Subscribe to Gizbot

ಫೇಸ್‌ಬುಕ್ ಮಾಲಿಕನಿಗಿಂತಲೂ ಪ್ರಿಯವಾರಿಯರ್‌ಗೆ ಹೆಚ್ಚು ಫಾಲೋವರ್ಸ್!!

Written By:

ಸನ್ನಿಲಿಯೋನ್ ಹಿಂದಿಕ್ಕಿ ಗೂಗಲ್ ಮೋಸ್ಟ್ ಸರ್ಚ್ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಫೇಸ್‌ಬುಕ್ ಮಾಲಿಕ ಝುಕರ್‌ಬರ್ಗ್ ಅವರನ್ನು ಹಿಂದಿಕ್ಕಿದ್ದಾಳೆ.! ಝುಕರ್‌ಬರ್ಗ್ ಅವರಿಗಿಂತಲೂ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋಯರ್ಸ್ ಪಡೆದು ದಾಖಲೆ ಸೃಷ್ಟಿಸಿದ್ದಾರೆ.!!

ಹೌದು, ಕಣ್ ಹೊಡೆದು, ಕೈಯಲ್ಲೇ ಗನ್ ತೋರಿಸಿ ರಾತ್ರಿ ಬೆಳಗಾಗುವುದರಲ್ಲಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆದ ಈ ಬೆಡಗಿ ಪ್ರಿಯಾ ಪ್ರಕಾಶ ವಾರಿಯರ್ ಅವರಿಗೆ ವಿಶ್ವದಾಧ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದು, ಕೇವಲ 10 ದಿನಗಳಲ್ಲಿ ಜಗತ್ತಿನ ಅಥಿರಥರನ್ನು ಮೀರಿಸಿ ಸಾಮಾಜಿಕ ಜಾಲತಾಣದಲ್ಲಿ ಹೆಸರು ಗಳಿಸುತ್ತಿದ್ದಾಳೆ.!!

ಫೇಸ್‌ಬುಕ್ ಮಾಲಿಕನಿಗಿಂತಲೂ ಪ್ರಿಯವಾರಿಯರ್‌ಗೆ ಹೆಚ್ಚು ಫಾಲೋವರ್ಸ್!!

ಪ್ರಿಯಾ ಪ್ರಕಾಶ ವಾರಿಯರ್ ಅವರಿಗೆ ವಿಶ್ವಾದ್ಯಂತ ಎಲ್ಲರೂ ಫಿದಾ ಆಗಿದ್ದು 18 ವರ್ಷದ ಈ ನಟಿ ಇನ್‌‌ಸ್ಟಾಗ್ರಾಂನಲ್ಲಿ ಇಲ್ಲಿಯವರೆಗೂ 45 ಲಕ್ಷ ಫಾಲೋಯರ್ಸ್ ಹೊಂದಿದ್ದಾರೆ. ಆದರೆ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಮಾಲೀಕ ಮಾರ್ಕ್ ಝುಕರ್‌ಬರ್ಗ್ ಅವರು ಕೇವಲ 40 ಲಕ್ಷ ಫಾಲೋಯರ್ಸ್ ಹೊಂದಿದ್ದಾರೆ.!!

ಫೇಸ್‌ಬುಕ್ ಮಾಲಿಕನಿಗಿಂತಲೂ ಪ್ರಿಯವಾರಿಯರ್‌ಗೆ ಹೆಚ್ಚು ಫಾಲೋವರ್ಸ್!!

'ಒರು ಅದಾರ್ ಲವ್' ಚಿತ್ರದ 'ಮಾಣಿಕ್ಯ ಮಲರಯಾ ಪೂವಿ' ಹಾಡಿನಲ್ಲಿ ತನ್ನ ನಟನೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಗಿಟ್ಟಿಸಿಕೊಂಡ ಈಗಾಗಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಪಟ್ಟವನ್ನು ಕೂಡ ಪಡೆದುಕೊಂಡಿದ್ದಾರೆ.!!

ಓದಿರಿ: ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಕೋಲಾಹಲ ಸೃಷ್ಟಿಸಿದೆ ನಿಗೂಢ "ಬ್ಲ್ಯಾಕ್‌ಶಾರ್ಕ್'' ಫೋನ್!!

English summary
then missing out on Priya Prakash Varrier and her now ubiquitous wink would have been impossible. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot