ಮೋದಿ ಅಪ್ಲಿಕೇಶನ್: ಪ್ರಧಾನಿ ಜೊತೆ ನೇರ ಮುಖಾಮುಖಿ

By Shwetha
|

ನರೇಂದ್ರ ಮೋದಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ. ಮೋದಿಯವರ ತಿಂಗಳ ಕಾರ್ಯಕ್ರಮವಾದ 'ಮನ್ ಕೀ ಬಾತ್' ನಲ್ಲಿ ಪ್ರಧಾನಿಯವರು ತಮ್ಮ ಅಪ್ಲಿಕೇಶನ್ ಬಗ್ಗೆ ಮಾಹಿತಿಯನ್ನು ನೀಡಿದ್ದು ಧನಾತ್ಮಕವಾದ ನೆಲೆಯಲ್ಲಿ ದೇಶವನ್ನು ಮುನ್ನಡೆಸಬಹುದಾದ ಯೋಚನೆಯನ್ನು ಈ ಅಪ್ಲಿಕೇಶನ್ ಮೂಲಕ ನಿರ್ವಹಿಸಿಕೊಳ್ಳಬಹುದು ಎಂಬುದಾಗಿ ಪ್ರಧಾನಿಯವರು ತಿಳಿಸಿದ್ದಾರೆ.

ಓದಿರಿ: ಆನ್‌ಲೈನ್‌ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು

ಕೆಳಗಿನ ಸ್ಲೈಡರ್‌ನಲ್ಲಿ ಅಪ್ಲಿಕೇಶನ್ ಕುರಿತ ಮಾಹಿತಿಯನ್ನು ನಾವು ನೀಡುತ್ತಿದ್ದು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ವಿವರ ಮಾಹಿತಿ ಇಲ್ಲಿದೆ.

ನರೇಂದ್ರ ಮೋದಿ ಅಪ್ಲಿಕೇಶನ್

ನರೇಂದ್ರ ಮೋದಿ ಅಪ್ಲಿಕೇಶನ್

ನರೇಂದ್ರ ಮೋದಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ದೇಶದ ಜನರು ಮೋದಿಯವರೊಂದಿಗೆ ಸಂಪರ್ಕದಲ್ಲಿರಬಹುದಾಗಿದೆ.

125 ಕೋಟಿ ನಾಗರೀಕರನ್ನು ತಲುಪುವ ಯೋಜನೆ

125 ಕೋಟಿ ನಾಗರೀಕರನ್ನು ತಲುಪುವ ಯೋಜನೆ

125 ಕೋಟಿ ನಾಗರೀಕರನ್ನು ತಲುಪುವ ಯೋಜನೆಯನ್ನು ನಾನು ಹೊಂದಿದ್ದು, ನಿಮ್ಮ ನೆರವಿಲ್ಲದೆ ಇದು ಅಸಾಧ್ಯವಾದುದು ಎಂಬುದು ಮೋದಿಯವರ ಮಾತಾಗಿದೆ.

ಟ್ವೀಟ್

ಟ್ವೀಟ್

ಟ್ವೀಟ್ ಮೂಲಕ ಜೂನ್‌ನಲ್ಲಿಯೇ ಈ ಅಪ್ಲಿಕೇಶನ್ ಲಾಂಚ್ ಕುರಿತ ಮಾಹಿತಿಯನ್ನು ಮೋದಿಯವರು ನೀಡಿದ್ದಾರೆ.

ಅಧಿಕೃತ ಘೋಷಣೆ

ಅಧಿಕೃತ ಘೋಷಣೆ

ನರೇಂದ್ರ ಮೋದಿ ಮೊಬೈಲ್ ಆಪ್ ಲಾಂಚ್ಡ್ ಎಂಬ ಅಧಿಕೃತ ಘೋಷಣೆಯನ್ನು ಮೋದಿಯವರು ಮಾಡಿದ್ದು, ಮೊಬೈಲ್‌ ಸಂಪರ್ಕದಲ್ಲಿದ್ದುಕೊಂಡೇ ಮೋದಿಯವರನ್ನು ಭೇಟಿಯಾಗಿ ಎಂಬ ಸಂದೇಶವನ್ನು ಇದು ಸಾರುತ್ತಿದೆ.

ನೇರ ಅಪ್‌ಡೇಟ್‌

ನೇರ ಅಪ್‌ಡೇಟ್‌

ಪ್ರಧಾನಿ ಕಚೇರಿಯಿಂದ ನೇರ ಅಪ್‌ಡೇಟ್‌ಗಳನ್ನು ಈ ಅಪ್ಲಿಕೇಶನ್ ತರುತ್ತಿದ್ದು, ಪ್ರಧಾನಿಯವರಿಂದ ನೇರವಾಗಿ ಇಮೇಲ್ ಮತ್ತು ಸಂದೇಶಗಳನ್ನು ಸ್ವೀಕರಿಸುವ ವ್ಯವಸ್ಥೆ ಕೂಡ ಇದರಲ್ಲಿದೆ.

ಕಷ್ಟಗಳ ಪರಿಹಾರ

ಕಷ್ಟಗಳ ಪರಿಹಾರ

ಅಪ್ಲಿಕೇಶನ್ ಮೂಲಕ ಜನರ ಸಾಕಷ್ಟು ಕಷ್ಟಗಳನ್ನು ಪರಿಹಾರ ಕೂಡ ಮಾಡಬಹುದಾಗಿದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.

Best Mobiles in India

English summary
Prime Minister Narendra Modi on Sunday invited people to connect with him by downloading the ‘Narendra Modi App’.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X