Subscribe to Gizbot

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಕೋಲಾಹಲ ಸೃಷ್ಟಿಸಿದೆ ನಿಗೂಢ "ಬ್ಲ್ಯಾಕ್‌ಶಾರ್ಕ್'' ಫೋನ್!!

Written By:

ಚೀನಾದ ಪ್ರಖ್ಯಾತ ಇ-ಕಾಮರ್ಸ್ ಸೈಟ್ ವಿಬೋ ತನ್ನ ವೆಬ್‌ಸೈಟ್‌ನಲ್ಲಿ ನಿಗೂಢ ಸ್ಮಾರ್ಟ್‌ಫೋನ್ ಪಟ್ಟಿಯೊಂದನ್ನು ಬಿಡುಗಡೆ ಮಾಡಿ ಮತ್ತೆ ಮೊಬೈಲ್ ಮಾರುಕಟ್ಟೆಯಲ್ಲಿ ಕೋಲಾಹಲ ಸೃಷ್ಟಿಸಿದೆ.!! ಅಂಟುಂಟು ಬೆಂಚ್‌ಮಾರ್ಕನಲ್ಲಿ ''ಬ್ಲ್ಯಾಕ್‌ಶಾರ್ಕ್'' ಎಂಬ ಕೋಡ್ ನೇಮ್ ಹೊಂದಿರುವ ನೂತನ ಸ್ಮಾರ್ಟ್‌ಫೋನ್ ಇದೀಗ ವೈರೆಲ್ ಆಗಿದೆ.!!

ಹೌದು, ಇನ್ನೊಂದು ವಾರದ ಒಳಗೆ ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯ ಸುರಿಮಳೆಯೇ ಆಗಲಿದೆ.! ಈ ಸಮಯದಲ್ಲಿ ಈ ನಿಗೂಢ ಸ್ಮಾರ್ಟ್‌ಫೋನ್ ಬಗೆಗಿನ ಸುದ್ದಿ ವೈರೆಲ್ ಆಗಿದ್ದು, ಮುಂದಿನ ವಾರ ವಿಶ್ವ ಮೊಬೈಲ್ ಕಾಂಗ್ರೆಸ್‌ನಲ್ಲಿ ಶಿಯೋಮಿ ಕಂಪೆನಿ ಬಿಡುಗಡೆಗೆ ತಯಾರುಮಾಡಿಕೊಂಡಿರುವ ಸ್ಮಾರ್ಟ್‌ಫೋನ್ ಇದು ಎಂದು ಹೇಳಲಾಗಿದೆ.!!

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಕೋಲಾಹಲ ಸೃಷ್ಟಿಸಿದೆ ನಿಗೂಢ

''ಬ್ಲ್ಯಾಕ್‌ಶಾರ್ಕ್'' ಎಂಬ ನಿಗೂಢ ಫೋನ್ ಶಿಯೋಮಿಯ ಎಂಐ 7 ಸ್ಮಾರ್ಟ್‌ಫೋನ್ ಎಂದು ಹೇಳಲಾಗುತ್ತಿದ್ದು, ಹಾಗಾದರೆ, ಬ್ಲ್ಯಾಕ್‌ಶಾರ್ಕ್ ಈ ಫೋನ್ ಇಷ್ಟು ವೈರೆಲ್ ಆಗಲು ಕಾರಣವೇನು? ಇದು ಶಿಯೋಮಿ ಫೋನ್ ಎನ್ನಲು ಕಾರಣಗಳಿವೆಯೇ? ಮೊಬೈಲ್ ಮಾರುಕಟ್ಟೆಯಲ್ಲಿ ಕೋಲಾಹಲವೇಕೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್ ಕಾಂಗ್ರಸ್‌ನಲ್ಲಿ ಅಚ್ಚರಿ!?

ಮೊಬೈಲ್ ಕಾಂಗ್ರಸ್‌ನಲ್ಲಿ ಅಚ್ಚರಿ!?

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌9 ಸೇರಿದಂತೆ ಹಲವು ಹೆಸರಾಂತ ಕಂಪೆನಿಗಳ ಸ್ಮಾರ್ಟ್‌ಫೋನ್‌ಗ ಮೊಬೈಲ್ ಕಾಂಗ್ರೆಸ್‌ನಲ್ಲಿ ಬಿಡುಗಡೆಗಾಗಿ ತುದಿಗಾಲಿನಲ್ಲಿ ನಿಂತಿರುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಇದೇ ಸಮಯದಲ್ಲಿ ಅತ್ಯದ್ಬುತ ನಿಗೂಢ "ಬ್ಲ್ಯಾಕ್‌ಶಾರ್ಕ್'' ಸ್ಮಾರ್ಟ್‌ಫೋನ್ ಕೂಡ ಅಚ್ಚರಿ ಮೂಡಿಸಲು ಮುಂದಾಗಿದೆ ಎನ್ನಲಾಗಿದೆ.!!

ಇದು ಶಿಯೋಮಿ ಎಂಐ 7?

ಇದು ಶಿಯೋಮಿ ಎಂಐ 7?

"ಬ್ಲ್ಯಾಕ್‌ಶಾರ್ಕ್'' ಎಂಬ ಹೆಸರಿನ ಮೂಲಕ ಅಂಟುಂಟು ಬೆಂಚ್‌ಮಾರ್ಕ್‌ನಲ್ಲಿ ಸ್ಥಾನ ಪಡೆದಿರುವ ಈ ಸ್ಮಾರ್ಟ್‌ಫೋನ್ ಶಿಯೋಮಿಯ ಎಂಐ 7 ಸ್ಮಾರ್ಟ್‌ಫೋನ್ ಎಂದು ಹೇಳಲಾಗುತ್ತಿದೆ. ಗೇಮಿಂಗ್‌ಗಾಗಿ ಕೇಂದ್ರೀಕರಿಸಿರುವ ಈ ಸ್ಮಾರ್ಟ್‌ಫೋನ್ ಶಿಯೋಮಿ ಕಂಪೆನಿಗೆ ನೇರವಾಗಿ ಸಂಬಂಧಪಟ್ಟಿದೆ ಎಂದು ಮೊಬೈಲ್ ಮಾರುಕಟ್ಟೆ ಅಂದಾಜಿಸಿದೆ.!!

ಸ್ಮಾರ್ಟ್‌ಫೋನ್ ವೈರೆಲ್ ಆಗಲು ಕಾರಣ?

ಸ್ಮಾರ್ಟ್‌ಫೋನ್ ವೈರೆಲ್ ಆಗಲು ಕಾರಣ?

ವಿಬೋ ತನ್ನ ವೆಬ್‌ಸೈಟ್‌ನಲ್ಲಿ ನಿಗೂಢ ಸ್ಮಾರ್ಟ್‌ಫೋನ್ ಪಟ್ಟಿ ಬಿಡುಗಡೆ ಮಾಡಿದ ತಕ್ಷಣವೇ ವೈರೆಲ್ ಆಗಲು ದೊಡ್ಡ ಕಾರಣವಿದೆ.! ಅಂಟುಂಟು ಬೆಂಚ್‌ಮಾರ್ಕ್ ಪಟ್ಟಿಯಲ್ಲಿಯೇ ಈ ವರೆಗೂ ಯಾವುದೇ ಸ್ಮಾರ್ಟ್‌ಫೋನ್ ಗಳಿಸದಷ್ಟು ಸ್ಕೋರ್‌ಗಳನ್ನು ''ಬ್ಲ್ಯಾಕ್‌ಶಾರ್ಕ್'' ಸ್ಮಾರ್ಟ್‌ಫೋನ್ ಗಳಿಸಿರುವುದು ಈ ಸುದ್ದಿ ಇಷ್ಟು ವೈರಲ್ ಆಗಲು ಕಾರಣವಾಗಿದೆ.!!

8GB RAM ಸ್ಮಾರ್ಟ್‌ಫೋನ್!!

8GB RAM ಸ್ಮಾರ್ಟ್‌ಫೋನ್!!

ಅಂಟುಂಟು ಬೆಂಚ್‌ಮಾರ್ಕ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ "ಬ್ಲ್ಯಾಕ್‌ಶಾರ್ಕ್'' ಸ್ಮಾರ್ಟ್‌ಫೋನ್ 8GB RAM ಮತ್ತು 32GB ಆಂತರಿಕ ಮೆಮೊರಿಯನ್ನು ಹೊಂದಿದೆ. ಆಂಡ್ರಾಯ್ಡ್ ಓರಿಯೋ 8.0 ರನ್ ಆಗಲಿರುವ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 845 Soc ಪ್ರೊಸೆಸರ್ ಅನ್ನು ಒಳಗೊಂಡಿದೆ.!!

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!
2160*1080 ಪಿಕ್ಸೆಲ್‌ಗಳ ಡಿಸ್‌ಪ್ಲೇ!!

2160*1080 ಪಿಕ್ಸೆಲ್‌ಗಳ ಡಿಸ್‌ಪ್ಲೇ!!

ಅಂಟುಂಟು ಬೆಂಚ್‌ಮಾರ್ಕ್ ಪಟ್ಟಿಯಲ್ಲಿ 2,70,680 ಸ್ಕೋರ್‌ಗಳನ್ನು ಗಳಿಸಿಕೊಂಡಿರುವ ಈ "ಬ್ಲ್ಯಾಕ್‌ಶಾರ್ಕ್'' ಸ್ಮಾರ್ಟ್‌ಫೋನ್ 18:9 ಅನುಪಾತದ 2160*1080 ಪಿಕ್ಸೆಲ್‌ಗಳ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಅಂಟುಂಟು ಬೆಂಚ್‌ಮಾರ್ಕ್ ಪಟ್ಟಿಯಿಂದ ತಿಳಿದುಬಂದಿದೆ.!!

ಓದಿರಿ:ಶಿಯೋಮಿಗೆ ಸೆಡ್ಡುಹೊಡೆಯಲು ಬಂದಿವೆ ಎರಡು ಬೆಸ್ಟ್ 'ಕಾಮಿಯೊ' ಸ್ಮಾರ್ಟ್‌ಫೋನ್‌ಗಳು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Within a week, the world will get to feast its eyes on some of the highly-anticipated flagship smartphones of this year.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot