ಇಸ್ರೋ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

By Ashwath
|

ಇಸ್ರೋದ ಎರಡನೇ ನ್ಯಾವಿಗೇಶನ್‌ ಉಪಗ್ರಹ ಐಆರ್‌ಎನ್ಎಸ್‌ಎಸ್‌ 1ಬಿ ಯಶಸ್ವಿಯಾಗಿ ಉಡಾವಣೆಯಾಗಿದೆ.ಭಾರತೀಯ ಕಾಲಮಾನ ಸಂಜೆ 5.14ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಐಆರ್‌ಎನ್‌ಎಸ್‌ಎಸ್-1ಬಿ' ಉಪಗ್ರಹ ವನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 24' ರಾಕೆಟ್ ಉಡಾವಣೆಯನ್ನು ಇಸ್ರೋ ಯಶಸ್ವಿಯಾಗಿ ನೆರವೆರಸಿದೆ.

ಈ ಉಪಗ್ರಹ ಸಮುದ್ರ ವಾಯು ಮಾರ್ಗಗಳ ನಿಖರ ಮಾಹಿತಿ ನೀಡುವುದರ ಜೊತೆಗೆ,ಪ್ರಕೃತಿ ವಿಕೋಪ ನಿರ್ವಹಣೆಗೂ ಸಹಾಯಕವಾಗಲಿದೆ.

ಭಾರತ ಇಲ್ಲಿಯವರಗೆ ಉಪಗ್ರಹ ಆಧಾರಿತ ದಿಕ್ಸೂಚಿ ವ್ಯವಸ್ಥೆಗೆ ಅಮೆರಿಕ ಹಾರಿ ಬಿಟ್ಟಿದ್ದ ಜಿಪಿಎಸ್‌(ಗ್ಲೋಬಲ್ ಪೊಸಿಷನಿಂಗ್‌ ಸಿಸ್ಟಂ) ಉಪ್ರಗಹವನ್ನು ಅವಲಂಬಿಸಿತ್ತು. ಈ ಅವಲಂಬನೆಯನ್ನು ತಪ್ಪಿಸಲು ಮತ್ತು ದೇಶಕ್ಕೆ ತಾವೇ ನಿರ್ಮಿಸಿದ ದಿಕ್ಸೂಚಿ ಉಪಗ್ರಹದ ಸೇವೆಯನ್ನು ದೇಶದ ಮಿಲಿಟರಿ ಮತ್ತಿತ್ತರ ಕಾರ್ಯಗಳಿಗೆ ಬಳಸಲು ಇಸ್ರೋ ಏಳು ಐಆರ್‌ಎನ್ಎಸ್‌ಎಸ್‌ ಸರಣಿಯ ಉಪಗ್ರಹಗಳ ಉಡಾವಣೆ ಮಾಡಲು ಯೋಜನೆ ರೂಪಿಸಿದೆ.

ಸರಣಿಯ ಮೊದಲ ಆರ್‌ಎನ್ಎಸ್‌ಎಸ್‌- 1ಉಪಗ್ರಹವನ್ನು 2013ರ ಜುಲೈ 1ರಂದು ಉಡಾವಣೆ ಮಾಡಲಾಗಿತ್ತು.ಈ ಸರಣಿಯ ಇನ್ನೆರಡು ಉಪಗ್ರಹಗಳನ್ನು ಈ ವರ್ಷದೊಳಗೆ ಇಸ್ರೋ ಉಡಾವಣೆ ಮಾಡಲಿದೆ.

ನಿರಂತರ ಸುದ್ದಿಗಾಗಿ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

<center><iframe width="100%" height="360" src="//www.youtube.com/embed/LtdgrcF1nFg?feature=player_detailpage" frameborder="0" allowfullscreen></iframe></center>

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X