Home
ಸುದ್ದಿಜಾಲ

ಪ್ರೊಮೇಟ್ ಎಕ್ಸ್‌ವಾಚ್-B2 ಸ್ಮಾರ್ಟ್‌ವಾಚ್ ಲಾಂಚ್: ಆಕರ್ಷಕ ಫೀಚರ್ಸ್‌, ಬೆಲೆ ಎಷ್ಟು?

ಸ್ಮಾರ್ಟ್‌ವಾಚ್‌ಗಳು (Smartwatch) ಇಂದು ಭಿನ್ನ ವಿಭಿನ್ನ ಫೀಚರ್ಸ್‌ ಆಯ್ಕೆಯೊಂದಿಗೆ ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತಾ ಬರುತ್ತಿವೆ. ಅದರಂತೆ ಎಲೆಕ್ಟ್ರಿಕಲ್ ಉತ್ಪನ್ನಗಳ ಕಂಪನಿಯಾದ ಪ್ರೊಮೇಟ್ (Promate) ತನ್ನ ಧರಿಸಬಹುದಾದ ವಸ್ತುಗಳ ಲಿಸ್ಟ್‌ಗೆ ಹೊಸ ವಾಚ್‌ ಸೇರಿಸಿದೆ. ಈ ಸ್ಮಾರ್ಟ್‌ವಾಚ್‌ 2.01 ಇಂಚಿನ ಡಿಸ್‌ಪ್ಲೇ ಹೊಂದಿದೆ.

ಹೌದು, ಪ್ರೊಮೇಟ್ ಇದೀಗ ಎಕ್ಸ್‌ವಾಚ್-B2 ಸ್ಮಾರ್ಟ್‌ವಾಚ್ (Promate XWatch-B2 smartwatch) ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್ 240 x 296 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ, ವೈಡ್ ಸ್ಕ್ರೀನ್ ವೈಶಿಷ್ಟ್ಯ, 123 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್ ಅನ್ನು ಈ ವಾಚ್‌ ಹೊಂದಿಗೆ. ಹಾಗಿದ್ರೆ ದರ ಇದರ ಇತರೆ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರಗಳನ್ನು ತಿಳಿಯಲು ಈ ಲೇಖನ ಓದಿರಿ.

ಪ್ರೊಮೇಟ್ ಎಕ್ಸ್‌ವಾಚ್-B2 ಸ್ಮಾರ್ಟ್‌ವಾಚ್ ಲಾಂಚ್: ಬೆಲೆ ಎಷ್ಟು?

ಪ್ರೊಮೇಟ್ ಎಕ್ಸ್‌ವಾಚ್-B2 ಸ್ಮಾರ್ಟ್‌ವಾಚ್ ವಿನ್ಯಾಸ: ಈ ಸ್ಮಾರ್ಟ್‌ವಾಚ್‌2.01 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಹೊಂದಿದ್ದು, ಇದು 240X296 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 500 ನಿಟ್ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 200+ ವಾಚ್‌ ಫೇಸ್‌ಗಳೊಂದಿಗೆ ಕಾಣಿಸಿಕೊಂಡಿದ್ದು, ಈ ಮೂಲಕ ಅತ್ಯುತ್ತಮ ಸ್ಮಾರ್ಟ್‌ವಾಚ್‌ ಎನಿಸಿಕೊಂಡಿದೆ.

ಪ್ರೊಮೇಟ್ ಎಕ್ಸ್‌ವಾಚ್-B2 ಸ್ಮಾರ್ಟ್‌ವಾಚ್ ಫೀಚರ್ಸ್‌: ಉಳಿದಂತೆ ಈ ಹೊಸ ಸ್ಮಾರ್ಟ್‌ವಾಚ್‌ ವೈಡ್ ಸ್ಕ್ರೀನ್ ವೈಶಿಷ್ಟ್ಯದಿಂದಾಗಿ ಸ್ಕ್ರೀನ್ ನ್ಯಾಜಿಗೇಶನ್ ತುಂಬಾ ಸುಲಭವಾಗಿರುತ್ತದೆ. ಅಲ್ಲದೆ ಲಭ್ಯವಿರುವ ಮಾಹಿತಿಯನ್ನು ತೊಂದರೆಯಿಲ್ಲದೆ ಒಂದೇ ನೋಟದಲ್ಲಿ ವೀಕ್ಷಣೆ ಮಾಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಮತ್ತು ಪ್ರೊಮೇಟ್ ಆರೋಗ್ಯ ಮತ್ತು ಫಿಟ್‌ನೆಸ್ ವಿಚಾರದಲ್ಲೂ ಒಂದು ಕೈ ಮುಂದೆ ಇದ್ದು, ಆಕ್ಟಿವ್ ಲೈಫ್ ಟಿಎಮ್‌ ಹೆಲ್ತ್ ಸೂಟ್ ಅನ್ನು ಒಳಗೊಂಡಿದೆ.

ಪ್ರೊಮೇಟ್ ಎಕ್ಸ್‌ವಾಚ್-B2 ಸ್ಮಾರ್ಟ್‌ವಾಚ್ ಲಾಂಚ್: ಬೆಲೆ ಎಷ್ಟು?

ಜೊತೆಗೆ ವಿವಿಧ ಆರೋಗ್ಯ ಸೆನ್ಸರ್‌ ಆಯ್ಕೆ ಈ ವಾಚ್‌ನಲ್ಲಿದ್ದು, ಇನ್‌ಬಿಲ್ಟ್‌ ಪೆಡೋಮೀಟರ್, ಡೈನಾಮಿಕ್ ಹೃದಯ ಬಡಿತ ಮೇಲ್ವಿಚಾರಣೆ, ರಕ್ತದ ಆಮ್ಲಜನಕದ ಮಟ್ಟ, ನಿದ್ರೆಯ ಮಾದರಿ ಸೇರಿದಂತೆ ವಿವಿಧ ವಿಷಯಗಳ ಮೇಲೆ ಸದಾ ಕಣ್ಣಿಟ್ಟಿರುತ್ತದೆ. ಇದಲ್ಲದೆ 123 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದ್ದು, ಈ ಕಾರಣಕ್ಕೆ ಕ್ರೀಡಾ ಪ್ರೇಮಿಗಳು ಈ ವಾಚ್‌ ಖರೀದಿಗೆ ಮುಗಿಬೀಳೋದು ಪಕ್ಕಾ ಆಗಿದೆ. ಅಷ್ಟೇ ಅಲ್ಲದೆ ಈ ವಾಚ್ ನಯವಾದ ನ್ಯಾವಿಗೇಷನ್‌ಗಾಗಿ ಸಂಪೂರ್ಣ ಕ್ರಿಯಾತ್ಮಕ ಕ್ರೌನ್‌ ಬಟನ್‌ ಆಯ್ಕೆ ಪಡೆದಿದ್ದು, ಈ ವಾಚ್‌ನ ಅಂದವನ್ನು ಇನ್ನಷ್ಟು ಹೆಚ್ಚಿಗೆ ಮಾಡಲಿದೆ.

ಈ ಎಕ್ಸ್‌ವಾಚ್-P2 ಸ್ಮಾರ್ಟ್‌ವಾಚ್ IP67 ವಾಟರ್ ರೆಸಿಸ್ಟೆನ್ಸ್ ರೇಟಿಂಗ್‌ನೊಂದಿಗೆ ಪ್ಯಾಕ್‌ ಆಗಿದ್ದು, ಆಕಸ್ಮಿಕವಾಗಿ ವಾಚ್ ಮೇಲೆ ನೀರು ಬಿದ್ದರೆ ಅಥವಾ ವ್ಯಾಯಾಮ ಮಾಡುವಾಗ ಬೆವರು ಉಂಟಾದರೆ ವಾಚ್‌ಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅಷ್ಟೇ ಅಲ್ಲದೆ ನೀರಿನ ಪ್ರತಿರೋಧದ ಜೊತೆಗೆ ಧೂಳಿನ ಪ್ರತಿರೋಧವೂ ಇರಲಿದ್ದು, ಪರಿಣಾಮ ನೀವು ಈ ವಾಚ್‌ ಅನ್ನು ಎಲ್ಲಿಬೇಕಾದರೂ ಬಳಕೆ ಮಾಡಬಹುದಾಗಿದೆ.

ಪ್ರೊಮೇಟ್ ಎಕ್ಸ್‌ವಾಚ್-B2 ಸ್ಮಾರ್ಟ್‌ವಾಚ್ ಲಾಂಚ್: ಬೆಲೆ ಎಷ್ಟು?

ಜೊತೆಗೆ ಈ ಸ್ಮಾರ್ಟ್‌ವಾಚ್‌ ಐಓಎಸ್‌ ಮತ್ತು ಅಂಡ್ರಾಯ್ಡ್ (iOS and Android) ಡಿವೈಸ್‌ಗಳಿಗೆ ಸಪೋರ್ಟ್‌ ಮಾಡಲಿದ್ದು, ಸುಲಭ ಕನೆಕ್ಟಿವಿಟಿಗಾಗಿ ಬ್ಲೂಟೂತ್ ಆವೃತ್ತಿ 5.2 ತಂತ್ರಜ್ಞಾನವನ್ನು ಹೊಂದಿದೆ. ಅಷ್ಟೇ ಅಲ್ಲದೆ ಒಂದು ಬಾರಿ ಈವಾಚ್‌ ಅನ್ನು ಪೂರ್ಣವಾಗಿ ಚಾರ್ಜಿಂಗ್‌ ಮಾಡಿದ್ರೆ 10 ರಿಂದ 15 ದಿನಗಳವರೆಗೆ ಬಳಕೆ ಮಾಡಬಹುದು ಎಂದು ಕಂಪೆನಿ ಮಾಹಿತಿ ನೀಡಿದೆ. ಸದ್ಯಕ್ಕೆ ಈ ವಾಚ್‌ ಅನ್ನು 2499ರೂ.ಗಳ ಆಫರ್ ಬೆಲೆಗೆ ಪರಿಚಯಿಸಲಾಗಿದ್ದು, 12 ತಿಂಗಳ ವಾರಂಟಿ ಆಯ್ಕೆ ನೀಡಲಾಗಿದೆ. ಇದು ನೀಲಿ, ಕಪ್ಪು ಮತ್ತು ಗ್ರ್ಯಾಫೈಟ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯ.

Best Mobiles in India

English summary
Promate has just launched the Promate XWatch-B2 smartwatch. This smartwatch is capable of 240 x 296 pixels screen resolution, wide screen feature.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+