pTron ಬೇಸ್‌ಪಾಡ್ಸ್ ಎನ್ಕೋರ್ ಇಯರ್‌ಬಡ್ಸ್ ಲಾಂಚ್: ಆಕರ್ಷಕ ಫೀಚರ್ಸ್!
pTron ಈಗಾಗಲೇ ಹಲವಾರು ಇಯರ್‌ಬಡ್ಸ್‌ಗಳನ್ನು ಅನಾವರಣ ಮಾಡಿದ್ದು, ಈ ನಡುವೆ ಭಾರತದಲ್ಲಿ ಮತ್ತೊಂದು ಹೊಸ ಹಾಗೂ ಆಕರ್ಷಕ ವಿನ್ಯಾಸದಿಂದ ಕೂಡಿರುವ ಇಯರ್‌ಬಡ್ಸ್ ಅನ್ನು ಅನಾವರಣ ಮಾಡಿದೆ. ಇದು ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 50 ಗಂಟೆಗಳವರೆಗೆ ಬ್ಯಾಕಪ್ ನೀಡಲಿದೆ. ಹಾಗೆಯೇ ಅಗ್ಗದ ಬೆಲೆಗೆ ಲಭ್ಯವಿದೆ.
ಹೌದು, pTron ಇಯರ್‌ಬಡ್ಸ್‌ಗಳು ಕಡಿಮೆ ಬೆಲೆಗೆ ಉತ್ತಮ ಫೀಚರ್ಸ್ ಹೊಂದಿದ್ದು, ಇದರ ಸಾಲಿಗೆ ಈಗ pTron ಬೇಸ್‌ಪಾಡ್ಸ್ ಎನ್ಕೋರ್ (pTron Basspods Encore) ಇಯರ್‌ಬಡ್ಸ್ ಸೇರಿಕೊಂಡಿದೆ. ಇದು ಬ್ಲೂಟೂತ್ ಆವೃತ್ತಿ 5.3 ನಲ್ಲಿ ಕೆಲಸ ಮಾಡಲಿದ್ದು, ಈ ಹಿಂದೆ ಲಾಂಚ್ ಆದ ಬೇಸ್‌ಬಡ್ಸ್ ಝೆನ್ ಶೈಲಿಯನ್ನೇ ಹೋಲಲಿದೆ. ಹಾಗಿದ್ರೆ, ಇದರ ವಿಶೇಷ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟೆಂದು ತಿಳಿದುಕೊಳ್ಳೋಣ ಬನ್ನಿ.

pTron ಬೇಸ್‌ಪಾಡ್ಸ್ ಎನ್ಕೋರ್ ಫೀಚರ್ಸ್: ಈ ಇಯರ್‌ಬಡ್ಸ್ ಆರಾಮದಾಯಕವಾದ ಅನುಭವ ನೀಡಲಿದ್ದು, ಇದಕ್ಕಾಗಿ ಉತ್ತಮ ಶೈಲಿಯನ್ನು ಪಡೆದುಕೊಂಡಿದೆ. ಹಾಗೆಯೇ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಇರುವುದರಿಂದ 90% ರಷ್ಟು ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ನೀವು ಎಷ್ಟೇ ಗದ್ದಲದ ವಾತಾವರಣದಲ್ಲಿ ಇದ್ದರೂ ಸಹ ಸ್ಪಷ್ಟ ಧ್ವನಿ ಗುಣಮಟ್ಟವನ್ನು ಇದು ನೀಡುತ್ತದೆ.
ಇದರೊಂದಿಗೆ ಇನ್‌ಬಿಲ್ಟ್ ಟ್ರೂಟಾಕ್ ENC ತಂತ್ರಜ್ಞಾನ ಹೊಂದಿದ್ದು, ಇದು ನಿಮ್ಮ ದವಡೆಯ ಚಲನೆಯ ಕಂಪನಗಳನ್ನು ಗ್ರಹಿಸಿಕೊಳ್ಳುತ್ತದೆ. ಜೊತೆಗೆ ಗಾಳಿ ಹಾಗೂ ಟ್ರಾಫಿಕ್‌ನಂತಹ ಸಮಸ್ಯೆ ಎದುರಾದಾಗ ಸುತ್ತುವರಿದ ಹಿನ್ನೆಲೆ ಶಬ್ದಗಳನ್ನು ಆಟೋಮ್ಯಾಟಿಕ್ ಆಗಿ ಕಡಿಮೆ ಮಾಡಿ, ಈ ಮೂಲಕ ಉತ್ತಮ ಅನುಭವವನ್ನು ನೀಡುತ್ತದೆ. ಹಾಗೂ ಕರೆ ಉದ್ದೇಶಕ್ಕೆ ನಾಲ್ಕು ಮೈಕ್ರೊಫೋನ್‌ಆಯ್ಕೆಗಳನ್ನು ಈ ಬಡ್ಸ್‌ಗಳಲ್ಲಿ ನೀಡಲಾಗಿದೆ.

ಇನ್ನುಳಿದಂತೆ 10 ಎಂಎಂ ಡೈನಾಮಿಕ್ ಬಾಸ್ ಬೂಸ್ಟ್ ಡ್ರೈವರ್ ಆಯ್ಕೆ ಹಾಗೂ 10m ವ್ಯಾಪ್ತಿಯೊಂದಿಗೆ ಕೆಲಸ ಮಾಡುವ ಬ್ಲೂಟೂತ್ ಆವೃತ್ತಿ v5.3, ಸ್ವಯಂ-ಮರುಸಂಪರ್ಕ ಹಾಗೂ ಸ್ಟಿರಿಯೊ ಮತ್ತು ಮೊನೊ ಬಡ್ ಸಾಮರ್ಥ್ಯದೊಂದಿಗೆ ಕಡಿಮೆ ಲೇಟೆನ್ಸಿ ಆಡಿಯೊ ಮತ್ತು ವಿಡಿಯೋ ಸಿಂಕ್ ತಂತ್ರಜ್ಞಾನವನ್ನು ಈ ಇಯರ್‌ಬಡ್ಸ್ ಹೊಂದಿದ್ದು, ಟಚ್ ಕಂಟ್ರೋಲ್ ಆಯ್ಕೆ ಹೊಂದಿರುವುದರ ಜೊತೆಗೆ ವಾಯ್ಸ್ ಅಸಿಸ್ಟೆಂಟ್ ಸೌಲಭ್ಯ ಸಹ ಇದರಿಂದ ಲಭ್ಯ. ಹಾಗೆಯೇ IPX4ವಾಟರ್‌ರೆಸಿಸ್ಟೆಂಟ್ ರೇಟಿಂಗ್ ಅನ್ನು ಹೊಂದಿವೆ.
pTron ಬೇಸ್‌ಪಾಡ್ಸ್ ಎನ್ಕೋರ್ ಬ್ಯಾಟರಿ ಸಾಮರ್ಥ್ಯ: ಇದು 400mAh ಸಾಮರ್ಥ್ಯದ ಬ್ಯಾಟರಿ ಇರುವ ಚಾರ್ಜಿಂಗ್ ಕೇಸ್ ಅನ್ನು ಹೊಂದಿದ್ದು, ಇದಕ್ಕಾಗಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಪಡೆದುಕೊಂಡಿದೆ. ಇನ್ನು ಚಾರ್ಜಿಂಗ್ ಕೇಸ್‌ನೊಂದಿಗೆ 50 ಗಂಟೆಗಳ ಬ್ಯಾಕಪ್ ಲಭ್ಯವಾಗಲಿದ್ದು, ಇಯರ್‌ಬಡ್‌ಗಳೊಂದಿಗೆ 10 ಗಂಟೆಗಳ ಬ್ಯಾಕಪ್ ಸಿಗಲಿದೆ. ಅಂದರೆ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ ನೀವು 200 ನಿಮಿಷವ ಬಳಕೆ ಮಾಡಬಹುದು.
pTron ಬೇಸ್‌ಪಾಡ್ಸ್ ಎನ್ಕೋರ್ ಬೆಲೆ ಹಾಗೂ ಲಭ್ಯತೆ: ಈ ಇಯರ್‌ಬಡ್ಸ್ 1,199 ರೂ. ಗಳ ಮೂಲ ದರ ಹೊಂದಿದ್ದು, ಕೊಡುಗೆ ಬೆಲೆಯಾಗಿ ನೀವು ಕೇವಲ 899 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಅಂತೆಯೇ ಈ ಇಯರ್‌ಬಡ್ಸ್ ಕಪ್ಪು, ನಿಯಾನ್ ನೀಲಿ ಮತ್ತು ಗ್ರ್ಯಾಫೈಟ್ ಕಪ್ಪು ಬಣ್ಣದ ಆಯ್ಕೆಯಲ್ಲಿ ಕಂಡುಬರುತ್ತದೆ. ಇದನ್ನು ನೀವು ಇಂದಿನಿಂದ ಫ್ಲಿಪ್‌ಕಾರ್ಟ್ ಹಾಗೂ ಕಂಪೆನಿಯ ಅಧಿಕೃತ ಸೈಟ್ ಮೂಲಕ ಖರೀದಿ ಮಾಡಬಹುದು.

ಈ ಸಂಬಂಧ pTron ಸ್ಥಾಪಕ ಮತ್ತು ಸಿಇಒ ಅಮೀನ್ ಖ್ವಾಜಾ ಮಾಹಿತಿ ನೀಡಿದ್ದು, ಅಸಾಧಾರಣ ಆಡಿಯೊ ಗುಣಮಟ್ಟ ಮತ್ತು ಸುಧಾರಿತ ಫೀಚರ್ಸ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವ ಬೇಸ್ ಪಾಡ್ಸ್ ಎನ್ಕೋರ್ ಇಯರ್‌ಬಡ್‌ಗಳನ್ನು ಲಾಂಚ್ ಮಾಡಲು ನಾವು ರೋಮಾಂಚನಗೊಂಡಿದ್ದೇವೆ. ನಾವು ನಮ್ಮ ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಂಡಿದ್ದೇವೆ ಹಾಗೂ ಅವರ ದೈನಂದಿನ ಕರೆ ಮತ್ತು ಮನರಂಜನೆಯ ಅಗತ್ಯಗಳನ್ನು ಪೂರೈಸಲು ಈ ಇಯರ್‌ಬಡ್ಸ್ ಅನ್ನು ವಿನ್ಯಾಸಗೊಳಿಸಿದ್ದೇವೆ ಎಂದಿದ್ದಾರೆ.


Click it and Unblock the Notifications








