Subscribe to Gizbot

ಟಾಪ್ ವ್ಯಕ್ತಿಗಳ ಟಾಪ್ ಸಾಧನೆಗಳು

Written By:

ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸಣ್ಣ ವಿಷಯವಲ್ಲ. ಆದರೆ ಅತ್ಯುನ್ನತ ಸ್ಥಾನದಲ್ಲಿದ್ದುಕೊಂಡೇ ಕಂಪೆನಿಯನ್ನು ವ್ಯವಸ್ಥಿತವಾಗಿ ನಡೆಸುವುದು ಮತ್ತು ತಮ್ಮ ಜೀವನ ಶೈಲಿಯನ್ನು ಅದಕ್ಕೆ ಹೊಂದಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಇಂದಿನ ಲೇಖನದಲ್ಲಿ ಟೆಕ್ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿರುವ ಟಾಪ್ ವ್ಯಕ್ತಿಗಳ ಜೀವನ ಶೈಲಿಯನ್ನು ಕುರಿತು ನಾವು ನಿಮಗೆ ತಿಳಿಸಲಿರುವೆವು.

ಓದಿರಿ: ಹುವಾಯಿ ಹೋನರ್ 4ಸಿ ಉತ್ತಮ ಫೋನ್ ಎಂಬುದಕ್ಕೆ 10 ಕಾರಣಗಳು

ಯುವ ಜನಾಂಗದವರೇ ಆಗಿರುವ ಈ ವ್ಯಕ್ತಿಗಳು ಈ ಮಹತ್ತರ ಜವಬ್ದಾರಿಯುತ ಕೆಲಸಗಳನ್ನು ಹೇಗೆ ನಿರ್ವಹಿಸಿಕೊಂಡು ಹೋಗುತ್ತಾರೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಹಸ್ಥಾಪಕರು ಸ್ನ್ಯಾಪ್‌ಡೀಲ್

ರೋಹಿತ್ ಬನ್ಸಾಲ್

ತಮ್ಮ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸುವ ರೋಹಿತ್ ರಾತ್ರಿ ವೇಳೆಯಲ್ಲಿ ಬಂದಿರುವ ಮೇಲ್‌ಗಳನ್ನು ಬೆಳಗ್ಗಿನ ಜಾವ ಪರಿಶೀಲಿಸುತ್ತಾರೆ. ಇನ್ನು ಲ್ಯಾಪ್‌ಟಾಪ್‌ನಲ್ಲಿ ಸ್ಟಿಕ್ ನೋಟ್‌ಗಳನ್ನು ಇವರು ಬಳಸುತ್ತಾರೆ. ನಮ್ಮದು ಹೆಚ್ಚು ಅಭಿವೃದ್ಧಿಯತ್ತ ಸಾಗುತ್ತಿರುವ ಕಂಪೆನಿಯಾಗಿರುವುದರಿಂದ ವಾರಾಂತ್ಯಗಳಲ್ಲಿ ಕೆಲಸಕ್ಕೆ ವಿರಾಮ ಘೋಷಿಸುವುದು ಅಸಾಧ್ಯ. ಆದರೂ ಕುಟುಂಬಕ್ಕೆ ಆದ್ಯತೆಯನ್ನು ನೀಡುತ್ತೇವೆ ಎಂಬುದು ರೋಹಿತ್ ಮಾತಾಗಿದೆ.

ಸಿಇಒ ಎಂಫಾಸಿಸ್

ಗಣೇಶ್ ಅಯ್ಯರ್

ವಿದ್ಯಾರ್ಥಿ ಪರೀಕ್ಷೆಗೆ ಹೇಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾನೋ ಅಂತೆಯೇ ನಾನು ಕಂಪೆನಿ ಕೆಲಸಗಳಿಗೆ ಪ್ರತಿಯೊಂದನ್ನು ಸಿದ್ಧಪಡಿಸಿಕೊಳ್ಳುತ್ತೇನೆ. 'ಐ ಥೋಟ್ ಎಚ್‌ಡಿ' ಎಂಬ ಸಾಫ್ಟ್‌ವೇರ್ ಅನ್ನು ಇವರು ಬಳಸುತ್ತಿದ್ದು ಮೀಟಿಂಗ್‌ಗಳನ್ನು ಸಮಾಲೋಚಿಸಲು ನೆರವಾಗುತ್ತಿವೆ.

ಸಿಇಒ - ಸಿಕ್ರೊ ಗ್ಲೋಬಲ್ ಸರ್ವೀಸಸ್

ಸುಸಿರ್ ಕುಮಾರ್

ವರ್ಷದಲ್ಲಿ ನಾಲ್ಕು ರಜಾದಿನಗಳನ್ನು ನಾನು ತೆಗೆದುಕೊಳ್ಳುತ್ತಿದ್ದು ನನ್ನ ಸ್ನೇಹಿತರೊಂದಿಗೆ ಕುಟುಂಬದೊಂದಿಗೆ ರಜೆಯ ಮೋಜನ್ನು ಈ ದಿನಗಳಲ್ಲಿ ನಾನು ಅನುಭವಿಸುತ್ತೇನೆ. ನನ್ನ ಕೆಲಸವನ್ನು ಧನಾತ್ಮಕವಾಗಿ ಸಂಪೂರ್ಣಗೊಳಿಸಲು ಈ ರಜಾದಿನಗಳು ನನಗೆ ಸಹಾಯ ಮಾಡುತ್ತವೆ.

ಗ್ರೂಪನ್ ಇಂಡಿಯಾ ಸಿಇಒ

ಅಂಕುರ್ ವರಿಕು

ಗೂಗಲ್ ಕ್ಯಾಲೆಂಡರ್ ಅನ್ನು ನಾನು ಬಳಸುತ್ತಿದ್ದು ಅದಕ್ಕನುಗುಣವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತೇನೆ. ಗ್ರೂಪನ್ ಇಂಡಿಯಾ 240 ಸಹೋದ್ಯೋಗಿಗಳನ್ನು ಹೊಂದಿದ್ದು ಗೂಗಲ್ ಕ್ಯಾಲೆಂಡರ್ ನಮ್ಮ ಎಲ್ಲಾ ಇಮೇಲ್‌ಗಳಿವೆ.

ಬೆಂಕ್ಯು ಇಂಡಿಯಾ ಎಮ್‌ಡಿ

ರಾಜೀವ್ ಸಿಂಗ್

ತ್ವರಿತ ಸಂವಜನಕ್ಕಾಗಿ, ವಾಟ್ಸಾಪ್ ಗ್ರೂಪ್ ಅನ್ನು ನಾವು ಬಳಸುತ್ತಿದ್ದು, ಮಾರುಕಟ್ಟೆ ಮತ್ತು ವ್ಯವಹಾರದ ಸಂಪೂರ್ಣ ತಂಡ ಅದರೊಂದು ಭಾಗವಾಗಿದೆ. ತಮ್ಮ ತಮ್ಮ ವಿಭಾಗದಲ್ಲಿ ನಡೆಯುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತ್ವರಿತವಾಗಿ ವಿನಿಮಯ ಮಾಡಿಕೊಳ್ಳಲಾಗುತ್ತದೆ.

ಸಿಎಮ್‌ಎಸ್ ಇನ್ಫೊ ಸಿಸ್ಟಮ್ ಸಿಇಒ

ರಾಜೀವ್ ಕೌಲ್

20 ವರ್ಷಗಳಿಂದೀಚೆಗೆ, ಸಹೋದ್ಯೋಗಿಗಳೊಂದಿಗೆ ಬೆರೆತು ಕೆಲಸ ಮಾಡುವುದಕ್ಕೆ ನಾನು ಗಮನ ಹರಿಸುತ್ತೇನೆ. ನನ್ನ ಡೆಸ್ಕ್‌ನಲ್ಲಿ ಅಧಿಕ ಸಮಯ ಕಳೆಯದೇ ಜನರೊಂದಿಗೆ ಚರ್ಚೆ ಮಾಡುವುದಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತೇನೆ.

ಫಸ್ಟ್ ಡೇಟಾ ಇಂಡಿಯಾ - ಎಮ್‌ಡಿ

ಸ್ವರೂಪ್ ಚೌಧುರಿ

ಕೆಲವೊಂದು ಮೀಟಿಂಗ್ ಅನ್ನು ನಡೆಸುವ ಮೂಲಕ ಕಂಪೆನಿಗೆ ಸಂಬಧಪಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು ಮುಂದಿನ ದಿನಗಳಲ್ಲಿ ಬರಲಿವೆ ಎಂದಾದಲ್ಲಿ ತಂಡದ ಪ್ರತಿಯೊಬ್ಬ ಸದಸ್ಯರು ಮೀಟಿಂಗ್‌ನಲ್ಲಿ ಉಪಸ್ಥಿತರಿರುವಂತೆ ನೋಡಿಕೊಳ್ಳುತ್ತೇವೆ.

ವೇ2ಎಸ್‌ಎಮ್‌ಎಸ್

ರಾಜೀವ್ ವನ್‌ಪಾಲ್

ಹೆಚ್ಚಿನ ಪುಸ್ತಕಗಳು, ಬ್ಲಾಗ್‌ಗಳು ಮತ್ತು ಲೇಖನಗಳನ್ನು ಓದುತ್ತೇನೆ. ಈ ಪುಸ್ತಕಗಳು ಕೆಲಸದ ವಿಧಾನವನ್ನು ನನಗೆ ತಿಳಿಸಿಕೊಡುತ್ತಿದ್ದು ಕಂಪೆನಿಯ ಸಿಬ್ಬಂದಿಗಳನ್ನು ಹೇಗೆ ನೇಮಕ ಮಾಡಬೇಕೆಂಬ ಸಿದ್ಧಾಂತವನ್ನು ತಿಳಿಸಿಕೊಡುತ್ತವೆ.

ಶಾಪ್‌ಕ್ಲಸ್ - ಸಿಇಒ

ಸಂಜಯ್ ಸೇಥಿ

ಮೀಟಿಂಗ್‌ಗಳಲ್ಲಿ ನಾನು ಏನು ಹೇಳಿರುವೆನೋ ಅದನ್ನು ಪುನರಾವರ್ತಿಸಲು ನನ್ನ ಸದಸ್ಯರಲ್ಲಿ ನಾನು ವಿನಂತಿಸಿಕೊಳ್ಳುತ್ತೇನೆ. ಇದು ನನ್ನ ಅಭ್ಯಾಸವಾಗಿದೆ. ನನ್ನ ಸಹೋದ್ಯೋಗಿಗಳು ನಾನು ಹೇಳಿರುವುದನ್ನು ಅರ್ಥೈಸಿಕೊಂಡಿದ್ದಾರೋ ಇಲ್ಲವೋ ಎಂಬುದನ್ನು ಅರಿತುಕೊಳ್ಳಲು ಇದು ನನಗೆ ಸಹಾಯ ಮಾಡುತ್ತದೆ.

ಕ್ಯಾಶ್‌ಕರೊ.ಕಾಮ್ ಸಹ ಸ್ಥಾಪಕರು

ಸ್ವಾತಿ ಭಾರ್ಗವ್

ಬೆಳಗ್ಗಿನ ಜಾವದಲ್ಲಿ ಯೋಗ ಅಭ್ಯಸಿಸುತ್ತೇನೆ ಮತ್ತು ಟ್ವಿಟ್ಟರ್‌ನಲ್ಲಿ ನಾನು ಹೆಚ್ಚು ಚಟುವಟಿಕೆಯಿಂದಿರುತ್ತೇನೆ. ಇಮೇಲ್‌ಗಳ ಮೂಲಕ ನನಗೆ ಉತ್ತರಿಸಲು ಸಾಧ್ಯವಾಗದೇ ಇರುವವರು ಟ್ವಿಟ್ಟರ್‌ನಲ್ಲಿ ನನ್ನನ್ನು ಸಂಪರ್ಕಿಸುತ್ತಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Wonder what are the work habits of super-effective CEOs? Habits that make them successful. Here's a peek into the productivity secrets of some of the top IT CEOs of the country.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot