ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

By Ashwath
|

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಮೊದಲ ಬಾರಿಗೆ ಮಧ್ಯರಾತ್ರಿ ಉಪಗ್ರಹವನ್ನು ಹಾರಿಬಿಡುವ ಮೂಲಕ ನೂತನ ಮೈಲಿಗಲ್ಲನ್ನು ಸ್ಥಾಪಿಸಿದೆ. ಭೂಸ್ಥಳ ಮಾಹಿತಿ ರವಾನೆಗೆಂದೇ ರೂಪಿಸಲಾದ ಐಆರ್‌ಎನ್‌ಎಸ್‌ಎಸ್-1ಎ' ಉಪಗ್ರಹ ವನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 22' ರಾಕೆಟ್ ಉಡಾವಣೆಯನ್ನು ಇಸ್ರೋ ಯಶಸ್ವಿಯಾಗಿ ನೆರವೆರಸಿದೆ. ನಿನ್ನೆ ರಾತ್ರಿ ಸರಿಯಾಗಿ 11.41ಕ್ಕೆ ಆಂಧ್ರಪಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್ ಅಂತರಿಕ್ಷ ಕೇಂದ್ರದಿಂದ ಯಶಸ್ವಿಯಾಗಿ ಹಾರಿಸಿದೆ.

ಇಸ್ರೋ ರಾತ್ರಿ ವೇಳೆ ಉಪಗ್ರಹವನ್ನು ಉಡಾಯಿಸುವುದು ಬಹಳ ಅಪರೂಪ. ಹೀಗಾಗಿ ನಿನ್ನೆ ರಾತ್ರಿ ಉಡಾವಣೆಯಾದ ಈ ಉಪಗ್ರಹದಿಂದ ದೇಶಕ್ಕೆ ಏನು ಲಾಭ, ರಾತ್ರಿಯಲ್ಲೇ ಯಾಕೆ ಉಡಾಯಿಸಲಾಯಿತು ಎನ್ನುವ ಮತ್ತಿತ್ತರ ಮಾಹಿತಿಯನ್ನು ಮುಂದಿನ ಪುಟದಲ್ಲಿ ವಿವರಿಸಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ಮಂಗಳ ಗ್ರಹದಲ್ಲಿ ಇಲಿ ಪತ್ತೆಯಾಗಿದೆಯಂತೆ! ನಿಮಗೆ ಗೊತ್ತಾ?

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಭಾರತ ಇಲ್ಲಿಯವರಗೆ ಉಪಗ್ರಹ ಆಧಾರಿತ ದಿಕ್ಸೂಚಿ ವ್ಯವಸ್ಥೆಗೆ ಅಮೆರಿಕ ಹಾರಿ ಬಿಟ್ಟಿದ್ದ ಜಿಪಿಎಸ್‌( ಗ್ಲೋಬಲ್ ಪೊಸಿಷನಿಂಗ್‌ ಸಿಸ್ಟಂ) ಉಪ್ರಗಹವನ್ನು ಅವಲಂಬಿಸಿತ್ತು. ಈ ಅವಲಂಬನೆಯನ್ನು ತಪ್ಪಿಸಲು ಮತ್ತು ದೇಶಕ್ಕೆ ತಾವೇ ನಿರ್ಮಿಸಿದ ದಿಕ್ಸೂಚಿ ಉಪಗ್ರಹದ ಸೇವೆಯನ್ನು ದೇಶದ ಮಿಲಿಟರಿ ಮತ್ತಿತ್ತರ ಕಾರ್ಯಗಳಿಗೆ ಬಳಸಲು ಇಸ್ರೋ ಈ ಉಪಗ್ರಹವನ್ನು ಉಡಾವಣೆ ಮಾಡಿದೆ.

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಉಪಗ್ರಹವನ್ನು ಹಾರಿಸಿದ ಬಳಿಕ ದಿಕ್ಸೂಚಿ ವ್ಯವಸ್ಥೆಗೆ ದೇಶಿಯವಾಗಿ ಉಪಗ್ರಹ ಆಧಾರಿತ ವ್ಯವಸ್ಥೆಯನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ಈಗ ಸೇರಿಕೊಂಡತಾಗಿದೆ.

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ವಿಪತ್ತು ನಿರ್ವಹಣೆ ಮತ್ತು ನೌಕಾಪಡೆಯ ಹಡಗುಗಳಿಗೆ ದಿಕ್ಸೂಚಿಯಾಗಲು ಈ ಉಪಗ್ರಹ ನೆರವಾಗಲಿದೆ. ಈ ಹಿಂದೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಕಾರಣ ಉಪಗ್ರಹದ ಉಡಾವಣೆಯನ್ನು ಇಸ್ರೋ ಮುಂದೂಡಿತ್ತು.

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಉಪಗ್ರಹದಿಂದ ಲಭ್ಯವಾಗಲಿರುವ ಮಾಹಿತಿಯು ಪ್ರಾಕೃತಿಕ ವಿಕೋಪ ನಿರ್ವಹಣೆ, ವಾಹನಗಳ ಸಂಚಾರ ಹಾಗೂ ನೌಕಾ ಸಂಚಾರ ಸೇರಿದಂತೆ ಹಲವು ಬಗೆಯಲ್ಲಿ ನೆರವು ನೀಡಲಿದೆ. ನಕ್ಷೆ ತಯಾರಿಕೆ,ಮೊಬೈಲ್ ಫೋನ್‌ಗಳಲ್ಲಿ ಭೌಗೋಳಿಕ ಮಾಹಿತಿ ನೀಡುವುದು, ಚಾಲಕರಿಗೆ ದೃಶ್ಯ ಹಾಗೂ ಧ್ವನಿ ಸೂಚನೆ,ಪ್ರವಾಸಿಗರು ಹಾಗೂ ಚಾರಣಿಗರಿಗೆ ದಿಕ್ಸೂಚಿ ನೆರವನ್ನು ಈ ಉಪಗ್ರಹ ಒದಗಿಸಲಿದೆ.

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಈ ಉಪಗ್ರಹದ ತೂಕ 1425ಕೆಜಿಗಳಿದ್ದು, 1400 ಕೋಟಿ ವೆಚ್ಚ ಮಾಡಿ ಇಸ್ರೋ ಈ ಉಪಗ್ರಹವನ್ನು ತಯಾರಿಸಿದೆ.

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಐಆರ್‌ಎನ್‌ಎಸ್‌ಎಸ್-1ಎ ಉಪಗ್ರಹ ವನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 22 320 ಟನ್‌ ತೂಕವನ್ನು ಹೊಂದಿದೆ. ದೇಶದಲ್ಲಿನ ಬಳಕೆದಾರರಿಗೆ ಭೂಸ್ಥಳ ಮಾಹಿತಿ ನೀಡಲೆಂದೇ ವಿಶೇಷವಾಗಿ ರೂಪಿಸಲಾದ ಈ ಉಪಗ್ರಹವು 10 ವರ್ಷಗಳ ಅವಧಿಯವರೆಗೆ ಕಾರ್ಯನಿರ್ವಹಿಸಲಿದೆ.

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಐಆರ್‌ಎನ್‌ಎಸ್‌ಎಸ್‌ ಏಳು ಉಪಗ್ರಹಗಳನ್ನೊಳಗೊಂಡಿರುವ ಪ್ರಾದೇಶಿಕ ವ್ಯವಸ್ಥೆಯಾಗಿದ್ದು, ಈ ಉಪಗ್ರಹ ನಾಗರಿಕರ ಬಳಕೆಗಾಗಿ ಸ್ಟಾಂಡರ್ಡ್‌ ಪೊಸಿಷನಿಂಗ್‌ ಸರ್ವಿಸ್‌ ಮತ್ತು ನಿಬಂಧಿತ ಸೇವೆಗೆ ರಿಷ್ಟ್ರಿಕ್ಟೆಡ್‌ ಸರ್ವಿಸ್‌ ಎನ್ನುವ ಎರಡು ಮುಖ್ಯ ಸೇವೆಗಳನ್ನು ಒದಗಿಸಲಿದೆ.

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಉಪಗ್ರಹ ಕಕ್ಷೆಗೆ ಸೇರಲು ಅನುಕೂಲಕರ ಸಮಯ ಮತ್ತು ವೆಚ್ಚ ಉಳಿತಾಯವಾಗುವುದರಿಂದ ಇಸ್ರೋ ಮೊದಲ ಬಾರಿಗೆ ರಾತ್ರಿ ವೇಳೆಯಲ್ಲಿ ಈ ಉಪಗ್ರಹವನ್ನು ಉಡಾವಣೆ ಮಾಡಿದೆ.

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಅಮೆರಿಕ -- ಜಿಪಿಎಸ್‌ (24 ಉಪಗ್ರಹ)
ಚೀನಾ -- Beidou (35 ಉಪಗ್ರಹ)
ರಷ್ಯಾ-- ಗ್ಲೋನಾಸ್‌(24 ಉಪಗ್ರಹ)
ಯುರೋಪ್-- ಗೆಲಿಲಿಯೋ (27 ಉಪಗ್ರಹ)
ಜಪಾನ್‌-- ಜೆನಿತ್(7 ಉಪಗ್ರಹ)

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡ್ಡಯನ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X