ಅಗ್ಗದ ಬೆಲೆಗೆ ಸ್ಟೈಲಿಶ್ ಸ್ಮಾರ್ಟ್‌ಫೋನ್ ಬೇಕಿದ್ರೆ, ಈ ಆಫರ್ ನಿಮಗಾಗಿ!
ಅಮೆಜಾನ್ ಪ್ಲಾಟ್‌ಫಾರ್ಮ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಬಹುತೇಕ ಎಲ್ಲ ಸಂಸ್ಥೆಗಳ ಫೋನ್‌ಗಳು ರಿಯಾಯಿತಿ ಪಡೆದಿವೆ. ಅಗ್ಗದ ಬೆಲೆ ಫೋನ್‌ಗಳಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಐಟೆಲ್ ಕಂಪನಿಯ ಫೋನ್‌ಗಳು ಕೂಡಾ ಸಖತ್ ಆಫರ್ ಪಡೆದಿವೆ. ಆ ಪೈಕಿ ಐಟೆಲ್ S23 ಸ್ಮಾರ್ಟ್‌ಫೋನ್ ಗ್ರಾಹಕರು ಹಿಂತಿರುಗಿ ನೋಡುವಂತಹ ಕೊಡುಗೆ ಪಡೆದಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಐಟೆಲ್ S23 ಸ್ಮಾರ್ಟ್‌ಫೋನ್ ಶೇ. 21% ರಷ್ಟು ಡಿಸ್ಕೌಂಟ್ ಪಡೆದಿದ್ದು, 8,699ರೂ. ಗಳ ಬೆಲೆಯಲ್ಲಿ ಗ್ರಾಹಕರು ಖರೀದಿ ಮಾಡಬಹುದು. 128 GB ಸ್ಟೋರೇಜ್ ವೇರಿಯಂಟ್ ಫೋನ್ ಅನ್ನು ಆಯ್ದ ಬ್ಯಾಂಕ್ ಕೊಡುಗೆ, ಎಕ್ಸ್‌ಚೇಂಜ್ ಆಫರ್ ಹಾಗೂ ಇತರೆ ಕೊಡುಗೆ ಒಳಗೊಂಡಂತೆ 7829ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದು.

ಅಂದಹಾಗೆ ಈ ಮೊಬೈಲ್ ಯುನಿಸೊಕ್ T606 SoC ಪ್ರೊಸೆಸರ್ ಪವರ್ ಪಡೆದಿದ್ದು, 16GB + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಇದರ ಜೊತೆಗೆ ಮೊದಲ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಸಹ ಹೊಂದಿದೆ. ಹಾಗಾದರೇ ಐಟೆಲ್ S23 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸದ ಮಾಹಿತಿ
ಐಟೆಲ್ S23 ಫೋನ್ 6.6 ಇಂಚಿನ HD+ ಐಪಿಎಸ್ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ 720 x 1,612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಪಡೆದುಕೊಂಡಿದೆ.
ಪ್ರೊಸೆಸರ್ ಪವರ್ ಎಷ್ಟಿದೆ
ಐಟೆಲ್ S23 ಫೋನ್ ಆಕ್ಟಾ ಕೋರ್ 12nm ಯುನಿಸೊಕ್ T606 SoC ಪ್ರೊಸೆಸರ್ ಪವರ್ ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 128 GB ಆಂತರೀಕ ಸ್ಟೊರೇಜ್ ವೇರಿಯಂಟ್ ಅನ್ನು ಹೊಂದಿದ್ದು, ಇದಲ್ಲದೆ ವರ್ಚುವಲ್ RAM ಬಳಸುವುದಕ್ಕೆ ಕೂಡ ಅವಕಾಶ ನೀಡಿದ್ದು, ಇದರಿಂದ ಆನ್‌ಬೋರ್ಡ್ ಮೆಮೊರಿಯನ್ನು 16 GB ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ಸೆನ್ಸಾರ್ ಎಷ್ಟಿದೆ
ಐಟೆಲ್ S23 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಅನ್ನು ಹೊಂದಿದೆ. ಇದರ ಜೊತೆಗೆ ಈ ಮೊಬೈಲ್ LED ಫ್ಲ್ಯಾಷ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದಲ್ಲದೆ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಕೂಡಾ ಹೊಂದಿದೆ. ಹಿಂಬದಿಯ ಕ್ಯಾಮೆರಾ ರಚನೆ ವೃತ್ತಾಕಾರದಲ್ಲಿ ಇದೆ.
ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ ಸಾಮರ್ಥ್ಯ
ಐಟೆಲ್ S23 ಮೊಬೈಲ್ 10W ವೈರ್ಡ್ ಚಾರ್ಜಿಂಗ್‌ಗೆ ಸಪೋರ್ಟ್ ಒದಗಿಸುವ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 15 ಗಂಟೆಗಳ ಬ್ಯಾಟರಿ ಅವಧಿ ಹೊಂದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಈ ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.
ಮೆಮೊರಿ ಮತ್ತು ಕಲರ್ ಆಯ್ಕೆ ಹೇಗಿದೆ
ಐಟೆಲ್ S23 ಮೊಬೈಲ್ 8 GB RAM + 128 GB ಸ್ಟೋರೇಜ್ ಹೊಂದಿದೆ. ಇದಲ್ಲದೇ ಈ ಫೋನ್ ಅನ್ನು ಗ್ರಾಹಕರು ಮಿಸ್ಟರಿ ವೈಟ್ ಮತ್ತು ಸ್ಟಾರಿ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿ ಮಾಡಲು ಅವಕಾಶ ಇದೆ.


Click it and Unblock the Notifications








