ಫ್ಲಿಪ್‌ಕಾರ್ಟ್‌ನಲ್ಲಿ ಒಪ್ಪೋ A77s ಫೋನ್‌ಗೆ ಭರ್ಜರಿ ಡಿಸ್ಕೌಂಟ್; ಆಫರ್ ಬೆಲೆ ಎಷ್ಟು!?
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಫೋನ್‌ಗಳು ಭಾರೀ ಡಿಸ್ಕೌಂಟ್‌ನಲ್ಲಿ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಆಗುತ್ತಿವೆ. ಅದರಂತೆ ಈ ಹಿಂದೆ ಒಪ್ಪೋ A55 ಫೋನ್‌ಗೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಲಾಗಿತ್ತು, ಇದೀಗ ಒಪ್ಪೋ A77s ಫೋನ್‌ಗೆ ಬೊಂಬಾಟ್ ರಿಯಾಯಿತಿ ಘೋಷಣೆ ಮಾಡಲಾಗಿದೆ.
ಹೌದು, ಒಪ್ಪೋ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈಗಾಗಲೇ ಒಪ್ಪೋ ಸುಧಾರಿತ ಫೀಚರ್ಸ್‌ಗಳೊಂದಿಗೆ ವಿವಿಧ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಅದರಲ್ಲಿ ಒಪ್ಪೋ A77s (Oppo A77s) ಸ್ಮಾರ್ಟ್‌ಫೋನ್ ಸಹ ಒಂದಾಗಿದೆ. ಈ ನಡುವೆ ನೀವು ಫ್ಲಿಪ್‌ಕಾರ್ಟ್ ಮೂಲಕ ಈ ಫೋನ್ ಅನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ಫೋನ್‌ಗೆ ಏನೆಲ್ಲಾ ಆಫರ್ ಇದೆ ಎಂಬುದನ್ನು ತಿಳಿಸಿಕೊಡಲಾಗಿದೆ ಓದಿರಿ.

ಒಪ್ಪೋ A77s ಸ್ಮಾರ್ಟ್‌ಫೋನ್‌ಗೆ ಭಾರೀ ರಿಯಾಯಿತಿ
ಪ್ರಮುಖ ಇ ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ ಮೂಲ ಬೆಲೆಗಿಂತ ಕಡಿಮೆ ಬೆಲೆ ನಿಗದಿ ಮಾಡಲಾಗಿದ್ದು, ಈ ಮೂಲಕ ನೀವು 17,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಅದಾಗ್ಯೂ ಇನ್ನೂ ಹೆಚ್ಚಿನ ಡಿಸ್ಕೌಂಟ್ ವಿನಿಮಯ ಆಫರ್ ಹಾಗೂ ಕೆಲವು ಬ್ಯಾಂಕ್ ಕಾರ್ಡ್‌ಗಳ ಮೇಲೆ ಲಭ್ಯವಾಗಲಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ 22,999 ರೂ. ಗಳ ಆರಂಭಿಕ ಬೆಲೆಯೊಂದಿಗೆ ಈ ಫೋನ್ ಲಾಂಚ್ ಆಗಿತ್ತು.
ಒಪ್ಪೋ A77s ಫೋನ್‌ಗೆ ಬ್ಯಾಂಕ್ ಕೊಡುಗೆಗಳೇನು?
ಫ್ಲಿಪ್‌ಕಾರ್ಟ್‌ನಲ್ಲಿ 27% ರಿಯಾಯಿತಿ ಪಡೆದುಕೊಂಡು ಮಾರಾಟ ಆಗುತ್ತಿರುವ ಈ ಫೋನ್ ಬ್ಯಾಂಕ್ ಆಫರ್ ಹೊಂದಿದೆ. ಅದರಂತೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ ಈ ಫೋನ್ ಮೇಲೆ 1,500ರೂ. ಗಳ ರಿಯಾಯಿತಿ ಲಭ್ಯವಾಗಲಿದೆ. ಜೊತೆಗೆ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಈ ಫೋನ್ ಖರೀದಿಸಿದರೂ 1,500ರೂ. ರಿಯಾಯಿತಿ ಲಭ್ಯವಾಗಲಿದೆ.
ಇದಿಷ್ಟೇ ಅಲ್ಲದೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ನಲ್ಲಿಯೂ 1,500ರೂ. ಗಳ ರಿಯಾಯಿತಿ ಸಿಗಲಿದೆ. ಇದರೊಂದಿಗೆ ನೀವು ಪೇಟಿಎಂ ವಾಲೆಟ್‌ನಲ್ಲಿ ಈ ಒಪ್ಪೋ A77s ಫೋನ್ ಅನ್ನು ಕೊಂಡುಕೊಂಡರೆ 100ರೂ. ಗಳ ತ್ವರಿತ ರಿಯಾಯಿತಿ ಸಿಗಲಿದೆ. ಇದೆಲ್ಲದರ ಹೊರತಾಗಿ ನೀವು ವಿನಿಮಯ ಆಫರ್ ಮೂಲಕವೂ ಕಡಿಮೆ ದರದಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.

ಒಪ್ಪೋ A77s ಫೋನ್‌ಗೆ ಇರುವ ವಿನಿಮಯ ಆಫರ್ ಏನು?
ಒಪ್ಪೋ A77s ಫೋನ್ ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಬೇಕು ಎಂದುಕೊಂಡರೆ ನೀವು ವಿನಿಮಯ ಆಫರ್ ಬಳಕೆ ಮಾಡಿಕೊಳ್ಳಬಹುದು. ಅಂದರೆ ನಿಮ್ಮ ಹಳೆಯ ಉತ್ತಮ ಫೋನ್ ಅನ್ನು ಮಾರಾಟ ಮಾಡುವ ಮೂಲಕ 16,000ರೂ. ಗಳ ರಿಯಾಯಿತಿ ಲಭ್ಯವಾಗಲಿದ್ದು, ಈ ಮೂಲಕ ಕೇವಲ ಎರಡು ಸಾವಿರ ಹಣ ನೀಡಿ ಫೋನ್ ಖರೀದಿ ಮಾಡಬಹುದು.
ಒಪ್ಪೋ A77s ಫೀಚರ್ಸ್
ಒಪ್ಪೋ A77s ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 90Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಹಾಗೆಯೇ ಇದು 1,612x720 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಫೋನ್ ಸ್ನಾಪ್‌ಡ್ರಾಗನ್ 680SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಆಂಡ್ರಾಯ್ಡ್ 12 ಆಧಾರಿತ ಕಲರ್ ಓಎಸ್ 12.1 ನಲ್ಲಿ ರನ್ ಆಗಲಿದೆ. ಇದರೊಂದಿಗೆ 8GB RAM ಮತ್ತು 128GB ಇಂಟರ್ ಸ್ಟೋರೇಜ್ ನಲ್ಲಿ ಕಾಣಿಸಿಕೊಂಡಿದೆ.

ಇನ್ನು ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಮುಖ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಕ್ಯಾಮೆರಾ ಆಯ್ಕೆ ಹೊಂದಿದ್ದು, ಸೆಲ್ಪಿಗಾಗಿ 8ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 33W ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.


Click it and Unblock the Notifications








