Ptron ನಿಂದ ಅಗ್ಗದ ಬೆಲೆಯ ವಾಚ್ ಲಾಂಚ್; ಏನೆಲ್ಲಾ ಫೀಚರ್ಸ್‌ಗಳಿವೆ ಗೊತ್ತಾ!?
ಸ್ಮಾರ್ಟ್‌ವಾಚ್‌ಗಳು ಇಂದು ಬಹುಪಾಲು ಮಂದಿಯ ಅಗತ್ಯ ಡಿವೈಸ್‌ಗಳಾಗುತ್ತಿವೆ. ಈ ಕಾರಣಕ್ಕಾಗಿಯೇ ವಿವಿಧ ಕಂಪೆನಿಗಳು ಹಲವು ರೀತಿಯ ಫೀಚರ್ಸ್ ಇರುವ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬರುತ್ತಿದ್ದು, ಒಂದಕ್ಕೊಂದು ಆರೋಗ್ಯಕರ ಪೈಪೋಟಿಯಲ್ಲಿ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡುತ್ತಿರುವುದು ಮಾತ್ರ ವಿಶೇಷ. ಅದರಂತೆ Ptron ಕಂಪೆನಿ ಹೊಸ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಿದೆ. ಅದೂ ಸಹ ಅಗ್ಗದ ಬೆಲೆಯಲ್ಲಿ.
ಹೌದು, ಪ್ರಮುಖ ಸ್ಮಾರ್ಟ್ ಗ್ಯಾಜೆಟ್ ಸಂಸ್ಥೆಗಳಲ್ಲಿ ಒಂದಾಗಿರುವ Ptron ಇದೀಗ ಫೋರ್ಸ್ X12N ಎಂಬ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಿದ್ದು, ಈ ವಾಚ್ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ. ಇನ್ನು Ptron ಫೋರ್ಸ್ ಸರಣಿಯನ್ನು ಈ ಮೂಲಕ ವಿಸ್ತರಣೆ ಮಾಡಿಕೊಂಡಿದೆ. ಇದಿಷ್ಟೇ ಅಲ್ಲದೆ ಇನ್‌ಬಿಲ್ಸ್ ವಾಚ್‌ಫೇಸ್, ಇನ್‌ಬಿಲ್ಟ್ ಗೇಮ್‌ಗಳು, ಫುಲ್‌ಟಚ್‌ಸ್ಕ್ರೀನ್ ಡಿಸ್‌ಪ್ಲೇ ಈ ವಾಚ್‌ನ ವಿಶೇಷತೆಗಳಲ್ಲಿ ಪ್ರಮುಖವಾದವು. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

Ptron ಫೋರ್ಸ್ X12N ಡಿಸ್‌ಪ್ಲೇ ವಿವರ
Ptron ಫೋರ್ಸ್ X12N ಸ್ಮಾರ್ಟ್‌ವಾಚ್ 1.85 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಇದು 580nits ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದ್ದು, ಜೊತೆಗೆ 130 ಕ್ಕೂ ಹೆಚ್ಚಿನ ಪ್ರೀ ಇನ್‌ಸ್ಟಾಲ್ ವಾಚ್‌ಫೇಸ್‌ಗಳೊಂದಿಗೆ ಪ್ಯಾಕ್ ಆಗಿದೆ. ಇದಿಷ್ಟೇ ಅಲ್ಲದೆ ಅನೇಕ ರೀತಿಯ ಸ್ಪೋರ್ಟ್ ಮೋಡ್‌ಗಳು ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಡಲಿದೆ.
Ptron ಫೋರ್ಸ್ X12N ಪ್ರಮುಖ ಫೀಚರ್ಸ್
Ptron ಫೋರ್ಸ್ X12N ಸ್ಮಾರ್ಟ್‌ವಾಚ್‌ನ ಕೇಂದ್ರಬಿಂದು ಎಂದರೆ ಬ್ಲೂಟೂತ್ ಕರೆಗಾಗಿ ಇನ್‌ಬಿಲ್ಟ್ ಮೈಕ್ರೊಫೋನ್ ಹಾಗೂ ಸ್ಪೀಕರ್ ಆಯ್ಕೆ ಪಡೆದುಕೊಂಡಿರುವುದು. ಈ ಮೂಲಕ ಬಳಕೆದಾರರು ಕರೆ ಸಮಯದಲ್ಲಿ ವಿಶೇಷ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು. ಅಂದರೆ, ಈ ವಾಚ್ ಬ್ಲೂಟೂತ್ ಆವೃತ್ತಿ 5.0 ಹೊಂದಿದ್ದು, ಕರೆ ಮಾಡುವ ವೇಳೆ ಸಂಖ್ಯೆಗಳನ್ನು ಡಯಲ್ ಮಾಡುವ ಸಾಮರ್ಥ್ಯ ಮತ್ತು ಸಂಪರ್ಕಗಳನ್ನು ಸಿಂಕ್ ಮಾಡುವ ಕೆಲಸವನ್ನು ಈ ವಾಚ್‌ನಲ್ಲಿ ಸುಲಭವಾಗಿ ಮಾಡಬಹುದು.

ಇನ್ನು ಸಾಮಾನ್ಯ ಫೀಚರ್ಸ್‌ಗಳ ವಿಭಾಗಕ್ಕೆ ಬಂದರೆ 24 ×7 ಹೃದಯ ಬಡಿತ ಸೆನ್ಸರ್, SpO2 ಸೆನ್ಸರ್, ರಕ್ತದೊತ್ತಡ ಮಾನಿಟರ್ ಮತ್ತು ಸ್ಲೀಪ್ ಟ್ರ್ಯಾಕರ್ ಬಳಕೆದಾರರಿಗೆ ಹಲವು ರೀತಿಯ ಪ್ರಯೋಜನ ನೀಡಲಿವೆ. ಅದರಲ್ಲೂ ಕ್ಯಾಲೋರಿ ವಿಷಯಗಳು, ಸಂಚರಿಸಿದ ದೂರ ಹಾಗೂ ಇನ್ನಿತರೆ ದೈಹಿಕ ಚಟುವಟಿಕೆ ವಿಷಯಗಳ ಮೇಲೆ ಈ ವಾಚ್ ಸದಾ ಕಣ್ಣಿಟ್ಟಿರುತ್ತದೆ. ಇವೆಲ್ಲವನ್ನೂ ನೀವು Ptron ಫಿಟ್+ ಆಪ್ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ.
Ptron ಫೋರ್ಸ್ X12N ವಾಚ್‌ನಲ್ಲಿ ಇನ್‌ಬಿಲ್ಟ್ ಗೇಮ್, ಇತರೆ
ನೀವು ಸ್ನೇಕ್, F1 ರೇಸ್, ಪಝಲ್, ನಿಂಜಾ ಕ್ಲೈಂಬ್ ಮತ್ತು ಫೈಟರ್ ಪೈಲಟ್‌ನಂತಹ ಆಟಗಳನ್ನು ಸುಲಭವಾಗಿ ಈ ವಾಚ್‌ನಲ್ಲಿ ಆಡಬಹುದಾಗಿದೆ. ಇದರೊಂದಿಗೆ ಈ ವಾಚ್ ಗೂಗಲ್ ಅಸಿಸ್ಟೆಂಟ್ ಹಾಗೂ ಸಿರಿಗೆ ಬೆಂಬಲ ನೀಡಲಿದ್ದು, ಇದಲ್ಲದೆ ಜೊತೆಗೆ IP68 ರೇಟಿಂಗ್ ಪಡೆದುಕೊಂಡಿದೆ.
Ptron ಫೋರ್ಸ್ X12N ಬ್ಯಾಟರಿ ಸಾಮರ್ಥ್ಯ
ಈ ಸ್ಮಾರ್ಟ್‌ವಾಚ್ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಐದು ದಿನಗಳ ವರೆಗೆ ಬಳಕೆಗೆ ಅವಕಾಶ ನೀಡುತ್ತದೆ. ಅಂತೆಯೇ ಪೂರ್ಣವಾಗಿ ಚಾರ್ಜ್ ಆಗಲು ಈ ವಾಚ್ 3 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.

Ptron ಫೋರ್ಸ್ X12N ಬೆಲೆ ಹಾಗೂ ಲಭ್ಯತೆ
Ptron ಫೋರ್ಸ್ X12N ಸ್ಮಾರ್ಟ್‌ವಾಚ್ ಮೂಲ ಬೆಲೆ 1,499 ರೂ. ಗಳಾಗಿದ್ದು, ನೀವು ಇದನ್ನು ಕೊಡುಗೆ ಬೆಲೆಯಾಗಿ 1,199 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಅಂತೆಯೇ ಈ ವಾಚ್ ಅನ್ನು ಅಮೆಜಾನ್ ಮೂಲಕ ಖರೀದಿಸಬಹುದು. ಇದು ಕಾರ್ಬನ್ ಬ್ಲ್ಯಾಕ್, ಗೋಲ್ಡ್ ಬ್ಲ್ಯಾಕ್, ಬ್ಲೇಜಿಂಗ್ ಬ್ಲೂ ಹಾಗೂ ಷಾಂಪೇನ್ ಪಿಂಕ್‌ನ ವಿವಿಧ ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ.


Click it and Unblock the Notifications