pTron ನಿಂದ ಹೊಸ ಇಯರ್‌ಬಡ್ಸ್ ಲಾಂಚ್; 60 ಗಂಟೆಯ ಪ್ಲೇಬ್ಯಾಕ್ ಟೈಮ್
pTron ಭಾರತೀಯ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪೆನಿಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಆಡಿಯೋ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಈ ಕಂಪೆನಿಯ ಇಯರ್‌ಫೋನ್,ಇಯರ್‌ಬಡ್ಸ್‌ಗಳು ಗ್ರಾಹಕರಿಗೆ ಅಚ್ಚುಮೆಚ್ಚು. ಅದರಂತೆ ಈಗಾಗಲೇ ಹಲವಾರು ರೀತಿಯ ಆಡಿಯೋ ಡಿವೈಸ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಲಾಗಿದ್ದು, ಇದೀಗ ಹೊಸ ಇಯರ್‌ಬಡ್ಸ್ ಅನ್ನು ಅನಾವರಣ ಮಾಡಲಾಗಿದೆ. ಈ ಬಡ್ಸ್‌ಗಳು ಟಚ್ ಕಂಟ್ರೋಲ್ ಫೀಚರ್ಸ್ ಪಡೆದಿವೆ.

ಹೌದು, ಭಾರತದಲ್ಲಿ pTron ಬೇಸ್‌ಪಾಡ್ಸ್ P481 (pTron Basspods P48) ಅನ್ನು ಅನಾವರಣ ಮಾಡಲಾಗಿದ್ದು, ಇದು ನಾಯ್ಸ್ ಕ್ಯಾನ್ಸಲಿಂಗ್ ಆಯ್ಕೆ ಹೊಂದಿದೆ. ಹಾಗೆಯೇ 60 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಮ್ ನೀಡಲಿದ್ದು, ಕಂಪೆನಿಯು ಈ ಇಯರ್‌ಬಡ್ಸ್‌ಗೆ ಒಂದು ವರ್ಷದ ವಾರಂಟಿ ಸಹ ನೀಡುತ್ತಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಏನು?, ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಪ್ರಮುಖ ಫೀಚರ್ಸ್
pTron ಬೇಸ್‌ಪಾಡ್ಸ್ P481 ಇಯರ್‌ಬಡ್ಸ್ ಇನ್ ಇಯರ್ ಡಿಸೈನ್ ಹೊಂದಿದ್ದು, ನಿಮ್ಮ ಕಿವಿಗೆ ತೊಂದರೆ ಉಂಟುಮಾಡದ ರಚನೆ ಪಡೆದಿವೆ. ಹಾಗೆಯೆ ಪ್ರತಿಯೊಂದು ಬಡ್ಸ್ ಕೇವಲ 3.4 ಗ್ರಾಂ ತೂಕವಿದ್ದು, ಹಗುರವಾದ ಚಾರ್ಜಿಂಗ್ ಕೇಸ್ ಆಯ್ಕೆ ಪಡೆದುಕೊಂಡಿದೆ. ಅಂದರೆ ಈ ಕೇಸ್ 29.4 ಗ್ರಾಂ ತೂಕ ಹೊಂದಿದ್ದು, ನಿಮ್ಮ ಪಾಕೆಟ್‌ನಲ್ಲಿ ಇರಿಸಿಕೊಳ್ಳಲು ತುಂಬಾ ಸಹಕಾರಿ ಆಗಲಿದೆ.

ಇದರೊಂದಿಗೆ ಈ ಇಯರ್‌ಬಡ್‌ಗಳು ಸ್ಯಾಟಿನ್ ಫಿನಿಶ್ ಹೊಂದಿದ್ದು, ಬೆವರು ಮತ್ತು ನೀರಿನ ರಕ್ಷಣೆಗಾಗಿ IPX4 ರೇಟಿಂಗ್‌ನೊಂದಿಗೆ ಪ್ಯಾಕ್ ಆಗಿದೆ. ಇದರಿಂದ ಮಳೆ, ಬಿಸಿಲು ಎನ್ನದೆ ಎಲ್ಲಿ ಬೇಕೆಂದರಲ್ಲಿ ಬಳಕೆ ಮಾಡಬಹುದಾಗಿದೆ. ಜೊತೆಗೆ ಟಚ್ ಕಂಟ್ರೋಲ್ ಆಯ್ಕೆ ಹೊಂದಿದ್ದು, ಈ ಮೂಲಕ ಕರೆಗಳಿಗೆ ಉತ್ತರಿಸಲು ಹಾಗೂ ಕರೆ ತಿರಸ್ಕರಿಸಲು, ಮ್ಯೂಸಿಕ್ ಪ್ಲೇ ಮಾಡಲು ಹಾಗೂ ವಿರಾಮಗೊಳಿಸಲು ಅನುಕೂಲವಾಗಿದೆ.

ಟ್ರಿಬಲ್ ಔಟ್‌ಪುಟ್
ಈ ಇಯರ್‌ಬಡ್‌ಗಳು ಉತ್ತಮ ಸೌಂಡ್ ಕ್ವಾಲಿಟಿಗಾಗಿ 10mm ಡೈನಾಮಿಕ್ ಡ್ರೈವರ್‌ಗಳನ್ನು ಒಳಗೊಂಡಿದ್ದು, ಡೀಪ್ ಬೇಸ್ ನೀಡಲಿವೆ. ಇದರೊಂದಿಗೆ ಸ್ಪಷ್ಟವಾದ ಸಂಗೀತ ಮತ್ತು ಸುಧಾರಿತ ಟ್ರಿಬಲ್ ಔಟ್‌ಪುಟ್ ಅನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಯಲ್ಲಿ ಬ್ಲೂಟೂತ್ ಆವೃತ್ತಿ 5.3 ಹೊಂದಿದ್ದು, ಇದು 10m ವ್ಯಾಪ್ತಿಯಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಇಯರ್‌ಬಡ್‌ಗಳು 50ms ಕಡಿಮೆ ಲೇಟೆನ್ಸಿಯನ್ನು ಹೊಂದಿರುವುದು ವಿಶೇಷ.

ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ಸ್
ಈ ಹೊಸ ಇಯರ್‌ಬಡ್ಸ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ಸ್ ಪಡೆದುಕೊಂಡಿದ್ದು, ಉತ್ತಮ ಆಡಿಯೋ ಅನುಭವವನ್ನು ಬಳಕೆದಾರರಿಗೆ ನೀಡುತ್ತದೆ. ಇದಿಷ್ಟೇ ಅಲ್ಲದೆ, ಹೆಚ್ಚಿನ ರೆಸಲ್ಯೂಶನ್ ಆಡಿಯೊ ಸಾಮರ್ಥ್ಯಕ್ಕೆ ತಕ್ಕಂತೆ ಇದು ಬೆಂಬಲ ನೀಡಲಿದ್ದು, ಕರೆ ಸಂದರ್ಭದಲ್ಲಿ ಉತ್ತಮ ಧ್ವನಿಗಾಗಿ ಹೆಚ್‌ಡಿ ಡ್ಯುಯಲ್ ಮೈಕ್ ರಚನೆ ಹೊಂದಿದೆ.

ಬ್ಯಾಟರಿ ಸಾಮರ್ಥ್ಯ
pTron ಬೇಸ್‌ಪಾಡ್ಸ್ P481 ಇಯರ್‌ಬಡ್ಸ್ ನ ಚಾರ್ಜಿಂಗ್ ಕೇಸ್ 400mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದರಲ್ಲಿನ ಪ್ರತಿ ಬಡ್ಸ್‌ಗಳು 40mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿವೆ. ಅಲ್ಲದೆ ಈ ಡಿವೈಸ್ ಅನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 60 ಗಂಟೆಗಳವರೆಗೆ ಪ್ಲೇಬ್ಯಾಕ್ ನೀಡಲಿದೆ. ಜೊತೆಗೆ ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 1.5 ಗಂಟೆಗಳ ಸಮಯ ನೀಡಬೇಕಿದೆ. ಇದಕ್ಕಾಗಿ ಚಾರ್ಜಿಂಗ್ ಕೇಸ್ ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಹೊಂದಿವೆ.

ಬೆಲೆ ಹಾಗೂ ಲಭ್ಯತೆ
ಈ ಹೊಸ ಇಯರ್‌ಬಡ್ಸ್‌ಗೆ 899 ರೂ. ಗಳ ಆಫರ್ ಬೆಲೆ ನಿಗದಿ ಮಾಡಲಾಗಿದ್ದು, ಡಿಸೆಂಬರ್ 11 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಈ ಇಯರ್‌ಬಡ್ಸ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯ ಇರಲಿದೆ.


Click it and Unblock the Notifications








