Home
ಸುದ್ದಿಜಾಲ

ಭಾರತದಲ್ಲಿ ಶೀಘ್ರವೇ 6G, ಸುಳಿವು ನೀಡಿದ ಮೋದಿ... ಇದರ ಸಾಮರ್ಥ್ಯ ತಿಳಿದ್ರೆ ನಿಬ್ಬೆರಗಾಗ್ತೀರಾ!

ಭಾರತ ಈಗಾಗಲೇ ಟೆಕ್ನಾಲಜಿ (Technology) ವಿಷಯದಲ್ಲಿ ದೊಡ್ಡ ಹೆಸರು ಮಾಡುತ್ತಿದೆ. ಅದರಲ್ಲೂ ಭಾರತದಲ್ಲಿ 5G ಕ್ರಾಂತಿ ಆರಂಭ ಆದಾಗಿನಿಂದ ಭಾರತವನ್ನು ಇತರೆ ರಾಷ್ಟ್ರಗಳು ನೋಡುವ ರೀತಿಯೇ ಬೇರೆ ಇದೆ. ಈ 5Gಯೇ ಇಷ್ಟೊಂದು ಸದ್ದು ಮಾಡುತ್ತಿರುವಾಗ 6G ಬಗ್ಗೆ ಮೋದಿ ಉಲ್ಲೇಖ ಮಾಡಿದ್ದು, ಈ ಮೂಲಕ ದೊಡ್ಡ ಸಂಚಲನ ಉಂಟಾಗಿದೆ.

ಹೌದು, ದೇಶದಲ್ಲಿ ಶೀಘ್ರದಲ್ಲೇ 6G ಯುಗ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸುಳಿವು ನೀಡಿದ್ದಾರೆ. ದೇಶದ 77ನೇ ಸ್ವಾತಂತ್ರ್ಯದಿನದಂದು ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದಲ್ಲದೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಿದೆ ಎಂದೂ ಸಹ ಉಲ್ಲೇಖ ಮಾಡಿದ್ದಾರೆ. ಹಾಗಿದ್ರೆ, ಏನಿದು 6G?, ಇದರ ಸಾಮರ್ಥ್ಯ ಹೇಗಿರಲಿದೆ?, ಯಾವಾಗ ಲಭ್ಯ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಶೀಘ್ರವೇ 6G, ಸುಳಿವು ನೀಡಿದ ಮೋದಿ...

ಭಾರತದಲ್ಲಿ 6G: ಭಾರತವು ಜಾಗತಿಕವಾಗಿ ಜನರಿಗೆ ಕೈಗೆಟುಕುವ ಮೊಬೈಲ್ಡೇಟಾ ಯೋಜನೆಗಳು ಮತ್ತು ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತದೆ. ಪ್ರಸ್ತುತ 5G ದೇಶದ ಬಹುತೇಕ ಭಾಗಗಳನ್ನು ತಲುಪಿದೆ. ದೇಶವು 5G ಯಿಂದ 6Gಗೆ ವೇಗವಾಗಿ ಚಲಿಸಲು ಮುಂದಾಗಿದ್ದು, ಈ ಮೂಲಕ ಜಾಗತಿಕವಾಗಿ ಇತರೆ ರಾಷ್ಟ್ರಗಳು ಭಾರತದ ಕಡೆ ತಿರುಗಿ ನೋಡುವಂತೆ ಆಗಲಿದೆ. ಈಗಾಗಲೇ 6G ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಮೋದಿ ಮಾತುಗಳಿಂದ ತಿಳಿದುಬಂದಿದೆ.

ದೇಶದ 700 ಜಿಲ್ಲೆಗಳಲ್ಲಿ ಪ್ರಸ್ತುತ 5G ಸೇವೆಗಳು ಲಭ್ಯವಿದೆ ಎಂದು ಕೆಲವು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಇನ್ನು ದೇಶ ಮತ್ತು ಟೆಲಿಕಾಂ ಉದ್ಯಮದ ಸೌಜನ್ಯದಿಂದ 130 ಕೋಟಿ ಭಾರತೀಯರು 5G ರೂಪದಲ್ಲಿ ಗಮನಾರ್ಹ ಕೊಡುಗೆಯನ್ನು ಪಡೆಯುತ್ತಿದ್ದಾರೆ ಎಂದು ಕಳೆದ ವರ್ಷ 5G ಸೇವೆಗಳ ಪ್ರಾರಂಭದ ಸಂದರ್ಭದಲ್ಲಿ ಪ್ರಧಾನಿ ಈ ರೀತಿ ಮಾಹಿತಿ ನೀಡಿದ್ದರು. ಜೊತೆಗೆ 5G ಅಂತ್ಯವಿಲ್ಲದ ಅವಕಾಶಗಳ ಆರಂಭವಾಗಿದೆ ಎಂದು ಹೇಳಿಕೆ ನೀಡಿದ್ದನ್ನು ವೇಳೆ ನೆನಪಿಸಿಕೊಳ್ಳಬಹುದು.

6G ಸಾಮರ್ಥ್ಯ ಏನು?: 5G ಯೇ ಕಣ್ಣು ಮಿಟುಕಿಸುವುದರ ಒಳಗಾಗಿ ಬೇಕಾದ ಮಾಹಿತಿ ನೀಡುತ್ತದೆ. ಅಂದ ಮೇಲೆ 6G ಯಾವ ರೀತಿ ಇರಲಿದೆ ಎಂದು ನೀವೇ ಊಹಿಸಿಕೊಳ್ಳಿ. ಈ 6G 5 ನೇ ಪೀಳಿಗೆಯ ನಂತರದ ಪೀಳಿಗೆಯನ್ನು ಸೂಚಿಸಲಿದ್ದು, ಪ್ರಸ್ತುತ ಲಭ್ಯವಿರುವ 5G ಸೇವೆಗಳಿಗಿಂತ 6G ಇಂಟರ್ನೆಟ್ ಸೇವೆಯನ್ನು ಹಲವು ಪಟ್ಟು ವೇಗವಾಗಿ ಒದಗಿಸಬಹುದು. 5G ಪ್ರತಿ ಸೆಕೆಂಡಿಗೆ 10 ಗಿಗಾಬಿಟ್‌ಗಳ ವೇಗವನ್ನು ನೀಡಲಿದೆ ಅದೇ ರೀತಿ ಈ 6G ಅದೇ ಸಮಯದಲ್ಲಿ 1 ಟೆರಾಬಿಟ್‌ನವರೆಗೆ ವೇಗವನ್ನು ಸಾಧಿಸುವ ನಿರೀಕ್ಷೆಯಿದೆ.

ಅದರಲ್ಲೂ ಪ್ರಮುಖವಾಗಿ ಹಾಗೂ ಸರಳವಾಗಿ ಹೇಳುವುದಾದರೆ 100 ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಲು ಒಂದು ನಿಮಿಷ ಸಾಕು ಎಂದು ನಿರೀಕ್ಷಿಸಲಾಗಿದೆ. ಡಿಜಿಟಲ್ ಜಗತ್ತಿಗೆ ನಮ್ಮನ್ನು ಹತ್ತಿರ ತರುವ ಸೂಪರ್ ಕೂಲ್ ಹೊಲೊಗ್ರಾಮ್‌ಗಳ ಅನುಕೂಲಕ್ಕಾಗಿ 6G ಭರವಸೆ ನೀಡಲಿದ್ದು, ವರ್ಚುವಲ್ ರಿಯಾಲಿಟಿ ಇನ್ನಷ್ಟು ನೈಜವಾಗಲಿದೆ. ಗೇಮ್‌ ಮತ್ತು ಚಲನಚಿತ್ರಗಳು ಗ್ರಾಹಕರಿಗೆ ಇನ್ನೂ ಹೆಚ್ಚಿನ ಅನುಭವವನ್ನು ನೀಡುತ್ತವೆ.

ಇನ್ನು ಮೋದಿ ತಮ್ಮ ಭಾಷಣದಲ್ಲಿ 6Gಯ ಹಲವು ಫೀಚರ್ಸ್‌ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಅದರಂತೆ ರಿಮೋಟ್‌ನಿಂದ ನಿಯಂತ್ರಿಸಬಹುದಾದ ಕಾರ್ಖಾನೆಗಳು, ಆಟೋಮ್ಯಾಟಿಕ್‌ ಮತ್ತು ಮಾನವ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಗ್ಯಾಜೆಟ್‌ಗಳು 6G ಆಗಮನದೊಂದಿಗೆ ಬರಲಿವೆ. 6G ಎಂಬುದು ಕೇವಲ ವೇಗವನ್ನು ಪ್ರತಿನಿಧಿಸುವ ಪದವಲ್ಲ, ಅದು ಒಂದು ಪೀಳಿಗೆಯನ್ನು ಗುರುತಿಸುತ್ತದೆ ಎಂದು ತಿಳಿಸಿದ್ದಾರೆ.

ಈ ನಡುವೆ ವಿವಿಧ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ವಿಮಾನಗಳಲ್ಲಿ 6G ಸೇವೆಯನ್ನು ಆನಂದಿಸಬಹುದು ಎಂದು ಕೆಲವು ವರದಿಗಳಿಂದ ತಿಳಿದುಬಂದಿದೆ. ಆದರೆ, ದೇಶದಲ್ಲಿ 6G ಸೇವೆ ಯಾವಾಗ ಲಭ್ಯವಾಗಲಿದೆ ಎಂಬುದು ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಈ ನಡುವೆ ಕಳೆದ ವರ್ಷದ ಜುಲೈನಲ್ಲಿ 5G ತರಂಗಾಂತರ ಹರಾಜು ಆರಂಭಗೊಂಡಿದ್ದನ್ನು ತಿಳಿಯಬಹುದು.

ಭಾರತದಲ್ಲಿ ಶೀಘ್ರವೇ 6G, ಸುಳಿವು ನೀಡಿದ ಮೋದಿ...

ಆ ವೇಳೆ ಜಿಯೋ, ವೋಡಾಫೋನ್‌ ಐಡಿಯಾ, ಏರ್‌ಟೆಲ್‌ ಮತ್ತು ಇತರರು ಹರಾಜಿನಲ್ಲಿ ಭಾಗವಹಿಸಿದ್ದರು. ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಅತಿ ಹೆಚ್ಚು ಮೊತ್ತವನ್ನು ಇದಕ್ಕಾಗಿ ಖರ್ಚು ಮಾಡಿದೆ. ಅಂದರೆ 88,078 ಕೋಟಿ. ಎರಡನೇ ಸ್ಥಾನದಲ್ಲಿ ಏರ್‌ಟೆಲ್ ಇದ್ದು, ಇದು 43,084 ಕೋಟಿ ರೂ.ವೆಚ್ಚ ಮಾಡಿದೆ. ಇದೆಲ್ಲದರ ಪರಿಣಾಮ ಈಗ ಬಹುಪಾಲು ನಗರಗಳಲ್ಲಿ 5G ಸೌಲಭ್ಯ ಧಕ್ಕಿದ್ದು, ಈ ಮೂಲಕ ಬಳಕೆದಾರರು ವಿಶೇಷ ಅನುಭವ ಪಡೆದುಕೊಳ್ಳುತ್ತಿದ್ದಾರೆ.

Best Mobiles in India

English summary
Prime Minister Narendra Modi has hinted that the 6G era will soon begin in the country. Addressing the nation on the country's 77th Independence Day, Modi revealed this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+