ಅತೀ ಶೀಘ್ರವೇ ಭಾರತದಲ್ಲಿ ಲಾಂಚ್ ಆಗಲಿದೆ 'ಪಬ್‌ಜಿ ಲೈಟ್‌ ವರ್ಷನ್'!

|

ಪಬ್‌ಜಿ ಗೇಮ್‌ ಬ್ಯಾನ್‌ ಆಗಿ ಮರು ಜೀವ ಪಡೆದರೂ ತನ್ನ ಕ್ರೇಜ್‌ ಅನ್ನು ಇನ್ನೂ ಮುಂದುವರೆಸಿಕೊಂಡು ಹೊರಟಿದೆ. ಈ ಆನ್‌ಲೈನ್‌ ಗೇಮ್‌ ಹೆಚ್ಚಾಗಿ ಯುವ ಸಮೂಹವನ್ನು ಸೆಳೆದಿದ್ದು, ಸದಾ ಗೇಮಿಂಗ್‌ನಲ್ಲಿಯೇ ಮಗ್ನರಾಗಿರುವಂತೆ ಮಾಡಿದೆ. ಪಬ್‌ಜಿ ಕುರಿತು ಆಟಗಾರರಿಗೆ ಒಂದು ಬೇಸರದ ಸಂಗತಿ ಏನೆಂದರೇ ಈ ಗೇಮ್ ಅಧಿಕ ಡೇಟಾವನ್ನು ಬೇಡುತ್ತದೆ. ಆದರೆ ಕಂಪನಿಯು ದೇಶಿಯ ಆಟಗಾರರ ಬೇಸರಕ್ಕೆ ಫುಲ್‌ ಸ್ಟಾಪ್‌ ಹಾಕುವ ಸುದ್ದಿಯನ್ನು ಹೊರಹಾಕಿದೆ.

ಅತೀ ಶೀಘ್ರವೇ ಭಾರತದಲ್ಲಿ ಲಾಂಚ್ ಆಗಲಿದೆ 'ಪಬ್‌ಜಿ ಲೈಟ್‌ ವರ್ಷನ್'!

ಹೌದು, ಜನಪ್ರಿಯ ಪಬ್‌ಜಿ ಗೇಮ್‌ ಇದೀಗ ಭಾರತದಲ್ಲಿ ಲೈಟ್‌ ವರ್ಷನ್‌ನಲ್ಲಿ ಬರಲಿದ್ದು, ಈ ಕುರಿತಾಗಿ ಪಬ್‌ಜಿ ತನ್ನ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ಮಾಹಿತಿ ತಿಳಿಸಿದೆ. ಪಬ್‌ಜಿ ಲೈಟ್‌ ಕಮಿಂಗ್ ಸೂನ್ ಎಂಬ ಬರಹವಿರುವ ತಾಜಮಹಲ್‌ ಫೋಟೊದ ಚಿತ್ರವನ್ನು ಪೋಸ್ಟ್‌ ಮಾಡಿದೆ. ಹೈ ಎಂಡ್‌ ಪಿಸಿ ಮತ್ತು ಲ್ಯಾಪ್‌ಟಾಪ್‌ಗಳಿಗೆ ಮಾತ್ರ ಬೆಂಬಲವಿದ್ದ ಈ ಗೇಮ್‌ ಇನ್ನು ಲೋವೆರ್‌ ಎಂಡ್‌ ಪಿಸಿ ಮತ್ತು ಲ್ಯಾಪ್‌ಟಾಪ್‌ಗಳಿಗೂ ಬೆಂಬಲ ನೀಡಲಿದೆ.

ಓದಿರಿ : ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ? ಓದಿರಿ : ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ?

ಅತೀ ಶೀಘ್ರವೇ ಭಾರತದಲ್ಲಿ ಲಾಂಚ್ ಆಗಲಿದೆ 'ಪಬ್‌ಜಿ ಲೈಟ್‌ ವರ್ಷನ್'!

ಹೀಗಾಗಿ ಇನ್ಮುಂದೆ ಪಬ್‌ಜಿ ಆಡಲು ಪಿಸಿ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ GPU ಬಲದ ಅಗತ್ಯವಿಲ್ಲ. ಪಬ್‌ಜಿ ಗೇಮ್‌ಗೆ ಭಾರತದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆಯಾಗಿದ್ದು, ಇಲ್ಲಿನ ಆಟಗಾರರನ್ನು ಉಳಿಸಿಕೊಳ್ಳಲು ಪಬ್‌ಜಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಲೆ ಬಂದಿದೆ. ಹಾಗಾದರೇ ಬರಲಿರುವ ಹೊಸ 'ಪಬ್‌ಜಿ ಲೈಟ್‌ ವರ್ಷನ್' ಕುರಿತಾಗಿ ಇನ್ನಷ್ಟು ಮಾಹಿತಿಗಳನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಫುಲ್‌ ಡಿಸ್ಕೌಂಟ್‌!..ಅಮೆಜಾನ್‌ನಲ್ಲಿ ಶುರುವಾಗಿದೆ 'ಹುವಾವೆ ವೀಕ್‌ ಸೇಲ್'‌ ಮೇಳ!ಓದಿರಿ : ಫುಲ್‌ ಡಿಸ್ಕೌಂಟ್‌!..ಅಮೆಜಾನ್‌ನಲ್ಲಿ ಶುರುವಾಗಿದೆ 'ಹುವಾವೆ ವೀಕ್‌ ಸೇಲ್'‌ ಮೇಳ!

ಭಾರತಕ್ಕೂ ಲೈಟ್‌ ವರ್ಷನ್

ಭಾರತಕ್ಕೂ ಲೈಟ್‌ ವರ್ಷನ್

ಪಬ್‌ಜಿ ಆನ್‌ಲೈನ್‌ ಗೇಮ್‌ ಆಗಿರುವುದರಿಂದ ಸಹಜವಾಗಿಯೇ ಹೆಚ್ಚಿನ ಡೇಟಾವನ್ನು ಅದು ಕಬಳಿಸುತ್ತದೆ. ಅದಕ್ಕಾಗಿ ಲೈಟ್‌ ವರ್ಷನ್ ಅನ್ನು ಕಂಪನಿಯು ಹುಟ್ಟುಹಾಕಿದ್ದು, ಈಗಾಗಲೇ ಹಾಂಗ್‌ಕಾಂಗ್, ತೈವಾನ್, ಬ್ರೆಜಿಲ್ ಮತ್ತು ಬಾಂಗ್ಲಾದೇಶಗಳಲ್ಲಿ ಪಬ್‌ಜಿ ಲೈಟ್‌ ವರ್ಷನ್‌ ಲಭ್ಯವಿದೆ. ಅದರ ಮುಂದುವರಿದ ಭಾಗವಾಗಿ ಈಗ ಭಾರತಕ್ಕೂ ಪಬ್‌ಜಿ ಲೈಟ್‌ ವರ್ಷನ್‌ ಬಿಡುಗಡೆ ಮಾಡಲು ಕಂಪನಿ ಸಿದ್ಧವಾಗಿದೆ.

ಹೈ ಎಂಡ್‌ ಪಿಸಿ ಬೇಕಿಲ್ಲ

ಹೈ ಎಂಡ್‌ ಪಿಸಿ ಬೇಕಿಲ್ಲ

ಇನ್ಮುಂದೆ ಪಬ್‌ಜಿ ಆಡಲು ಹೈ ಎಂಡ್ ಹಾರ್ಡವೇರ್‌ ಸಾಮರ್ಥ್ಯವನ್ನು ಹೊಂದಿರುವ ಪಿಸಿ ಬೇಕಿಲ್ಲ. ಲೋವರ್‌ ಎಂಡ್‌ ಹಾರ್ಡ್‌ವೇರ್‌ ಫೀಚರ್ಸ್‌ಗಳನ್ನು ಹೊಂದಿರುವ ಪಿಸಿಗಳಲ್ಲಿಯೂ ಪಬ್‌ಜಿ ಆಡಬಹುದಾಗಿದ್ದು, ಅದಕ್ಕಾಗಿ ಪಬ್‌ಜಿ ಲೈಟ್‌ ವರ್ಷನ್‌ ಬಿಡುಗಡೆ ಆಗಲಿದೆ. ಇದರಿಂದ ಪಬ್‌ಜಿ ಕ್ರೇಜ್‌ ಇನ್ನಷ್ಟು ವಿಸ್ತರಿಸಿಕೊಳ್ಳಲಿದೆ.

ಈ ಫೀಚರ್ಸ್‌ಗಳು ಅಗತ್ಯ

ಈ ಫೀಚರ್ಸ್‌ಗಳು ಅಗತ್ಯ

ಪಬ್‌ಜಿ ಗೇಮ್‌ ಆಡಲು ಈ ಕೆಳಗಿನ ಫೀಚರ್ಸ್‌ಗಳು ಅಗತ್ಯವಾಗಿ ಇರಬೇಕು.
- OS ; ವಿಂಡೊಸ್ 7,8,10 64Bit
- CPU: ಕೋರ್ i3 @ 2.4Ghz
- RAM : 4GB
- GPU: ಇಂಟೆಲ್ HD4000
- HDD: 4GB

 ಅತ್ಯುತ್ತಮ ಬೆಂಬಲಕ್ಕೆ ಈ ಫೀಚರ್ಸ್‌ಗಳು ಅಗತ್ಯ

ಅತ್ಯುತ್ತಮ ಬೆಂಬಲಕ್ಕೆ ಈ ಫೀಚರ್ಸ್‌ಗಳು ಅಗತ್ಯ

- OS: Windows 7,8,10 64Bit
- CPU: Core i5 @2.8Ghz
- RAM: 8GB
- GPU: Nvidia GTX 660 ಅಥವಾ AMD ರೆಡಾನ್ HD 7870
- HDD: 4GB

ಯಾವಾಗ ಲಾಂಚ್

ಯಾವಾಗ ಲಾಂಚ್

ಪಬ್‌ಜಿ ಗೇಮ್‌ ಲೈಟ್‌ ವರ್ಷನ್ ಮಾರುಕಟ್ಟೆಯಲ್ಲಿ ಮತ್ತಷ್ಟು ಕ್ರೇಜ್ ಹುಟ್ಟುಹಾಕುವ ಸಾಧ್ಯತೆಗಳಿವೆ. ಭಾರತದಲ್ಲಿ ಪಬ್‌ಜಿ ಲೈಟ್‌ ವರ್ಷನ್‌ ಯಾವಾಗ ಲಾಂಚ್ ಎನ್ನುವುದನ್ನು ಕಂಪನಿಯು ಅಧಿಕೃತವಾಗಿ ಮಾಹಿತಿ ತಿಳಿಸಿಲ್ಲ ಆದರೆ ಸೋಶಿಯಲ್ ತಾಣಗಳ ಲೀಕ್ ಮಾಹಿತಿ ಪ್ರಕಾರ ಇದೇ ಜೂನ್ ತಿಂಗಳ ಅಂತ್ಯದೊಳಗೆ ಬಿಡುಗಡೆ ಆಗಲಿದೆ ಎನ್ನಲಾಗಿದೆ. (ಬಹುಶಃ ಇದೆ ಜೂನ್ 25).

ಓದಿರಿ : ಫೋನ್‌ ಖರೀದಿಸಲು ಸುಗ್ಗಿಕಾಲ!..ಮತ್ತೆ ಬಂತು 'ಅಮೆಜಾನ್ ಫ್ಯಾಬ್‌ ಫೋನ್ ಫೆಸ್ಟ್'‌!ಓದಿರಿ : ಫೋನ್‌ ಖರೀದಿಸಲು ಸುಗ್ಗಿಕಾಲ!..ಮತ್ತೆ ಬಂತು 'ಅಮೆಜಾನ್ ಫ್ಯಾಬ್‌ ಫೋನ್ ಫೆಸ್ಟ್'‌!

Best Mobiles in India

English summary
PUBG Lite is expected to launch in India by the end of this month. Certain sources say that it could launch during a Steam sale which should happen around June 25. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X