Home
ಸುದ್ದಿಜಾಲ

YouTube: ಅಬ್ಬಬ್ಬಾ... ಮೋದಿ ಅವರ ಯೂಟ್ಯೂಬ್ ಚಾನೆಲ್‌ಗೆ ಇದೀಗ 20 ಮಿಲಿಯನ್ ಚಂದಾದಾರರು!

ಯೂಟ್ಯೂಬ್‌ (YouTube) ಇಂದು ಎಷ್ಟು ಜನಪ್ರಿಯವಾಗಿದೆ ಎಂದರೆ ಚಿಕ್ಕ ಮಕ್ಕಳು ಸಹ ಬೆಳಗ್ಗೆ ಎದ್ದ ತಕ್ಷಣ ತಮ್ಮ ದಿನಚರಿಯನ್ನು ಯೂಟ್ಯೂಬ್‌ ಮೂಲಕವೇ ಆರಂಭ ಮಾಡುತ್ತಾರೆ. ಅಷ್ಟೇ ಯಾಕೆ ಯಾರೇ ಆದರೂ ಸಹ ಮಾಹಿತಿ ಮನರಂಜನೆಗೆ ಈ ಪ್ಲಾಟ್‌ಫಾರ್ಮ್‌ಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅದರಂತೆ ಸಾಕಷ್ಟು ಜನರು ಜನರಿಗೆ ಮಾಹಿತಿ ನೀಡಲು ತಮ್ಮದೇ ಆದ ಯೂಟ್ಯೂಬ್‌ ಚಾನಲ್‌ ಅನ್ನು ಹೊಂದಿದ್ದು, ಈ ವಿಭಾಗದಲ್ಲಿ ಮೋದಿ ಅವರ ಯೂಟ್ಯೂಬ್ ಚಾನಲ್‌ ಸಹ ಪ್ರಮುಖ ಸ್ಥಾನ ಪಡೆದಿದೆ.

ಹೌದು, ಪಿಎಂ ಮೋದಿಯವರ ಯೂಟ್ಯೂಬ್ ಚಾನೆಲ್ ಇದೀಗ ಬರೋಬ್ಬರಿ 20 ಮಿಲಿಯನ್ ಚಂದಾದಾರರನ್ನು ಮೀರಿದೆ. ಈ ಮೂಲಕ ಜಾಗತಿಕ ನಾಯಕರನ್ನೇ ಹಿಂದಿಕ್ಕಿದ್ದಾರೆ. ಇದು ಭಾರತದ ಮಟ್ಟಿಗೆ ದೊಡ್ಡ ಸಂತಸದ ವಿಚಾರವಾಗಿದ್ದು, ಈ ಮೂಲಕ ಜನರು ಮೋದಿ ಬಗ್ಗೆ ಎಷ್ಟು ಕ್ರೇಜ್‌ ಹೊಂದಿದ್ದಾರೆ ಎನ್ನುವುದನ್ನು ಸೂಚಿಸುವಂತೆ ಇದೆ. ಹಾಗಿದ್ರೆ, ಯಾರೆಲ್ಲಾ ನಾಯಕರನ್ನು ಮೋದಿ ಹಿಂದಿಕ್ಕಿದ್ದಾರೆ. ಈ ಯೂಟ್ಯೂಬ್‌ ಚಾನಲ್‌ನಲ್ಲಿ ಯಾವೆಲ್ಲಾ ವಿಡಿಯೋ ಪ್ರಸಾರ ಮಾಡಲಾಗುತ್ತದೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಅಬ್ಬಬ್ಬಾ... ಮೋದಿ ಅವರ ಯೂಟ್ಯೂಬ್ ಚಾನೆಲ್‌ಗೆ ಇದೀಗ 20 ಮಿಲಿಯನ್ ಚಂದಾದಾರರು!

ದಾಖಲೆ ಬರೆದ ಮೋದಿ ಯೂಟ್ಯೂಬ್‌ ಚಾನಲ್: ಸಬ್‌ಸ್ಕ್ರೈಬರ್‌ಗಳ ವಿಚಾರದಲ್ಲಿ ಪ್ರಧಾನಿ ಮೋದಿ (Prime Minister Narendra Modi) ಅವರು ಯುಟ್ಯೂಬ್‌ನಲ್ಲಿನ ಇತರ ಜಾಗತಿಕ ನಾಯಕರನ್ನು ಗಣನೀಯ ಅಂತರದಿಂದ ಹಿಂದಿಕ್ಕಿದ್ದಾರೆ. ಇನ್ನು ಯುಎಸ್ ಅಧ್ಯಕ್ಷರಾದ ಜೋ ಬಿಡೆನ್ ಸುಮಾರು 789,000 ಚಂದಾದಾರರನ್ನು ಹೊಂದಿದ್ದರೆ, ಟರ್ಕಿಶ್ ಅಧ್ಯಕ್ಷರಾದ ರೆಸೆಪ್ ತಯ್ಯಿಪ್ ಎರ್ಡೋಗನ್ ಸುಮಾರು 316,000 ಚಂದಾದಾರರನ್ನು ಹೊಂದಿದ್ದಾರೆ.

ಜಾಗತಿಕವಾಗಿ ದೊಡ್ಡ ದೊಡ್ಡ ನಾಯಕರು ಎನಿಸಿಕೊಂಡವರನ್ನೇ ಮೋದಿ ಅವರು ಯೂಟ್ಯೂಬ್‌ ಚಾನಲ್‌ ಮೂಲಕ ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲದೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಅಂತಹ ಗಮನಾರ್ಹ ಅನುಯಾಯಿಗಳನ್ನು ಹೊಂದಿರುವ ಏಕೈಕ ಜಾಗತಿಕ ನಾಯಕ ಮೋದಿ ಎಂಬ ಹೆಗ್ಗಳಿಕೆ ಸಹ ಸಿಕ್ಕಿದೆ. ಇದು ಒಂದು ಕಡೆಯಾದರೆ ಈ ಚಾನೆಲ್ 4.5 ಶತಕೋಟಿ+ ವೀಕ್ಷಣೆ ಪಡೆಯುವ ಮೂಲಕ ಮತ್ತೊಂದು ದಾಖಲೆ ಮಾಡಿದೆ. ಇನ್ನು ವೀಕ್ಷಣೆ ವಿಚಾರಕ್ಕೆ ಬಂದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಚಾನಲ್‌ 224 ಮಿಲಿಯನ್ ವೀಕ್ಷಣೆ ಪಡೆದಿದೆ.

ಅಬ್ಬಬ್ಬಾ... ಮೋದಿ ಅವರ ಯೂಟ್ಯೂಬ್ ಚಾನೆಲ್‌ಗೆ ಇದೀಗ 20 ಮಿಲಿಯನ್ ಚಂದಾದಾರರು!

ಇನ್ನು ಪ್ರಧಾನಿ ಮೋದಿ ಅವರ ಯೂಟ್ಯೂಬ್ ಚಾನೆಲ್ ಅತಿದೊಡ್ಡ ಚಂದಾದಾರರ ಮೈಲಿಗಲ್ಲನ್ನು ದಾಟಿದ್ದು, ಈ ವಿಷಯದಲ್ಲಿ ಅಗ್ರ ಜಾಗತಿಕ ನಾಯಕನನ್ನಾಗಿ ಮಾಡಿದೆ. ಇದರೊಂದಿಗೆ ಬ್ರೆಜಿಲ್‌ನ ಮಾಜಿ ಅಧ್ಯಕ್ಷರಾಗಿರುವ ಜೈರ್ ಬೋಲ್ಸನಾರೊ ಅವರು 6.4 ಮಿಲಿಯನ್+ ಚಂದಾದಾರರೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಸಂವಹನಕ್ಕಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳುವ ಮೋದಿಯವರ ಸಾಮರ್ಥ್ಯವನ್ನು ಎತ್ತಿ ತೋರಿಸಿದಂತೆ ಇದೆ.

ಮೋದಿ ಅವರ ಚಾನಲ್‌ ನಲ್ಲಿ ಏನೆಲ್ಲಾ ಪ್ರಸಾರ ಮಾಡಲಾಗುತ್ತದೆ?: ಮೋದಿ ಅವರ ಈ ಯೂಟ್ಯೂಬ್‌ ಚಾನಲ್‌ನಲ್ಲಿ ಇದೀಗ 23 ಸಾವಿರ ವಿಡಿಯೋಗಳನ್ನು ಕಾಣಬಹುದಾಗಿದೆ. ಈ ಚಾನಲ್‌ನಲ್ಲಿ ಮೋದಿಯವರ ಎಲ್ಲಾ ಕಾರ್ಯಕ್ರಮಗಳ ವಿಡಿಯೋಗಳು ಹಾಗೂ ಲೈವ್‌ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಜೊತೆಗೆ ಪ್ಲೇ ಲಿಸ್ಟ್‌ ಕೂಡ ಇದ್ದು ಸುಲಭವಾಗಿ ದೇಶದ ಜನರು ನಿರ್ದಿಷ್ಟ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದಾಗಿದೆ.

ಅಬ್ಬಬ್ಬಾ... ಮೋದಿ ಅವರ ಯೂಟ್ಯೂಬ್ ಚಾನೆಲ್‌ಗೆ ಇದೀಗ 20 ಮಿಲಿಯನ್ ಚಂದಾದಾರರು!

ಈ ಚಾನಲ್‌ನಲ್ಲಿ ಕೇವಲ ಮೋದಿ ಅವರ ವಿಡಿಯೋ ಮಾತ್ರವಲ್ಲದೆ ಭಾರತ ಸರ್ಕಾರ ಪ್ರಮುಖ ಯೋಜನೆಗಳಿಂದ ಲಾಭ ಪಡೆದ ಫಲಾನುಭವಿಗಳ ವಿಡಿಯೋಗಳು, ಸೆಲೆಬ್ರಿಟಿಗಳ ಪ್ರತಿಕ್ರಿಯೆಗಳು, ಚುನಾವಣಾ ಸಂದರ್ಭದಲ್ಲಿ ಮೋದಿ ಬಗ್ಗೆ ಮೆಚ್ಚುಗೆಯ ಮಾತನಾಡಿದ ಜನರ ಪ್ರತಿಕ್ರಿಯೆಗಳು, ಮಹಿಳಾ ಅಭಿವೃದ್ಧಿ ಸಂಬಂಧಿ ವಿಡಿಯೋಗಳು, ಗುಜರಾತ್‌ಗೆ ಅಭಿವೃದ್ಧಿಗೆ ಸಂಬಂಧಿಸಿದ ವಿಡಿಯೋಗಳನ್ನು ಕಾಣಬಹುದಾಗಿದೆ.

Best Mobiles in India

English summary
PM Modi's YouTube channel has now crossed 20 million subscribers. By this, they have overtaken the global leaders.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+