ಪ್ರೊಜೆಕ್ಟ್‌ ಔಟರ್‌ನೆಟ್‌: ವಿಶ್ವಕ್ಕೆ ಉಚಿತ ವೈಫೈ

By Ashwath
|

ಮಹಾನಗರಗಳ ಜನ ಉಚಿತವಾಗಿ ವೈಫೈ ಬಳಸುತ್ತಿದ್ದಾರೆ,ನಮಗೆ ಈ ವೈಫೈ ಸೇವೆ ಇಲ್ಲ ಎಂದು ಇನ್ನು ಮುಂದೆ ಕೊರಗಬೇಕಾಗಿಲ್ಲ. ಅಮೆರಿಕದ ಕಂಪೆನಿಯೊಂದು ಬಾಹ್ಯಾಕಾಶದಿಂದಲೇ ಸಿಗ್ನಲ್‌ ರವಾನಿಸಿ ಭೂಮಿಯ ಯಾವುದೇ ಮೂಲೆಯಲ್ಲಿ ಉಚಿತವಾಗಿ ವೈಫೈ ಸೇವೆ ನೀಡುವ ಬಗ್ಗೆ ಚಿಂತನೆ ನಡೆಸಿದೆ.

ನೆಲದಲ್ಲಿ ಓಎಫ್‌ಸಿ ಕೇಬಲ್‌‌ ಮೂಲಕ ನೀಡುವ ಇಂಟರ್‌ನೆಟ್‌ ಸೇವೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ಮಿಡಿಯಾ ಡೆವಲಪ್‌ಮೆಂಟ್‌‌ ಇನ್‌ವೆಸ್ಟ್‌‌ಮೆಂಟ್‌ ಫಂಡ್‌ ಕಂಪೆನಿ ಈ ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಗೆ ಕಂಪೆನಿ ಪ್ರೊಜೆಕ್ಟ್‌ ಔಟರ್‌‌ನೆಟ್‌(Project Outernet) ಹೆಸರಿಟ್ಟಿದೆ. ಅಮೆರಿಕದ ಕಂಪೆನಿ ಹೊಸ ಯೋಜನೆ ಆರಂಭಿಸಿರುವ ಹಿನ್ನಲೆಯಲ್ಲಿ ಈ ಯೋಜನೆಗೆ ಸಂಬಂಧಿಸಿದ ಕಿರು ಮಾಹಿತಿಯನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ಪ್ರೊಜೆಕ್ಟ್‌ ಔಟರ್‌ನೆಟ್‌: ವಿಶ್ವಕ್ಕೆ ಉಚಿತ ವೈಫೈ

ಪ್ರೊಜೆಕ್ಟ್‌ ಔಟರ್‌ನೆಟ್‌: ವಿಶ್ವಕ್ಕೆ ಉಚಿತ ವೈಫೈ

ವಿಶ್ವದ ಶೇ 40 ರಷ್ಟು ಜನ ಇನ್ನೂ ಇಂಟರ್‌ನೆಟ್‌ ಪ್ರಪಂಚಕ್ಕೆ ತೆರೆದುಕೊಂಡಿಲ್ಲ.ಜೊತೆಗೆ ಸದ್ಯದ ಇಂಟರ್‌ನೆಟ್‌ ಸೇವೆ ದುಬಾರಿಯಾಗಿದ್ದು ಎಲ್ಲಾ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸಿಗ್ನಲ್‌ ಪಡೆಯಲು ಸಾಧ್ಯವಿಲ್ಲದ ಕಾರಣ MDIF ಸಂಸ್ಥೆ ಈ ಯೋಜನೆಯನ್ನು ಆರಂಭಿಸಲು ಮುಂದಾಗುತ್ತಿದೆ.

ಪ್ರೊಜೆಕ್ಟ್‌ ಔಟರ್‌ನೆಟ್‌: ವಿಶ್ವಕ್ಕೆ ಉಚಿತ ವೈಫೈ

ಪ್ರೊಜೆಕ್ಟ್‌ ಔಟರ್‌ನೆಟ್‌: ವಿಶ್ವಕ್ಕೆ ಉಚಿತ ವೈಫೈ

ಈ ಹೊಸ ವ್ಯವಸ್ಥೆಗಾಗಿ ಪುಟ್ಟ ಪುಟ್ಟ ನೂರಾರು ಘನಾಕೃತಿಯ ಉಪಗ್ರಹಗಳನ್ನು(cube satellites constellation) ಬಾಹ್ಯಾಕಾಶದಲ್ಲಿ ಸ್ಥಾಪಿಸಿ ಆ ಉಪಗ್ರಹಗಳಿಂದ ಇಡೀ ವಿಶ್ವಕ್ಕೆ ವೈಫೈ ಸೇವೆ ನೀಡುವ ಬಗ್ಗೆ ಕಂಪೆನಿ ಚಿಂತನೆ ನಡೆಸಿದೆ.

ಪ್ರೊಜೆಕ್ಟ್‌ ಔಟರ್‌ನೆಟ್‌: ವಿಶ್ವಕ್ಕೆ ಉಚಿತ ವೈಫೈ

ಪ್ರೊಜೆಕ್ಟ್‌ ಔಟರ್‌ನೆಟ್‌: ವಿಶ್ವಕ್ಕೆ ಉಚಿತ ವೈಫೈ

ಕಂಪೆನಿ 2013 ಡಿಸೆಂಬರ್‌ನಿಂದ ಈ ಯೋಜನೆ ಸಂಬಂಧ ಕೆಲಸ ಆರಂಭಿಸಿದ್ದು, 2015 ಜೂನ್‌ ತಿಂಗಳಿನಲ್ಲಿ ಉಚಿತ ವೈಫೈ ಸಿಗುವಂತೆ ಯೋಜನೆ ರೂಪಿಸಿದೆ.

ಪ್ರೊಜೆಕ್ಟ್‌ ಔಟರ್‌ನೆಟ್‌: ವಿಶ್ವಕ್ಕೆ ಉಚಿತ ವೈಫೈ

ಪ್ರೊಜೆಕ್ಟ್‌ ಔಟರ್‌ನೆಟ್‌: ವಿಶ್ವಕ್ಕೆ ಉಚಿತ ವೈಫೈ

ಈ ಯೋಜನೆಗೆ ಅಂದಾಹು ಮೂರು ಲಕ್ಷ ಡಾಲರ್‌ ಖರ್ಚಾ‌ಗಬಹುದು ಎಂದು ಕಂಪೆನಿ ಅಂದಾಜಿಸಿದ್ದು,ಬಂಡವಾಳ ಕ್ರೋಢೀಕರಣದಲ್ಲಿ ಈಗ ತೊಡಗಿದೆ.

ಮಾಹಿತಿ:www.outernet.is

ಪ್ರೊಜೆಕ್ಟ್‌ ಔಟರ್‌ನೆಟ್‌: ವಿಶ್ವಕ್ಕೆ ಉಚಿತ ವೈಫೈ

ಪ್ರೊಜೆಕ್ಟ್‌ ಔಟರ್‌ನೆಟ್‌: ವಿಶ್ವಕ್ಕೆ ಉಚಿತ ವೈಫೈ

ಇಂಟರ್‌ನೆಟ್‌ ದಿಗ್ಗಜ ಗೂಗಲ್‌ ಕಡಿಮೆ ಬೆಲೆಯಲ್ಲಿ ಇಂಟರ್‌ನೆಟ್‌ ಸಂಪರ್ಕ‌ಕ್ಕಾಗಿ 'ಪ್ರೊಜೆಕ್ಟ್ ಲೂನ್‌'ಸಂಶೋಧನೆಯಲ್ಲಿ ನಿರತವಾಗಿದ್ದು,ಆಗಸಕ್ಕೆ ಪಾರದರ್ಶಕ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಅದರಿಂದ ಸಂಕೇತಗಳನ್ನುಪಡೆಯುವ ಪ್ರಯತ್ನವನ್ನು ಆರಂಭಿಸಿದೆ. ಆರಂಭಿಕ ಹಂತವಾಗಿ ಜೂನ್‌ 2013 ‌ರಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ಈ ಪಾರದರ್ಶಕ ಬಲೂನ್‌ ಆಗಸಕ್ಕೆ ಹಾರಿಸಿದೆ.

ವೈಫೈ ಬದಲಿಗೆ ಲಿಫೈ- ಚೀನಾ ಸಂಶೋಧನೆವೈಫೈ ಬದಲಿಗೆ ಲಿಫೈ- ಚೀನಾ ಸಂಶೋಧನೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X