video leak: 21 ವರ್ಷದ ಯೂಟ್ಯೂಬರ್ ಮನೆಯ ಸಿಸಿಟಿವಿ ಹ್ಯಾಕ್, ಖಾಸಗಿ ವಿಡಿಯೋ ಲೀಕ್!
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ದುರ್ಬಳಕೆ ವ್ಯಾಪಕವಾಗುತ್ತಿದೆ. ಇದರಿಂದ ಜನರು ಸಾಕಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಇಲ್ಲೊಂದು ಘಟನೆ ಜರುಗಿದ್ದು, ಈ ಯೂಟ್ಯೂಬರ್ (YouTuber) ಓರ್ವರ ಖಾಸಗಿ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಹೌದು, ಸ್ಮಾರ್ಟ್ ಗ್ಯಾಜೆಟ್ ಬಳಕೆ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಡೇಂಜರ್ ಅನ್ನೋದನ್ನು ಈ ರೀತಿಯ ಘಟನೆಗಳು ಆಗಾಗ್ಗೆ ಸಾಭಿತು ಪಡಿಸುತ್ತಲೇ ಇರುತ್ತವೆ. ಅಂದರೆ ಈ ಯೂಟ್ಯೂಬರ್ ಮನೆಯಲ್ಲಿ ಇದ್ದ ಸಿಸಿಟಿವಿಯನ್ನೇ ಹ್ಯಾಕ್ (CCTV hack) ಮಾಡಿರುವ ಕಿಡಿಗೇಡಿಗಳು ಇವರ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ವೈರಲ್ ಮಾಡಿದ್ದಾರೆ. ಹಾಗಿದ್ರೆ, ಏನಿದು ಘಟನೆ? ಇದು ನಡೆದಿದ್ದು ಎಲ್ಲಿ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸಿಸಿಟಿವಿ ಹ್ಯಾಕ್: ಇತ್ತೀಚಿನ ದಿನಗಳಲ್ಲಿ ಭದ್ರತೆ ದೃಷ್ಟಿಯಿಂದ ಜೊತೆಗೆ ಹೆಚ್ಚಿನ ಪ್ರಯೋಜನ ಇರುವುದರಿಂದ ಸ್ಮಾರ್ಟ್ ಸಿಸಿಟಿವಿಗಳನ್ನು (Smart CCTV) ಮನೆಯಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಇದೇ ಈಗ ಮಾರಕವಾಗಿ ಪರಿಣಮಿಸಿದೆ. ಎಲ್ಲೋ ಕೂತು ನಿಮ್ಮ ಮನೆಯಲ್ಲಿ ನೀಡುವ ಮಾಡುವ ಎಲ್ಲಾ ರೀತಿಯ ಚಟುವಟಿಕೆಗಳನ್ನು ಸೆರೆಹಿಡಿದು ಅದನ್ನು ದುರುಪಯೋಗ ಮಾಡಿಕೊಳ್ಳುವ ಸ್ಕ್ಯಾಮರ್‌ಗಳು ಇಂದು ಹೆಚ್ಚಾಗಿದ್ದಾರೆ. ಈ ಕೃತ್ಯದ ಪರಿಣಾಮ ಈ ಯೂಟ್ಯೂಬರ್ ನಗ್ನ ವಿಡಿಯೋ (video leak) ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಏನಿದೆ ಈ ವಿಡಿಯೋದಲ್ಲಿ?: ವೈರಲ್ ಆಗಿರುವ ವಿಡಿಯೋದಲ್ಲಿ ಯೂಟ್ಯೂಬರ್ ನಗ್ನವಾಗಿ ಸ್ನಾನಗೃಹದಿಂದ ಹೊರಬರುವ ವಿಡಿಯೋ ಸೆರೆಯಾಗಿದೆ. ಇನ್ನು ನವೆಂಬರ್ 17 ರಂದು ಯುವ ಯೂಟ್ಯೂಬರ್‌ನ ಮುಂಬೈ ಮನೆಯ ಸಿಸಿಟಿವಿ ಕ್ಯಾಮೆರಾವನ್ನು ಹ್ಯಾಕ್ ಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಬಹಿರಂಗಪಡಿಸಿದೆ. ಇನ್ನು ಈ ಬಲಿಪಶು ಯೂಟ್ಯೂಬರ್, ಇ-ಸ್ಪೋರ್ಟ್ಸ್ ಆಟಗಾರರಾಗಿದ್ದಾರೆ.

ಈ ಬಗ್ಗೆ ಯೂಟ್ಯೂಬರ್‌ಗೆ ತಿಳಿದದ್ದು ಹೇಗೆ? : 21 ಈ ವರ್ಷದ ಯೂಟ್ಯೂಬರ್ ವೈರಲ್ ಆಗಿರುವ ವಿಡಿಯೋಗಳ ಬಗ್ಗೆ ತಮ್ಮ ಸ್ನೇಹಿತರಿಂದ ತಿಳಿದುಕೊಂಡಿದ್ದಾರೆ. ಅದನ್ನು ನೋಡಿ ಶಾಕ್ ಆಗಿದ್ದು, ನಂತರ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ತನ್ನ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಕ್ಕೆ ಯಾರೋ ಅಪರಿಚಿತ ವ್ಯಕ್ತಿಗಳು ಪ್ರವೇಶ ಪಡೆದಿದ್ದು, ನಗ್ನ ವಿಡಿಯೋವನ್ನು ಸೆರೆಹಿಡಿದು ಲೀಕ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಸಂಬಂಧ ಬಾಂದ್ರಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇನ್ನು ಹ್ಯಾಕರ್‌ಗಳು (Hackers) ಈ ಯೂಟ್ಯೂಬರ್ ಮಲಗುವ ರೂಮ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗೆ ಹೇಗೆ ಅಕ್ರಮ ಪ್ರವೇಶವನ್ನು ಪಡೆದಿದ್ದಾನೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಈಗಾಗಲೇ ಈ ವಿಡಿಯೋಗಳು ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್ ಸೇರಿದಂತೆ ಅನೇಕ ಪ್ಲಾಟ್‌ಫಾರ್ಮ್‌ನಲ್ಲಿ ಶೇರ್ ಆಗಿದೆಯಂತೆ. ಅದರಂತೆ ಪೊಲೀಸರು ಈ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ವಿಡಿಯೋ ತೆಗೆಯುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಪೊಲೀಸರು ಮಾಹಿತಿ ನೀಡಿದ್ದು, ಸೈಬರ್ ತಂಡವು ತಾಂತ್ರಿಕ ಸಹಾಯದಿಂದ ಇಂಟರ್ನೆಟ್ ಪ್ರೋಟೋಕಾಲ್ (IP) ವಿವರಗಳನ್ನು ಟ್ರ್ಯಾಕ್ ಮಾಡುತ್ತಿದೆ ಸಿಸಿಟಿವಿ ವ್ಯವಸ್ಥೆಗೆ ಅಕ್ರಮ ಪ್ರವೇಶ ಪಡೆದ ವ್ಯಕ್ತಿಯನ್ನು ಪತ್ತೆಹಚ್ಚಲು ಇದು ಸಹಾಯಕ ಎಂದು ಹೇಳಿದ್ದಾರೆ. ಜೊತೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ), 501 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿಮ್ಮ ಮನೆಯ ಸಿಸಿಟಿವಿ ಹ್ಯಾಕ್ ಆಗಬಾರದು ಎಂದರೆ ಈ ಕೆಲಸ ಮಾಡಿ:
ಸಿಸಿಟಿವಿ ವಿಷಯಕ್ಕೆ ಬಂದರೆ ಪ್ರಮುಖವಾಗಿ ಹಾಗೂ ಹೆಚ್ಚು ಸೇಫ್ ಎನಿಸಿಕೊಂಡಿರುವ 40 ಕ್ಕೂ ಹೆಚ್ಚು ಬ್ರಾಂಡ್‌ಗಳು ಹೋಮ್ ಸೆಕ್ಯುರಿಟಿ ಕ್ಯಾಮೆರಾಗಳನ್ನು ಲಾಂಚ್ ಮಾಡುತ್ತವೆ. ಅವುಗಳಲ್ಲಿ ನೆಸ್ಟ್ (Google), ರಿಂಗ್ ಅಥವಾ ಬ್ಲಿಂಕ್ (Amazon) ಮತ್ತು ಪ್ಯಾನಸೋನಿಕ್ ಮತ್ತು ಜನರಲ್ ಎಲೆಕ್ಟ್ರಿಕ್, ಅರ್ಲೋ, ಸಿಂಪ್ಲಿಸೇಫ್, ವೈಜ್ ಲ್ಯಾಬ್ಸ್ ಮತ್ತು ಆಂಕರ್ಸ್ ಯುಫಿ ಕಂಪೆನಿಗಳಿಂದ ಸಿಸಿಟಿವಿ ಖರೀದಿ ಮಾಡುವುದು ಉತ್ತಮ.
ಅಪರಿಚಿತ ಬ್ರ್ಯಾಂಡ್‌ಗಳ ಬಗ್ಗೆ ಎಚ್ಚರದಿಂದಿರಿ: ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಸಿಸಿಟಿವಿ ಸಹ ಲಭ್ಯ ಇವೆ ಆದರೆ ಇವುಗಳನ್ನು ಖರೀದಿ ಮಾಡುವ ಮುನ್ನ ಹಲವಾರು ಬಾರಿ ಯೋಚನೆ ಮಾಡ. ಈ ವಿಭಾಗದಲ್ಲಿ ವಿಚಿತ್ರವಾಗಿ ಹೆಸರಿಸಲಾದ ನಾಕ್‌ಆಫ್ ಕ್ಯಾಮೆರಾಗಳನ್ನು ಕಾಣಬಹುದು, ಇವುಗಳು ದೊಡ್ಡ ಭದ್ರತಾ ಅಪಾಯವನ್ನು ಹೊಂದಿರುತ್ತವೆ.

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆನ್ ಮಾಡಿ: ನಿಮ್ಮ ಫೂಟೇಜ್‌ಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮಾಡಿ. ಇದರರ್ಥ ನಿಮ್ಮ ಫೈಲ್‌ಗಳನ್ನು ಕ್ಯಾಮರಾ ಕಂಪನಿ ಅಥವಾ ಕಾನೂನು ಜಾರಿ ಮಾಡುವವರು ಸಬ್‌ಪೋನೆಡ್ ಮಾಡಿದರೆ ವೀಕ್ಷಿಸಲು ಸಾಧ್ಯವಿಲ್ಲ ಮತ್ತು ಹ್ಯಾಕರ್‌ಗಳಿಗೆ ಅವುಗಳನ್ನು ಪ್ರವೇಶಿಸಲು ಕಷ್ಟವಾಗುತ್ತದೆ.
ಡೀಫಾಲ್ಟ್ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ: ಅನೇಕ ಭದ್ರತಾ ಡಿವೈಸ್‌ಗಳು ಮತ್ತು ರೂಟರ್‌ಗಳು ಡೀಫಾಲ್ಟ್ ಪಾಸ್‌ವರ್ಡ್‌ಗಳನ್ನು ಹೊಂದಿರುತ್ತವೆ. ಸುರಕ್ಷತೆಯನ್ನು ಹೆಚ್ಚಿಗೆ ಮಾಡಲು ನೀವು ಅನನ್ಯವಾದ ಬಲವಾದ ಪಾಸ್‌ವರ್ಡ್‌ಗೆ ಬದಲಾಯಿಸಿ. ಜೊತೆಗೆ ಡೀಫಾಲ್ಟ್ ಬಳಕೆದಾರ ಹೆಸರನ್ನು ಬದಲಾಯಿಸಿ. ಅಂತಿಮವಾಗಿ, ನೀವು ಕ್ಯಾಮೆರಾದೊಂದಿಗೆ ಬಳಸುವ ಖಾತೆಗೆ ಬಹು-ಅಂಶದ ದೃಢೀಕರಣವನ್ನು ಆನ್ ಮಾಡಿ.

ನಿಮ್ಮ ಅಡುಗೆಮನೆಯಿಂದ ವಿಡಿಯೋ ಸೋರಿಕೆಯಾದರೆ, ಅದು ತುಂಬಾ ದೊಡ್ಡ ಸಮಸ್ಯೆಯಾಗಿರುವುದಿಲ್ಲ. ಆದರೆ ನಿಮ್ಮ ಬಾತ್ರೂಮ್ ಅಥವಾ ಮಕ್ಕಳ ಮಲಗುವ ಕೋಣೆಯೊಳಗೆ ಕ್ಯಾಮರಾವನ್ನು ಇರಿಸಿದರೆ, ಆ ತುಣುಕನ್ನು ಸ್ಕ್ಯಾಮರ್‌ಗಳು ತಪ್ಪಾಗಿ ಬಳಕೆ ಮಾಡಿಕೊಳ್ಳಬಹುದು. ಒಂದು ಇಡೀ ಕೋಣೆಯನ್ನೇ ರೆಕಾರ್ಡ್ ಮಾಡಬಹುದಾದ ಕ್ಯಾಮರಾವನ್ನು ಹಾಕುವ ಬದಲು, ಪ್ರವೇಶದ್ವಾರಗಳು ಮತ್ತು ನಿರ್ಗಮನಗಳನ್ನು ಮೇಲ್ವಿಚಾರಣೆ ಮಾಡಬಹುದಾದ ಸ್ಥಳದಲ್ಲಿ ಕ್ಯಾಮೆರಾ ಇರಿಸಿದರೆ ಉತ್ತಮ.


Click it and Unblock the Notifications








