Home
ಸುದ್ದಿಜಾಲ

ಹೊಸ ಅವತಾರದಲ್ಲಿ 'ಪಬ್‌ಜಿ' ಗೇಮ್‌!..ಸಾರಾಳ ರಂಗ ಪ್ರವೇಶ!

ವಿಶ್ವದ ಯುವಸಮೂಹವನ್ನು ಸೆಳೆದಿರುವ 'ಪಬ್‌ಜಿ' ಮೊಬೈಲ್ ಗೇಮ್‌ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿರುವ ಜೊತೆಗೆ ವಿರೋಧಗಳನ್ನು ಎದುರಿಸಿದೆ. ಈ ಎಲ್ಲದರ ನಡುವೆ ಪಬ್‌ಜಿ ಗೇಮ್ಸ್‌ ಪ್ರಿಯರಿಗೆ ಸಿಹಿಸುದ್ದಿಯೊಂದನ್ನು ಹೊರಹಾಕಿದ್ದು, ಇದೇ ನವೆಂಬರ್‌ 8ರಂದು (ಇಂದು) ಪಬ್‌ಜಿ ಗೇಮ್‌ 0.15.5 ವರ್ಷನ್‌ಗೆ ಅಪ್‌ಡೇಟ್‌ ಆಗಲಿದೆ. ಅಪ್‌ಡೇಟ್‌ ನಂತರ ಹಲವು ಹೊಸ ಫೀಚರ್ಸ್‌ಗಳನ್ನು ಸೇರಿಸಿಕೊಳ್ಳಲಿದೆ.

ಪಬ್‌ಜಿ ಗೇಮ್‌

ಹೌದು, ಪಬ್‌ಜಿ ಗೇಮ್‌ ಇದೀಗ ಬಹುದೊಡ್ಡ ಅಪ್‌ಡೇಟ್‌ಗೆ ಸಿದ್ಧವಾಗಿದ್ದು, ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಇಂದು ಅಪ್‌ಡೇಟ್‌ಗೆ ಲಭ್ಯವಾಗಲಿದೆ. ಈ ಗೇಮ್‌ ಅಪ್‌ಡೇಟ್ ಮಾಡಲು ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಸುಮಾರು 0.21 GB ಸ್ಟೋರೇಜ್ ಸ್ಥಳ ಬೇಕಾಗುತ್ತದೆ ಮತ್ತು ಐಫೋನ್ ಬಳಕೆದಾರರಿಗೆ ಸುಮಾರು 0.24 GB ಸ್ಟೋರೇಜ್ ಸ್ಥಳಾವಕಾಶದ ಅಗತ್ಯವಿರುತ್ತದೆ ಎಂದು ಪಬ್‌ಜಿ ಮೊಬೈಲ್ ಬಹಿರಂಗಪಡಿಸಿದೆ.

ಪಬ್‌ಜಿ ಮೊಬೈಲ್

ಪಬ್‌ಜಿ ಮೊಬೈಲ್ 0.15.5 ಅಪ್‌ಡೇಟ್ ಸಾಕಷ್ಟು ಹೊಸ ಫೀಚರ್ಸ್‌ ಮತ್ತು ಸುಧಾರಣೆಗಳಗಳನ್ನು ಒಳಗೊಂಡಿರಲಿದೆ. ಇದರೊಂದಿಗೆ ಹೊಸ ಪಾತ್ರಗಳನ್ನು ಪರಿಚಯಿಸಲಿದೆ. ಈ ಹೊಸ ಆವೃತ್ತಿಯು 'Mad Max Fury' ಸಿನಿಮಾ ಪ್ರಭಾವನ್ನು ಹೊಂದಿದ್ದು, ಹೀಗಾಗಿ Fury of the Wasteland ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. ಹಾಗೆಯೇ ಟೀಮ್ ಡೆತ್‌ ಮ್ಯಾಪ್‌ ಮೋಡ್‌ನಲ್ಲಿ "The Ruins" ಮ್ಯಾಪ್‌ ಆಯ್ಕೆ ಇರುವ ಬಗ್ಗೆ ಕಂಪನಿಯು ದೃಢಪಡಿಸಿದೆ.

ನೂತನ ಆವೃತ್ತಿ

ಪಬ್‌ಜಿಯ ನೂತನ ಆವೃತ್ತಿಯಲ್ಲಿ ಮಷನರಿಯಗಳಲ್ಲಿಯೂ ಬದಲಾವಣೆ ಕಾಣಿಸಲಿದ್ದು, 9mm ಅಮೊ ಸಾಮರ್ಥ್ಯದ MP5K ಸಬ್‌ಮಶಿನ್ ಗನ್ ಇರಲಿದೆ. ಹಾಗೆಯೇ ಇದರೊಂದಿಗೆ ಹೊಸ ಪ್ಯಾರಾಚೂಟ್ ಸ್ಕೀನ್ ಮತ್ತು M249 ಸ್ಕೀನ್‌ ಆಯ್ಕೆಗಳು ಇರಲಿವೆ. ಆಟಗಾರರಿಗೆ ನೂತನ ಬಗೆಯ ಧಿರಿಸುಗಳ(ಡ್ರೆಸ್‌) ಆಯ್ಕೆ ಇರಲಿದ್ದು, ಜೊತೆಗೆ ವೆಪನ್ ಸ್ಕೀನ್‌ಗಳ ಕಲೆಕ್ಷನ್‌ ಸಹ ಇರಲಿದೆ. ಇನ್ನು ಬಪ್‌ಜಿ ಸೀಸನ್ 10 ರಲ್ಲಿ ಅಪೋಕ್ಯಾಲಿಪ್ಸ್ ಗಾರ್ಡಿಯನ್ ಸೆಟ್, ಡಸರ್ಟ್ ಟ್ರೂಪರ್ ಸೆಟ್, ಸ್ನೋಫ್ಲೇಕ್ ಗರ್ಲ್ ಸೆಟ್, ಮತ್ತು ವಿಕಿರಣದ ಕಪ್ಪೆ ಸೆಟ್ ಹೆಸರಿನ ವೇಷಭೂಷಣಗಳು ಲಭ್ಯವಾಗಲಿವೆ.

ಸಾರಾ

ಇನ್ನು ವಿಶೇಷ ಅಂದರೇ ಪಬ್‌ಜಿಯ ನೂತನ ಆವೃತ್ತಿಯಲ್ಲಿ 'ಸಾರಾ' ಹೆಸರಿನ ಹೊಸ ಪಾತ್ರವೊಂದರ ಅವತಾರ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸಾರಾ ಹೆಸರಿನ ಮಹಿಳಾ ಪಾತ್ರವು ವಾಹನಗಳತ್ತ ಹೆಚ್ಚು ಒಲವನ್ನು ತೋರಿಸುತ್ತಾಳೆ. ಹಾಗೆಯೇ ಸಾರಾ ಕಾರನ್ನು ಸುರಕ್ಷಿತವಾಗಿ ಚಲಾಯಿಸುತ್ತಾಳೆ. ಈ ಪಾತ್ರದ ಪ್ರಮುಖ(catchphrases ) ಮಾತುಗಳೆಂದರೇ 'ಕಾರಿನಲ್ಲಿ ಇಂಜಿನ ಎಷ್ಟು ಮುಖ್ಯವೋ ಅಷ್ಟೇ ನೀನು ನನಗೆ ಮುಖ್ಯ', ಮತ್ತು ಕಾರನ್ನು ಹೊರತೆಗೆಯುವುದಿರಲಿ ಅಥವಾ ಸರಿಮಾಡುವುದಿರಲಿ' ಎಲ್ಲವನ್ನು ಮಾಡಬಲ್ಲೆ'.

Best Mobiles in India

English summary
PUBG Mobile 0.15.5 update rolls out on November 8. Here’s everything you need to know about the latest update. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+