ಭಾರತದಲ್ಲಿ 'ಪಬ್‌ಜಿ ಲೈಟ್'‌ ಲಾಂಚ್‌!..ಪ್ರಿ-ಡೌನ್‌ಲೋಡ್‌ಗೆ ಲಭ್ಯ!

|

ವಿಶ್ವದಾದ್ಯಂತ ಯುವಸಮೂಹವನ್ನು ಸೆಳೆದಿರುವ ಜನಪ್ರಿಯ ಗೇಮ್ ಪಬ್‌ಜಿ ಹೆಚ್ಚಿನ ಡೇಟಾವನ್ನು ಬೇಡುತ್ತದೆ ಎನ್ನುವುದು ಗೇಮ್ಸ್‌ ಪ್ರಿಯರಿಗೆ ಬೇಸರ ಎನಿಸಿದ್ದರೂ ಕ್ರೇಜ್‌ ಅಂತೂ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಕಂಪನಿಯು ಇತ್ತೀಚಿಗೆ ಪಬ್‌ಜಿ ಲೈಟ್‌ ವರ್ಷನ್‌ (PC) ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಆದ್ರೆ ಇದೀಗ ಭಾರತದಲ್ಲಿ ಪಬ್‌ಜಿ ಲೈಟ್‌ ವರ್ಷನ್ ಪ್ರಿ ಡೌನ್‌ಲೋಡ್‌ಗೆ ಲಭ್ಯವಿದ್ದು, ಹಿಂದಿ ಭಾಷೆಯಲ್ಲಿರಲಿದೆ.

ಭಾರತದಲ್ಲಿ 'ಪಬ್‌ಜಿ ಲೈಟ್'‌ ಲಾಂಚ್‌!..ಪ್ರಿ-ಡೌನ್‌ಲೋಡ್‌ಗೆ ಲಭ್ಯ!

ಹೌದು, ಜನಪ್ರಿಯ ಆನ್‌ಲೈನ್‌ ಗೇಮ್ ಪಬ್‌ಜಿಯ ಲೈಟ್‌ ವರ್ಷನ್ ಈಗಾಗಲೇ ಹಾಂಗ್‌ಕಾಂಗ್, ತೈವಾನ್, ಬ್ರೆಜಿಲ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಚಾಲ್ತಿ ಇದ್ದು, ಈಗ ಭಾರತದಲ್ಲಿಯೂ ಲಾಂಚ್ ಆಗಿದೆ. ಕಂಪನಿಯು ಇಂದು (ಜುಲೈ.4) ಮಧ್ಯಾಹ್ನ 2.30ನ ನಂತರ ಪ್ರಿ-ಡೌನ್‌ಲೋಡ್‌ಗೆ ಮಾಡಿಕೊಳ್ಳಬಹುದಾಗಿದ್ದು ಎಂದು ತಿಳಿಸಿದ್ದು, ಈ ಮೊದಲೇ ಪ್ರಿ-ರಿಜಿಸ್ಟರ್‌ ಮಾಡಿದವರಿಗೆ ಇ-ಮೇಲ್ ಮೂಲಕ ಇವೆಂಟ್ ಕೋಡ್‌ ಅನ್ನು ಇದೇ ಜುಲೈ 11ರಂದು ನೀಡಲಿದೆ.

ಭಾರತದಲ್ಲಿ 'ಪಬ್‌ಜಿ ಲೈಟ್'‌ ಲಾಂಚ್‌!..ಪ್ರಿ-ಡೌನ್‌ಲೋಡ್‌ಗೆ ಲಭ್ಯ!

ಕಂಪನಿಯು ಅಧಿಕೃತವಾಗಿ ಗೇಮ್‌ ಲಾಂಚ್‌ ಮಾಡುವ ಮೊದಲೆ ಭಾರತ ಸೇರಿದಂತೆ ಅಫ್ಘಾನಿಸ್ತಾನ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳು ಸಹ ಪಬ್‌ಜಿ ಲೈಟ್‌ ವರ್ಷನ್‌ ಗೇಮ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಹಾಗಾದರೇ ಹೇಗೆ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ಮತ್ತು ಯಾವ ಪಿಸಿಗಳು ಗೇಮ್ಸ್‌ ಆಡಲು ಬೆಂಬಲಿಸಲಿವೆ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಆಶ್ಚರ್ಯಕರ ಘಟನೆ!..ಕಳೆದುಹೋದ ಗಂಡ ಟಿಕ್‌ಟಾಕ್‌ ನೆರವಿನಿಂದ ಪತ್ತೆ!ಓದಿರಿ : ಆಶ್ಚರ್ಯಕರ ಘಟನೆ!..ಕಳೆದುಹೋದ ಗಂಡ ಟಿಕ್‌ಟಾಕ್‌ ನೆರವಿನಿಂದ ಪತ್ತೆ!

ಲೈಟ್‌ ವರ್ಷನ್ ಎಂಟ್ರಿ ಆಯ್ತು

ಲೈಟ್‌ ವರ್ಷನ್ ಎಂಟ್ರಿ ಆಯ್ತು

ಪಬ್‌ಜಿ ಆನ್‌ಲೈನ್‌ ಗೇಮ್‌ ಆಗಿರುವುದರಿಂದ ಸಹಜವಾಗಿಯೇ ಹೆಚ್ಚಿನ ಡೇಟಾವನ್ನು ಅದು ಕಬಳಿಸುತ್ತದೆ. ಅದಕ್ಕಾಗಿ ಲೈಟ್‌ ವರ್ಷನ್ ಅನ್ನು ಕಂಪನಿಯು ಹುಟ್ಟುಹಾಕಿದ್ದು, ಈಗಾಗಲೇ ಹಾಂಗ್‌ಕಾಂಗ್, ತೈವಾನ್, ಬ್ರೆಜಿಲ್ ಮತ್ತು ಬಾಂಗ್ಲಾದೇಶಗಳಲ್ಲಿ ಪಬ್‌ಜಿ ಲೈಟ್‌ ವರ್ಷನ್‌ ಲಭ್ಯವಿದೆ. ಅದರ ಮುಂದುವರಿದ ಭಾಗವಾಗಿ ಈಗ ಭಾರತಕ್ಕೂ ಪಬ್‌ಜಿ ಲೈಟ್‌ ವರ್ಷನ್‌ ಕಾಲಿಟ್ಟು ಗೇಮ್ಸ್‌ ಪ್ರಿಯರ ಕುತೂಹಲ ತಣಿಸಿದೆ.

ಹೈ ಎಂಡ್‌ ಪಿಸಿ ಬೇಕಿಲ್ಲ

ಹೈ ಎಂಡ್‌ ಪಿಸಿ ಬೇಕಿಲ್ಲ

ಪಬ್‌ಜಿ ಆಡಲು ಅನ್ನು ಪಿಸಿಯಲ್ಲಿ ಆಡಬೇಕೆಂದಿದ್ದರೇ, ಹೈ ಎಂಡ್ ಹಾರ್ಡವೇರ್‌ ಸಾಮರ್ಥ್ಯದ ಬೆಂಬಲವಿರುವ ಪಿಸಿಗಳಲ್ಲಿ ಮಾತ್ರ ಆಡಬೇಕಿತ್ತು. ಆದ್ರೆ ಈಗ ಲೋವರ್‌ ಎಂಡ್‌ ಹಾರ್ಡ್‌ವೇರ್‌ ಫೀಚರ್ಸ್‌ಗಳನ್ನು ಹೊಂದಿರುವ ಪಿಸಿಗಳಲ್ಲಿಯೂ ಪಬ್‌ಜಿ ಆಡಬಹುದಾಗಿದ್ದು, ಅದಕ್ಕಾಗಿ ಪಬ್‌ಜಿ ಲೈಟ್‌ ವರ್ಷನ್‌ ಬಿಡುಗಡೆ ಮಾಡಿದೆ. ಇದರಿಂದ ಪಬ್‌ಜಿ ಕ್ರೇಜ್‌ ಇನ್ನಷ್ಟು ವಿಸ್ತರಿಸಿಕೊಳ್ಳಲಿದೆ.

ಓದಿರಿ : ಯೂಟ್ಯೂಬ್‌ ಮೂಲಕ ಹಣಗಳಿಸಬಹುದು!..ಹೇಗೆ ಅಂತೀರಾ? ಓದಿರಿ : ಯೂಟ್ಯೂಬ್‌ ಮೂಲಕ ಹಣಗಳಿಸಬಹುದು!..ಹೇಗೆ ಅಂತೀರಾ?

ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ

ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ

- ಲೈಟ್‌ ಪಬ್‌ಜಿ ತಾಣಕ್ಕೆ ಭೇಟಿ ನೀಡಿ (lite.pubg.com)
- ವೆಬ್‌ಸೈಟ್‌ನ ಮೇಲ್ಭಾಗದ ಬಲದಲ್ಲಿ ಕಾಣುವ ಡೌನ್‌ಲೋಡ್‌ ಆಯ್ಕೆ ಕ್ಲಿಕ್ಕ್ ಮಾಡಿರಿ.
- ಹೊಸ ಟ್ಯಾಬ್‌ನಲ್ಲಿ ಯಾವೆಲ್ಲಾ ಪಿಸಿಗಳಿಗೆ ಬೆಂಬಲಿಸಲಿದೆ ಎಂದು ತಿಳಿಸುತ್ತದೆ. ನೀವು ಡೌನ್‌ಲೋಡ್‌ ಆಯ್ಕೆ ಮಾಡಿರಿ.
- ಆಗ ಪಬ್‌ಜಿ ಲೈಟ್‌ ಲಾಂಚರ್‌ ಡೌನ್‌ಲೋಡ್‌ ಆಗುತ್ತದೆ.
- ಲಾಂಚರ್‌ ಅನ್ನು ಇನ್‌ಸ್ಟಾಲ್‌ ಮತ್ತು ರನ್‌ ಮಾಡಿ.

ಪಬ್‌ಜಿ ಗೇಮ್‌ ಆಡಲು PCಯಲ್ಲಿ ಈ ಫೀಚರ್ಸ್‌ಗಳು ಅಗತ್ಯ

ಪಬ್‌ಜಿ ಗೇಮ್‌ ಆಡಲು PCಯಲ್ಲಿ ಈ ಫೀಚರ್ಸ್‌ಗಳು ಅಗತ್ಯ

- OS ; ವಿಂಡೊಸ್ 7,8,10 64Bit
- CPU: ಕೋರ್ i3 @ 2.4Ghz
- RAM : 4GB
- GPU: ಇಂಟೆಲ್ HD4000
- HDD: 4GB

ಓದಿರಿ : ಒರೈಮೊದ ಹೊಸ 10,000mAh ಪವರ್‌ಬ್ಯಾಂಕ್ ಲಾಂಚ್!.ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವಿದೆ!ಓದಿರಿ : ಒರೈಮೊದ ಹೊಸ 10,000mAh ಪವರ್‌ಬ್ಯಾಂಕ್ ಲಾಂಚ್!.ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವಿದೆ!

ಅತ್ಯುತ್ತಮ ಬೆಂಬಲಕ್ಕೆ ಈ ಫೀಚರ್ಸ್‌ಗಳು ಅಗತ್ಯ

ಅತ್ಯುತ್ತಮ ಬೆಂಬಲಕ್ಕೆ ಈ ಫೀಚರ್ಸ್‌ಗಳು ಅಗತ್ಯ

- OS: Windows 7,8,10 64Bit
- CPU: Core i5 @2.8Ghz
- RAM: 8GB
- GPU: Nvidia GTX 660 ಅಥವಾ AMD ರೆಡಾನ್ HD 7870
- HDD: 4GB

ಓದಿರಿ : ಏರ್‌ಟೆಲ್‌ ಗ್ರಾಹಕರೇ 4G ಸಿಮ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ! ಓದಿರಿ : ಏರ್‌ಟೆಲ್‌ ಗ್ರಾಹಕರೇ 4G ಸಿಮ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ!

Best Mobiles in India

English summary
PUBG Lite, a low-end PC version of the battle royale game PUBG, is now available for pre-download in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X