆಗೆ ವಿಸ್ತರಿಸಲು ಅವಕಾಶ ಲಭ್ಯ ಇದೆ. ಹಾಗೆಯೇ ಈ ಫೋನ್ ಗೂಗಲ್ ನ ಆಂಡ್ರಾಯ್ಡ್ 12 ಗೋ ಎಡಿಷನ್ (Android 11 Go) ಆವೃತ್ತಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ನ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
ನೋಕಿಯಾ C12 ಕ್ಯಾಮೆರಾ ಮತ್ತು ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ : ನೋಕಿಯಾ C12 ಸ್ಮಾರ್ಟ್‌ಫೋನ್ ಸಿಂಗಲ್ ಕ್ಯಾಮೆರಾ ರಚನೆ ಯನ್ನು ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅದೇ ರೀತಿ ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದ್ದು, LED ಫ್ಲ್ಯಾಶ್ ಸೌಲಭ್ಯ ವನ್ನು ಲಭ್ಯ ಮಾಡಲಾಗಿದೆ. ಅಂದಹಾಗೆ ಈ ಮೊಬೈಲ್ 3000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 5W ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ.
ನೋಕಿಯಾ C12 ಇತರೆ ಸೌಲಭ್ಯಗಳ ಮಾಹಿತಿ ಇಲ್ಲಿದೆ : ನೋಕಿಯಾ C12 ಮೊಬೈಲ್ IP52 ರೇಟಿಂಗ್ ಸ್ಲ್ಯಾಶ್ ರೆಸಿಸ್ಟೆನ್ಸ್ ಸೌಲಭ್ಯ ಪಡೆದಿದ್ದು, 160.6 × 74.3 × 8.75 ಎಂಎಂ ಸುತ್ತಳತೆ ಪಡೆದುಕೊಂಡಿದೆ. ಇದರ ಜೊತೆಗೆ ಡ್ಯುಯಲ್ ಸಿಮ್, 4G, ವೈಫೈ 802.11 b/g/n, ಬ್ಲೂಟೂತ್ 5.2, ಜಿಪಿಎಸ್ ಸೌಲಭ್ಯ ಸಹ ಪಡೆದುಕೊಂಡಿದೆ. ಅಲ್ಲದೇ ಫೇಸ್ ಅನ್‌ಲಾಕ್ ಆಯ್ಕೆ ಕೂಡಾ ಒಳಗೊಂಡಿದೆ.
ನೋಕಿಯಾ C12 ಮೆಮೊರಿ ಹಾಗೂ ಕಲರ್ ಆಯ್ಕೆ : ನೋಕಿಯಾ C12 ಮೊಬೈಲ್ 2GB + 64 GB ಸ್ಟೋರೇಜ್ ಸಿಂಗಲ್ ವೇರಿಯಂಟ್ ಆಯ್ಕೆ ಒಳಗೊಂಡಿದ್ದು, 2GB ವರ್ಚುವಲ್ RAM ಸೌಲಭ್ಯ ಸಹ ಲಭ್ಯವಾಗಲಿದೆ. ಇನ್ನು ಈ ಮೊಬೈಲ್ ಅನ್ನು ಗ್ರಾಹಕರು ಡಾರ್ಕ್ ಸಯಾನ್, ಲೈಟ್ ಮಿಂಟ್ ಮತ್ತು ಚಾರ್ಕೋಲ್ ಕಲರ್ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications








