Home
ಸುದ್ದಿಜಾಲ

ಐಫೋನ್‌ 15 ಪ್ರೊ, 15 ಪ್ರೊ ಮ್ಯಾಕ್ಸ್‌ ಫೋನ್‌ಗಳ ಬೆಲೆ ಭಾರತದಲ್ಲಿ ಎಷ್ಟು?, ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌ !

ಇಡೀ ಜಗತ್ತೇ ಕಾತುರಂದಿಂದ ಕಾಯುತ್ತಿದ್ದ ಐಫೋನ್‌ಗಳು ಕೊನೆಗೂ ಲಾಂಚ್‌ ಆಗಿವೆ. ಅಂದರೆ ಆಪಲ್‌ನ ವಂಡರ್‌ಲಸ್ಟ್ ಈವೆಂಟ್‌ನಲ್ಲಿ (apple wanderlust event 2023) ಐಫೋನ್‌ 15 ಸರಣಿಯ ಫೋನ್‌ಗಳನ್ನು ಲಾಂಚ್ ಮಾಡಲಾಗಿದೆ. ಈ ಫೋನ್‌ಗಳಲ್ಲಿ ಪ್ರಮುಖವಾಗಿ ಐಫೋನ್‌ 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್‌ (iPhone 15 Pro, 15 Pro Max) ಗ್ರಾಹಕರ ಗಮನಸೆಳೆದಿವೆ.

ಹೌದು, ಪ್ರೊ ಮಾದರಿಗಳು ವಿಶೇಷ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುವುದು ಸಾಮಾನ್ಯ ವಿಷಯ. ಈ ಐಫೋನ್‌ನ ಪ್ರೊ ಮಾದರಿಗಳು ಸಹ ಅದೇ ರೀತಿಯ ವಿಶೇಷ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದ್ದು, ಅದಕ್ಕೆ ತಕ್ಕನಾದ ಬೆಲೆಯನ್ನೂ ಹೊಂದಿವೆ. ಹಾಗಿದ್ರೆ, ಎರಡೂ ಪ್ರೊ ವೇರಿಯಂಟ್‌ನ ಬೆಲೆ ಹಾಗೂ ಇನ್ನಿತರೆ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್‌ 15 ಪ್ರೊ, 15 ಪ್ರೊ ಮ್ಯಾಕ್ಸ್‌ ಫೋನ್‌ಗಳ ಬೆಲೆ ಭಾರತದಲ್ಲಿ ಎಷ್ಟು?

ಆಪಲ್ ಐಫೋನ್‌ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್‌ ಬೆಲೆ ವಿವರ: ಭಾರತದಲ್ಲಿ ಹೆಚ್ಚಿನ ಬೆಲೆ ಇರುವ ಫೋನ್‌ಗಳನ್ನು ಬಹಳಷ್ಟು ಮಂದಿ ಖರೀದಿ ಮಾಡಲು ಮುಂದಾಗುವುದಿಲ್ಲ. ಆದಾಗ್ಯೂ ಭಾರತೀಯರ ನಾಡಿಮಿಡಿತ ಅರ್ಥ ಮಾಡಿಕೊಂಡಿರುವ ಆಪಲ್‌ ಈ ಫೋನ್‌ಗಳಿಗೆ ವಿಶೇಷ ಬೆಲೆ ನಿಗದಿ ಮಾಡಿದೆ. ಅಂದರೆ ಐಫೋನ್‌ 15 ಪ್ರೊ ಸಾಮಾನ್ಯ ವೇರಿಯಂಟ್‌ಗೆ 1,39,900ರೂ. ಇದ್ರೆ ಪ್ರೊ ಮ್ಯಾಕ್ಸ್‌ 1,59,900ರೂ.ಗಳ ಬೆಲೆ ಹೊಂದಿದೆ.

ಇನ್ನು ಸ್ಟೋರೇಜ್‌ ಆಧಾರದಲ್ಲಿ ಬೆಲೆ ವಿವರ ಗಮನಿಸುವುದಾದರೆ ಐಫೋನ್ 15 ಪ್ರೊ ಫೋನ್‌ನ 128GB ವೇರಿಯಂಟ್‌ಗೆ 1,34,900ರೂ.ಗಳ ಬೆಲೆ ಇದ್ದು, 256GB ವೇರಿಯಂಟ್‌ಗೆ 1,44,900ರೂ.ಗಳು ಹಾಗೂ 512GB ವೇರಿಯಂಟ್‌ಗೆ 1,64,900ರೂ., 1TB ವೇರಿಯಂಟ್‌ಗೆ 1,84,900 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಮೂಲಕ ಗ್ರಾಹಕರು ಅವರ ಅಗತ್ಯಕ್ಕೆ ತಕ್ಕಂತೆ ಖರೀದಿ ಮಾಡಬಹುದಾಗಿದೆ.

ಹಾಗೆಯೇ ಐಫೋನ್ 15 ಪ್ರೊ ಮ್ಯಾಕ್ಸ್‌ ವಿಚಾರಕ್ಕೆ ಬಂದರೆ 256GB ವೇರಿಯಂಟ್‌ಗೆ 1,59,900ರೂ.ಗಳನ್ನು ನಿಗದಿ ಮಾಡಲಾಗಿದೆ. ಜೊತೆಗೆ 512GB ವೇರಿಯಂಟ್‌ಗೆ 1,79,900 ರೂ.ಗಳು ಮತ್ತು 1TB ವೇರಿಯಂಟ್‌ಗೆ 1,99,900ರೂ.ಗಳ ಬೆಲೆಯನ್ನು ನಿಗದಿ ಮಾಡಲಾಗಿದೆ. ಈ ಫೋನ್‌ಗಳ ಮಾರಾಟ ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗುತ್ತದೆ. ಆದಾಗ್ಯೂ ತಕ್ಷಣವೇ ನಿಮಗೆ ಈ ಫೋನ್‌ ಸಿಗಬೇಕು ಎಂದರೆ ಸೆಪ್ಟೆಂಬರ್ 15 ರಿಂದ ಪೂರ್ವ ಬುಕಿಂಗ್‌ ಆಯ್ಕೆ ನೀಡಲಾಗಿದೆ ಗಮನಿಸಿ. ಫೋನ್‌ಗಳು ಬ್ಲ್ಯಾಕ್ ಟೈಟಾನಿಯಂ, ಬ್ಲೂ ಟೈಟಾನಿಯಂ, ನ್ಯಾಚುರಲ್ ಟೈಟಾನಿಯಂ, ವೈಟ್ ಟೈಟಾನಿಯಂ ಫಿನಿಶ್‌ಗಳಲ್ಲಿ ಲಭ್ಯವಿವೆ.

ಆಪಲ್‌ ಐಫೋನ್ 15 ಪ್ರೊ ಸರಣಿ ಫೀಚರ್ಸ್‌: 15 ಪ್ರೊ ಫೋನ್ 6.1 ಇಂಚಿನ OLED ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಐಫೋನ್ 15 ಪ್ರೊ ಮ್ಯಾಕ್ಸ್‌ 6.7 ಇಂಚಿನ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಂಡಿದೆ. ಇವುಗಳ ವಿಶೇಷ ಏನೆಂದರೆ ಈ ಎರಡೂ ಫೋನ್‌ಗಳು ಸಹ ಸ್ಟೇನ್‌ಲೆಸ್ ಸ್ಟೀಲ್ ಬದಲಿಗೆ ಟೈಟಾನಿಯಂ ಫ್ರೇಮ್‌ ಆಯ್ಕೆ ಪಡೆದುಕೊಂಡಿದ್ದು, ಹಿಂದಿನ ಪೀಳಿಗೆಗಿಂತ 10 ಪ್ರತಿಶತದಷ್ಟು ಹಗುರವಾಗಿದೆ.

ಇದರೊಂದಿಗೆ ಈ ಎರಡೂ ಫೋನ್‌ಗಳು ಸಹ A17 ಪ್ರೊ ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದ್ದು, ಈ ವಿಭಾಗದಲ್ಲಿ ಸಹ ನಿಮ್ಮ ನಿರೀಕ್ಷೆಗೂ ಮೀರಿದ ಕಾರ್ಯಕ್ಷಮತೆ ಲಭ್ಯ ಇರಲಿದೆ. ಅಷ್ಟೇ ಅಲ್ಲದೆ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ ಈ ಫೋನ್‌ಗಳು IP68 ರೇಟಿಂಗ್‌ ಆಯ್ಕೆ ಪಡೆದುಕೊಂಡಿವೆ. ಮುಖ್ಯವಾಗಿ ಪ್ರೊ ಮಾದರಿಗಳು ಮ್ಯೂಟ್ ಸ್ವಿಚ್ ಬದಲಿಗೆ ಹೊಸ ಆಕ್ಷನ್ ಬಟನ್‌ ಅನ್ನು ಹೊಂದಿವೆ.

ಇನ್ನು ಕ್ಯಾಮೆರಾ ವಿಚಾರಕ್ಕೆ ಬಂದರೆ ಐಫೋನ್ 15 ಪ್ರೊ ಫೋನ್ 48MP ವೈಡ್ ಆಂಗಲ್ ಕ್ಯಾಮೆರಾ, 12MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 12MP ಟೆಲಿಫೋಟೋ ಲೆನ್ಸ್‌ನೊಂದಿಗೆ ಕಾಣಿಸಿಕೊಂಡಿವೆ. ಆದರೆ ಪ್ರೊ ಮ್ಯಾಕ್ಸ್ ಮಾದರಿಯಲ್ಲಿ ಟೆಲಿಫೋಟೋ ಲೆನ್ಸ್ ಬದಲಿಗೆ, 5x ಜೂಮ್ ಇರುವ 12MP ಪೆರಿಸ್ಕೋಪ್ ಲೆನ್ಸ್ ಇದೆ. ಇವೆರಡೂ 12MP ಮುಂಭಾಗದ ಕ್ಯಾಮೆರಾದೊಂದಿಗೆ ಲಭ್ಯ ಇವೆ.

ಐಫೋನ್‌ 15 ಪ್ರೊ, 15 ಪ್ರೊ ಮ್ಯಾಕ್ಸ್‌ ಫೋನ್‌ಗಳ ಬೆಲೆ ಭಾರತದಲ್ಲಿ ಎಷ್ಟು?

ಉಳಿದಂತೆ ಐಫೋನ್‌ನ ಎಲ್ಲಾ ಫೋನ್‌ಗಳು ಟೈಪ್-ಸಿ ಪೋರ್ಟ್‌ನೊಂದಿಗೆ ಕಾಣಿಸಿಕೊಂಡಿವೆ. ಇದರಲ್ಲಿ ಪ್ರೊ ಮಾದರಿಗಳು USB 3.0 ವೇಗವನ್ನು ನೀಡಲಿದ್ದು, ಆಪ್ಟಿಕಲ್ ಕೇಬಲ್‌ನೊಂದಿಗೆ 10Gbps ಡೇಟಾ ವರ್ಗಾವಣೆ ವೇಗವನ್ನು ನೀಡಲಿವೆ. ಹಾಗೆಯೇ ಬ್ಯಾಟರಿಯ ವಿಚಾರಕ್ಕೆ ಬಂದರೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಪ್ರೊ ಮಾದರಿಯು ಪೂರ್ಣ ದಿನದ ಬ್ಯಾಕಪ್‌ ನೀಡಲಿದೆ ಮತ್ತು ಪ್ರೊ ಮ್ಯಾಕ್ಸ್‌ ಸಹ ಇದಕ್ಕಿಂತ ಹೆಚ್ಚಿನ ಬ್ಯಾಟರಿ ಸಾಮರ್ಥ್ಯ ಹೊಂದಿರಲಿದೆ ಎಂದು ಹೇಳಲಾಗಿದೆ.

Best Mobiles in India

English summary
Apple iPhone 15 Pro and Pro Max price details revealed. 1,39,900 for iPhone 15 Pro regular variant. The Pro Max is priced at Rs 1,59,900.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+