Subscribe to Gizbot

ನಿಮ್ಮ ಯಾಹೂ ಖಾತೆಗೆ ಕನ್ನ ಹಾಕಲು ಸಾಧ್ಯವೇ ಇಲ್ಲ..!!

Written By:

ಇಂದಿನ ದಿನಗಳಲ್ಲಿ ಇಮೇಲ್ ಖಾತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹ್ಯಾಕ್ ಆಗುತ್ತಿದ್ದು, ಇದನ್ನು ತಡೆಯುವ ಸಲಯವಾಗಿ ಗೂಗಲ್ ತನ್ ಜಿಮೇಲ್ ಖಾತೆಗಳಿಗೆ ಎರಡು ಹಂತದ ಸುರಕ್ಷತೆಯನ್ನು ನೀಡಿತ್ತು. ಈಗ ಇದೇ ಮಾದರಿಯನ್ನು ಯಾಹೂ ಸಹ ಅನುಸರಿಸಲು ಮುಂದಾಗಿದೆ.

ನಿಮ್ಮ ಯಾಹೂ ಖಾತೆಗೆ ಕನ್ನ ಹಾಕಲು ಸಾಧ್ಯವೇ ಇಲ್ಲ..!!

ಓದಿರಿ: ಚೀನಾ ಫೋನ್ ಬಿಟ್ಟಾಕಿ: ಇಲ್ಲಿದೇ ರೂ.4,500ಕ್ಕೆ ಭಾರತ್ ಬೊಂಬಾಟ್ ಫೋನ್‌ಗಳು

ಎರಡು ವರ್ಷಗಳ ಹಿಂದೆ ಗೂಗಲ್ ಎರಡು ಹಂತದ ಸುರಕ್ಷತಾ ವ್ಯವಸ್ಥೆಯನ್ನು ಪರಿಚಯಿಸಿತ್ತು. ಯಾಹೂ ಸಹ ತನ್ನ ಖಾತೆಗಳಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುವ ಸಲುವಾಗಿ ಟು-ಫ್ಯಾಕ್ಟರ್‌ ಅಥೆಂಟಿಕೇಷನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡು ಹಂತದ ಸುರಕ್ಷತೆ:

ಎರಡು ಹಂತದ ಸುರಕ್ಷತೆ:

ಮೊದಲ ಹಂತದಲ್ಲಿ ಪಾಸ್‌ವರ್ಡ್‌ ಮೂಲಕ ಲಾಗ್‌ ಇನ್‌ / ಸೈನ್‌ ಇನ್‌ ಆದ ಬಳಿಕ ಎರಡನೇ ಹಂತದಲ್ಲಿ ನಿಮ್ಮ ಮೊಬೈಲ್‌ಗೆ ಟೆಕ್ಸ್ಟ್‌ ಮೆಸೇಜ್‌ ಮೂಲಕ ಲಾಗ್‌ ಇನ್‌ ಕೋಡ್‌ ಬರುತ್ತದೆ ಅದನ್ನು ಎಂಟ್ರಿ ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಎಂಟ್ರಿ ದೊರೆಯಲಿದೆ.

ಪಾಸ್‌ವರ್ಡ್ ಕದಿಯಲು ಸಾಧ್ಯವಿಲ್ಲ:

ಪಾಸ್‌ವರ್ಡ್ ಕದಿಯಲು ಸಾಧ್ಯವಿಲ್ಲ:

ಎರಡು ಹಂತದ ಸೆಕ್ಯೂರಿಟಿಯಲ್ಲಿ ಪಾಸ್ ವರ್ಡ್ ಕದಿಯಲು ಸಾಧ್ಯವೇ ಇಲ್ಲ ಮತ್ತು ಬ್ರೌಸರ್ ಗಳು ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ ಏಕೆಂದರೆ OTP ಇಲ್ಲದೇ ನಿಮ್ಮ ಆಕೌಂಟ್ ಅನ್ನು ಓಪನ್ ಮಾಡಲು ಸಾಧ್ಯವೇ ಇಲ್ಲ.

ಅಲರ್ಟ್ ಮಾಡುತ್ತದೆ:

ಅಲರ್ಟ್ ಮಾಡುತ್ತದೆ:

ಒಂದು ವೇಳೆ ಬೇರೆ ಯಾರಾದರೂ ನಿಮ್ಮ ಅಕೌಂಟ್‌ನ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಕದ್ದು ಲಾಗ್‌ಇನ್‌ ಆಗಲು ಪ್ರಯತ್ನಿಸಿದರೆ ತಕ್ಷಣ ನಿಮಗೆ ಲಾಗ್‌ ಇನ್‌ ಅಲರ್ಟ್‌ ಬರುತ್ತದೆ. ಯಾರೋ ನಿಮ್ಮ ಅಕೌಂಟ್‌ಗೆ ಕನ್ನ ಹಾಕುತ್ತಿದ್ದಾರೆಂಬ ಮಾಹಿತಿ ನಿಮಗೆ ತಕ್ಷಣಕ್ಕೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Turn two-step verification on or off. Sign in and go to your Account security page. Next to Two-step verification, to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot