Home
ಸುದ್ದಿಜಾಲ

Whatsapp: ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌ ಲಭ್ಯ! ಹೆದರಬೇಡಿ... ಇನ್ಮುಂದೆ ಆ ಕೆಲಸ ಸಾಧ್ಯವೇ ಇಲ್ಲ

ವಾಟ್ಸಾಪ್‌ (Whatsapp) ಆಗಾಗ್ಗೆ ಭಿನ್ನ ಫೀಚರ್ಸ್‌ ಮೂಲಕ ಸದ್ದು ಮಾಡುತ್ತಲೇ ಇರುತ್ತದೆ. ಈ ಬೆಳವಣಿಗೆ ನಡುವೆ ಮತ್ತೊಂದು ಹೊಸ ಫೀಚರ್ಸ್ ಅನ್ನು ನೀಡಲು ಮುಂದಾಗಿದ್ದು, ಈ ಮೂಲಕ ಹಲವಾರು ಜನರು ಯಾವುದೇ ಸಮಸ್ಯೆ ಇಲ್ಲದೆ ವಾಟ್ಸಾಪ್‌ ಬಳಕೆ ಮಾಡಬಹುದಾಗಿದೆ.

ಹೌದು, ಯಾವುದೇ ಪ್ಲಾಟ್‌ಫಾರ್ಮ್ ಆದರೂ ಸಹ ಭದ್ರತೆ ಇದ್ದರಷ್ಟೇ ಅದನ್ನು ಬಳಕೆ ಮಾಡಿ. ಇಲ್ಲವಾದರೆ ಈ ಎಐ ಕಾಲಘಟ್ಟದಲ್ಲಿ ಖಂಡಿತಾ ಸಮಸ್ಯೆಗೆ ಸಿಲುಕುತ್ತೀರಾ. ಈಗಾಗಲೇ ಸಾಕಷ್ಟು ಜನರನ್ನು ಅದರಲ್ಲೂ ಸೆಲೆಬ್ರಿಟಿಗಳನ್ನು ವಿವಿಧ ರೀತಿಯಲ್ಲಿ ಕೆಟ್ಟದಾಗಿ ಬಿಂಬಿಸಿದ್ದಾರೆ. ಹಾಗಿದ್ರೆ, ಈಗ ವಾಟ್ಸಾಪ್‌ನಲ್ಲಿ ಲಭ್ಯ ಆಗುತ್ತಿರುವ ವಿಶೇಷ ಫೀಚರ್ಸ್‌ ಯಾವುದು?, ಇದರಿಂದ ಯಾರಿಗೆಲ್ಲಾ ಅನುಕೂಲ ಎಂಬ ಮಾಹಿತಿ ಇಲ್ಲಿದೆ ನೋಡಿ.

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌ ಲಭ್ಯ! ಇನ್ಮುಂದೆ ಆ ಕೆಲಸ ಸಾಧ್ಯವೇ ಇಲ್ಲ..

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್: ವಾಟ್ಸಾಪ್‌ ಬಳಕೆದಾರರಿಗೆ ಹೊಸ ಮಾಹಿತಿ ನೀಡಿದೆ. ಅಂದರೆ ವಾಟ್ಸಾಪ್ ಪ್ರೊಫೈಲ್ ಚಿತ್ರದ (Whatsapp profile picture) ಸ್ಕ್ರೀನ್‌ಶಾಟ್ (Screenshot) ಅನ್ನು ಇನ್ಮುಂದೆ ಯಾರೂ ಸಹ ತೆಗೆಯಲು ಸಾಧ್ಯವಾಗುವುದಿಲ್ಲ. ಈ ಫೀಚರ್ಸ್‌ ಅನ್ನು ವಾಟ್ಸಾಪ್‌ ಸೈಲೆಂಟ್‌ ಆಗಿ ಪರೀಕ್ಷಿಸುತ್ತಿದೆ. ಈ ಹೊಸ ಫೀಚರ್ಸ್‌ ಇನ್ಮುಂದೆ ಬಳಕೆದಾರರ ಪ್ರೊಫೈಲ್ ಚಿತ್ರಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಇನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಬಾರಿ ವೀಕ್ಷಿಸಬಹುದಾದ ಫೋಟೋಗಳು ಮತ್ತು ವಿಡಿಯೋಗಳ ಸ್ಕ್ರೀನ್‌ಶಾಟ್‌ಗಳಿಗೆ ಅನುಮತಿ ನಿರಾಕರಿಸಿದೆ. ಈ ಫೀಚರ್ಸ್‌ ಈಗಾಗಲೇ ವಾಟ್ಸಾಪ್‌ನಲ್ಲಿ ಲಭ್ಯವಿದೆ. ಆದಾಗ್ಯೂ, ಇದು ಬಳಕೆದಾರರ ಪ್ರೊಫೈಲ್ ಚಿತ್ರಗಳ ವಿಭಾಗದಲ್ಲಿ ಲಭ್ಯ ಇರಲಿಲ್ಲ. ಆದ್ದರಿಂದ, ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರೊಫೈಲ್ ಫೋಟೋಗಳನ್ನು ರಕ್ಷಿಸಲು ಸಹಾಯ ಮಾಡುವ ಫೀಚರ್ಸ್ ಅನ್ನು ವಾಟ್ಸಾಪ್‌ ಶೀಘ್ರದಲ್ಲೇ ಲಾಂಚ್‌ ಮಾಡಲಿದೆ.

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌ ಲಭ್ಯ! ಇನ್ಮುಂದೆ ಆ ಕೆಲಸ ಸಾಧ್ಯವೇ ಇಲ್ಲ..

ಮುಂಬರುವ ಹೊಸ ವಾಟ್ಸಾಪ್‌ ಅಪ್‌ಡೇಟ್ ಫೀಚರ್ಸ್‌ ಅನ್ನು ಈಗ ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ನಲ್ಲಿ ಬೀಟಾ ಆವೃತ್ತಿ 2.24.4.25 ರಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಪರೀಕ್ಷೆ ಯಶಸ್ವಿಯಾದ ನಂತರ ಮುಂದಿನ ಕೆಲವು ವಾರಗಳಲ್ಲಿ ಎಲ್ಲಾ ವಾಟ್ಸಾಪ್‌ ಬಳಕೆದಾರರಿಗೆ ಸಾರ್ವಜನಿಕವಾಗಿ ಹೊರತರಲಾಗುವುದು ಎಂದು ತಿಳಿದುಬಂದಿದೆ. ಇದಾದ ನಂತರದಲ್ಲಿ ಯುವತಿಯರು, ಮಹಿಳೆಯರು ಯಾವುದೇ ಭಯವಿಲ್ಲದೆ ಫೋಟೋ ಅಪ್‌ಡೇಟ್‌ ಮಾಡಬಹುದಾಗಿದೆ.

ಈಗಾಗಲೇ ಸಾಕಷ್ಟು ಮಕ್ಕಳ, ಯುವತಿಯರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಅವರಿಗೆ ಬೆದರಿಕೆ ಹಾಕಿರುವ ಅದೆಷ್ಟೋ ಘಟನೆಗಳು ನಮ್ಮ ಮುಂದೆ ಇವೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರೊಫೈಲ್ ಫೋಟೋಗಳ ಸ್ಕ್ರೀನ್‌ಶಾಟ್‌(profile photos Screenshot) ಅನ್ನು ನಿರ್ಬಂಧಿಸಲಾಗುತ್ತಿದೆ. ಇನ್ಮುಂದೆ ಯಾರಾದರೂ ಪ್ರೊಫೈಲ್ ಚಿತ್ರದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಮುಂದಾದರೆ ವಾಟ್ಸಾಪ್‌ ಆ ವ್ಯಕ್ತಿಗೆ ಎಚ್ಚರಿಕೆಯ ಸೂಚನೆಯನ್ನು ನೀಡುತ್ತದೆ. ಅದಾಗ್ಯೂ ನೀವು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಮುಂದಾದರೆ ಅದು ಕಪ್ಪಾದ ಹಾಗೂ ಖಾಲಿ ಫೋಟೋವನ್ನು ಮಾತ್ರ ತೋರಿಸುತ್ತದೆ.

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌ ಲಭ್ಯ! ಇನ್ಮುಂದೆ ಆ ಕೆಲಸ ಸಾಧ್ಯವೇ ಇಲ್ಲ..

ಇದೇ ವೇಳೆ ಯಾರು ಸ್ಕ್ರೀನ್‌ಶಾಟ್ ತೆಗೆಯಲು ಮುಂದಾಗುತ್ತಾರೋ ಅವರಿಗೆ 'ಅಪ್ಲಿಕೇಶನ್ ನಿರ್ಬಂಧಗಳಿಂದಾಗಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂಬ ನೋಟಿಫಿಕೇಶನ್‌ ಸಹ ಬರುತ್ತದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಗೌಪ್ಯತೆ ಫೀಚರ್ಸ್‌ ಆಯ್ಕೆಯಾಗಿ ಬರುವುದಿಲ್ಲ ಎನ್ನಲಾಗಿದೆ. ಅಂದರೆ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಹಸ್ತಚಾಲಿತವಾಗಿ ಬದಲಾಯಿಸಲು ಸಾಧ್ಯವೇ ಆಗುವುದಿಲ್ಲ.

ಫೇಸ್‌ಬುಕ್‌ನಲ್ಲಿ ಈಗಾಗಲೇ ಲಭ್ಯ ಇದೆ: ಈ ಫೀಚರ್ಸ್‌ ಅನ್ನು ಈಗಾಗಲೇ ಫೇಸ್‌ಬುಕ್‌ನಲ್ಲಿ ನೀಡಲಾಗಿದೆ. ಫೇಸ್‌ಬುಕ್ (Facebook) ಸೈಟ್‌ನಲ್ಲಿ ಬಳಕೆದಾರರ ಪ್ರೊಫೈಲ್ ಚಿತ್ರಕ್ಕೆ ಹೆಚ್ಚಿನ ರಕ್ಷಣೆ ನೀಡಲಾಗಿದೆ. ಇದರಿಂದ ಸಾಕಷ್ಟು ಸೈಬರ್‌ ಬೆದರಿಕೆಗಳನ್ನು ತಡೆಯಲಾಗಿದೆ. ಈ ಮೂಲಕ ಬಳಕೆದಾರರ ಭದ್ರತೆಗೆ ಮೆಟಾ ಸದಾ ಮುಂದು ಅನ್ನೋದನ್ನು ಈ ಮೂಲಕ ಎತ್ತಿ ತೋರಿಸಿದೆ.

Best Mobiles in India

English summary
New features will be available in WhatsApp. Due to this no one will be able to take a screenshot of profile photos on WhatsApp from now on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+