ಚೀನಾ ಫೋನ್ ಬಿಟ್ಟಾಕಿ: ಇಲ್ಲಿದೇ ರೂ.4,500ಕ್ಕೆ ಭಾರತ್ ಬೊಂಬಾಟ್ ಫೋನ್‌ಗಳು

ಮೈಕ್ರೋ ಮಾಕ್ಸ್ ಕಂಪನಿಯೂ ಮತ್ತೇರಡು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಭಾರತ್ 3 ಮತ್ತು ಭಾರತ್ 4 ಹೆಸರಿನ 4G ಸಫೋರ್ಟ್ ಮಾಡುವ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ.

|

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಮೈಕ್ರೋ ಮಾಕ್ಸ್ ಕಂಪನಿಯೂ ಮತ್ತೇರಡು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಭಾರತ್ 3 ಮತ್ತು ಭಾರತ್ 4 ಹೆಸರಿನ 4G ಸಫೋರ್ಟ್ ಮಾಡುವ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಈಗಾಗಲೇ ಮಾಡಿದೆ.

ಚೀನಾ ಫೋನ್ ಬಿಟ್ಟಾಕಿ: ಇಲ್ಲಿದೇ ರೂ.4,500ಕ್ಕೆ ಭಾರತ್ ಬೊಂಬಾಟ್ ಫೋನ್‌ಗಳು

ಓದಿರಿ: ಆನ್‌ಲೈನಿನಲ್ಲಿ ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವುದು ಹೇಗೆ?

ಈಗಾಗಲೇ ಮಾರುಕಟ್ಟೆಯಲ್ಲಿ ಭಾರತ್ 2 ಮತ್ತು ಭಾರತ್ 2 ಪ್ಲಸ್ ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದ್ದು, ಅಲ್ಲದೇ ಭಾರಿ ಜನಪ್ರಿಯತೆಯನ್ನು ಗಳಿಸಿಕೊಂಡಿದೆ, ಈ ಹಿನ್ನಲೆಯಲ್ಲಿ ಮೈಕ್ರೊಮ್ಯಾಕ್ಸ್ ಭಾರತ್ ಸರಣಿಯ ಮತ್ತೇರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಭಾರತ್ 3 ಸ್ಮಾರ್ಟ್‌ಫೋನ್:

ಭಾರತ್ 3 ಸ್ಮಾರ್ಟ್‌ಫೋನ್:

ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ MT6737 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಕ್ವಾಡ್‌ಕೋರ್ ಪ್ರೋಸೆಸರ್ ಹೊಂದಿದ್ದು, 1GB RAM ಮತ್ತು 8 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. 4.5 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದ್ದು, 2.5D ಕರ್ವ್ಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದೆ. ಅಲ್ಲದೇ 2000mAh ಬ್ಯಾಟರಿಯೂ ಇದರಲ್ಲಿದೆ.

ಭಾರತ್ 4 ಸ್ಮಾರ್ಟ್‌ಫೋನ್:

ಭಾರತ್ 4 ಸ್ಮಾರ್ಟ್‌ಫೋನ್:

ಈ ಸ್ಮಾರ್ಟ್‌ಫೋನ್‌ನಲ್ಲಿ 5 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಮೀಡಿಯಾ ಟೆಕ್ MT6737 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಕ್ವಾಡ್‌ಕೋರ್ ಪ್ರೋಸೆಸರ್ ಹೊಂದಿದ್ದು, 1GB RAM ಮತ್ತು 16 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. 2.5D ಕರ್ವ್ಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದೆ. ಅಲ್ಲದೇ 2500mAh ಬ್ಯಾಟರಿಯೂ ಇದರಲ್ಲಿದೆ.

ಎರಡು ಫೋನ್‌ನಲ್ಲಿ ಒಂದೇ ಮಾದರಿ ಕ್ಯಾಮೆರಾ:

ಎರಡು ಫೋನ್‌ನಲ್ಲಿ ಒಂದೇ ಮಾದರಿ ಕ್ಯಾಮೆರಾ:

ಭಾರತ್ 3 ಮತ್ತು ಭಾರತ್ 4 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 5 MP ಕ್ಯಾಮೆರಾವನ್ನು ಮುಂಭಾಗದಲ್ಲಿಯೂ 5 MP ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಬೆಲೆ:

ಬೆಲೆ:

ಭಾರತ್ 3 ರೂ.4,599ಕ್ಕೆ ಲಭ್ಯವಿದ್ದು, ಇದೇ ಮಾದರಿಯಲ್ಲಿ ಭಾರತ್ 4 ಸ್ಮಾರ್ಟ್‌ಫೋನ್ ರೂ.4,999ಕ್ಕೆ ದೊರೆಯುತ್ತಿದೆ. ಇವು ಚೀನಾಫೋನ್‌ಗಳಿಗೆ ಪ್ರಬಲ ಸ್ಪರ್ಧೆಯನ್ನು ನೀಡಲಿದೆ.

ಭಾರತ್ 2 ಮಿಲಿಯನ್ ಮೊಬೈಲ್ ಸೇಲ್:

ಭಾರತ್ 2 ಮಿಲಿಯನ್ ಮೊಬೈಲ್ ಸೇಲ್:

ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಭಾರತ್ 2 ಸ್ಮಾರ್ಟ್‌ಫೋನ್ ಸುಮಾರು 2 ಮಿಲಿಯನ್ ನಷ್ಟು ಮಾರಾಟವಾಗಿದೆ. ಅಲ್ಲದೇ ಬೆಲೆಗೆ ತಕ್ಕ ಗುಣಮಟ್ಟವನ್ನು ಹೊಂದಿದೆ ಹೀಗಾಗಿ ಸಾಕಷ್ಟು ಮಂದಿಯನ್ನು ತಲುಪಲು ಮುಂದಾಗಿದೆ.

22 ಭಾರತೀಯ ಭಾಷೆಗಳಿಗೆ ಸಪೋರ್ಟ್ ಮಾಡುತ್ತೆ:

22 ಭಾರತೀಯ ಭಾಷೆಗಳಿಗೆ ಸಪೋರ್ಟ್ ಮಾಡುತ್ತೆ:

ಭಾರತ್ 3 ಮತ್ತು ಭಾರತ್ 4 ಸ್ಮಾರ್ಟ್‌ಫೋನ್‌ಗಳು ಕನ್ನಡ ಸೇರಿದಂತೆ ಭಾರತದಲ್ಲಿ ಲಭ್ಯವಿರುವ ಒಟ್ಟು 22 ಭಾಷೆಗಳಿಗೆ ಸಫೋರ್ಟ್ ಮಾಡಲಿದೆ. ಇದರಿಂದಾಗಿ ಆಂಗ್ಲ ಭಾಷೆ ತಿಳಿಯದೆ ಇದ್ದರೂ ಸಹ ಈ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು.

Best Mobiles in India

English summary
Micromax today added the Bharat 3 and Bharat 4 to its budget-oriented 4G series. to know more visti kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X