ಪಬ್‌ಜಿ ಗೇಮ್‌ ಕ್ರೇಜ್‌ನಿಂದಾಗಿ ಬದಲಾಯ್ತು ಕಾರಿನ ಲುಕ್‌!

|

ಗೇಮ್ಸ್‌ ಆಡುವುದು ಬಹುತೇಕರಿಗೆ ತುಂಬಾ ಇಷ್ಟ ಆದರೆ ಇನ್ನೂ ಕೆಲವರಿಗೆ ಗೇಮ್ಸ್‌ ಅಂದ್ರೆ ಬಿಗ್ ಕ್ರೇಜ್‌ ಆಗಿರುತ್ತದೆ. ಸದಾ ಗೇಮ್‌ನ ಗುಂಗಿನಲ್ಲಿಯೇ ಇರುವ ಅವರು ತುಂಬಾ ಅಡಿಕ್ಟ್‌ ಆಗಿಬಿಟ್ಟಿರುತ್ತಾರೆ. ಸದ್ಯ ಪಬ್‌ಜಿ ಆನ್‌ಲೈನ್‌ ಗೇಮ್ಸ್‌, ಆಟಗಾರರನ್ನು ಮೋಡಿ ಮಾಡಿದ್ದು, ಬಹುತೇಕ ಗೇಮ್ಸ್‌ ಪ್ರಿಯರನ್ನು ಇದರ ಕ್ರೇಜ್‌ಗೆ ಸಿಲುಕಿ ಪಬ್‌ಜಿಮಯವಾಗಿ ಹೋಗಿದ್ದಾರೆ. ಕ್ರೇಜ್‌ ಹೆಚ್ಚಾದರೇ ಹೇಗೆಲ್ಲಾ ಇರುತ್ತೆ ಅನ್ನೊದಕ್ಕೆ ಇಲ್ಲೊಂದು ಬೆಸ್ಟ್ ಉದಾಹರಣೆ ಇದೆ.

ಪಬ್‌ಜಿ ಗೇಮ್‌ ಕ್ರೇಜ್‌ನಿಂದಾಗಿ ಬದಲಾಯ್ತು ಕಾರಿನ ಲುಕ್‌!

ಹೌದು, ಸದ್ಯ ಪಬ್‌ಜಿ ಆನ್‌ಲೈನ್ ಗೇಮ್ ಸಖತ್ ಕ್ರೇಜ್‌ ಹುಟ್ಟಿಸಿದ್ದು, ಇಲ್ಲೊಂಬ್ಬ ಪಬ್‌ಜಿ ಪ್ರೇಮಿ ತನ್ನ ಕಾರನ್ನು ಸಂಪೂರ್ಣ ಪಬ್‌ಜಿಮಯವಾಗಿಸಿದ್ದಾನೆ. ತನ್ನ ಟಾಟಾ ನೆಕ್ಸಾ ಎಸ್‌ಯುವಿ ಕಾರಿನ ಲುಕ್ಕ್ ಅನ್ನು ಬದಲಿಸಿ ಪಬ್‌ಜಿ ಗೇಮ್‌ ಕಾರ್‌ ಆಗಿ ಮಾಡಿಫೈ ಮಾಡಿಸಿದ್ದಾನೆ. ವಿನಯ ಕಪೂರ್ ಅವರ ಯೂಟ್ಯೂಬ್‌ ಚಾನಲ್‌ನಲ್ಲಿ ಕಾರಿನ ವಿಡಿಯೊ ಹಾಕಿದ್ದು, ಈಗ ಈ ವಿಡಿಯೊ ಸಖತ್ ವೈರಲ್‌ ಆಗಿದೆ.

ಪಬ್‌ಜಿ ಗೇಮ್‌ ಕ್ರೇಜ್‌ನಿಂದಾಗಿ ಬದಲಾಯ್ತು ಕಾರಿನ ಲುಕ್‌!

ಈ ಪಬ್‌ಜಿ ಆಸಾಮಿ ತನ್ನ ಬಿಳಿ ಬಣ್ಣದ ಟಾಟಾ ನೆಕ್ಸಾ ಕಾರಿನ ಹೊರ ಭಾಗದ ತುಂಬೆಲ್ಲಾ ಪಬ್‌ಜಿ ಸ್ಟಿಕ್ಕರ್‌ ಅಂಟಿಸಿ ಗಮನಸೆಳೆದಿದ್ದಾನೆ. ಹಾಗೇ ಪಬ್‌ಜಿ ಗೇಮ್‌ನಲ್ಲಿನ ಸ್ಲೋಗನ್‌ ಹೇಳಿಕೆಗಳನ್ನು ಕಾರಿನ ಬಾನೆಟ್‌ ಮತ್ತು ಡೋರ್‌ಗಳ ಹತ್ತಿರ ಬರೆಸಿಕೊಂಡಿದ್ದು, ಮುಂಭಾಗದ ಡೋರ್‌ನ ಬಳಿ 'ಕಿಪ್‌ ಕಾಮ್‌ ಎಂಜಾಯ್ ಚಿಕನ್ ಡಿನ್ನರ್' ಎಂಬ ಸ್ಲೋಗನ್ ಹಾಕಿಸಿದ್ದಾನೆ. ಹಿಂಬದಿ ವಿಂಡೊದ ಮೇಲೆ ಗೇಮ್‌ ಮ್ಯಾಪ್‌ ಸ್ಟಿಕ್ಕರ್‌ ಅಂಟಿಸಲಾಗಿದೆ.

ಪಬ್‌ಜಿ ಗೇಮ್‌ ಕ್ರೇಜ್‌ನಿಂದಾಗಿ ಬದಲಾಯ್ತು ಕಾರಿನ ಲುಕ್‌!

ಕಾರಿನ ಮುಂಭಾಗದ ಬಾನೆಟ್‌ ಮೇಲೆ ಪಬ್‌ಜಿ ಲೋಗೊ ಇದ್ದು, ಕಾರಿನ ಹಿಂಬದಿಯ ಬಾಟಮ್‌ ಕೆಳ ಭಾಗದಲ್ಲಿ ಪಬ್‌ಜಿ ಬುಲೆಟ್‌ಗಳ ಮಾದರಿಯನ್ನು ಹಾಕಲಾಗಿದೆ. ಕಾರಿನ ಡೋರ್‌ನ ಬಾಟಮ್‌ ಭಾಗದಲ್ಲಿ ಪಬ್‌ಜಿ ಆಟದಲ್ಲಿ ಕಾಣುವ ಹೆಲ್ಮೆಟ್‌ಗಳ ಸ್ಟಿಕ್ಕರ್ ಹಚ್ಚಲಾಗಿದ್ದು, ಹಾಗೂ ಕಾರಿನ ಹಿಂಭಾಗದ ಟೈಲ್‌ಲ್ಯಾಂಪ್‌ ಬಳಿ 'ವಿನ್ನರ್‌ ವಿನ್ನರ್ ಚಿಕನ್ ಡಿನ್ನರ್' ಎಂಬ ಗೇಮ್‌ ಸ್ಲೋಗನ್‌ಗಳನ್ನು ಹಾಕಿಸಿಲಾಗಿದೆ.

ಸದ್ಯ ಭಾರಿ ವೈರಲ್‌ ಆಗಿರುವ ಟಾಟಾ ನೆಕ್ಸಾ ಪಬ್‌ಜಿ ಎಡಿಷನ್ ಕಾರು ಪಬ್‌ಜಿ ಅಭಿಮಾನಿಗಳನ್ನು ಆಕರ್ಷಿಸಿದೆ. ಈ Red Rhino ಪಬ್‌ಜಿ ಕಿಟ್‌ ಅಳವಡಿಕೆಗೆ 35,000ರೂ.ಗಳು ಆಗಿದೆ ಎಂದು ಹೇಳಲಾಗಿದ್ದು, ಪಬ್‌ಜಿ ಆಕ್ಸಸ್‌ರಿಸ್‌ ಮತ್ತು ಸ್ಟಿಕ್ಕರ್‌ಗಳ ಮೌಲ್ಯವು 4500ರೂ.ಗಳು ಆಗಲಿದೆ ಎನ್ನಲಾಗಿದೆ.

ಓದಿರಿ : ಹೊಸ ಸ್ಮಾರ್ಟ್‌ಫೋನ್‌ ಖರೀದಿಸುತ್ತಿದ್ದಿರಾ?.ಹಾಗಿದ್ರೆ ಸ್ವಲ್ಪ ಕಾಯಿರಿ!ಓದಿರಿ : ಹೊಸ ಸ್ಮಾರ್ಟ್‌ಫೋನ್‌ ಖರೀದಿಸುತ್ತಿದ್ದಿರಾ?.ಹಾಗಿದ್ರೆ ಸ್ವಲ್ಪ ಕಾಯಿರಿ!

Best Mobiles in India

English summary
The PUBG edition of Tata Nexon is the result of the imagination of the vehicle's owner.to know more visit to kannada,gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X